AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವೇರಿಯಲ್ಲಿ ಸ್ವಾತಿ ಭೀಕರ ಹತ್ಯೆ: ಬೆಚ್ಚಿಬೀಳಿಸುವಂತಿದೆ ನಯಾಜ್​ನ ಕ್ರೌರ್ಯ, ಸಿಡಿದೆದ್ದ ಹಿಂದೂ ಸಂಘಟನೆಗಳು

Haveri Swathi Murder Case: ಹಾವೇರಿ ಜಿಲ್ಲೆಯಲ್ಲಿ ಒಂದು ಭೀಕರ ಘಟನೆಯೊಂದು ನಡೆದಿದೆ. ಮುಸ್ಲಿಂ ಯುವಕ ಹಿಂದೂ ಯುವತಿಯೊಬ್ಬಳನ್ನು ಭೀಕರವಾಗಿ ಹತ್ಯೆಗೈದಿದ್ದಾನೆ. ಹೌದು.. ಬದುಕಿ ಬಾಳಬೇಕಿದ್ದ ಯುವತಿ ತುಂಗಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮೊದಲಿಗೆ ಯುಡಿ ಆರ್ ದಾಖಲಿಸಿ ತನಿಖೆ ಆರಂಭಿಸಿದ ಪೊಲಿಸರು ಹಂತಕರ ಸುಳಿವು ಸಿಕ್ಕಿದ್ದು, ಹಾವೇರಿ ಜಿಲ್ಲೆಯಲ್ಲಿ ನಡೆದ ಸ್ವಾತಿ ಎಂಬ ಯುವತಿ ಹತ್ಯೆ ಪ್ರಕರಣ ದೊಡ್ಡ ಸಂಚಲನ ಸೃಷ್ಟಿಸಿದೆ. ಅಲ್ಲದೇ ನಯಾಜ್​ನ ಕ್ರೌರ್ಯ ಬೆಚ್ಚಿಬೀಳಿಸುವಂತಿದೆ,

ಹಾವೇರಿಯಲ್ಲಿ ಸ್ವಾತಿ ಭೀಕರ ಹತ್ಯೆ: ಬೆಚ್ಚಿಬೀಳಿಸುವಂತಿದೆ ನಯಾಜ್​ನ ಕ್ರೌರ್ಯ, ಸಿಡಿದೆದ್ದ ಹಿಂದೂ ಸಂಘಟನೆಗಳು
Haveri Swathi
ರಮೇಶ್ ಬಿ. ಜವಳಗೇರಾ
|

Updated on:Mar 14, 2025 | 5:08 PM

Share

ಹಾವೇರಿ, (ಮಾರ್ಚ್​ 14): ಹುಬ್ಬಳ್ಳಿ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ರೀತಿಯಲ್ಲೇ ಹಾವೇರಿ ಜಿಲ್ಲೆಯಲ್ಲಿ 22 ವರ್ಷದ ಯುವತಿಯ ಬರ್ಬರ ಹತ್ಯೆಯಾಗಿದೆ. ಕಳೆದ ಮಾರ್ಚ್ 6 ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಪತ್ತೆಪುರ ಬಳಿ ಅಪರಿಚಿತ ಯುವತಿ ಶವ ಪತ್ತೆಯಾಗಿತ್ತು. ಮೊದಲಿಗೆ ಯು.ಡಿ.ಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಹಲಗೇರಿ ಠಾಣೆ ಪೊಲಿಸರು ಯುವತಿ ಶವದ ಮರಣೋತ್ತರ ಪರೀಕ್ಷೆ ಮಾಡಿ ಅಂತ್ಯಸಂಸ್ಕಾರ ಕೂಡಾ ಮಾಡಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯನ್ನು ಯಾರೋ ಕೊಲೆ ಮಾಡಿ ತುಂಗಭದ್ರಾ ನದಿಯಲ್ಲಿ ಬಿಸಾಡಿ ಹೋಗಿರುವುದು ಗೊತ್ತಾಗಿದೆ. ಕೂಡಲೇ ತನಿಖೆ ಆರಂಭಿಸಿದ ಪೊಲೀಸರಿಗೆ ಅದು ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಎಂಬ ಯುವತಿ ಶವ ಎನ್ನುವುದು ಗೊತ್ತಾಗಿದ್ದು, ತನಿಖೆ ತೀವ್ರಗೊಳಿಸಿದಾಗ ಸ್ವಾತಿ ಹಂತಕ ನಯಾಜ್ ಎನ್ನುವುದು ದೃಢಪಟ್ಟಿದ್ದು, ಇದೀಗ ನಯಾಜ್ ಸೇರಿದಂತೆ ಮೂವರು ಆರೋಪಗಳ ಹೆಡೆಮುರಿಕಟ್ಟಿದ್ದಾರೆ. ಆದ್ರೆ, ನಯಾಜ್​ನ ಕ್ರೌರ್ಯ ಬೆಚ್ಚಬೀಳಿಸಿದೆ.

