ಜಮ್ಮು ಕಾಶ್ಮೀರ: ಕುಣಿದು ಕುಪ್ಪಳಿಸಿ ಹೋಳಿ ಆಚರಿಸಿದ ಸಿಆರ್ಪಿಎಫ್ ಯೋಧರು! ವಿಡಿಯೋ ನೋಡಿ
ದಿನಾ ಭದ್ರತೆಯ ಕರ್ತವ್ಯದಲ್ಲಿರುವ, ಮೈಯೆಲ್ಲಾ ಕಣ್ಣಾಗಿಸಿ ಗಡಿ ಕಾಯುವ ಸಿಆರ್ಪಿಎಫ್ ಯೋಧರು ಇಂದು ಹೋಳಿ ಹಬ್ಬದ ಸಂಬ್ರಮದಲ್ಲಿ ಮುಳುಗೆದ್ದಿರುವುದು ಗಮನ ಸೆಳೆದಿದೆ. ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಯೋಧರು ಬಣ್ಣ ಹಚ್ಚಿಕೊಂಡು, ಪರಸ್ಪರ ಸಂಭ್ರಮಿಸಿಕೊಂಡು ಕುಣಿದುಕುಪ್ಪಳಿಸಿದ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಗಮನ ಸೆಳೆದಿದೆ.
ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ CRPF 38ನೇ ಬೆಟಾಲಿಯನ್ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದೆ. ಕರ್ತವ್ಯ ನಿರ್ವಹಿಸುತ್ತಿರುವ ಮಧ್ಯೆಯೇ ಯೋಧರು ಬಣ್ಣ ಹಚ್ಚಿಕೊಂಡು ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ಈ ಕುರಿತು CRPF 38ನೇ ಬೆಟಾಲಿಯನ್ ಇನ್ಸ್‌ಪೆಕ್ಟರ್ ರಾಜ್ ಸಿಂಗ್ ಮಾತನಾಡಿ, ‘ನಾವು ಇಲ್ಲಿ ನಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದೇವೆ. ಜತೆಗೆ ಹೋಳಿ ಹಬ್ಬವನ್ನು ಸಹ ಆಚರಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ. ಭದ್ರತಾ ಕರ್ತವ್ಯಗಳ ನಡುವೆಯೂ ಯೋಧರು ಹಬ್ಬದ ಸಂಭ್ರಮದಿಂದ ಕುಣಿದು ಕುಪ್ಪಳಿಸಿದ ವಿಡಿಯೋ ಗಮನ ಸೆಳೆದಿದೆ.
ವಿಡಿಯೋ ಕೃಪೆ: ಎಎನ್ಐ
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ


