Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಳಿ ಸಂಭ್ರಮದಲ್ಲಿ ಘೋರ ದುರಂತ: ಮೂವರ ಮನೆಗಳಲ್ಲಿ ಸೂತಕದ ಛಾಯೆ

ಕರ್ನಾಟಕದಲ್ಲಿ ಇಂದು ಹೋಳಿ ಹಬ್ಬದ ಸಂಭ್ರಮ. ಹೀಗಾಗಿ ಕಲರ್​ ಕಲರ್​​ ಬಣ್ಣದೋಕಳಿಯಲ್ಲಿ ಜನರು ಮಿಂದೆದ್ದಿದ್ದಾರೆ. ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂತಸ ಪಟ್ಟಿದ್ದಾರೆ. ಆದರೆ ಇದೇ ಕಲರ್​​ ಫುಲ್​ ಹೋಳಿ ಹಬ್ಬದಂದು ಕೆಲ ಸಾವು ನೋವುಗಳು ಸಂಭವಿಸಿವೆ. ಸಂಭ್ರಮದ ಬದಲಾಗಿ ಸೂತಕದ ಛಾಯೆ ಆವರಿಸಿದೆ.

ಹೋಳಿ ಸಂಭ್ರಮದಲ್ಲಿ ಘೋರ ದುರಂತ: ಮೂವರ ಮನೆಗಳಲ್ಲಿ ಸೂತಕದ ಛಾಯೆ
ಹೋಳಿ ಸಂಭ್ರಮದಲ್ಲಿ ಘೋರ ದುರಂತ: ಮೂವರ ಮನೆಗಳಲ್ಲಿ ಸೂತಕದ ಛಾಯೆ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on:Mar 14, 2025 | 8:44 PM

ಗದಗ, ಮಾರ್ಚ್​ 14: ಹೋಳಿ (holi) ಹಬ್ಬದ ಬಳಿಕ ಕೆರೆಯಲ್ಲಿ ಈಜಲು ತೆರಳಿದ್ದ 16 ವರ್ಷದ ಬಾಲಕ ನೀರುಪಾಲಾಗಿರುವಂತಹ (death) ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಡೆದಿದೆ. ದೇವೇಂದ್ರ ಮೃತ ಬಾಲಕ. ಸ್ಥಳೀಯರ ಸಹಾಯದಿಂದ ಬಾಲಕನ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಮಗನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ. ಸದ್ಯ ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹೋಳಿ ಆಚರಣೆ ನಂತರ ಸ್ನಾನಕ್ಕೆ ತೆರಳಿದ್ದ ಯುವಕ ನೀರುಪಾಲು

ಅದೇ ರೀತಿಯಾಗಿ ಹೋಳಿ ಆಚರಣೆ ನಂತರ ತುಂಗಭದ್ರಾ ಕಾಲುವೆಯಲ್ಲಿ ಸ್ನಾನಕ್ಕೆ ತೆರಳಿದ್ದ ಯುವಕ ನೀರುಪಾಲಾಗಿರುವಂತಹ ಘಟನೆ ರಾಯಚೂರು ತಾಲೂಕಿನ ಗಿಲ್ಲೇಸೂಗೂರು ಕ್ಯಾಂಪ್ ಬಳಿ ನಡೆದಿದೆ. ಯರಗೇರಾ ಗ್ರಾಮದ ನಿವಾಸಿ ಗಂಗರಾಮ್(29) ನೀರುಪಾಲಾದ ಯುವಕ.

ಇದನ್ನೂ ಓದಿ: ಮಂಡ್ಯದಲ್ಲೊಂದು ಮನಕಲಕುವ ಘಟನೆ: ಯುವಕನ ಲವ್ ಸೆಕ್ಸ್ ದೋಖಾಕ್ಕೆ ತಾಯಿ-ಮಗಳು ಬಲಿ..!

ಇದನ್ನೂ ಓದಿ
Image
ಹಾವೇರಿಯಲ್ಲಿ ಸ್ವಾತಿ ಭೀಕರ ಹತ್ಯೆ: ಬೆಚ್ಚಿಬೀಳಿಸುವಂತಿದೆ ನಯಾಜ್​ನ ಕ್ರೌರ್ಯ
Image
ಬಿಎಂಟಿಸಿ ಮಹಿಳಾ ಕಂಡಕ್ಟರ್ ಚಾಣಕ್ಷತನದಿಂದ ಸಿಕ್ಕಿಬಿದ್ದ ಕಿಲಾಡಿ ಕಳ್ಳಿಯರು
Image
ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ವೈದ್ಯೆಯಿಂದ ಅತ್ತೆ-ಮಾವನ ಮೇಲೆ ಹಲ್ಲೆ
Image
ಮಂಗಳೂರಿನಲ್ಲೊಂದು ಎದೆ ಝಲ್ ಎನಿಸುವ ಭೀಕರ ಅಪಘಾತ