ಸ್ವಾತಿ ಎಂಬ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ನಯಾಜ್ ಹಾಗೂ ವಿನಯ್ , ದುರ್ಗಾಚಾರಿ ಎಂಬ ಯುವಕರೇ ಸ್ವಾತಿ ಹತ್ಯೆ ಗೈದವರು ಎಂದು ತನಿಖೆ ವೇಳೆ ಗೊತ್ತಾಗಿದೆ. ಆರೋಪಿ ನಯಾಜ್ ಹಿರೇಕೇರೂರು ತಾಲೂಕು ಹಳೆ ವಿರಾಪುರ ಗ್ರಾಮದವನು. ಕೊಲೆಯಾದ ಸ್ವಾತಿ ಹಾಗೂ ಕೊಲೆ ಮಾಡಿದ ಮೂವರು ಆರೋಪಿಗಳು ಹೋರಿ ಬೆದರಿಸುವ ಸ್ಪರ್ಧೆ ಅಭಿಮಾನಿಗಳು. ಹೋರಿ ಬೆದರಿಸೋ ಸ್ಪರ್ಧೆ ಇದ್ದರೆ ಅಲ್ಲಿ ಹಾಜರಾಗ್ತಿದ್ದ ಸ್ವಾತಿಗೆ ಹೋರಿ ಬೆದರಿಸೋ ಸ್ಪರ್ಧೆ  ಕ್ರೇಜ್ ಇತ್ತು. ಈ ವೇಳೆ ನಯಾಜ್ , ವಿನಯ್ ದುರ್ಗಾಚಾರಿ ನಡುವೆ ಸ್ನೇಹ ಬೆಳೆದಿದೆ. ಬಳಿಕ ಆರೋಪಿ ನಯಾಜ್ ಹಾಗೂ ಸ್ವಾತಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ನಯಾಜ್ ಸ್ವಾತಿಯನ್ನು ಬಿಟ್ಟು ತಮ್ಮ ಧರ್ಮದ ಯುವತಿ ಜೊತೆ ಮದುವೆಯಾಗಲು ಬಯಸಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಸ್ವಾತಿ ನನಗೆ ಮೋಸ ಮಾಡಬೇಡ ಎಂದು ಜಗಳ ಮಾಡಿದ್ದಾಳೆ.

ಇದನ್ನೂ ಓದಿ: ಸ್ನೇಹಕೊಂದ ಕೊಲೆಗಾತಿ: ಮೈಸೂರಿನಲ್ಲಿ ಬೆಚ್ಚಿ ಬೀಳಿಸಿದ ವೃದ್ದೆಯ ಮರ್ಡರ್ ಕಹಾನಿ

ಕೊಲೆಗೆ ಸ್ಕೆಚ್​ ಹೇಗಿತ್ತು ಗೊತ್ತಾ?

