AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಭಾರತದಲ್ಲಿದ್ರೆ ಒಂಟಿ ಅನಿಸೋದಿಲ್ಲ; ಇಂಡಿಯಾದ ಬಗ್ಗೆ ವಿದೇಶಿಗನ ಮೆಚ್ಚುಗೆಯ ನುಡಿ

ಭಾರತಕ್ಕೆ ಸುತ್ತಾಡಲೆಂದು ಬರುವ ವಿದೇಶಿಗರು ಇಲ್ಲಿನ ಜೀವನ ಶೈಲಿ ಹಾಗೂ ಜನರ ಆತಿಥ್ಯಕ್ಕೆ ಫಿದಾ ಆಗ್ತಾರೆ. ಆದರೆ ಇದೀಗ ವಿದೇಶಿಗನೊಬ್ಬ ಭಾರತದಲ್ಲಿ ಇದ್ದರೆ ಒಂಟಿ ಅನಿಸುವುದೇ ಇಲ್ಲ. ಎಲ್ಲರ ಜತೆಗೂ ಇದ್ದೇನೆ ಎನ್ನುವ ಭಾವನೆ ಬರುತ್ತದೆ ಎಂದು ಭಾರತೀಯರ ಜತೆಗಿನ ಒಡನಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಭಾರತದಲ್ಲಿದ್ರೆ ಒಂಟಿ ಅನಿಸೋದಿಲ್ಲ; ಇಂಡಿಯಾದ ಬಗ್ಗೆ ವಿದೇಶಿಗನ ಮೆಚ್ಚುಗೆಯ ನುಡಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Nov 04, 2026 | 5:55 PM

Share

ಭಾರತದ ಅಂದ್ರೆ ವಿದೇಶಿಗರಿಗೆ (foreigner) ಅದೇನೋ ಸೆಳೆತ. ಇಷ್ಟ ಪಟ್ಟು ಇಲ್ಲಿನ ತಾಣಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಲು ಬರುವ ಫಾರಿನರ್ಸ್ ಇಲ್ಲಿಯೇ ಸೆಟ್ಲ್ ಆಗಿ ಬಿಡ್ತಾರೆ. ಇದೇ ವೇಳೆ ಭಾರತೀಯರ ಜತೆ ಬೆರೆಯುವ ವಿದೇಶಿಗರಿಗೆ ಸಿಹಿ ಅನುಭವ ಆಗೋಗಿದೆ. ಇದೀಗ ಭಾರತಕ್ಕೆ ಬಂದ ವಿದೇಶಿಗ ಭಾರತ ಯಾವಾಗ್ಲೂ ಬ್ಯುಸಿ. ಇಲ್ಲಿ ನಗರ ಹಾಗೂ ಹಳ್ಳಿಯ ಜನರು ಒಂದಲ್ಲ ಒಂದು ಕೆಲ್ಸದಲ್ಲಿ ಬ್ಯುಸಿ ಇರ್ತಾರೆ. ಇಲ್ಲಿದ್ದಾಗ ನನಗೆ ಒಂಟಿ ಅನ್ನೋ ಭಾವನೆ ಬರೋದೇ ಇಲ್ಲ ಎಂದಿದ್ದಾನೆ. ಭಾರತೀಯ ಜನರನ್ನು ಮೆಚ್ಚಿಕೊಂಡ ವಿದೇಶಿಗನ ಮಾತಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಭಾರತವನ್ನು ಮೆಚ್ಚಿಕೊಂಡ ವಿದೇಶಿಗ

ದಾಮೋನ್ ಝುಮ್ಬರೋಗೆಲ್ (Damon Zumbroegel)ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿದೇಶಿಗ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ಟ್ರಾಫಿಕ್ ನಿಂದ ಕಿಕ್ಕಿರಿದ ಭಾರತದ ರಸ್ತೆ ತೋರಿಸಿದ್ದಾರೆ. ಇದು ಭಾರತ, ನಾನು ಈಗ ರಸ್ತೆಬದಿಯಲ್ಲಿ ಇದ್ದೇನೆ. ಇಂಡಿಯಾ ಬ್ಯುಸಿ ಇಲ್ಲಿ ಹಳ್ಳಿ ಹಾಗೂ ನಗರದ ಜನರು ಏನಾದರೊಂದು ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಭಾರತವು ಅಧಿಕ ಜನಸಂಖ್ಯೆ  ಇರುವ ದೇಶ. ಇಲ್ಲಿನ ಮತ್ತೊಂದು ಅತ್ಯಂತ ಆಕರ್ಷಕ ವಿಷ್ಯ ಎಂದರೆ ನಿಮ್ಗೆ ಎಲ್ಲರೊಂದಿಗೆ ಇರುವಂತೆ ಅನಿಸುತ್ತದೆ. ಒಂಟಿ ಭಾವನೆ ಕಾಡುವುದಿಲ್ಲ. ಆದರೆ ಯುನೈಟೆಡ್ ಸ್ಟೇಟ್‌ನಲ್ಲಿ ಒಂಟಿತನ ಕಾಡುತ್ತದೆ. ಆದರೆ ಭಾರತದಲ್ಲಿ ನನಗೆ ಎಂದಿಗೂ ಆ ರೀತಿಯ ಭಾವನೆ ಬಂದಿಲ್ಲ. ಇದು ಅತಂತ್ಯ ಸುಂದರ ವಿಷಯ ಎಂದು ಹೇಳಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಭಾರತದ ಟ್ರಿಪ್‌ನಲ್ಲಿ ಜತೆಯಾದ ಆಟೋರಿಕ್ಷಾವನ್ನು ತಾಯ್ನಾಡಿಗೆ ಕೊಂಡೊಯ್ದ ಬ್ರಿಟನ್ ದಂಪತಿ

ಈ ವಿಡಿಯೋ ಅಧಿಕ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, 55 ವರ್ಷ ಭಾರತದಲ್ಲಿ ಕಳೆದ್ರೂ ಯಾವತ್ತೂ ಬೋರ್ ಅನಿಸಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಬ್ಯುಸಿ ಇರ್ತಾರೆ, ಆದ್ರೆ ಏನು ಮಾಡಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More