AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್ವಿಡಿಯಾಗೆ ಮರಳಲು ಜೆನ್ಸನ್ ಹುವಾಂಗ್ ಆಸಕ್ತಿ, ಮತ್ತೆ ಸಿಇಒ ಆಗುವ ಕನಸಿಗೆ ಮಂಡಳಿ ಅಡ್ಡಿ

ಎನ್ವಿಡಿಯಾದ ಮಾಜಿ ಸಿಇಒ ಜೆನ್ಸನ್ ಹುವಾಂಗ್ ಮತ್ತೆ ಕಂಪನಿಯ ನಾಯಕತ್ವ ವಹಿಸಿಕೊಳ್ಳಲು ಆಸಕ್ತಿ ತೋರಿದ್ದಾರೆ. ಆದರೆ, ವೈಯಕ್ತಿಕ ವಿವಾದಗಳು ಮತ್ತು ಚೀನಾಕ್ಕೆ ಎಐ ಚಿಪ್‌ಗಳ ಅಕ್ರಮ ರಫ್ತಿನ ಆರೋಪಗಳಿಂದ ಮಂಡಳಿ ಅವರ ಮರಳುವಿಕೆಗೆ ಅಡ್ಡಿಪಡಿಸಿದೆ. ಹುವಾಂಗ್ ಅವರ ರಾಜೀನಾಮೆ ನಂತರವೂ, ಎನ್ವಿಡಿಯಾ ಎಐ ಚಿಪ್ ಬೇಡಿಕೆಯಿಂದಾಗಿ ಭಾರಿ ಆದಾಯ ಗಳಿಸುತ್ತಿದೆ. ಈ ವಿವಾದ ಕುರಿತು ಅಮೆರಿಕದ ತನಿಖೆ ಮುಂದುವರಿದಿದ್ದು, ಹುವಾಂಗ್ ಸಂಸತ್ತಿನ ಮುಂದೆ ಹಾಜರಾಗಲಿದ್ದಾರೆ.

ಎನ್ವಿಡಿಯಾಗೆ ಮರಳಲು ಜೆನ್ಸನ್ ಹುವಾಂಗ್ ಆಸಕ್ತಿ, ಮತ್ತೆ ಸಿಇಒ ಆಗುವ ಕನಸಿಗೆ ಮಂಡಳಿ ಅಡ್ಡಿ
ಜೆನ್ಸೆನ್ ಹುವಾಂಗ್ Image Credit source: PTI
ನಯನಾ ರಾಜೀವ್
|

Updated on: Nov 18, 2026 | 7:47 AM

Share

ವಾಷಿಂಗ್ಟನ್, ನವೆಂಬರ್ 18: ಕೃತಕ ಬುದ್ಧಿಮತ್ತೆ(ಎಐ) ಕ್ಷೇತ್ರದ ಪ್ರಮುಖ ಚಿಪ್ ತಯಾರಿಕಾ ಕಂಪನಿ ಎನ್ವಿಡಿಯಾದ ಮಾಜಿ ಸಿಇಒ ಜೆನ್ಸನ್ ಹುವಾಂಗ್ ಮತ್ತೆ ಕಂಪನಿಯ ನಾಯಕತ್ವ ವಹಿಸಿಕೊಳ್ಳಲು ಆಸಕ್ತಿ ತೋರಿಸಿದ್ದಾರೆ. ಆದರೆ ಅವರನ್ನು ಮತ್ತೆ ಸಿಇಒ ಆಗಿ ನೇಮಿಸುವ ಉದ್ದೇಶವಿಲ್ಲ ಎಂದು ಕಂಪನಿಯ ನಿರ್ದೇಶಕ ಮಂಡಳಿ ಸ್ಪಷ್ಟಪಡಿಸಿದೆ. ವೈಯಕ್ತಿಕ ವಿವಾದಗಳು ಮತ್ತು ಚೀನಾಕ್ಕೆ ಎಐ ಚಿಪ್​ಗಳ ಅಕ್ರಮ ವರ್ಗಾವಣೆ ಕುರಿತು ಚರ್ಚೆ ನಡೆಯುತ್ತಿದ್ದರೂ, ಮಂಡಳಿ ಸದ್ಯಕ್ಕೆ ಅದಕ್ಕೆ ಒಪ್ಪಿಗೆ ನೀಡಿಲ್ಲ.