ಬಳಿಕ ನಯಾಜ್ ಹಾಗೂ ಸ್ವಾತಿ ನಡುವೆ ಭಿನ್ನಾಭಿಪ್ರಾಯ ಮನಸ್ತಾಪ ಉಂಟಾಗಿದ್ದು, ನಂತರ ನಯಾಜ್ , ವಿನಯ್ ಹಾಗೂ ದುರ್ಗಾಚಾರಿಗೂ ಈ ವಿಚಾರ ತಿಳಿಸಿದ್ದಾನೆ. ಸ್ವಾತಿ ಕಾಟ ಹೆಚ್ಚಾಗಿದೆ. ಅವಳ ಕಥೆ ಮುಗಿಸಬೇಕು ಎಂದು ಮೂವರೂ ಮಾತಾಡಿಕೊಂಡು ಆಕೆಯ ಕೊಲೆಗೆ ಸ್ಕೆಚ್​ ಹಾಕಿದ್ದಾರೆ. ಸ್ಕೆಚ್​ನಂತೆ ಆರೋಪಿಗಳು ಬಾಡಿಗೆ ಕಾರು ಮಾಡಿಕೊಂಡು ಬಂದು ಸ್ವಾತಿಯನ್ನು ರಾಣೇಬೆನ್ನೂರು ಹೊರ ವಲಯದ ಸುವರ್ಣ ಪಾರ್ಕ್ ಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಕಾರಿನಲ್ಲೇ ಟವೆಲ್ ನಿಂದ ಕುತ್ತಿಗೆಗೆ ಉರುಲು ಬಿಗಿದು ಉಸಿರುಗಟ್ಟಿಸಿ ಸ್ವಾತಿಯನ್ನು ಕೊಂದಿದ್ದಾರೆ. ನಂತರ ಕಾರಿನ ಡಿಕ್ಕಿಯಲ್ಲಿ ಶವವನ್ನು ಸಾಗಿಸಿ ತುಂಗಭದ್ರಾ ನದಿಗೆ ಬಿಸಾಡಿ ಪರಾರಿಯಾಗಿದ್ದಾರೆ. ಬಳಿಕ ರಾಣೆಬೆನ್ನೂರು ತಾಲೂಕು ಪತ್ತೆಪುರ ಬಳಿ ಸ್ವಾತಿ ಪತ್ತೆಯಾಗಿತ್ತು. ಮೊದಲು ಅಪರಿಚಿತ ಯುವತಿ ಶವ ಎಂದು ಘೋಷಿಸಿದ್ದ ಹಲಗೇರಿ ಪೊಲೀಸರು, ವಾರಸುದಾರರರು ಯಾರೂ ಇಲ್ಲದ ಹಿನ್ನಲೆಯಲ್ಲಿ, ಮರಣೋತ್ತರ ಪರೀಕ್ಷೆ ನಡೆಸಿ ಕಾನೂನು ಪ್ರಕಾರ ಸ್ವಾತಿ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು. ಆದ್ರೆ, ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸ್ವಾತಿ ಹತ್ಯೆಯಾಗಿರುವುದು ದೃಢವಾಗಿದೆ. ಇದರ ಬೆನ್ನಲ್ಲಿಯೇ ಹಲಗೇರಿ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಹಂತಕರ ಸುಳಿವು ಸಿಕ್ಕಿದೆ.

ಇದನ್ನೂ ಓದಿ
Image
ಮಂಡ್ಯದಲ್ಲೊಂದು ಮನಕಲಕುವ ಘಟನೆ: ಲವ್ ಸೆಕ್ಸ್ ದೋಖಾಕ್ಕೆ ತಾಯಿ-ಮಗಳು ಬಲಿ..!
Image
ಬಿಜೆಪಿ ಮುಖಂಡನ ವಿಡಿಯೋ: 20 ಲಕ್ಷಕ್ಕೆ ಡಿಮ್ಯಾಂಡ್‌, ಮಾಯಾಂಗನೆ ಲಾಕ್
Image
ಕರ್ನಾಟಕದಲ್ಲಿ ಮತ್ತೊಂದು ಹೀನ ಕೃತ್ಯ: ಮಗಳನ್ನೇ ಗರ್ಭಿಣಿ ಮಾಡಿದ ನೀಚ ತಂದೆ
Image
ಬಾಲಕಿಯನ್ನು ಪುಸಲಾಯಿಸಿ ಗರ್ಭಿಣಿ ಮಾಡಿದ 2 ಮಕ್ಕಳ ತಂದೆ ಅರೆಸ್ಟ್

ಮಿಸ್ಸಿಂಗ್ ಕೇಸ್ ದಾಖಲಿಸಿದ್ದ ಪೋಷಕರು

ಕಳೆದ ಮಾರ್ಚ್ 3 ರಂದು ಸ್ವಾತಿ ಕಾಣೆಯಾಗಿದ್ದಳು. ಈ‌ ಕುರಿತು ಸ್ವಾತಿ ಪೋಷಕರು ಹಿರೇಕೇರೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ಬಳಿಕ ಮಾರ್ಚ್ 6 ರಂದು ರಾಣೆಬೆನ್ನೂರು ತಾಲೂಕು ಪತ್ತೆಪುರ ಬಳಿ ಸ್ವಾತಿ ಶವ ಪತ್ತೆಯಾಗಿತ್ತು. ರಾಣೆಬೆನ್ನೂರೀನ ಆಸ್ಪತ್ರೆಯೊಂದರಲ್ಲಿ ಸ್ವಾತಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಳು. ಸ್ವಾತಿ ತಂದೆ ತೀರಿಕೊಂಡಿದ್ದು, ತಾಯಿ ಜೊತೆ ವಾಸವಿದ್ದಳು ಎನ್ನಲಾಗಿದೆ. ಸ್ವಾತಿ ಕೊಲೆಯಾಗಿದ್ದಾಗಿ ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದು, ಶವದ ಚಿತ್ರವನ್ನು ಪೋಷಕರಿಗೆ ತೋರಿಸಿದ್ದಾರೆ. ಫೋಟೋದಲ್ಲಿಯೇ ಈಕೆ ತನ್ನ ಮಗಳು ಎಂದು ತಾಯಿ ತಿಳಿಸಿದ್ದಾರೆ.

