Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸ್​ನಲ್ಲಿ ಉಗಿದ ಮಹಿಳೆ: ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ

ಬಸ್​ನಲ್ಲಿ ಉಗಿದ ಮಹಿಳೆ: ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ

ಮಹೇಶ್ ಇ, ಭೂಮನಹಳ್ಳಿ
| Updated By: ರಮೇಶ್ ಬಿ. ಜವಳಗೇರಾ

Updated on: Mar 13, 2025 | 10:46 PM

ಮಹಿಳೆಯೊಬ್ಬರು ಕೆಎಸ್ಆರ್​ಟಿಸಿ ಬಸ್ ನಲ್ಲಿ ಎಲೆ ಅಡಿಕೆ ಎಂಜಲು ಉಗಿದ ಸಂಬಂಧ ಮಾತಿಗೆ ಮಾತು ಬೆಳೆದು ಕಂಡಕ್ಟರ್​ ಹಾಗೂ ಪ್ರಯಾಣಿಕರ ನಡುವೆ ಮಾರಾಮಾರಿಯಾಗಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ನಡೆದಿದೆ. ಹಲ್ಲೆಗೊಳಗಾದ ಕಂಡಕ್ಟರ್ ನೀಡಿದ ದೂರಿನ ಮೇರೆಗೆ ಪೊಲೀಸರು, ಮಹಿಳೆ ಸೇರಿದಂತೆ ನಾಲ್ವರು ಪ್ರಯಾಣಿಕರನ್ನು ಬಂಧಿಸಿದ್ದಾರೆ.

ತುಮಕೂರು, (ಮಾರ್ಚ್​ 13): ಮಹಿಳೆಯೊಬ್ಬರು ಕೆಎಸ್ಆರ್​ಟಿಸಿ ಬಸ್ ನಲ್ಲಿ ಎಲೆ ಅಡಿಕೆ ಎಂಜಲು ಉಗಿದ ಸಂಬಂಧ ಮಾತಿಗೆ ಮಾತು ಬೆಳೆದು ಕಂಡಕ್ಟರ್​ ಹಾಗೂ ಪ್ರಯಾಣಿಕರ ನಡುವೆ ಮಾರಾಮಾರಿಯಾಗಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ನಡೆದಿದೆ. ಪಾವಗಡದಿಂದ ತುಮಕೂರು ಕಡೆಗೆ ಹೊರಟ್ಟಿದ್ದ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಬೆಂಗಳೂರಿಗೆ ಹೋಗಬೇಕಿದ್ದ 6 ಜನ ಪ್ರಮಾಣಿಕರು ಕುಳಿತುಕೊಂಡಿದ್ದರು. ಆದ್ರೆ, ಈ ಬಸ್ ಬೆಂಗಳೂರಿಗೆ ಹೋಗಲ್ಲ ತುಮಕೂರಿಗೆ ಹೋಗುತ್ತೆ ಇಳಿಯಿರಿ ಎಂದು ಕಂಡಕ್ಟರ್​ ಹೇಳಿದ್ದಾರೆ. ಇಳಿಯುವ ವೇಳೆ ಮಹಿಳೆ ಬಸ್ ಒಳಗೆ ಎಲೆ ಅಡಿಕೆ ಉಗಿದಿದ್ದಾಳೆ.

ಇದನ್ನು ಕಂಡ ಕಂಡಕ್ಟರ್​ ಮಹಿಳೆಗೆ ಬೈದಿದ್ದಾನೆ. ಅಲ್ಲದೇ ಕ್ಲೀನ್ ಮಾಡುವಂತೆ ಮಹಿಳೆಗೆ ತಾಕೀತು ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದ ಗಲಾಟೆ ಶುರುವಾಗಿದೆ. ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಮಹಿಳೆ ಕಡೆಯವರು ಬಸ್​ ನಿರ್ವಾಹಕ ಅನಿಲ್ ಕುಮಾರ್​ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆ ಸಂಬಂಧ ಪಾವಗಡ ಕೆಎಸ್ಆರ್​ಸಿ ಡಿಪೋ ಕಂಡಕ್ಟರ್ ಅನಿಲ್ ಕುಮಾರ್ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಇದೀಗ ಪಾವಗಡ ಪೊಲೀಸರು ಮಹಿಳೆ ಸೇರಿದಂತೆ ನಾಲ್ವರನ್ನ ಬಂಧಿಸಿದ್ದಾರೆ.