ಹುವಾಂಗ್ ಹೇಳಿದ್ದೇನು? ಮಂಡಳಿ ಕೊಟ್ಟ ಉತ್ತರವೇನು?

ನವೆಂಬರ್ 17ರಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದ ಹುವಾಂಗ್, ಷೇರುದಾರರು, ಉದ್ಯೋಗಿಗಳು ಮತ್ತು ಕಂಪನಿಯ ಹಿತದೃಷ್ಟಿಯಿಂದ ತಾವು ಮರಳಬೇಕು ಎಂದು ಮಂಡಳಿ ನಿರ್ಧರಿಸಿದರೆ, ಆ ಜವಾಬ್ದಾರಿಯನ್ನು ಸ್ವೀಕರಿಸಲು ಗೌರವವೆನಿಸುತ್ತದೆ ಎಂದು ಹೇಳಿದ್ದಾರೆ. ತಮ್ಮ ವೈಯಕ್ತಿಕ ಜೀವನದಲ್ಲಿ ಗಂಭೀರ ತಪ್ಪುಗಳನ್ನು ಮಾಡಿರುವುದಾಗಿಯೂ ಒಪ್ಪಿಕೊಂಡಿದ್ದಾರೆ.

ಆದರೆ ಎನ್ವಿಡಿಯಾದ ಮಂಡಳಿ ಅಧ್ಯಕ್ಷ ಹಾರ್ವೆ ಜೋನ್ಸ್, ಹುವಾಂಗ್ ಅವರ ರಾಜೀನಾಮೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಮತ್ತು ಅವರನ್ನು ಮತ್ತೆ ಸಿಇಒ ಆಗಿ ನೇಮಿಸುವ ಉದ್ದೇಶವಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಕೊಲೆಟ್ ಕ್ರೆಸ್ ಮಧ್ಯಂತರ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಶ್ವತ ಸಿಇಒ ಆಯ್ಕೆಗೆ ಕಂಪನಿ ಮುಂದಾಗಿದೆ.

ವಿವಾದಕ್ಕೆ ಕಾರಣವಾದ ಚೀನಾ ಉದ್ಯಮಿಯೊಂದಿಗಿನ ಸಂಬಂಧ

ಹುವಾಂಗ್ ಅವರ ರಾಜೀನಾಮೆಗೆ ಪ್ರಮುಖ ಕಾರಣ ಅವರ ವೈಯಕ್ತಿಕ ಸಂಬಂಧಗಳ ಕುರಿತಾದ ವಿವಾದ. ಚೀನಾದ ಉದ್ಯಮಿ ಆಲಿಸ್ ಹುವಾಂಗ್ (ಜೆನ್ಸನ್ ಹುವಾಂಗ್‌ಗೆ ಸಂಬಂಧಿಕರಲ್ಲ) ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರೆಂಬ ವರದಿಗಳು ಹೊರಬಂದಿದ್ದವು. ಜೆನ್ಸನ್ ಹುವಾಂಗ್ ತಮ್ಮ ವೈಯಕ್ತಿಕ ಜೀವನದಲ್ಲಿ ತಪ್ಪುಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ರಾಜೀನಾಮೆ: ಮಧ್ಯಂತರ ಸಿಇಒ ಆಗಿ ಕೊಲೆಟ್ ಕ್ರೆಸ್ ನೇಮಕ