6 ಜನ ಸ್ನೇಹಿತರ ಜತೆ ಸೇರಿ ಹೋಳಿ ಆಚರಿಸಿದ್ದ ಗಂಗರಾಮ್, ಬಳಿಕ ಕಾಲುವೆಯಲ್ಲಿ ಸ್ನಾನಕ್ಕೆ ಹೋಗಿದ್ದಾರೆ. ಈ ವೇಳೆ ಈಜು ಬಾರದ ಬಾಲಕನ ರಕ್ಷಣೆ ‌ಮಾಡಲು ಹೋಗಿ ನೀರುಪಾಲಾಗಿದ್ದಾರೆ. ಇಡಪನೂರು ಪೊಲೀಸ್ ‌ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹೊಂಡಕ್ಕೆ ಜಿಗಿದಿದ್ದ ಗ್ರಾಮ ಪಂಚಾಯಿತಿ ಸದಸ್ಯೆ ಪತಿ ನಾಪತ್ತೆ

ಇನ್ನು ಹೋಳಿ ಬಳಿಕ ಸ್ನಾನಕ್ಕೆ ತೆರಳಿದ್ದ ಗ್ರಾಮ ಪಂಚಾಯಿತಿ ಸದಸ್ಯೆ ಪತಿ ನಾಪತ್ತೆ ಆಗಿರುವಂತಹ ಘಟನೆ  ರಾಯಚೂರು ತಾಲೂಕಿನ ಸುಲ್ತಾನಪುರ ಹೊರವಲಯದಲ್ಲಿ ನಡೆದಿದೆ. ಸ್ನಾನ ಮಾಡಲು ಹೊಂಡಕ್ಕೆ ಜಿಗಿದಿದ್ದ ಸೋಮನಗೌಡ(45) ನಾಪತ್ತೆ ಆಗಿದ್ದಾರೆ. ಹೊಂಡದಲ್ಲಿ ಸಿಲುಕಿರುವ ಶಂಕೆ ಅಥವಾ ಮೊಸಳೆ ಹಿಡಿದಿರುವ ಅನುಮಾನ ವ್ಯಕ್ತವಾಗಿದೆ. ರಸ್ತೆ ಕಾಮಗಾರಿಗಾಗಿ ಮಣ್ಣು ತೆಗೆದಿದ್ದರಿಂದ ನಿರ್ಮಾಣವಾದ ಗುಂಡಿಯಲ್ಲಿ ವ್ಯಕ್ತಿ ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಸ್ವಾತಿ ಭೀಕರ ಹತ್ಯೆ: ಬೆಚ್ಚಿಬೀಳಿಸುವಂತಿದೆ ನಯಾಜ್​ನ ಕ್ರೌರ್ಯ, ಸಿಡಿದೆದ್ದ ಹಿಂದೂ ಸಂಘಟನೆಗಳು

ಹೊಂಡದಲ್ಲಿ ಮೊಸಳೆ ಇರುವ ಬಗ್ಗೆ ಜನರಲ್ಲಿ ಹಲವು ದಿನಗಳಿಂದ ಆತಂಕವಿತ್ತು. ಈ ಹಿಂದೆ ಇದೇ ಜಾಗದಲ್ಲಿ ಕುರಿ ಮೇಲೆ ಮೊಸಳೆ ದಾಳಿ ನಡೆಸಿತ್ತು. ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸೋಮನಗೌಡಗಾಗಿ ಶೋಧ ಕಾರ್ಯ ನಡೆದಿದೆ.

ಹೋಳಿ ಹಬ್ಬ ಹಿನ್ನೆಲೆ ಪಾರ್ಟಿ: ಕ್ಷುಲ್ಲಕ ಕಾರಣಕ್ಕೆ ಯುವಕರ ಮಧ್ಯೆ ಗಲಾಟೆ, ಚಾಕು ಇರಿತ

ಹೋಳಿ ಹಬ್ಬ ಹಿನ್ನೆಲೆ ಜಮೀನಿನಲ್ಲಿ ಪಾರ್ಟಿ ವೇಳೆ ಗಲಾಟೆಯಾಗಿ ಓರ್ವ ಯುವಕನಿಗೆ ಚಾಕು ಇರಿದಿರುವಂತಹ ಘಟನೆ ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ. ಪಾರ್ಟಿ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರ ಮಧ್ಯೆ ಕಿರಿಕ್ ಆಗಿದೆ. ಅಲ್ಲೇ ಗುಂಪು ಕಟ್ಟಿಕೊಂಡು ಯುವಕರು ಹೊಡೆದಾಡಿದ್ದಾರೆ. ಗಲಾಟೆ ವೇಳೆ ಪ್ರಕಾಶ್ ಚತುರ್​ಗೆ ಚಾಕು ಇರಿಯಲಾಗಿದೆ. ಪ್ರಕಾಶ್ ಚತುರ್​ಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬೆಳಗಾವಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬಾಲಕ ಹಾಗೂ ಅಜ್ಜಿ ನೀರುಪಾಲು

