ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ಅವಿನಾಶ್
ನಟ ಅವಿನಾಶ್ ಅವರು ಪುನೀತ್ ರಾಜ್ಕುಮಾರ್ ಜೊತೆ ‘ಅಪ್ಪು’ ಸಿನಿಮಾದಿಂದ ‘ಜೇಮ್ಸ್’ ಚಿತ್ರದ ತನಕ ಅಭಿನಯಿಸಿದ್ದಾರೆ. ಈಗ ‘ಅಪ್ಪು’ ಚಿತ್ರ ರೀ-ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಅವಿನಾಶ್ ಅವರು ಪುನೀತ್ ರಾಜ್ಕುಮಾರ್ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅವರು ಮಾತನಾಡಿದ ಸ್ಪೆಷಲ್ ವಿಡಿಯೋ ಇಲ್ಲಿದೆ.
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ (Puneeth Rajkumar) ಅಭಿನಯದ ‘ಅಪ್ಪು’ ಸಿನಿಮಾ ಮಾರ್ಚ್ 14ರಂದು ಮರು ಬಿಡುಗಡೆ ಆಗುತ್ತಿದೆ. ರಾಜ್ಯಾದ್ಯಂತ ಅದ್ದೂರಿಯಾಗಿ ಪ್ರದರ್ಶನ ಕಾಣಲಿದೆ. ಈ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ಅವಿನಾಶ್ ಅವರು ಆ ದಿನಗಳ ನೆನಪನ್ನು ಹಂಚಿಕೊಂಡಿದ್ದಾರೆ. ‘ಅಪ್ಪು’ (Appu) ಚಿತ್ರದಲ್ಲಿ ಅವಿನಾಶ್ ಅವರು ಪುನೀತ್ ಕೆನ್ನೆಗೆ ಬಾರಿಸುವ ದೃಶ್ಯ ಇದೆ. ಅಂದಿನ ಶೂಟಿಂಗ್ ಅನುಭವವನ್ನು ಈಗ ಅವಿನಾಶ್ ಅವರು ನೆನಪಿಸಿಕೊಂಡಿದ್ದಾರೆ. ಪುನೀತ್ ಅವರ ಫೈಟ್ ನೋಡಿ ತಾವು ದಂಗಾಗಿದ್ದಾಗಿ ಅವಿನಾಶ್ (Avinash) ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.