ಆಲಿಸ್ ಹುವಾಂಗ್ ಈ ಹಿಂದೆ ಸಿಂಗಾಪುರ ಮೂಲದ ಮೆಗಾಸ್ಪೀಡ್ ಇಂಟರ್‌ನ್ಯಾಷನಲ್ ಎಂಬ ಕ್ಲೌಡ್ ಕಂಪ್ಯೂಟಿಂಗ್ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಚೀನಾಕ್ಕೆ ಅಮೆರಿಕದ ರಫ್ತು ನಿರ್ಬಂಧಗಳನ್ನು ಉಲ್ಲಂಘಿಸಿ ಎನ್ವಿಡಿಯಾದ ಸುಧಾರಿತ ಎಐ ಚಿಪ್‌ಗಳನ್ನು ವರ್ಗಾಯಿಸಿರುವ ಶಂಕೆಯ ಹಿನ್ನೆಲೆಯಲ್ಲಿ ಈ ಸಂಸ್ಥೆಯ ವಿರುದ್ಧ ತನಿಖೆ ನಡೆಯುತ್ತಿದೆ. ಆಲಿಸ್ ಹುವಾಂಗ್ ಚೀನಾದ ಗುಪ್ತಚರ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂಬುದನ್ನೂ ಅಮೆರಿಕದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಆದರೆ ಅವರು ಚೀನಾದ ಗೂಢಚಾರರು ಎಂಬ ಆರೋಪ ಇನ್ನೂ ಅಧಿಕೃತವಾಗಿ ಸಾಬೀತಾಗಿಲ್ಲ. ಮೆಗಾಸ್ಪೀಡ್ ಕೂಡ ಅಕ್ರಮ ಎಸಗಿರುವ ಆರೋಪವನ್ನು ನಿರಾಕರಿಸಿದೆ.

ಟ್ರಂಪ್ ಬೆಂಬಲ, ಎಲಾನ್ ಮಸ್ಕ್ ಅಭಿಯಾನ

ಹುವಾಂಗ್ ಮತ್ತೆ ಸಿಇಒ ಆಗಿ ಮರಳಬೇಕು ಎಂಬ ಬೇಡಿಕೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಟೆಕ್ ಉದ್ಯಮಿ ಎಲಾನ್ ಮಸ್ಕ್ ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ. ಟ್ರಂಪ್, ಹುವಾಂಗ್ ಈ ಘಟನೆಯಿಂದ ದೊಡ್ಡ ಪಾಠ ಕಲಿತಿದ್ದಾರೆ ಎಂದು ಹೇಳಿ, ಅವರು ಮರಳುವುದಕ್ಕೆ ತಮಗೆ ವಿರೋಧವಿಲ್ಲ ಎಂದಿದ್ದರು.

ಇನ್ನೊಂದೆಡೆ, ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಎನ್ವಿಡಿಯಾದ ಆಡಳಿತದಲ್ಲಿ ದೊಡ್ಡ ಬದಲಾವಣೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಮುಂದಿನ ಸಿಇಒ ಕಂಪನಿಯ ಹೊರಗಿನಿಂದ ಬಂದವರಾಗಿರಬೇಕು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಈ ಬೆಂಬಲದ ನಡುವೆಯೂ ಮಂಡಳಿ ಹುವಾಂಗ್ ಅವರನ್ನು ಮರಳಿ ಕರೆಸಿಕೊಳ್ಳುವ ನಿರ್ಧಾರಕ್ಕೆ ಬಂದಿಲ್ಲ.

ಎನ್ವಿಡಿಯಾ ವಿರುದ್ಧ ಅಮೆರಿಕದ ತನಿಖೆ; ಸಂಸತ್ತಿನ ಮುಂದೆ ಹಾಜರಾಗಲಿರುವ ಹುವಾಂಗ್ ಚೀನಾಕ್ಕೆ ಸುಧಾರಿತ ಎಐ ಚಿಪ್‌ಗಳು ತಲುಪಿರುವ ವಿಚಾರ ಈಗ ಅಮೆರಿಕದ ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ಎನ್ವಿಡಿಯಾ ತನ್ನ ಮಂಡಳಿಯಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ರಫ್ತು ನಿಯಂತ್ರಣ ಮೇಲ್ವಿಚಾರಣಾ ಸಮಿತಿಯನ್ನು ರಚಿಸಿದೆ. ಕಂಪನಿಯ ಚಿಪ್‌ಗಳ ಮಾರಾಟ ಮತ್ತು ರಫ್ತು ನಿಯಮಗಳ ಪಾಲನೆಯ ಮೇಲೆ ನಿಗಾ ಇಡುವುದು ಈ ಸಮಿತಿಯ ಉದ್ದೇಶ.

ಇದಲ್ಲದೆ, ಅಮೆರಿಕದ ಕಾಂಗ್ರೆಸ್‌ನ ಮೂರು ಸಮಿತಿಗಳ ಮುಂದೆ ಹುವಾಂಗ್ ಮತ್ತು ಎನ್ವಿಡಿಯಾದ ಕಾನೂನು ಸಲಹೆಗಾರ ಟಿಮ್ ಟೆಟರ್ ಹಾಜರಾಗಲು ಒಪ್ಪಿಕೊಂಡಿದ್ದಾರೆ. ಹುವಾಂಗ್ ಡಿಸೆಂಬರ್ 1ರಂದು ಹಾಗೂ ಟೆಟರ್ ಡಿಸೆಂಬರ್ 2ರಂದು ಮುಚ್ಚಿದ ಕೊಠಡಿಯಲ್ಲಿ ನಡೆಯುವ ಲಿಖಿತ ದಾಖಲೆ ಸಹಿತ ವಿಚಾರಣೆಗೆ ಹಾಜರಾಗಲಿದ್ದಾರೆ. ಚೀನಾದ ಸಂಸ್ಥೆಗಳಿಗೆ ಅಮೆರಿಕದ ಸುಧಾರಿತ ಚಿಪ್‌ಗಳು ಹೇಗೆ ತಲುಪಿದವು ಮತ್ತು ಇದರಲ್ಲಿ ಕಂಪನಿಯ ಪಾತ್ರವೇನು ಎಂಬ ಬಗ್ಗೆ ಪ್ರಶ್ನೆಗಳು ಎದುರಾಗುವ ಸಾಧ್ಯತೆಯಿದೆ.

ವಿವಾದದ ನಡುವೆಯೂ ಎನ್ವಿಡಿಯಾ ಆದಾಯದಲ್ಲಿ ಭಾರಿ ಏರಿಕೆ

ಹುವಾಂಗ್ ಅವರ ರಾಜೀನಾಮೆ ಮತ್ತು ವಿವಾದದ ನಡುವೆಯೂ ಎನ್ವಿಡಿಯಾದ ವ್ಯವಹಾರ ಉತ್ತಮ ಪ್ರಗತಿ ದಾಖಲಿಸಿದೆ. 2026ರ ಆಗಸ್ಟ್‌ನಿಂದ ಅಕ್ಟೋಬರ್‌ವರೆಗಿನ ಮೂರನೇ ತ್ರೈಮಾಸಿಕದಲ್ಲಿ ಕಂಪನಿ 115.8 ಬಿಲಿಯನ್ ಡಾಲರ್ (ಸುಮಾರು 11,580 ಕೋಟಿ ಡಾಲರ್) ಆದಾಯ ಗಳಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಗಿಂತ ಶೇ.103ರಷ್ಟು ಹೆಚ್ಚಳ.

ಕಂಪನಿಯ ಡೇಟಾ ಸೆಂಟರ್ ವಿಭಾಗದ ಆದಾಯವೇ 107.6 ಬಿಲಿಯನ್ ಡಾಲರ್‌ಗೆ ತಲುಪಿದೆ. ಕ್ಲೌಡ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಅಗತ್ಯವಿರುವ ಚಿಪ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಇದಕ್ಕೆ ಪ್ರಮುಖ ಕಾರಣ. ಮುಂದಿನ ತ್ರೈಮಾಸಿಕದಲ್ಲಿ 130 ಬಿಲಿಯನ್ ಡಾಲರ್ ಆದಾಯ ಗಳಿಸುವ ನಿರೀಕ್ಷೆಯನ್ನೂ ಕಂಪನಿ ವ್ಯಕ್ತಪಡಿಸಿದೆ.

ಎನ್ವಿಡಿಯಾ ಎಂದರೇನು?