ಸಿಡಿದೆದ್ದ ಹಿಂದೂಪರ ಸಂಘಟನೆಗಳು

ಈ ನಡುವೆ ಹಿಂದೂ ಯುವತಿ ಹತ್ಯೆ ಜಸ್ಟೀಸ್ ಫಾರ್ ಸ್ವಾತಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಲಾಗಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಸ್ವಾತಿ ಹಂತಕರನ್ನು ಪತ್ತೆ ಹಚ್ಚಿ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕೆಂದು ಆಗ್ರಹ ವ್ಯಕ್ತವಾಗುತ್ತಿದೆ. ಸ್ವಾತಿ ಕೊಲೆ ಆರೋಪಿಗಳಿಗೆ ಕಠೀಣ ಶಿಕ್ಷೆ ಆಗಬೇಕು. ಸ್ವಾತಿ ಹತ್ಯೆಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ರಟ್ಟಿಹಳ್ಳಿ ತಾಲೂಕು ಮಾಸೂರು ಗ್ರಾಮದ ಸ್ವಾತಿ ನಿವಾಸ ಮುಂದೆ ಸ್ಥಳಿಯರು ಪ್ರತಿಭಟನೆ ನಡೆಸಿದ್ದಾರೆ.

ಕೊಲೆಯಾಗಿರುವು ಸತ್ಯ ಎಂದ ಎಸ್​ಪಿ

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಹಾವೇರಿ ಎಸ್ಪಿ ಅಂಶುಕುಮಾರ್, ಮಾರ್ಚ್ 6 ರಂದು ನಮಗೆ ಅಪರಿಚಿತ ಶವ ಸಿಕ್ಕಿತ್ತು. ಮಾರ್ಚ್​ 11 ರಂದು ಅದು ಸ್ವಾತಿ ರಮೇಶ್ ಬ್ಯಾಡಗಿ ಎಂಬುವವರ ಮೃತದೇಹ ಆಗಿತ್ತು. ತನಿಖೆ ನಡೆಸಿದಾಗ ಮೂವರು ಆರೋಪಿಗಳ ಸುಳಿವು ತಿಳಿಯಿತು. ನಯಾಜ್, ವಿನಾಯಕ, ದುರ್ಗಾಚಾರಿ ಎಂಬ ಆರೋಪಿಗಳು ಇದರಲ್ಲಿದ್ದಾರೆ. ಸ್ವಾತಿಗೆ ಮೂವರ ಪರಿಚಯ ಇತ್ತು. ಕೊಲೆಗೂ ಮುನ್ನ ರಾಣೆಬೆನ್ನೂರು ಬಳಿ ಸ್ವಾತಿ ಹತ್ತಿರ ಮಾತನ್ನಾಡಿದ್ದಾರೆ. ಕೆಲ ವಿಚಾರದಲ್ಲಿ ಇವರ ಮಧ್ಯೆ ಭಿನ್ನಾಭಿಪ್ರಾಯವಿತ್ತು. ಬಳಿಕ ಸ್ವಾತಿಯನ್ನು ಕೊಲೆ ಮಾಡಿ ಗಾಡಿಯಲ್ಲಿ ಶವಸಾಗಿಸಿ ತುಂಗಭದ್ರಾ ನದಿಯಲ್ಲಿ ಬಿಸಾಡಿದ್ದಾರೆ. ನಯಾಜ್​ನನ್ನು ಅರೆಸ್ಟ್ ಮಾಡಿದ್ದೀವಿ. ಇನ್ನಿಬ್ಬರು ತಲೆ ಮರೆಸಿಕೊಂಡಿದ್ದಾರೆ. ಪತ್ತೆ ಮಾಡಿ ಬಂಧಿಸುತ್ತೇವೆ ಎಂದು ಮಾಹಿತಿ ನೀಡಿದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:07 pm, Fri, 14 March 25

ಗಿಲ್ಲಿ ಅವತಾರವನ್ನೇ ಬದಲಿಸಿದ ಮನೆ ಮಂದಿ; ನೀವು ನಗೋದು ಗ್ಯಾರಂಟಿ
ಗಿಲ್ಲಿ ಅವತಾರವನ್ನೇ ಬದಲಿಸಿದ ಮನೆ ಮಂದಿ; ನೀವು ನಗೋದು ಗ್ಯಾರಂಟಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