AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲಿನಲ್ಲಿ ಪ್ರಯಾಣಿಕರಿಗೆ ಬಿಳಿ ಬಣ್ಣದ ಬೆಡ್ ಶೀಟ್ ಕೊಡುವುದರ ಹಿಂದಿದೆ ಕಾರಣ

ಸಾಮಾನ್ಯವಾಗಿ ನಾವೆಲ್ಲಾ ಡ್ರೆಸ್ ಅಥವಾ ಸೀರೆ ಖರೀದಿಸಲು ಹೋದ್ರೆ ಬಿಳಿ ಬಣ್ಣದ ಉಡುಗೆಗಳ ಖರೀದಿಯತ್ತ ಅಷ್ಟಾಗಿ ಮನಸ್ಸು ಮಾಡುವುದಿಲ್ಲ. ಬಿಳಿ ಬಣ್ಣದ ಉಡುಪು ಬೇಗನೆ ಕೊಳೆಯಾಗುತ್ತವೆ. ಆದರೆ ಈ ರೈಲಿನಲ್ಲಿ ಬಿಳಿ ಬಣ್ಣದ ಬೆಡ್​​​​​ಶೀಟನ್ನೇ ಬಳಸುತ್ತಾರೆ. ಬಿಳಿ ಬಣ್ಣದ ಬೆಡ್​​​​​ಶೀಟ್ ಹಾಗೂ ದಿಂಬನ್ನು ಬಳಸುವುದರ ಹಿಂದೆ ಸ್ವಚ್ಫತೆ ಹಾಗೂ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎಂಬ ಕಾರಣವು ಅಡಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ರೈಲಿನಲ್ಲಿ ಪ್ರಯಾಣಿಕರಿಗೆ ಬಿಳಿ ಬಣ್ಣದ ಬೆಡ್ ಶೀಟ್ ಕೊಡುವುದರ ಹಿಂದಿದೆ ಕಾರಣ
White Bedsheet In TrainImage Credit source: Getty Images
ಸಾಯಿನಂದಾ
|

Updated on: Aug 10, 2026 | 5:12 PM

Share

ಮುಖ್ಯಾಂಶಗಳು

  • ಬಿಳಿ ಬಣ್ಣದ ಮೇಲೆ ಸ್ವಲ್ಪ ಕೊಳೆಯಾದ್ರು ಬೇಗನೆ ಕಾಣಿಸಿಕೊಳ್ಳುತ್ತವೆ
  • ಎಸಿ ಅಥವಾ ಸ್ಲೀಪರ್‌ ಕೋಚ್‌ಗಳಲ್ಲಿ ಬಿಳಿ ಬಣ್ಣದ ಬೆಡ್‌ಶೀಟ್‌ಗಳನ್ನೇ ಪ್ರಯಾಣಿಕರಿಗೆ ನೀಡುತ್ತಾರೆ
  • ಬಿಳಿ ಬಣ್ಣವು ಶುದ್ಧತೆ ಹಾಗೂ ಪ್ರಶಾಂತತೆಯ ಭಾವನೆಯನ್ನು ಮೂಡಿಸುತ್ತದೆ

ನೀವು ರೈಲಿನಲ್ಲಿ ಪ್ರಯಾಣಿಸಿದ್ದೀರಬಹುದು. ಅದರಲ್ಲೂ ಈ ಎಸಿ ಹಾಗೂ ಸ್ಲೀಪರ್ ಕೋಚ್‌ಗಳಲ್ಲಿ ಹೋಗಿದ್ದರೆ ಈ ವಿಷ್ಯವನ್ನು ನೀವು ಗಮನಿಸಿರುತ್ತೀರಿ. ಹೌದು, ಎಸಿ ಬೋಗಿಗಳಲ್ಲಿ ಬಿಳಿ ಬಣ್ಣದ ಬೆಡ್‌ಶೀಟ್‌ಗಳನ್ನೇ (white bed sheet) ಪ್ರಯಾಣಿಕರಿಗೆ ನೀಡುತ್ತಾರೆ. ಈ ಬಿಳಿ ಬಣ್ಣದ ಮೇಲೆ ಸ್ವಲ್ಪ ಕೊಳೆಯಾದ್ರು ಬೇಗನೆ ಕಾಣಿಸಿಕೊಳ್ಳುತ್ತವೆ. ಆದ್ರೂ ಯಾಕೆ ಈ ಬಣ್ಣದ ಬೆಡ್ ಶೀಟ್ ಹಾಗೂ ದಿಂಬನ್ನು ಪ್ರಯಾಣಿಕರಿಗೆ ನೀಡುತ್ತಾರೆ ಎಂಬ ಬಗ್ಗೆ ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ. ಈ ಬಣ್ಣವು ಬೇಗನೆ ಮಾಸುವುದಿಲ್ಲ ಹಾಗೂ ಸ್ವಚ್ಛತೆಗೂ ಸುಲಭ ಸೇರಿದಂತೆ ಇನ್ನಿತರ ಕಾರಣಗಳು ಸೇರಿವೆ.

