
Holi
ಹೋಳಿ: ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಹೋಳಿಹಬ್ಬವನ್ನು ಆಚರಿಸಲಾಗುತ್ತದೆ. ರಂಗು ರಂಗಿನ ಹೋಳಿ ಹಬ್ಬ, ಎಲ್ಲರ ಮನ-ಮನಸ್ಸಿಗಳನ್ನು ಪುಳಕಿತಗೊಳಿಸುವ ಹಬ್ಬವಾಗಿದೆ. ಒಬ್ಬರು ಇನ್ನೊಬ್ಬರಿಗೆ ಬಣ್ಣದಿಂದ ಹೋಳಿ ಹಾಕುವುದು , ಮೈಗೆಲ್ಲ ಬಣ್ಣದ ಕಲರವು ಆ ದಿನದ ಹೋಳಿ ಹಬ್ಬಕ್ಕೆ ಕಲೆಯನ್ನು ನೀಡುತ್ತದೆ. ಹೋಳಿ ಹಬ್ಬವನ್ನು ಬಣ್ಣಗಳ ಹಬ್ಬ ಅಥವಾ ಪ್ರೀತಿಯ ಹಬ್ಬ ಎಂದು ಕರೆಯಲಾಗುತ್ತದೆ. ಹೋಳಿ ಹಬ್ಬವನ್ನು 2 ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನ ಹೋಳಿ ದಹನವನ್ನು ಮಾಡಲಾಗುತ್ತದೆ. ಇದನ್ನು ಚೋಟಿ ಹೋಳಿ ಅಂತಲೂ ಕರೆಯುತ್ತಾರೆ. 2ನೇ ದಿನ ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಸಂಭ್ರಮಿಸಲಾಗುತ್ತದೆ. ಈ ವರ್ಷ ಅಂದರೆ 2024ರ ಹೋಳಿ ಹಬ್ಬವನ್ನು ಮಾರ್ಚ್ 25ರಂದು ಆಚರಿಸಲಾಗುತ್ತದೆ. ಮಾರ್ಚ್ 24 ರಂದು ಹೋಳಿಕಾ ದಹನ ನಡೆಯಲಿದೆ. ಇದು ದುಷ್ಟರ ಮೇಲೆ ಒಳ್ಳೆಯತನ ಸಾಧಿಸುವ ವಿಜಯವನ್ನು ಸೂಚಿಸುತ್ತದೆ ಮತ್ತು ಭಗವಂತ ಕೃಷ್ಣ ಮತ್ತು ರಾಧೆಯ ಶಾಶ್ವತ ಪ್ರೀತಿಯ ಸುಂದರ ಆಚರಣೆ ಇದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಬ್ಬವು ಯುರೋಪ್ ಮತ್ತು ಉತ್ತರ ಅಮೆರಿಕಾದ ಭಾಗಗಳಿಗೂ ಹಬ್ಬಿದ್ದು ಪ್ರೀತಿ, ಉಲ್ಲಾಸ ಮತ್ತು ಬಣ್ಣಗಳ ವಸಂತ ಆಚರಣೆಯಾಗಿ ಹರಡಿದೆ.
ಸಮುದಾಯಗಳ ನಡುವೆ ಘರ್ಷಣೆ, ಕಲ್ಲು ತೂರಾಟ: ಬೆಳಗಾವಿ ಬೆಕ್ಕೇರಿ ಗ್ರಾಮದಲ್ಲಿ ಹೈ ಅಲರ್ಟ್
ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿ ಅದ್ದೂರಿಯಾಗಿ ಹೋಳಿ ಹಬ್ಬ ಆಚರಣೆ ಮಾಡಿದ್ದಾರೆ. ಇದೇ ಹೋಳಿ ಕುರಿತು ಓರ್ವ ಯುವಕ ವಾಟ್ಸಾಪ್ ಸ್ಟೇಟಸೊಂದನ್ನು ಹಾಕಿಕೊಂಡಿದ್ದಾನೆ. ಅದರಲ್ಲಿ ಅಂಬೇಡ್ಕರ್ ಕುರಿತು ಕೂಡ ಬರೆದು ಹಾಕಿದ್ದು, ಬೇರೊಂದು ಸಮುದಾಯದ ಯುವಕರನ್ನು ಕೆರಳಿಸುವಂತೆ ಮಾಡಿದೆ. ಇದರಿಂದ ಇಂದು ಇಡೀ ಗ್ರಾಮದಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ. ಆಗಿದ್ದೇನು ಎಂಬ ಮಾಹಿತಿ ಇಲ್ಲಿದೆ.
- Sahadev Mane
- Updated on: Mar 18, 2025
- 8:23 am
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದಲ್ಲಿ ಆಚರಿಸುವ ಹೋಳಿ ಹಬ್ಬ ಬೇರೆಡೆಗಳಿಗಿಂತ ಭಿನ್ನವಾಗಿದೆ. ಋತುಮತಿಯಾಗದ ಬಾಲಕಿಯನ್ನು ಮೆರವಣಿಗೆ ಮಾಡುವ ಆಚರಣೆ ಇಲ್ಲಿದೆ. ಕಳೆದ ಐವತ್ತು ವರ್ಷದಿಂದ ಈ ವಿಶೇಷ ಆಚರಣೆ ನಡೆದುಕೊಂಡು ಬಂದಿದೆ. ಈ ವೇಳೆ ನಾಗಾಸಾಧುಗಳ ವೇಷದಲ್ಲಿ ಮಕ್ಕಳು ಗಮನ ಸೆಳೆದಿದ್ದಾರೆ.
- Ravi H Mooki
- Updated on: Mar 15, 2025
- 6:30 pm
ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಕ್ಯಾಬಿನ್ ಸಿಬ್ಬಂದಿ
ಸ್ಪೈಸ್‌ಜೆಟ್ ವಿಮಾನದ ಪ್ರಯಾಣಿಕರ ಜೊತೆ ಕ್ಯಾಬಿನ್ ಸಿಬ್ಬಂದಿ 'ಬಾಲಂ ಪಿಚ್ಕರಿ' ನೃತ್ಯ ಪ್ರದರ್ಶಿಸಿ ಹೋಳಿ ಆಚರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಸ್ಪೈಸ್‌ಜೆಟ್‌ನ ಕ್ಯಾಬಿನ್ ಸಿಬ್ಬಂದಿ ದಿನನಿತ್ಯದ ವಿಮಾನ ಬೋರ್ಡಿಂಗ್ ಕಾರ್ಯವಿಧಾನಕ್ಕೆ ಹಬ್ಬದ ವಾತಾವರಣವನ್ನು ಸೇರಿಸಿದ್ದಾರೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಸಿಬ್ಬಂದಿ ಸದಸ್ಯರು 'ಬಾಲಂ ಪಿಚ್ಕರಿ' ಎಂಬ ಐಕಾನಿಕ್ ಹಾಡಿಗೆ ಕುಣಿಯುವ ಮೂಲಕ ಪ್ರಯಾಣಿಕರನ್ನು ಅಚ್ಚರಿಗೊಳಿಸಿದ್ದಾರೆ.
- Sushma Chakre
- Updated on: Mar 14, 2025
- 10:21 pm
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಗೋರಖ್‌ಪುರದಲ್ಲಿ ಜನರಿಗೆ ಹೋಳಿ ಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ, ಅವರು ಮಹಾ ಕುಂಭದ ಆಯೋಜನೆಯನ್ನು ಶ್ಲಾಘಿಸಿದರು ಮತ್ತು ವಿರೋಧ ಪಕ್ಷಗಳನ್ನು ತೀವ್ರವಾಗಿ ಗುರಿಯಾಗಿಸಿಕೊಂಡರು. ಪೌರಾಣಿಕ ಕಥೆಗಳ ಪ್ರಕಾರ, ಭಾರತದಲ್ಲಿ ಜನಿಸುವುದು ಅಪರೂಪ ಮತ್ತು ಅದು ಕೂಡ ಮಾನವ ರೂಪದಲ್ಲಿ, ಸನಾತನ ಧರ್ಮದಲ್ಲಿ ಜನಿಸುವುದು ಇನ್ನೂ ಅಪರೂಪ ಎಂದು ಮುಖ್ಯಮಂತ್ರಿ ಹೇಳಿದರು. ಸನಾತನ ಶಕ್ತಿಯನ್ನು ಶಪಿಸುತ್ತಿದ್ದವರು ಪ್ರಯಾಗರಾಜ್ ಮಹಾ ಕುಂಭದಲ್ಲಿಯೂ ನೋಡಿದ್ದಾರೆ ಎಂದು ಅವರು ಹೇಳಿದರು.
