AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಭಾರತದಲ್ಲಿ ಯಶ್ ಒಂದು ಮಿನಿ ಕರ್ನಾಟಕ ಕಟ್ಟಿದ್ದಾನೆ: ಯೋಗರಾಜ್ ಭಟ್

ಉತ್ತರ ಭಾರತದಲ್ಲಿ ಯಶ್ ಒಂದು ಮಿನಿ ಕರ್ನಾಟಕ ಕಟ್ಟಿದ್ದಾನೆ: ಯೋಗರಾಜ್ ಭಟ್

ಮಂಗಳ ರಾಜಗೋಪಾಲ್​
| Edited By: |

Updated on: Jul 14, 2026 | 8:46 PM

Share

ಮುಖ್ಯಾಂಶಗಳು

  • ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ಸಾಂಗ್ ಬರೆದಿರುವ ಯೋಗರಾಜ್ ಭಟ್.
  • ಹಾಡು ಬರೆದ ಅನುಭವವನ್ನು ಟಿವಿ9 ಜೊತೆ ಅವರು ಹಂಚಿಕೊಂಡಿದ್ದಾರೆ.
  • ಯಶ್ ಕಾರ್ಯವೈಖರಿಗೆ ಯೋಗರಾಜ್ ಭಟ್ ಕಡೆಯಿಂದ ಸಿಕ್ತು ಮೆಚ್ಚುಗೆ.

ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ‘ತಬಾಹಿ’ ಹಾಡಿನ ಕನ್ನಡ ವರ್ಷನ್​ಗೆ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ಈಗಾಗಲೇ ಈ ಹಾಡು ಬಿಡುಗಡೆ ಆಗಿ ಗಮನ ಸೆಳೆದಿದೆ. ಯಶ್, ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿರುವ ಈ ಗೀತೆಯ ಕೆಲಸ ಹೇಗೆ ನಡೆಯಿತು ಎಂಬುದನ್ನು ಯೋಗರಾಜ್ ಭಟ್ ವಿವರಿಸಿದ್ದಾರೆ.

ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ‘ತಬಾಹಿ’ ಹಾಡಿನ ಕನ್ನಡ ವರ್ಷನ್​ಗೆ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ಈಗಾಗಲೇ ಈ ಹಾಡು ಬಿಡುಗಡೆ ಆಗಿ ಗಮನ ಸೆಳೆದಿದೆ. ಯಶ್ ಮತ್ತು ಕಿಯಾರಾ ಅಡ್ವಾಣಿ ಅವರು ಕಾಣಿಸಿಕೊಂಡಿರುವ ಈ ಗೀತೆಯ ಕೆಲಸ ಹೇಗೆ ನಡೆಯಿತು ಎಂಬುದನ್ನು ಯೋಗರಾಜ್ ಭಟ್ ಅವರು ವಿವರಿಸಿದ್ದಾರೆ. ‘ಕೆಜಿಎಫ್’ ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋದವರು ಯಶ್. ಈಗ ಅವರು ‘ಟಾಕ್ಸಿಕ್’ ಮೂಲಕ ಅನೇಕ ಕನ್ನಡಿಗರಿಗೆ ಕೆಲಸ ಕೊಟ್ಟಿದ್ದಾರೆ. ಅದನ್ನು ಕಂಡು ಹೊಗಳಿರುವ ಯೋಗರಾಜ್ ಭಟ್ ಅವರು, ‘ಉತ್ತರ ಭಾರತದಲ್ಲಿ ಯಶ್ ಒಂದು ಮಿನಿ ಕರ್ನಾಟಕ ಕಟ್ಟಿದ್ದಾನೆ. ದೊಡ್ಡ ಸ್ಟುಡಿಯೋದಲ್ಲಿ ಕನ್ನಡಿಗರನ್ನು ನೋಡಿ ನನಗೆ ಸಂತೋಷ ಆಯಿತು. ಇಡೀ ಕರ್ನಾಟಕವನ್ನು ಇಲ್ಲಿಗೆ ಶಿಫ್ಟ್ ಮಾಡಿಕೊಂಡಿದ್ದಾನೆ. ನಾನು ನೋಡಿರುವ ಆತನ ಹಠ ಇಂದು-ನಿನ್ನೆಯದಲ್ಲ’ ಎಂದು ಹೊಗಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us