ಬಾಲಕ ಹಾಗೂ ಅಜ್ಜಿ ನೀರುಪಾಲಾಗಿರುವಂತಹ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗಸನಾಳ ಗ್ರಾಮದ ತೋಟದಲ್ಲಿ ನಡೆದಿದೆ.  ಅಸಾದ್‌ ಮುಲ್ಲಾ(12), ಸಲೀಮಾ‌ ಮುಲ್ಲಾ(55) ಮೃತರು. ಮೃತ ಬಾಲಕ ಬಾವಿಗಿಳಿದು ನೀರು ಕುಡಿಯುವಾಗ ಕಾಲುಜಾರಿ ಬಿದಿದ್ದಾನೆ. ಆತನ ರಕ್ಷಣೆಗೆ ಹೋಗಿದ್ದ ವೃದ್ಧೆ ಕೂಡ ಮುಳುಗಿ ಸಾವನ್ನಪ್ಪಿದ್ದಾರೆ. ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:54 pm, Fri, 14 March 25

VIDEO: ರಾಕಿ ಭಾಯ್ ಸ್ಟೈಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಕನ್ನಡಿಗನ ಎಂಟ್
VIDEO: ರಾಕಿ ಭಾಯ್ ಸ್ಟೈಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಕನ್ನಡಿಗನ ಎಂಟ್
ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕಾರಣ ಪರಮೇಶ್ವರ್ ಭಾಗಿಯಾಗಿರಲಿಲ್ಲ: ಪಾಟೀಲ್
ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕಾರಣ ಪರಮೇಶ್ವರ್ ಭಾಗಿಯಾಗಿರಲಿಲ್ಲ: ಪಾಟೀಲ್
ಕಾರಿನ ಮೇಲೆ ಬಿದ್ದ ಲಾರಿ: ಭಯಾನಕ ಅಪಘಾತ ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು
ಕಾರಿನ ಮೇಲೆ ಬಿದ್ದ ಲಾರಿ: ಭಯಾನಕ ಅಪಘಾತ ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು
ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು
ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು
ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್
ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್
IPL 2025: ಐಪಿಎಲ್ ಆರಂಭಕ್ಕೂ ಮುನ್ನ ಹಲವು ಆಟಗಾರರು ಗಾಯಾಳು
IPL 2025: ಐಪಿಎಲ್ ಆರಂಭಕ್ಕೂ ಮುನ್ನ ಹಲವು ಆಟಗಾರರು ಗಾಯಾಳು
ಕ್ಯಾಂಟರ್ ಚಾಲಕ ಪಾನಮತ್ತನಾಗಿದ್ದ, ಅಪಘಾತದಲ್ಲಿ ಆಟೋರಿಕ್ಷಾವೊಂದು ಅಪ್ಪಚ್ಚಿ
ಕ್ಯಾಂಟರ್ ಚಾಲಕ ಪಾನಮತ್ತನಾಗಿದ್ದ, ಅಪಘಾತದಲ್ಲಿ ಆಟೋರಿಕ್ಷಾವೊಂದು ಅಪ್ಪಚ್ಚಿ
ಪ್ರವಾಸಿಗರ ಗಮನಕ್ಕೆ: ಚಂದ್ರದ್ರೋಣ ಪರ್ವತದ ಪ್ರವಾಸಿ ತಾಣಗಳಿಗೆ ನಿರ್ಬಂಭ
ಪ್ರವಾಸಿಗರ ಗಮನಕ್ಕೆ: ಚಂದ್ರದ್ರೋಣ ಪರ್ವತದ ಪ್ರವಾಸಿ ತಾಣಗಳಿಗೆ ನಿರ್ಬಂಭ
Daily Devotional: ಬ್ರಹ್ಮ ಮುಹೂರ್ತದ ಮಹತ್ವ ತಿಳಿಯಿರಿ
Daily Devotional: ಬ್ರಹ್ಮ ಮುಹೂರ್ತದ ಮಹತ್ವ ತಿಳಿಯಿರಿ
Daily horoscope: ವೃಷಭ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ
Daily horoscope: ವೃಷಭ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