ಅಮೆರಿಕದ ರಹಸ್ಯ ಮಾಹಿತಿ ಕದಿಯಲು ಚೀನಾ ಮಾಯಾಜಾಲ? ಬಹಳ ಹಿಂದೆಯೇ ಸುಳ್ಳು ಉದ್ಯೋಗ, ನಕಲಿ ಕಂಪನಿಗಳ ಜಾಲ ಪತ್ತೆಹಚ್ಚಿದ್ದ ಎಫ್ಬಿಐ
ಅಮೆರಿಕ ಸರ್ಕಾರದ ರಹಸ್ಯ ಮಾಹಿತಿ ಕದಿಯಲು ಚೀನಾ ತನ್ನ ಗೂಢಚಾರಿಕೆ ಜಾಲ ಬಳಸುತ್ತಿರುವ ಬಗ್ಗೆ ಬಹಳ ಹಿಂದೆಯೇ ಎಫ್ಬಿಐ ಎಚ್ಚರಿಸಿತ್ತು. ಕ್ಲಾಸಿಫೈಡ್ ಇನ್ಫಾರ್ಮೇಶನ್ ಎನಿಸಿರುವ ರಹಸ್ಯ ಮಾಹಿತಿ ತಿಳಿದಿರುವ ಅಮೆರಿಕದ ಮಾಜಿ ಮತ್ತು ಹಾಲಿ ಅಧಿಕಾರಿಗಳನ್ನು ಚೀನೀ ಗುಪ್ತಚರ ಜಾಲ ಟಾರ್ಗೆಟ್ ಮಾಡಿದೆ ಎಂದು ಎಚ್ಚರಿಸಿತ್ತು. ಜೆನ್ಸೆನ್ ಹುವಾಂಗ್ ಪ್ರಕರಣ ಬೆಳಕಿಗೆ ಬರುವ ನಾಲ್ಕೈದು ತಿಂಗಳ ಹಿಂದೆಯೇ ಇದು ಆಗಿದ್ದು.

ವಾಷಿಂಗ್ಟನ್, ನವೆಂಬರ್ 23: ಎನ್ವಿಡಿಯಾದ ಸಂಸ್ಥಾಪಕ ಜೆನ್ಸೆನ್ ಹುವಾಂಗ್ ಅವರು ಶಂಕಿತ ಚೀನೀ ಗೂಢಚಾರಿಣಿ ಜೊತೆ ಸಂಬಂಧ ಹೊಂದಿದ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಅಮೆರಿಕದ ತನಿಖಾ ಸಂಸ್ಥೆಯಾದ ಎಫ್ಬಿಐ ತನ್ನ ತನಿಖೆಯನ್ನು ತೀಕ್ಷ್ಣಗೊಳಿಸಿದೆ. ಈ ವೇಳೆ, ಅಮೆರಿಕದ ರಹಸ್ಯ ಮಾಹಿತಿ ಕದಿಯಲು ಚೀನಾ ವಿವಿಧ ರೀತಿಯ ಜಾಲಗಳನ್ನು ಬಳಸುತ್ತಿರುವುದನ್ನು ಎಫ್ಬಿಐ ಈ ಹಿಂದೆಯೇ ಪತ್ತೆ ಮಾಡಿತ್ತು ಎಂದು ಹೇಳಲಾಗುತ್ತಿದೆ.
ಅಮೆರಿಕ ಸರ್ಕಾರ ಅಥವಾ ಮಿಲಿಟರಿಯ ಮಾಜಿ ಅಧಿಕಾರಿಗಳನ್ನು ಗುರಿ ಮಾಡಲಾಗುತ್ತಿತ್ತು. ನಕಲಿ ಜಾಬ್ ಲಿಸ್ಟಿಂಗ್, ನಕಲಿ ಶೆಲ್ ಕಂಪನಿಗಳು, ನಕಲಿ ಕನ್ಸಲ್ಟಿಂಗ್ ಕೆಲಸಗಳನ್ನು ಸೃಷ್ಟಿಸಿ ನೇಮಕಾತಿ ಮಾಡಲಾಗುತ್ತಿತ್ತು. ಅಮೆರಿಕ ಸರ್ಕಾರದ ಕ್ಲಾಸಿಫೈಡ್ ಮಾಹಿತಿ ಅಥವಾ ಸೂಕ್ಷ್ಮ ಮಾಹಿತಿಯನ್ನು ತಿಳಿದಿರುವ ಅಥವಾ ಅದರ ಅಕ್ಸೆಸ್ ಇರುವ ವ್ಯಕ್ತಿಗಳನ್ನು ಹುಡುಕಿ ಅವರಿಗೆ ದೊಡ್ಡ ಸಂಭಾವನೆಯ ಆಮಿಷ ಒಡ್ಡಲಾಗುತ್ತಿತ್ತು. ಇದಕ್ಕಾಗಿ ಚೀನೀ ಗೂಢಚಾರಿಗಳು ಹಲವು ವೆಬ್ಸೈಟ್ಗಳನ್ನು ಸೃಷ್ಟಿಸಿದ್ದರು ಎಂದು ಎಫ್ಬಿಐ ವಿವರಿಸಿತ್ತು.
