AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೆಲಿವರಿ ಬಾಯ್ಸ್ ಕೆಲಸ ಗೌರವಿಸಿ; ಸ್ವಂತ ಅನುಭವ ಹಂಚಿಕೊಂಡ ಧರ್ಮ ಕೀರ್ತಿರಾಜ್

ಡೆಲಿವರಿ ಬಾಯ್ಸ್ ಕೆಲಸ ಗೌರವಿಸಿ; ಸ್ವಂತ ಅನುಭವ ಹಂಚಿಕೊಂಡ ಧರ್ಮ ಕೀರ್ತಿರಾಜ್

Malatesh Jaggin
| Edited By: |

Updated on: Apr 14, 2026 | 10:54 PM

Share

ಧರ್ಮ ಕೀರ್ತಿರಾಜ್ ಈವರೆಗೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರು ‘ಬೆಂಗಳೂರು ಇನ್’ ಸಿನಿಮಾದಲ್ಲಿ ಡೆಲಿವರಿ ಬಾಯ್ ಪಾತ್ರವನ್ನು ಮಾಡಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದೆ. ರಿಯಲ್ ಲೈಫ್​ನಲ್ಲಿ ಡೆಲಿವರಿ ಬಾಯ್ಸ್ ಬದುಕನ್ನು ಧರ್ಮ ಕೀರ್ತಿರಾಜ್ ಅವರು ಹತ್ತಿರದಿಂದ ಗಮನಿಸಿದ್ದಾರೆ.

ನಟ ಧರ್ಮ ಕೀರ್ತಿರಾಜ್ ಅವರು ಈವರೆಗೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರು ‘ಬೆಂಗಳೂರು ಇನ್’ ಸಿನಿಮಾದಲ್ಲಿ ಡೆಲಿವರಿ ಬಾಯ್ (Delivery Boy) ಪಾತ್ರವನ್ನು ಮಾಡಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದೆ. ರಿಯಲ್ ಲೈಫ್​ನಲ್ಲಿ ಡೆಲಿವರಿ ಬಾಯ್ಸ್ ಬದುಕನ್ನು ಧರ್ಮ ಕೀರ್ತಿರಾಜ್ ಅವರು ಹತ್ತಿರದಿಂದ ಗಮನಿಸಿದ್ದಾರೆ. ಆ ಅನುಭವವನ್ನು ಇಟ್ಟುಕೊಂಡು ಅವರು ಈ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ಲೇಟ್ ಆಗಿ ಬಂದರು ಎಂಬ ಕಾರಣಕ್ಕೆ ನಾನು ಎಂದಿಗೂ ಡೆಲಿವರಿ ಬಾಯ್ಸ್ ಮೇಲೆ ಕೋಪ ಮಾಡಿಕೊಂಡಿಲ್ಲ. ಎಲ್ಲ ವೃತ್ತಿಯನ್ನು ನಾವು ಗೌರವಿಸಬೇಕು. ನಾವು ಹೊಟ್ಟೆಪಾಡಿಗಾಗಿ ಸಿನಿಮಾ ಮಾಡುತ್ತೇವೆ. ಆದೇ ರೀತಿ ಅವರು ಕೂಡ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಾರೆ. ಪ್ರೀತಿಯಿಂದ ಮಾತನಾಡಿಸಿದರೆ ಅವರಿಗೆ ಇನ್ನಷ್ಟು ಉತ್ಸಾಹ ಬರುತ್ತದೆ’ ಎಂದು ಧರ್ಮ ಕೀರ್ತಿರಾಜ್ (Dharma Keerthiraj) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us