ಮಂಗಳ ರಾಜ್ ಮೂಲತಃ ಮಧುಗಿರಿ ಬಳಿಯ ರತ್ನಗಿರಿ ರಂಗಾಪುರದವರು. ಇವರು ಸುದ್ದಿ ಮಧ್ಯಮಕ್ಕೆ ಕಾಲಿಟ್ಟು 13 ವರ್ಷಗಳಾಗಿವೆ. ಈಟಿವಿಯಲ್ಲಿ ಇಂಟರ್ನ್ಶಿಪ್ , ಮಧ್ಯಮದ ಅ, ಆ ಇ ಈ ಕಲಿತಿದ್ದು ಕಸ್ತೂರಿ ನ್ಯೂಸ್ 24 ನಲ್ಲಿ ನಂತ್ರ ರಾಜ್ ನ್ಯೂಸ್, ದಿಗ್ವಿಜಯ ನ್ಯೂಸ್ ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. 2021ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮುಂದುವರಿಸಿದ್ದಾರೆ. ಸಿನಿಮಾ ಅಂದ್ರೆ ಬಾಲ್ಯದಿಂದಲೂ ಹುಚ್ಚು. ಅರಸಿ ಬಂದಿದ್ದು ಸಿನಿಮಾ ಜರ್ನಲಿಸ್ಟ್ ಕೆಲಸ. ಸಿನಿಮಾ ಸುದ್ದಿಗಳ ಕವರೇಜ್, ಸಿನಿಮಾ ಹಾಗೂ ಸಿನಿಮಾ ಮಂದಿಯ ವಿವಾದಗಳು, ವಿಮರ್ಶೆ, ಸಿನಿಮಾದವರ ಸಾವು ನೋವು ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವುಗಳ ವರದಿಗಾರಿಕೆ ಇವರ ಕಾಯಕ. ಸಿನಿಮಾ ನೋಡುವುದೇ ಎಲ್ಲಾ ಆಸಕ್ತಿಗಳಿಗಿಂತ ಹೆಚ್ಚು ಆಸಕ್ತಿ.
ಪತ್ನಿ ಸೋನಲ್ ಕಡೆಯಿಂದ ಸಿಕ್ಕ ವಿಶೇಷ ಉಡುಗೊರೆ ಬಗ್ಗೆ ಹೇಳಿದ ತರುಣ್ ಸುಧೀರ್
ನಿರ್ದೇಶಕ ತರುಣ್ ಸುಧೀರ್ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಾಟೇರ ಯಶಸ್ಸಿನ ನಂತರ ನಿರ್ದೇಶನದಿಂದ ದೂರ ಉಳಿದಿರುವುದಕ್ಕೆ ಕಾರಣಗಳನ್ನು ಅವರು ಹಂಚಿಕೊಂಡಿದ್ದಾರೆ. ದರ್ಶನ್ ಅವರೊಂದಿಗೆ ಯೋಜಿಸಿದ್ದ ಸಿಂಧೂರ ಲಕ್ಷ್ಮಣ ಸಿನಿಮಾ ಮುಂದಕ್ಕೆ ಹೋಗಿದ್ದು, ಹೊಸ ಸ್ಕ್ರಿಪ್ಟ್ ಬರೆಯುವಲ್ಲಿ ನಿರತರಾಗಿದ್ದಾರೆ. ಶೀಘ್ರದಲ್ಲೇ ತಮ್ಮ ಮುಂದಿನ ಯೋಜನೆಯನ್ನು ಪ್ರಕಟಿಸುವುದಾಗಿ ತರುಣ್ ಸುಧೀರ್ ತಿಳಿಸಿದ್ದಾರೆ.
- Mangala RR
- Updated on: Oct 10, 2026
- 9:38 am
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ? ತರುಣ್ ಸುಧೀರ್ ನೀಡಿದ ಉತ್ತರ ಇಲ್ಲಿದೆ
ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಮಾತನಾಡಿದ್ದಾರೆ. ಕನ್ನಡದ ಕೆಲವು ಹೀರೋಗಳು ಒಂದಷ್ಟು ಸಿನಿಮಾಗಳಲ್ಲಿ ವಿಲನ್ ಶೇಡ್ ಇರುವ ಪಾತ್ರಗಳನ್ನು ಮಾಡಿದ್ದಾರೆ. ಆದರೆ ಇಂಥ ಸಿನಿಮಾಗಳು ಜನರಿಗೆ ಇಷ್ಟ ಆಗಲಿಲ್ಲ. ಆ ಕಾರಣದಿಂದ ಸಿನಿಮಾಗಳು ಜನರನ್ನು ಆಕರ್ಷಿಸಲು ಸೋತಿವೆಯೇ ಎಂಬ ಪ್ರಶ್ನೆ ಮೂಡುತ್ತದೆ.