ಇದನ್ನೂ ಓದಿ: ‘ಬರುತ್ತಿದೆ ಸೂಪರ್ಇಂಟೆಲಿಜೆನ್ಸ್, ಹುಷಾರ್’ – ತಂತ್ರಜ್ಞಾನ ಭವಿಷ್ಯದ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ಎಐ ವಿಜ್ಞಾನಿ ಕರೆ
‘ಕನ್ಸಲ್ಟಿಂಗ್ ಕೆಲಸದ ಮೂಲಕ ಸುಲಭವಾಗಿ ಹಣ ಕೊಡುವ ಆಫರ್ಗಳು ಆನ್ಲೈನ್ನಲ್ಲಿ ಬಂದರೆ ಹುಷಾರಾಗಿರಬೇಕು’ ಎಂದು ಕೆಲ ತಿಂಗಳ ಹಿಂದೆ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದರು. ಅಮೆರಿಕದ ತನಿಖಾ ಸಂಸ್ಥೆಯು 13 ವೆಬ್ಸೈಟ್ಗಳನ್ನು ಸೀಜ್ ಮಾಡಿತ್ತು. ಅವು ಈ ಕೆಳಕಂಡಂತಿವೆ:
- ಸೆಂಟ್ರಿಕ್ ಗ್ಲೋಬಲ್ ಕನ್ಸಲ್ಟಿಂಗ್, centrikglobalconsulting.com (CENTRIK)
- ರೈಟ್ ಇನ್ಫೋ ಕನ್ಸಲ್ಟಿಂಗ್, rightinfoconsult.com (RIGHTINFO)
- ಫಿನ್ನಾಕಲ್ ವೆಸ್ಪರ್ ಕನ್ಸಲ್ಟಿಂಗ್ (FV), finnaclevesperconsulting.com
- ಸಿವೈಡಿಎಫ್ ಕನ್ಸಲ್ಟಿಂಗ್, cydfconsulting.com (CYDF)
- ಪಲ್ಸ್ ವೇವ್ ಗ್ಲೋಬಲ್, pulsewaveglobal.com (PWG)
- ಕೆಟಲಿಸ್ಟ್ ಗ್ಲೋಬಲ್ ಸಲ್ಯೂಶನ್ಸ್, catalystglobalsolutions.com (CGS)
- ಹೊರೈಜನ್, thehorizzen.com (HORIZZEN)
- ಜಿಯೋ ಇಂಡೋಪೆಸಿಫಿಕ್, geoindopacific.com (GEOINDOPACIFIC)
- ಗ್ಲೋಬಲ್ ಪೀಸ್ ಫೌಂಡೇಶನ್- ಇಂಡೋನೇಷ್ಯಾ, gpf-ina.org (GPFI)
- ಸೇಫ್ಸೆಕ್ ಗ್ರೂಪ್, safesec-group.com (SAFESEC)
- ಟ್ರೂಥ್ ಇನ್ಫೋ, thetruthinfo.com (TRUTHINFO)
- ವಂಡರ್ಸ್ಕನ್ಸ್ ಡಾಟ್ ಕಾಮ್, Vandercons.com
- ಗಲ್ಫ್ ಪೀಸ್ ಫೌಂಡೇಶನ್, gulfpeace.org (GULF PEACE)
ಇದನ್ನೂ ಓದಿ: ಏಷ್ಯಾ ಪವರ್ ಇಂಡೆಕ್ಸ್ನಲ್ಲಿ ಭಾರತದ ಶಕ್ತಿ ಹೆಚ್ಚಳ; ಹೂಡಿಕೆಯಲ್ಲಿ ಚೀನಾ ಮೀರಿಸಿದ ಭಾರತ; ನಾಯಕತ್ವದಲ್ಲಿ ಮೋದಿ ನಂ. 2
ಅಮೆರಿಕದ ಆರೋಪ ತಳ್ಳಿಹಾಕಿದ ಚೀನಾ
ಅಮೆರಿಕದ ರಹಸ್ಯ ಮಾಹಿತಿ ಕದಿಯಲು ಗೂಢಚಾರಿಕೆ ಜಾಲ ಬಳಸಲಾಗುತ್ತಿದೆ ಎನ್ನುವ ಆರೋಪವನ್ನು ಚೀನಾ ಬಲವಾಗಿ ತಳ್ಳಿಹಾಕಿದೆ. ಅಮೆರಿಕ ಸುಳ್ಳು ವಿಚಾರವನ್ನು ಬಿಂಬಿಸುತ್ತಿದೆ. ಚೀನಾ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಇದು ಎಂದು ಚೀನಾ ವಿದೇಶಾಂಗ ಸಚಿವಾಲಯ ಗುವೋ ಜಿಯಾಕುನ್ ಹೇಳಿದ್ದಾರೆ. ಜೆನ್ಸೆನ್ ಹುವಾಂಗ್ ಪ್ರಕರಣದ ವಿಚಾರದ ಬಗ್ಗೆ ಅವರು ಪ್ರತಿಕ್ರಿಯೆ ನೀಡುವಾಗ ಈ ಸ್ಪಷ್ಟನೆ ನೀಡಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