- Sushma Chakre
- Updated on: Mar 14, 2025
- 7:30 pm
ಹೋಳಿ ಸಂಭ್ರಮದಲ್ಲಿ ಘೋರ ದುರಂತ: ಮೂವರ ಮನೆಗಳಲ್ಲಿ ಸೂತಕದ ಛಾಯೆ
ಕರ್ನಾಟಕದಲ್ಲಿ ಇಂದು ಹೋಳಿ ಹಬ್ಬದ ಸಂಭ್ರಮ. ಹೀಗಾಗಿ ಕಲರ್ ಕಲರ್ ಬಣ್ಣದೋಕಳಿಯಲ್ಲಿ ಜನರು ಮಿಂದೆದ್ದಿದ್ದಾರೆ. ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂತಸ ಪಟ್ಟಿದ್ದಾರೆ. ಆದರೆ ಇದೇ ಕಲರ್ ಫುಲ್ ಹೋಳಿ ಹಬ್ಬದಂದು ಕೆಲ ಸಾವು ನೋವುಗಳು ಸಂಭವಿಸಿವೆ. ಸಂಭ್ರಮದ ಬದಲಾಗಿ ಸೂತಕದ ಛಾಯೆ ಆವರಿಸಿದೆ.
- Sanjeev Pandre
- Updated on: Mar 14, 2025
- 8:44 pm
ಸನಾತನ ಧರ್ಮದಷ್ಟು ಶ್ರೀಮಂತ ಹಬ್ಬಗಳ ಸಂಪ್ರದಾಯ ಬೇರಾವುದೇ ಧರ್ಮದಲ್ಲಿಲ್ಲ; ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದ ಸಾಂಪ್ರದಾಯಿಕ "ನರಸಿಂಗ್ ಶೋಭಾಯಾತ್ರೆ"ಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ಹೋಳಿ ಏಕತೆಯ ಮೂಲಕ ಅಖಂಡ ದೇಶವನ್ನು ಕಾಪಾಡಿಕೊಳ್ಳುವ ಸಂದೇಶವನ್ನು ನೀಡುತ್ತದೆ. ಜಗತ್ತಿನ ಯಾವುದೇ ದೇಶ, ಯಾವುದೇ ಜಾತಿ, ಯಾವುದೇ ಧರ್ಮದಲ್ಲಿ ಸನಾತನ ಧರ್ಮದಂತಹ ಹಬ್ಬಗಳ ಶ್ರೀಮಂತ ಸಂಪ್ರದಾಯವಿಲ್ಲ. ನಮಗೆ ಸನಾತನ ಧರ್ಮದಲ್ಲಿ ನಂಬಿಕೆ ಇದೆ ಮತ್ತು ನಂಬಿಕೆಯೇ ಹಬ್ಬಗಳ ಆತ್ಮ. ಭಾರತ ಹಬ್ಬಗಳ ಮೂಲಕವೇ ಮುನ್ನಡೆಯುತ್ತದೆ" ಎಂದು ಯೋಗಿ ಆದಿತ್ಯನಾಥ್ ಹೇಳಿದರು.
- Sushma Chakre
- Updated on: Mar 14, 2025
- 5:01 pm
Holi Gift: ಹೋಳಿ ಹಬ್ಬದಂದು ಗಿಫ್ಟ್ ಮಾಡಿ 6000mAh ಬ್ಯಾಟರಿಯ ಶಕ್ತಿಶಾಲಿ ಸ್ಮಾರ್ಟ್ಫೋನ್: ಬೆಲೆ ಕೂಡ ಕಡಿಮೆ
Holi Gift Smartphone: ಭಾರತದಾದ್ಯಂತ ಹೋಳಿ ಹಬ್ಬವನ್ನು ಭರ್ಜರಿ ಆಗಿ ಆಚರಿಸಲಾಗುತ್ತಿದೆ. ಈ ಸಂದರ್ಭ ನೀವು ನಿಮ್ಮ ಸ್ನೇಹಿತರಿಗೆ ಅಥವಾ ಕುಟುಂಬ ಸದಸ್ಯರಿಗೆ ಉಡುಗೊರೆಗಳನ್ನು ನೀಡಲು ಬಯಸಿದರೆ, 6000mAh ಬ್ಯಾಟರಿಯನ್ನು ಹೊಂದಿರುವ, 15 ಸಾವಿರ ರೂ. ಗಿಂತ ಕಡಿಮೆ ಬೆಲೆಯ ಉತ್ತಮ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನ ಇಲ್ಲಿ ನೀಡಲಾಗಿದೆ.