- Mangala RR
- Updated on: Oct 9, 2026
- 9:41 pm
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಹಿಂದಿ ಹಾಗೂ ಮರಾಠಿ ಚಿತ್ರರಂಗದ ಖ್ಯಾತ ನಟ ನಾನಾ ಪಾಟೇಕರ್ ಅವರು ಇಂದು (ಅಕ್ಟೋಬರ್ 8) ನಿಧನರಾಗಿದ್ದಾರೆ. ಅವರ ಜೊತೆ ಕನ್ನಡದ ನಟ ಕರಿ ಸುಬ್ಬು ಅವರು ಆಪ್ತ ಒಡನಾಟ ಹೊಂದಿದ್ದರು. ಅವರಿಬ್ಬರ ನಡುವೆ ಸ್ನೇಹ ಬೆಳೆದಿದ್ದು ಹೇಗೆ ಎಂಬುದನ್ನು ಕರಿ ಸುಬ್ಬು ಅವರು ವಿವರಿಸಿದ್ದಾರೆ.
- Mangala RR
- Updated on: Oct 8, 2026
- 8:38 pm
ಬಿಗ್ ಬಾಸ್ ಗೆಲ್ಲೋದು ಇವರೇ; ಭವಿಷ್ಯ ನುಡಿದ ಲಿಖಿತ್
ಬಿಗ್ ಬಾಸ್ ಕನ್ನಡದಲ್ಲಿ ಯಾರು ಟಾಪ್ 5 ಸ್ಥಾನ ಪಡೆಯುತ್ತಾರೆ ಮತ್ತು ಯಾರು ವಿಜೇತರಾಗುತ್ತಾರೆ ಎಂದು ಲಿಖಿತ್ ವಿಶ್ಲೇಷಿಸಿದ್ದಾರೆ. ಮಂಜು, ಗಗನ್, ಆಸಿಯಾ, ಸೌಂದರ್ಯ ಮತ್ತು ಶಾಸ್ತ್ರಿ ಟಾಪ್ 5 ರಲ್ಲಿ ಇರುತ್ತಾರೆ ಎಂದು ಹೇಳಿರುವ ಅವರು, ತಮ್ಮ ಬದಲಾವಣೆಯಿಂದಾಗಿ ಮಂಜ 100% ವಿಜೇತರಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
- Mangala RR
- Updated on: Oct 5, 2026
- 3:18 pm
‘ನಾನು ತಪ್ಪು ಮಾಡಿದೆ, ಅರ್ಥವಾಗುವಾಗ ತಡವಾಗಿತ್ತು’; ಲಿಖಿತ್
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಲಿಖಿತ್ ಗೋಂಧಿ ಅವರು ಎಲಿಮಿನೇಟ್ ಆಗಿದ್ದಾರೆ ಎಂಬುದು ಗೊತ್ತಿರುವ ವಿಷಯ. ಎಲಿಮಿನೇಷನ್ ಬಗ್ಗೆ ಅವರು ವಿವರಣೆ ನೀಡಿದ್ದಾರೆ. ‘ನಾನು ಎಲಿಮಿನೇಷನ್ ಆಗುತ್ತೇನೆ ಎಂದು ನನಗೆ ಗೊತ್ತಿತ್ತು’ ಎಂದು ಲಿಖಿತ್ ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
- Mangala RR
- Updated on: Oct 5, 2026
- 1:26 pm
Singeetam Srinivasa Rao Death: ಕನ್ನಡದ ಸೂಪರ್ ಹಿಟ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ
ಖ್ಯಾತ ಚಲನಚಿತ್ರ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ (95) ವಯೋಸಹಜ ಕಾಯಿಲೆಯಿಂದ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಡಾ.ರಾಜ್‌ಕುಮಾರ್ ಸೇರಿದಂತೆ ಹಲವು ದೈತ್ಯ ನಟರ ಸೂಪರ್ ಹಿಟ್ ಸಿನಿಮಾಗಳಿಗೆ ಇವರು ಆ್ಯಕ್ಷನ್ ಕಟ್ ಹೇಳಿದ್ದರು. 2 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 3 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ನಂದಿ ಪ್ರಶಸ್ತಿ ಮತ್ತು ಫಿಲ್ಮ್ಫೇರ್ ಪ್ರಶಸ್ತಿಗೆ ಭಾಜನರಾಗಿದ್ದ ಇವರು, ಪ್ರಯೋಗತ್ಮಕ ಸಿನಿಮಾಗಳನ್ನ ಮಾಡಿ ಸೈ ಅನಿಸಿಕೊಂಡಿದ್ದ ನಿರ್ದೇಶಕರಾಗಿದ್ದರು.
