Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನಿಟ್ರ್ಯಾಪ್ ಖೆಡ್ಡಾಕ್ಕೆ ಬಿದ್ದ ಬಿಜೆಪಿ ಮುಖಂಡ: ಬೆತ್ತಲೆ ವಿಡಿಯೋ..20 ಲಕ್ಷಕ್ಕೆ ಡಿಮ್ಯಾಂಡ್‌.. ಮಾಯಾಂಗನೆ ಲಾಕ್

ಮಿಂಚಿನ ಬಳ್ಳಿ..ಬಳುಕೋ ಬಳ್ಳಿ. ಇದೇ ಚೆಲುವೆಗೆ ಬೋಲ್ಡ್ ಆಗಿದ್ದ ಬಿಜೆಪಿ ಮುಖಂಡ ಈಗ ವಿಲವಿಲ ಅಂತಿದ್ದಾನೆ. ಇತ್ತ ಸೆರಗೊಡ್ಡಿ ಗಂಡಿನ ಬೆತ್ತಲೆ ಫೋಟೊ ತೆಗೆದ ಸುಂದರಿ ಈಗ ಜೈಲು ಸೇರಿದ್ದಾಳೆ. ಮೆಸೇಜ್ ಕಳ್ಸಿ ಹಣವ ಗಾಳ ಹಾಕಿದ್ಲು ಚೆಂದುಳ್ಳಿ..ಬೆತ್ತಲೆ ವಿಡಿಯೋ ಇಟ್ಕೊಂಡು 20 ಲಕ್ಷ ಕೇಳಿದ ಮಳ್ಳಿಯ ಮಾಯಾಂಗನೆ ಸುದ್ದಿ ವಿವರ ಇಲ್ಲಿದೆ.

ಹನಿಟ್ರ್ಯಾಪ್ ಖೆಡ್ಡಾಕ್ಕೆ ಬಿದ್ದ ಬಿಜೆಪಿ ಮುಖಂಡ: ಬೆತ್ತಲೆ ವಿಡಿಯೋ..20 ಲಕ್ಷಕ್ಕೆ ಡಿಮ್ಯಾಂಡ್‌.. ಮಾಯಾಂಗನೆ ಲಾಕ್
Tumakuru Honey Trap
Follow us
ಮಹೇಶ್ ಇ, ಭೂಮನಹಳ್ಳಿ
| Updated By: ರಮೇಶ್ ಬಿ. ಜವಳಗೇರಾ

Updated on:Mar 12, 2025 | 11:00 PM

ತುಮಕೂರು, (ಮಾರ್ಚ್​ 12): ಪಡ್ಡೆ ಹುಡುಗರಿಗೆ ನಶೆ ಏರಿಸೋ ನಿಶಾ ತುಮಕೂರಿನ ಕ್ಯಾತ್ಸಂದ್ರದ ನಿವಾಸಿ. ಹಣವಂತರಿಗೆ ಹನಿಟ್ರ್ಯಾಪ್ ಮೂಲಕ ಗಾಳಹಾಕಿ ದುಡ್ಡು ಪೀಕುತ್ತಿದ್ದ ಐನಾತಿ. ಇದೇ ನಿಶಾ ಗುಬ್ಬಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಅಣ್ಣಪ್ಪಸ್ವಾಮಿಗೆ ಹನಿಟ್ರ್ಯಾಪ್ ಮಾಡಿ ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದಿದ್ದಾಳೆ.  ಹೌದು…ಬೆತ್ತಲೆ ವಿಡಿಯೋ ಇಟ್ಟುಕೊಂಡು 20 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾಳೆ. ಸಾಲದಕ್ಕೆ ಹಣ ಕೊಡದಿದ್ದರೇ ರೇಪ್ ಕೇಸ್ ಹಾಕುವುದಾಗಿ ಬೆದರಿಸಿ ಸೋಷಿಯಲ್‌ ಮೀಡಿಯಾದಲ್ಲಿ ಬೆತ್ತಲೆ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿ ಇದೀಗ ಲಾಕ್ ಆಗಿದ್ದಾಳೆ.

ಫೇಸ್‌ಬುಕ್ ಮೂಲಕ ಅಣ್ಣಪ್ಪ ಸ್ವಾಮಿಗೆ ಪ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಪರಿಚಯವಾಗಿದ್ದ ನಿಶಾ, ಪ್ರತಿದಿನ ಗುಡ್ ಮಾರ್ನಿಂಗ್‌, ಗುಡ್‌ನೈಟ್ ಎಂದು ಮೇಸೇಜ್‌ ಕಳಿಸಿ ಕೊನೆಗೆ ಲಾಡ್ಜ್ ಕರೆತಂದು ಚಕ್ಕಂದವಾಡಿದ್ದಾಳೆ. ಬಳಿಕ ಆ ವಿಡಿಯೋ ಇಟ್ಟುಕೊಂಡು ಆಟ ಆಡಲು ಹೋಗಿ ಜೈಲು ಸೇರಿದ್ದಾಳೆ.

