AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ವಿದೇಶಿ ಯುವತಿ ಬರ್ತ್ಡೇ ಪಾರ್ಟಿಗೆ ಆಹ್ವಾನಿಸುತ್ತಿದ್ದಂತೆ ಸರ್ಪ್ರೈಸ್ ಕೊಟ್ಟ ದೆಹಲಿ ಜನತೆ

ಸೋಶಿಯಲ್ ಮೀಡಿಯಾದಲ್ಲಿ ಹೃದಯಸ್ಪರ್ಶಿ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ವಿದೇಶಿ ಯುವತಿ ದೆಹಲಿ ಜನತೆ ಪ್ರೀತಿಗೆ ಕರಗಿ ಹೋಗಿದ್ದಾಳೆ. ವಿದೇಶಿ ಯುವತಿ ಬರ್ತ್ಡೇ ಪಾರ್ಟಿಗೆ ದೆಹಲಿ ಜನರನ್ನು ಆಹ್ವಾನಿಸುತ್ತಿದ್ದಂತೆ ಎಲ್ಲರೂ ಸೇರಿ ಆಕೆಗೆ ಸರ್ಪ್ರೈಸ್ ನೀಡಿದ್ದಾರೆ. ಈ ವಿಡಿಯೋ ಸದ್ಯಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ವಿದೇಶಿ ಯುವತಿ ಬರ್ತ್ಡೇ ಪಾರ್ಟಿಗೆ ಆಹ್ವಾನಿಸುತ್ತಿದ್ದಂತೆ ಸರ್ಪ್ರೈಸ್ ಕೊಟ್ಟ ದೆಹಲಿ ಜನತೆ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Nov 19, 2026 | 6:29 PM

Share

ಪ್ರವಾಸಿ ತಾಣಗಳನ್ನು ನೋಡಲು ಭಾರತಕ್ಕೆ ಬರುವ ವಿದೇಶಿಗರು (foreigner) ಇಲ್ಲಿನ ಜನರ ಪ್ರೀತಿಗೆ ಕಳೆದು ಹೋಗ್ತಾರೆ. ಇದಕ್ಕೆ ಉದಾಹರಣೆಯಂತಿದೆ ಈ ದೃಶ್ಯ. ದೆಹಲಿಗೆ ಭೇಟಿ ನೀಡಿದ ವಿದೇಶಿಗಳು ಇಲ್ಲಿನ ಜನರ ಜತೆಗೆ ತನ್ನ ಹುಟ್ಟುಹಬ್ಬವನ್ನು ಆಚರಿಸಿದ್ದಾಳೆ. ತಮ್ಮ ಬರ್ತ್ಡೇ ಪಾರ್ಟಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ದೆಹಲಿಯ ಜನರಿಗೆ ಮುಕ್ತ ಆಹ್ವಾನದ ಪೋಸ್ಟ್ ಹಂಚಿಕೊಂಡಿದ್ದೇ ತಡ, ಫಾರಿನ್ ಲೇಡಿಯ ಬರ್ತ್ಡೇ ಪಾರ್ಟಿಗೆ ಕೇಕ್ ಹಾಗೂ ಹೂಗುಚ್ಛದೊಂದಿಗೆ ಬಂದು ಸರ್ಪ್ರೈಸ್ ನೀಡಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದೆಹಲಿ ಜನತೆಗೆ ಆಹ್ವಾನ ನೀಡಿದ ಫಾರಿನ್ ಲೇಡಿ

ಜೋಯಿ ಗ್ರೀಸ್ (Zoezannos) ಎಂಬ ಮಹಿಳೆ ತನ್ನ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. ಆಫ್ರಿಕನ್ ಟ್ರಾವೆಲರ್ ಆಗಿರುವ ಜೋಯಿ ದೆಹಲಿಗೆ ಭೇಟಿ ನೀಡಿದ್ದಾಳೆ. ಈ ವಿಡಿಯೋದಲ್ಲಿ ಹುಟ್ಟುಹಬ್ಬ ಸಮೀಪಿಸುತ್ತಿದ್ದಂತೆ ಸೋಶಿಯಲ್ ಮೀಡಿಯಾ ದಲ್ಲಿ ಬರ್ತ್ಡೇ ಪಾರ್ಟಿಗೆ ದೆಹಲಿ ಜನರನ್ನು ಆಹ್ವಾನ ನೀಡಿರುವ ಬಗ್ಗೆ ಬರೆದುಕೊಂಡಿದ್ದಾಳೆ.

ವೈರಲ್‌ ವಿಡಿಯೋ ಇಲ್ಲಿದೆ

ಬರ್ತ್ಡೇ ಪಾರ್ಟಿ ಮಾಡಿ ಆಯೋಜಿಸಿದ ವಿದೇಶಿ ಯುವತಿ

ಈ ಕ್ಲಿಪಿಂಗ್ ನಲ್ಲಿ ವಿದೇಶಿ ಯುವತಿ, ಏನಾಗಲಿದೆ ಎಂದು ನನಗೆ ತಿಳಿದಿಲ್ಲ, ಆದರೆ ನಾನು ತುಂಬಾ ಉತ್ಸುಕನಾಗಿದ್ದೇನೆ. 200 ಜನರು ಬರುವ ನಿರೀಕ್ಷೆಯಿದೆ, 30 ಜನರು ಖಂಡಿತ ಬರುತ್ತೇನೆ ಎಂದು ಹೇಳಿದ್ದಾಳೆ. ಇದು ನನಗೆ ದೊಡ್ಡ ಹುಟ್ಟುಹಬ್ಬದ ಪಾರ್ಟಿ. ವಿವಿಧ ತಿಂಡಿ ತಿನಿಸುಗಳಿವೆ, ಕೇಕ್ ಇದೆ ಹಾಗೂ ವೈಬ್‌ಗಳಿವೆ. ಜನರ ಸಲಹೆಯ ಮೇರೆಗೆ, ನಾನು ಪಾರ್ಟಿಗೆ ಸ್ಥಳವಾಗಿ ಲೋಧಿ ಗಾರ್ಡನ್ ಅನ್ನು ಆಯ್ಕೆ ಮಾಡಿಕೊಂಡೆ ಎಂದು ಹೇಳಿದ್ದಾಳೆ.