- Mangala RR
- Updated on: Oct 4, 2026
- 7:03 am
ಇದೊಂಥರಾ ‘ಲೂಸಿಯಾ’ ಕಥೆ; ಟಾರ್ಚ್ ಬಾಯ್ ಆಗಿದ್ದ ‘ಪ್ರೇಮದ ಊರಲಿ’ ನಿರ್ದೇಶಕ ಮನೋಜ್ ಕುಮಾರ್
ಪ್ರೇಮದ ಊರಲಿ ಚಿತ್ರದ ಯಶಸ್ಸಿನ ಕುರಿತು ನಿರ್ದೇಶಕ ಮನೋಜ್ ಕುಮಾರ್ ತಮ್ಮ 18 ವರ್ಷಗಳ ಸಿನಿ ಪಯಣದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಮಹಿಳಾ ಪರ ಸಂದೇಶ, ಕುಟುಂಬದ ಬೆಂಬಲ, ಹಳೆಯ ಥಿಯೇಟರ್‌ನಲ್ಲಿ ಟಾರ್ಚ್ ಬಾಯ್ ಆಗಿದ್ದ ಕ್ಷಣದಿಂದ ತಮ್ಮದೇ ನಿರ್ದೇಶನದ ಸಿನಿಮಾ ಅದೇ ಥಿಯೇಟರ್ ಪಕ್ಕದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುವವರೆಗಿನ ಅವರ ರೋಚಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.
- Mangala RR
- Updated on: Oct 3, 2026
- 3:15 pm
‘ಪ್ರೇಮದ ಊರಲಿ’ ಸಿನಿಮಾ ಕಲೆಕ್ಷನ್ ಬಗ್ಗೆ ನಿರ್ದೇಶಕ ಮನೋಜ್ ಮಾತು
ಪ್ರೇಮದ ಊರಲಿ ಚಿತ್ರ ಕನ್ನಡ ಚಿತ್ರರಂಗಕ್ಕೆ ಹೊಸ ಮಳೆ ತಂದಿದೆ. ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆದ ನಿರ್ದೇಶಕ ಮನೋಜ್ ಕುಮಾರ್ ಭಾವುಕರಾಗಿದ್ದಾರೆ. ಕನ್ನಡಿಗರು ಉತ್ತಮ ಸಿನಿಮಾಗಳನ್ನು ಕೈಹಿಡಿಯುತ್ತಾರೆ ಎಂಬುದನ್ನು ಈ ಚಿತ್ರ ಸಾಬೀತುಪಡಿಸಿದೆ. ರಂಗಾಯಣ ರಘು ಅವರ ಬೆಂಬಲ ಮತ್ತು ತಂಡದ ಪರಿಶ್ರಮದಿಂದ ಚಿತ್ರಕ್ಕೆ ಭಾರಿ ಯಶಸ್ಸು ಸಿಕ್ಕಿದೆ.