ರೈಲಿನಲ್ಲಿ ಬಿಳಿ ಬಣ್ಣದ ಬೆಡ್ ಶೀಟ್ ಕೊಡುವುದು ಯಾಕೆ?

  • ಬಿಳಿ ಬಣ್ಣದಲ್ಲಿ ಕೊಳೆ ಕಾಣಿಸುತ್ತದೆ. ಹೀಗಾಗಿ ಪ್ರಯಾಣಿಕರು ಬೆಡ್ ಶೀಟ್‌ಗಳು ಸ್ವಚ್ಛವಾಗಿದೆಯೇ ಎಂದು ಪರೀಕ್ಷಿಸುತ್ತಾರೆ. ಇದು ರೈಲು ಪ್ರಯಾಣಿಕರಿಗೆ ಸ್ವಚ್ಛತೆಯ ಭರವಸೆ ನೀಡಲು ಸಹಕಾರಿಯಾಗಿದೆ.
  • ಬಿಳಿ ಬಟ್ಟೆಗೆ ಬ್ಲೀಚ್ ಮಾಡುವುದು ಸುಲಭ ಹಾಗೂ ಈ ಬಟ್ಟೆ ದೀರ್ಘಕಾಲ ಬಾಳಿಕೆ ಬರುತ್ತದೆ.
  •  ಬಿಳಿ ಬಣ್ಣವು ಶುದ್ಧತೆ ಹಾಗೂ ಪ್ರಶಾಂತತೆಯ ಭಾವನೆಯನ್ನು ಮೂಡಿಸುತ್ತದೆ.
  • ಬಿಳಿ ಬೆಡ್ ಶೀಟ್ ಗಳನ್ನು ಅಧಿಕ ಉಷ್ಣಾಂಶದಲ್ಲಿ ಹಾಗೂ ರಾಸಾಯನಿಕ ಬಳಸಿ ತೊಳೆಯಲಾಗುತ್ತದೆ. ಇದು ಬಿಳಿಯಾಗಿರುವುದರಿಂದ ಬಣ್ಣ ಬೇಗ ಮಾಸುತ್ತದೆ ಎನ್ನುವ ಭಯ ಇರುವುದಿಲ್ಲ.

ಇದನ್ನೂ ಓದಿ: ಹೋಟೆಲ್ ರೂಮ್‌ಗಳಲ್ಲಿ ಬೆಡ್ ಮುಂದೆ ಕನ್ನಡಿ ಅಳವಡಿಸಿರುವುದರ ಹಿಂದಿದೆ ಈ ಕಾರಣ

  • ಬಿಳಿ ಬಣ್ಣದ ಬೆಡ್ ಶೀಟ್ ನ್ನು ಪದೇ ಪದೇ ಬಳಕೆ ಹಾಗೂ ಶುಚಿಗೊಳಿಸುವುದರಿಂದ ಬೇರೆ ಬಣ್ಣದ ಬಟ್ಟೆಗಳಂತೆ ಇದರ ಬಣ್ಣಗೆಡುತ್ತವೆ ಎನ್ನುವ ಭಯವಿರುವುದಿಲ್ಲ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Live: ಮೈಸೂರು ದಸರಾ ಉದ್ಘಾಟನೆ ನೇರಪ್ರಸಾರ
Live: ಮೈಸೂರು ದಸರಾ ಉದ್ಘಾಟನೆ ನೇರಪ್ರಸಾರ
ಮೈಸೂರು ದಸರಾಗೆ ಕ್ಷಣಗಣನೆ: ಗವಿಸಿದ್ದೇಶ್ವರ ಶ್ರೀಗಳಿಂದ ನಾಡಹಬ್ಬಕ್ಕೆ ಚಾಲನೆ
ಮೈಸೂರು ದಸರಾಗೆ ಕ್ಷಣಗಣನೆ: ಗವಿಸಿದ್ದೇಶ್ವರ ಶ್ರೀಗಳಿಂದ ನಾಡಹಬ್ಬಕ್ಕೆ ಚಾಲನೆ
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲವಾಗಿ ಮಾತಾಡಿದ್ದಕ್ಕೆ ಶಿಕ್ಷೆ
ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲವಾಗಿ ಮಾತಾಡಿದ್ದಕ್ಕೆ ಶಿಕ್ಷೆ
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