ಎನ್ವಿಡಿಯಾ ಅಮೆರಿಕದ ಪ್ರಮುಖ ತಂತ್ರಜ್ಞಾನ ಕಂಪನಿ. ಕಂಪ್ಯೂಟರ್‌ಗಳ ಗ್ರಾಫಿಕ್ಸ್ ಕಾರ್ಡ್‌ಗಳ ತಯಾರಿಕೆಯಿಂದ ಆರಂಭವಾದ ಸಂಸ್ಥೆ, ಇಂದು ಕೃತಕ ಬುದ್ಧಿಮತ್ತೆ ಮಾದರಿಗಳಿಗೆ ಅಗತ್ಯವಿರುವ ಅತ್ಯಾಧುನಿಕ ಚಿಪ್‌ಗಳ ಪ್ರಮುಖ ಪೂರೈಕೆದಾರರಲ್ಲೊಂದಾಗಿದೆ. ಎಐ ಚಾಟ್‌ಬಾಟ್‌ಗಳು, ಡೇಟಾ ಸೆಂಟರ್‌ಗಳು ಮತ್ತು ಸೂಪರ್ ಕಂಪ್ಯೂಟರ್‌ಗಳ ಕಾರ್ಯಾಚರಣೆಯಲ್ಲಿ ಇದರ ಚಿಪ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಜೆನ್ಸನ್ ಹುವಾಂಗ್ 1993ರಲ್ಲಿ ಈ ಕಂಪನಿಯನ್ನು ಸಹ-ಸ್ಥಾಪಿಸಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಇಂದು ಈ ರಾಶಿಯವರು ಜೊತೆಗಿರುವವರಿಂದ ಏನನ್ನೂ ನಿರೀಕ್ಷಿಸದಿರಿ
ಇಂದು ಈ ರಾಶಿಯವರು ಜೊತೆಗಿರುವವರಿಂದ ಏನನ್ನೂ ನಿರೀಕ್ಷಿಸದಿರಿ
16 ಲಕ್ಷ ರೂಪಾಯಿ ಮೌಲ್ಯದ 753 ಗ್ರಾಂ ಚರಸ್ ಜಪ್ತಿ: ಆರೋಪಿಗಳ ಬಂಧನ
16 ಲಕ್ಷ ರೂಪಾಯಿ ಮೌಲ್ಯದ 753 ಗ್ರಾಂ ಚರಸ್ ಜಪ್ತಿ: ಆರೋಪಿಗಳ ಬಂಧನ
ಮುಂದಿನ ಪ್ಲ್ಯಾನ್ ಬಗ್ಗೆ ಮಾತಾಡಿದ ‘ಪ್ರೇಮದ ಊರಲಿ’ ನಟಿ ರಮಿಕಾ ಶಿವು
ಮುಂದಿನ ಪ್ಲ್ಯಾನ್ ಬಗ್ಗೆ ಮಾತಾಡಿದ ‘ಪ್ರೇಮದ ಊರಲಿ’ ನಟಿ ರಮಿಕಾ ಶಿವು
‘ಶಂಕರಾಭರಣ’ ಬಸ್ ಸಿಕ್ಕ ಬಳಿಕ ಶೈನ್ ಶೆಟ್ಟಿ ಬದುಕಿನಲ್ಲಿ ಚಮತ್ಕಾರ
‘ಶಂಕರಾಭರಣ’ ಬಸ್ ಸಿಕ್ಕ ಬಳಿಕ ಶೈನ್ ಶೆಟ್ಟಿ ಬದುಕಿನಲ್ಲಿ ಚಮತ್ಕಾರ
ಯಲ್ಲಮ್ಮ ದೇಗುಲದ ಗೋಡೆ ಮೇಲೆ ಅಶ್ಲೀಲ ಚಿಹ್ನೆ ಬಿಡಿಸಿ ವಿಕೃತಿ
ಯಲ್ಲಮ್ಮ ದೇಗುಲದ ಗೋಡೆ ಮೇಲೆ ಅಶ್ಲೀಲ ಚಿಹ್ನೆ ಬಿಡಿಸಿ ವಿಕೃತಿ
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