- Malashree anchan
- Updated on: Mar 14, 2025
- 11:34 am
Holi 2025: ಹೋಳಿ ಆಡುವ ಮೊದಲು ಮತ್ತು ನಂತರ ಚರ್ಮದ ಆರೈಕೆ ಹೀಗಿರಲಿ
ಹೋಳಿ ಆಡುವ ಮೊದಲು ಮತ್ತು ನಂತರ ಚರ್ಮ ಮತ್ತು ಕೂದಲನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಈ ಲೇಖನದಲ್ಲಿ ವಿವರಿಸಲಾಗಿದೆ. ಮಾಯಿಶ್ಚರೈಸರ್, ಸನ್‌ಸ್ಕ್ರೀನ್, ಪೂರ್ಣ ತೋಳಿನ ಬಟ್ಟೆಗಳು ಮುಂತಾದವುಗಳ ಬಳಕೆ ಮುಖ್ಯ. ರಾಸಾಯನಿಕ ಬಣ್ಣಗಳಿಂದ ಉಂಟಾಗುವ ಹಾನಿಯನ್ನು ತಪ್ಪಿಸಲು ಮತ್ತು ಚರ್ಮದ ಆರೈಕೆಗೆ ಸಲಹೆಗಳನ್ನು ಈ ಲೇಖನ ಒಳಗೊಂಡಿದೆ.
- Akshatha Vorkady
- Updated on: Mar 14, 2025
- 8:59 am
Holi Puja: ಹೋಳಿ ಹಬ್ಬದಂದು ಶಿವಲಿಂಗದ ಮೇಲೆ ಈ ವಸ್ತುಗಳನ್ನು ಅರ್ಪಿಸಿ
ಹೋಳಿ ಹಬ್ಬದಂದು ಶಿವನ ಪೂಜೆಯು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಹೋಳಿಕಾ ದಹನದ ಭಸ್ಮ ಮತ್ತು ನೀಲಿ-ಕೆಂಪು ಗುಲಾಲನ್ನು ಶಿವಲಿಂಗಕ್ಕೆ ಅರ್ಪಿಸುವುದರಿಂದ ಸಂತೋಷ, ಸಮೃದ್ಧಿ ಮತ್ತು ನಕಾರಾತ್ಮಕತೆಯಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ಈ ಲೇಖನದಲ್ಲಿ ಶಿವನ ಆಶೀರ್ವಾದ ಪಡೆಯಲು ಹೋಳಿ ಹಬ್ಬದಂದು ಶಿವನಿಗೆ ಯಾವ ವಸ್ತುಗಳನ್ನು ಅರ್ಪಿಸಬೇಕು ಎಂಬುದನ್ನು ವಿವರಿಸಲಾಗಿದೆ.
- Akshatha Vorkady
- Updated on: Mar 14, 2025
- 7:39 am
ರಂಗು ರಂಗಿನ ಬಣ್ಣದೋಕಳಿಗೆ ಸಿಲಿಕಾನ್ ಸಿಟಿ ಸಜ್ಜು: ಬಣ್ಣವಾಡುವುದಕ್ಕೂ ಮುಂಚೆ ವೈದ್ಯರ ಸಲಹೆ ತಿಳಿಯಿರಿ
ಹೋಳಿ ಹಬ್ಬದ ಸಮಯದಲ್ಲಿ ಮಾರುಕಟ್ಟೆಯಲ್ಲಿ ಕೆಮಿಕಲ್ ಮಿಶ್ರಿತ ಹಾನಿಕಾರಕ ಬಣ್ಣಗಳ ಮಾರಾಟ ಹೆಚ್ಚಾಗಿವೆ. ಇವು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ವೈದ್ಯರು ಚರ್ಮದ ರಕ್ಷಣೆಗೆ ಸನ್‌ಸ್ಕ್ರೀನ್, ಮಾಯಿಶ್ಚರೈಸರ್ ಬಳಸಲು ಸಲಹೆ ನೀಡಿದ್ದಾರೆ. ಕೃತಕ ಬಣ್ಣಗಳ ಬಳಕೆಯನ್ನು ಕಡಿಮೆ ಮಾಡಿ, ಸುರಕ್ಷಿತ ಹಬ್ಬ ಆಚರಿಸಿ ಎಂದು ವೈದ್ಯರು ತಿಳಿಸಿದ್ದಾರೆ.
- Vinay Kashappanavar
- Updated on: Mar 13, 2025
- 9:48 pm