Video: ರೀಲ್ಸ್ ನೋಡುವುದ್ರಲ್ಲಿ ಬ್ಯುಸಿ ಪುಟಾಣಿ ಕರು, ವೈರಲ್ ಆಯ್ತು ದೃಶ್ಯ
ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧ ಪಟ್ಟ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಇಂತಹದ್ದೇ ದೃಶ್ಯವೊಂದು ವೈರಲ್ ಆಗಿದೆ. ಕರುವೊಂದು ಮೊಬೈಲ್ ನಲ್ಲಿ ರೀಲ್ಸ್ ನೋಡುವುದರಲ್ಲಿ ಬ್ಯುಸಿಯಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಪುಟಾಣಿ ಕರುವಿನ (calf) ಆಟ ತುಂಟಾಟ, ನೆಗೆಡಾಟ ನೋಡಲು ಎರಡು ಕಣ್ಣು ಸಾಲದು. ಅವುಗಳು ಏನು ಮಾಡಿದ್ರೂ ಮುದ್ದಾಗಿ ಕಾಣುತ್ತವೆ. ಇದೀಗ ಪುಟಾಣಿ ಕರುವೊಂದು ಮೊಬೈಲ್ ನೋಡುತ್ತಿದೆ. ರೀಲ್ಸ್ ನೋಡುತ್ತಾ ಕುಳಿತ ಕರುವಿನ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೊಬೈಲ್ ನೋಡುವುದರಲ್ಲಿ ಮಕ್ಕಳನ್ನೇ ಮೀರಿಸುವಂತಿದೆ ಈ ಕರು ಎಂದು ತಮಾಷೆಯಾಗಿ ಹೇಳಿದ್ದಾರೆ.
ರೀಲ್ಸ್ ನೋಡುವುದ್ರಲ್ಲಿ ಬ್ಯುಸಿ ಈ ಪುಟಾಣಿ ಕರು
ಈಕ್ಷಾ (Eeksha) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಪುಟಾಣಿ ಕರುವಿನ ಮುಂದೆ ಇಡಲಾಗಿದೆ. ವಿಡಿಯೋ ಪ್ಲೇ ಆಗುತ್ತಿದ್ದಂತೆ ಅತ್ತಿಂದ ಇತ್ತ ತಲೆ ಅಲ್ಲಾಡಿಸದೇ ಮೊಬೈಲ್ ನೋಡುತ್ತಾ ಕುಳಿತಿರುವುದನ್ನು ಕಾಣಬಹುದು. ಅಲ್ಲೇ ಇದ್ದವರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ರಸ್ತೆಬದಿಯಲ್ಲಿದ್ದ ನಾಯಿಮರಿಗಳಿಗೆ ಹಾಲುಣಿಸಿದ ಹಸು
ಈ ವಿಡಿಯೋ ಐದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮುಂದಿನ ಜನರೇಷನ್ ಹೀಗೆಯೇ ಇರುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಜೆನ್ ಝೆಡ್ ಜನರೇಷನ್ ಎಂದಿದ್ದಾರೆ. ಇನ್ನೊಬ್ಬರು, ಪುಟಾಣಿ ರೀಲ್ಸ್ ನೋಡುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:59 pm, Mon, 23 November 26




