AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ

ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ

Mangala RR
| Edited By: |

Updated on: Mar 03, 2026 | 10:14 PM

Share

ಓಂ ಪ್ರಕಾಶ್ ರಾವ್, ಅಣಜಿ ನಾಗರಾಜ್ ಒಟ್ಟಾಗಿ 2012ರಲ್ಲಿ ‘ಭೀಮ ತೀರದಲ್ಲಿ’ ಸಿನಿಮಾ ಮಾಡಿದ್ದರು. ಅವರ ಜತೆ ದರ್ಶನ್ ಆಪ್ತವಾಗಿದ್ದರೂ ಸಹ ಆ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು ದುನಿಯಾ ವಿಜಯ್. ಯಾಕೆ ಎಂಬ ಪ್ರಶ್ನೆಗೆ ಓಂ ಪ್ರಕಾಶ್ ರಾವ್, ಅಣಜಿ ನಾಗರಾಜ್ ಉತ್ತರಿಸಿದ್ದಾರೆ.

ನಿರ್ಮಾಪಕ ಅಣಜಿ ನಾಗರಾಜ್, ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಒಟ್ಟಾಗಿ 2012ರಲ್ಲಿ ‘ಭೀಮ ತೀರದಲ್ಲಿ’ (Bheema Theeradalli) ಸಿನಿಮಾ ಮಾಡಿದ್ದರು. ಅವರ ಜೊತೆ ದರ್ಶನ್ ಆಪ್ತವಾಗಿದ್ದರೂ ಕೂಡ ಆ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು ದುನಿಯಾ ವಿಜಯ್. ಹಾಗಾದ್ರೆ, ದರ್ಶನ್ (Darshan) ಜೊತೆ ಈ ಸಿನಿಮಾವನ್ನು ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆಗೆ ಓಂ ಪ್ರಕಾಶ್ ರಾವ್ ಮತ್ತು ಅಣಜಿ ನಾಗರಾಜ್ ಅವರು ಉತ್ತರಿಸಿದ್ದಾರೆ. ‘ಈ ಕತೆಯನ್ನು ತಂದಿದ್ದೇ ದುನಿಯಾ ವಿಜಯ್. ಪಾತ್ರಕ್ಕಾಗಿ ವಿಜಯ್ ಅವರು ಅದಾಗಲೇ ಡ್ರೆಸ್ ಹೊಲಿಸಿಕೊಂಡಿದ್ದರು. ಅವರು ಬಹಳ ಇಷ್ಟಪಟ್ಟು ಮಾಡಿದ ಸಿನಿಮಾ ಇದು. ದುನಿಯಾ ವಿಜಯ್ ಅವರಿಗೆ ಈ ಪಾತ್ರ ತುಂಬಾ ಹೊಂದಿಕೆ ಆಯಿತು’ ಎಂದು ನಿರ್ಮಾಪಕ ಅಣಜಿ ನಾಗರಾಜ್ ಅವರು ಹೇಳಿದ್ದಾರೆ. ಈ ಬಾರಿ ತೆಲುಗಿನಲ್ಲಿ ಕೂಡ ಈ ಸಿನಿಮಾವನ್ನು ಬಿಡುಗಡೆ ಮಾಡಲು ಅವರು ನಿರ್ಧರಿಸಿದ್ದಾರೆ. ತೆಲುಗಿನಲ್ಲಿ ‘ಕಡಪ’ ಎಂದು ಶೀರ್ಷಿಕೆ ಇಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us