ಬರ್ತ್ಡೇ ಪಾರ್ಟಿಯಲ್ಲಿ ಹಾಜರಾದ ದೆಹಲಿ ಜನತೆ

ವಿದೇಶಿ ಯುವತಿ ಲೋಧಿ ಗಾರ್ಡನ್ ನೋಡಿ ಶಾಕ್ ಆಗಿದ್ದಾಳೆ. ಬರ್ತ್ಡೇ ಆಹ್ವಾನವಿಟ್ಟಂತೆ ಜನರು ಬರಿಗೈಯಲ್ಲಿ ಬಂದಿರಲಿಲ್ಲ. ಅವರ ಕೈಯಲ್ಲಿ ವರ್ಣರಂಜಿತ ಹೂಗುಚ್ಛಗಳು, ಹುಟ್ಟುಹಬ್ಬದ ಕೇಕ್‌ಗಳು, ಡೋನಟ್ಸ್, ಸಿಹಿತಿಂಡಿಗಳು, ಸಮೋಸಾಗಳು ಹಾಗೂ ಮನೆಯಲ್ಲಿ ತಯಾರಿಸಿದ ಆಹಾರವನ್ನು ತಂದದ್ದನ್ನು ಕಂಡು ಖುಷಿಯಾಗಿದ್ದಾಳೆ.

ಇದು ನನ್ನ ಇಡೀ ಜೀವನದ ಅತ್ಯುತ್ತಮ ದಿನ ಎಂದ ಫಾರಿನ್‌ ಲೇಡಿ

ಬರ್ತ್ಡೇ ಪಾರ್ಟಿಗೆಂದು ಬಂದ ಜನರು ಚಾಪೆಗಳ ಮೇಲೆ ಕುಳಿತು ಹರಟೆ ಹೊಡೆಯುತ್ತಾ, ನಗುತ್ತಾ ಮಾತನಾಡುವುದನ್ನು ಕಾಣಬಹುದು. ಇದು ಕೇಕ್ ಕತ್ತರಿಸುವುದರ ಜತೆಗೆ ಹಾಗೂ ಸಾಂಪ್ರದಾಯಿಕ ಭಾರತೀಯ ಆಟವಾದ ಖೋ- ಖೋವನ್ನು ಆಡುತ್ತಿರುವುದನ್ನು ಕಾಣಬಹುದು. ಇದನ್ನೆಲ್ಲಾ ನೋಡಿ ಖುಷಿ ಪಟ್ಟ ವಿದೇಶಿ ಯುವತಿ ಇದು ನನ್ನ ಇಡೀ ಜೀವನದ ಅತ್ಯುತ್ತಮ ದಿನ ಎಂದು ಹೇಳಿರುವುದನ್ನು ಕಾಣಬಹುದು.

ಇದನ್ನೂ ಓದಿ: ಭಾರತದಲ್ಲಿದ್ರೆ ಒಂಟಿ ಅನಿಸೋದಿಲ್ಲ; ಇಂಡಿಯಾದ ಬಗ್ಗೆ ವಿದೇಶಿಗನ ಮೆಚ್ಚುಗೆಯ ನುಡಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಭಾರತಕ್ಕೆ ಬಂದು ಎಷ್ಟು ಜನರ ಪ್ರೀತಿ ಸಂಪಾದಿಸಿದ್ದೀರಿ ಎಂದಿದ್ದಾರೆ. ಇನ್ನೊಬ್ಬರು, ಇಲ್ಲಿನ ಜನರು ಸ್ನೇಹಪರರು ಎಂದು ಹೇಳಿದ್ದಾರೆ. ಮತ್ತೊಬ್ಬರು, ಅಪರಿಚಿತರು ಜೀವನದ ವಿಶೇಷ ಕ್ಷಣಗಳ ಭಾಗವಾಗುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಗುಜರಿ ವ್ಯಾಪಾರಿ ಹತ್ಯೆ ಪ್ರಕರಣ: ಕಾಂಗ್ರೆಸ್​​ ಮುಖಂಡ ಶರಣು
ಗುಜರಿ ವ್ಯಾಪಾರಿ ಹತ್ಯೆ ಪ್ರಕರಣ: ಕಾಂಗ್ರೆಸ್​​ ಮುಖಂಡ ಶರಣು
ಕಾಡಾನೆ ದಾಳಿಗೆ ರೈತ ಬಲಿ ಬೆನ್ನಲ್ಲೇ ಎನ್‌.ಆರ್‌.ಪುರ ಪಟ್ಟಣ ಸ್ತಬ್ಧ
ಕಾಡಾನೆ ದಾಳಿಗೆ ರೈತ ಬಲಿ ಬೆನ್ನಲ್ಲೇ ಎನ್‌.ಆರ್‌.ಪುರ ಪಟ್ಟಣ ಸ್ತಬ್ಧ