- Mangala RR
- Updated on: Oct 3, 2026
- 11:33 am
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
ನಟಿ ರಮಿಕಾ ಶಿವು ಪ್ರೇಮದ ಊರಲಿ ಚಿತ್ರದಲ್ಲಿನ ವಸಂತ ಪಾತ್ರಕ್ಕೆ ಸಿಕ್ಕ ಭಾರಿ ಮೆಚ್ಚುಗೆ ಬಗ್ಗೆ ಮಾತನಾಡಿದ್ದಾರೆ. ದೊಡ್ಡ ನಟಿಯರಿಗೆ ಹೋಲಿಕೆ ಮತ್ತು ಪಾತ್ರಕ್ಕೆ ಜೀವ ತುಂಬಿದ ಬಗ್ಗೆ ಬಂದ ಕಾಮೆಂಟ್‌ಗಳಿಂದ ತನಗೆ ಮುಜುಗರವಾಗಿದ್ದರೂ, ಪ್ರೇಕ್ಷಕರ ಪ್ರೀತಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಹಳ್ಳಿ ಹುಡುಗಿಯ ಪಾತ್ರ ತನ್ನ ವ್ಯಕ್ತಿತ್ವಕ್ಕೆ ಹೇಗೆ ಹತ್ತಿರವಾಗಿದೆ ಎಂದು ವಿವರಿಸಿದ್ದಾರೆ. ಈ ಯಶಸ್ಸು ಅವರ ಪ್ರಯಾಣಕ್ಕೆ ಹೆಮ್ಮೆಯಾಗಿದೆ.
- Mangala RR
- Updated on: Oct 3, 2026
- 10:43 am
ಕಡಿಮೆ ಬಜೆಟ್ ಸಿನಿಮಾ, ಅದ್ಭುತ ಕಲೆಕ್ಷನ್: ‘ಪ್ರೇಮದ ಊರಲಿ’ ಬಗ್ಗೆ ಚಿತ್ರಮಂದಿರದವರ ಮಾತು
ಇತ್ತೀಚೆಗೆ ತೆರೆಕಂಡ ‘ಪ್ರೇಮದ ಊರಲಿ’ ಸಿನಿಮಾ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಎಲ್ಲ ಕಡೆಗಳಲ್ಲೂ ಹೌಸ್ಫುಲ್ ಆಗುತ್ತಿದೆ. ಇದರಿಂದ ಚಿತ್ರಮಂದಿರದವರು ಕೂಡ ಖುಷಿ ಆಗಿದ್ದಾರೆ. ಕಡಿಮೆ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ ಪ್ರತಿ ದಿನ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ವಾರಾಂತ್ಯದಲ್ಲಿ ಕಲೆಕ್ಷನ್ ಇನ್ನೂ ಜಾಸ್ತಿ ಆಗುವ ಸಾಧ್ಯತೆ ಇದೆ.
- Mangala RR
- Updated on: Oct 2, 2026
- 6:47 pm
‘ಪ್ರೇಮದ ಊರಲಿ’ ಸಿನಿಮಾ ಪ್ರದರ್ಶನದ ವೇಳೆ ಚಿತ್ರಮಂದಿರದ ಛಾವಣಿ ಕುಸಿತ
ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯ ಪರಿಣಾಮದಿಂದ ಅವಘಡ ಸಂಭವಿಸಿದೆ. ಬೆಂಗಳೂರಿನ ಪೀಣ್ಯದಲ್ಲಿ ಇರುವ ‘ಭಾರತಿ’ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನದ ವೇಳೆ ಮೇಲ್ಛಾವಣಿ ಕುಸಿದು ಬಿದ್ದಿದೆ. ‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದಿದ್ದ ಪ್ರೇಕ್ಷಕರಿಗೆ ಪೆಟ್ಟಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
- Mangala RR
- Updated on: Oct 1, 2026
- 1:18 pm
‘ಪ್ಯಾರಡೈಸ್’ ಸೋಲು: ‘ಮಾರ್ಟಿನ್’ ದಿನಗಳನ್ನು ನೆನಪಿಸಿಕೊಂಡ ನಿರ್ಮಾಪಕ ಉದಯ್ ಮೆಹ್ತಾ
‘ಮಾರ್ಟಿನ್’ ಸಿನಿಮಾದ ನಿರ್ಮಾಪಕ ಉದಯ್ ಮೆಹ್ತಾ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಆಗಿದ್ದ ಮಾರ್ಟಿನ್ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಕಲೆಕ್ಷನ್ ಮಾಡಿರಲಿಲ್ಲ. ಈಗ ತೆಲುಗಿನ ‘ಪ್ಯಾರಡೈಸ್’ ಸಿನಿಮಾ ಕೂಡ ಅದೇ ರೀತಿ ಪರಿಸ್ಥಿತಿ ಎದುರಿಸುತ್ತಿದೆ. ಆ ಬಗ್ಗೆ ಉದಯ್ ಮೆಹ್ತಾ ಮಾತನಾಡಿದ ವಿಡಿಯೋ ಇಲ್ಲಿದೆ.
- Mangala RR
- Updated on: Sep 29, 2026
- 8:20 pm