ಇದನ್ನೂ ಓದಿ: ಕರ್ನಾಟಕದಲ್ಲೊಂದು ಹೀನ ಕೃತ್ಯ: ಮಗಳನ್ನೇ ಗರ್ಭಿಣಿ ಮಾಡಿದ ನೀಚ ತಂದೆ

ಗುಬ್ಬಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಅಣ್ಣಪ್ಪ ಕೂಡಾ ಒಳ್ಳೆ ಹುಡುಗಿ ಬಲೆಗೆ ಬಿದ್ದಿದ್ದಾಳೆ ಎಂದು ಜೊಲ್ಲು‌ ಸುರಿಸಿಕೊಂಡು ಚಾಟ್, ಫೋನ್ ಸಂಭಾಷಣೆ ಶುರು ಮಾಡಿದ್ದ. ಅಷ್ಟೇ ಅಲ್ಲ ಇಬ್ಬರ ಸುತ್ತಾಟನೂ ಆರಂಭಿಸಿದ್ದರು. ಕೊನೆಗೆ ದೊಡ್ಡಬಳ್ಳಾಪುರದ ಲಾಡ್ಜ್ ಒಂದರಲ್ಲಿ ಮೈಮರೆತಿದ್ದಾರೆ . ಅದೇ ವಿಡಿಯೋ ಇಟ್ಟುಕೊಂಡು ನಿಶಾ ಬ್ಲ್ಯಾಕ್‌ಮೇಲ್‌ ಮಾಡಲು ಶುರುಮಾಡಿದ್ದಾಳೆ. ಅಣ್ಣಪ್ಪಸ್ವಾಮಿಗೆ ಹನಿಟ್ರ್ಯಾಪ್ ಮಾಡಿ 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಹಣ ಕೊಡದಿದ್ದರೇ ರೇಪ್ ಕೇಸ್ ಹಾಕೋದಾಗಿ ಬೆದರಿಸಿದ್ದಾಳೆ ಅಲ್ಲದೆ ಸೋಷಿಯಲ್‌ ಮಿಡಿಯಾದಲ್ಲಿ ಬೆತ್ತಲೆ ವಿಡಿಯೋ ಹರಿಬಿಟ್ಟು ಮರ್ಯಾದೆ ತೆಗೆಯೋದಾಗಿ ಹೆದರಿಸಿದ್ದಾಳೆ.

ಇನ್ನು ನಿಶಾ ಗ್ಯಾಂಗ್ ನ ಮತ್ತಿಬ್ಬರು ಆರೋಪಿಗಳಾದ ಗುಬ್ಬಿಯ ಭರತ್ ಹಾಗೂ ಗುಬ್ಬಿ ತಾಲ್ಲೂಕಿನ ಬಿಳೇಕಲ್ ಪಾಳ್ಯದ ನಿವಾಸಿ ಬಸವರಾಜು, ಅಣ್ಣಪ್ಪ ಸ್ವಾಮಿಗೆ ಸಂಬಂಧಿಸಿದ ಡಿಟೈಲ್ ಅನ್ನು ಕಾಲ ಕಾಲಕ್ಕೆ ನಿಶಾಗೆ ಕೊಟ್ಟಿದ್ದಾರೆ. ಅಣ್ಣಪ್ಪಸ್ವಾಮಿಗೆ ಪದೇ ಪದೇ ಕರೆ ಮಾಡಿ ನೀನು ರಾಜಕೀಯದಲ್ಲಿ ಸ್ವಲ್ಪ ಹೆಸರು ಮಾಡಿದ್ದೀಯ. ನೀನು ನನಗೆ 20 ಲಕ್ಷ ರೂ. ಹಣ ಕೊಡದಿದ್ದರೆ ನಿಮ್ಮ ಮೇಲೆ ರೇಪ್ ಕೇಸ್ ಹಾಕಿ, ಬೆತ್ತಲೆ ವಿಡಿಯೋವನ್ನ ಸೋಷಿಯಲ್‌ ಮಿಡಿಯಾದಲ್ಲಿ ಹರಿಬಿಡೋದಾಗಿ ಬೆದರಿಕೆ ಹಾಕಿದ್ದಾರೆ. ಇತ್ತ ಇಂಗು ತಿಂದ ಮಂಗನಾಂತಾಗಿರುವ ಅಣ್ಣಪ್ಪ ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಸದ್ಯ ಪ್ರಕರಣ ಸಂಬಂಧ ಹನಿಟ್ರ್ಯಾಪ್ ಮಾಡಿದ್ದ, ತುಮಕೂರಿನ ಕ್ಯಾತಸಂದ್ರ ಮೂಲದ ನಿಶಾಳನ್ನ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ, ಇದರಲ್ಲಿ ಭಾಗಿಯಾಗಿದ್ದ ಗುಬ್ಬಿ ಮೂಲದ ಬಸವರಾಜು ಹಾಗೂ ಭರತ್‌ಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ.

ಇನ್ನು ಈ ಹಿಂದೆ ಗುಬ್ಬಿ ಪಟ್ಟಣದಲ್ಲಿ ಕೊಲೆಯಾಗಿದ್ದ ನರಸಿಂಹಮೂರ್ತಿ ಅಲಿಯಾಸ್ ಕುರಿಮೂರ್ತಿಯ ಕೊಲೆ ಕೇಸಿನಲ್ಲಿಯೂ ಬಸವರಾಜು ಹಾಗೂ ಭರತ್ ಆರೋಪಿಗಳಾಗಿದ್ದಾರೆ. ಪ್ರಕರಣ ಸಂಬಂಧ ಗುಬ್ಬಿ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:52 pm, Wed, 12 March 25