AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಹಬ್ಬದ ಸೀಸನ್​ನಲ್ಲಿ ಭಾರತದಲ್ಲಿ ಪ್ರಚಂಡ ಸಂಖ್ಯೆಯಲ್ಲಿ ವಾಹನಗಳ ಮಾರಾಟ; 2026ರಲ್ಲಿ 3 ಕೋಟಿ ಗಡಿ ದಾಟುವ ನಿರೀಕ್ಷೆ

2026ರ ಹಬ್ಬದ ಸೀಸನ್​ನಲ್ಲಿ ವಾಹನಗಳ ಮಾರಾಟ ದಾಖಲೆ ಸ್ಥಾಪಿತವಾಗಿದೆ. ಆ 42 ದಿನದಲ್ಲಿ 55.25 ಲಕ್ಷ ಯುನಿಟ್​ಗಳಷ್ಟು ವಾಹನ ಮಾರಾಟವಾಗಿದೆ. ಮಾರಾಟವಾದ 55 ಲಕ್ಷ ವಾಹನಗಳಲ್ಲಿ 43 ಲಕ್ಷ ದ್ವಿಚಕ್ರ ವಾಹನಗಳಾಗಿವೆ. ಎಲೆಕ್ಟ್ರಿಕ್ ವಾಹನ ಮಾರಾಟದಲ್ಲೂ ಭಾರೀ ಹೆಚ್ಚಳವಾಗಿದೆ. ಈ ಕ್ಯಾಲೆಂಡರ್ ವರ್ಷದಲ್ಲಿ ವಾಹನಗಳ ಮಾರಾಟವು 3 ಕೋಟಿಗಿಂತ ಹೆಚ್ಚಿರುವ ನಿರೀಕ್ಷೆ ಇದೆ.

ಈ ಹಬ್ಬದ ಸೀಸನ್​ನಲ್ಲಿ ಭಾರತದಲ್ಲಿ ಪ್ರಚಂಡ ಸಂಖ್ಯೆಯಲ್ಲಿ ವಾಹನಗಳ ಮಾರಾಟ; 2026ರಲ್ಲಿ 3 ಕೋಟಿ ಗಡಿ ದಾಟುವ ನಿರೀಕ್ಷೆ
ಕಾರ್ ಶೋರೂಮ್​ನ ಸಾಂದರ್ಭಿಕ ಚಿತ್ರImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 23, 2026 | 4:32 PM

Share

ನವದೆಹಲಿ, ನವೆಂಬರ್ 23: ಭಾರತದಲ್ಲಿ ಈ ವರ್ಷ ವಾಹನಗಳ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸುವ ನಿರೀಕ್ಷೆ ಇದೆ. ಆಟೊಮೊಬೈಲ್ ಡೀಲರ್​ಗಳ ಸಂಘಟನೆಯಾದ ಫಾಡಾ (FADA) ಬಿಡುಗಡೆ ಮಾಡಿದ ವರದಿ ಪ್ರಕಾರ ಈ ಹಬ್ಬದ ಸೀಸನ್​ನಲ್ಲಿ 55.25 ಲಕ್ಷ ವಾಹನಗಳ ರೀಟೇಲ್ ಮಾರಾಟ ಆಗಿದೆ. ದಸರಾದಿಂದ ದೀಪಾವಳಿಯವರೆಗೆ 42 ದಿನಗಳನ್ನು ಹಬ್ಬದ ಸೀಸನ್ ಎಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ 55 ಲಕ್ಷಕ್ಕಿಂತ ಹೆಚ್ಚು ವಾಹನಗಳ ಮಾರಾಟವಾಗಿದೆ.

ಭಾರತದಲ್ಲಿ ಆರ್ಥಿಕತೆ ಉತ್ತಮವಾಗಿ ಬೆಳವಣಿಗೆ ಹೊಂದುತ್ತಿರುವುದಕ್ಕೆ ಸೂಚಕಗಳಲ್ಲಿ ವಾಹನಗಳ ಮಾರಾಟ ದತ್ತಾಂಶವೂ ಒಂದು. ಹೀಗಾಗಿ, ಫಾಡಾ ವರದಿ ಬಹಳ ಗಮನಾರ್ಹ ಸಂಗತಿ ಎಣಿಸಿದೆ.

ಕಳೆದ ವರ್ಷದ ಹಬ್ಬದ ಸೀಸನ್​ಗೆ ಹೋಲಿಸಿದರೆ ಈ ಬಾರಿ ವಾಹನಗಳ ರೀಟೇಲ್ ಮಾರಾಟದಲ್ಲಿ ಶೇ. 2.21ರಷ್ಟು ಏರಿಕೆ ಆಗಿದೆ. ಶೇ. 2.21 ಏರಿಕೆ ಮೇಲ್ನೋಟಕ್ಕೆ ದೊಡ್ಡದೆನಿಸುವುದಿಲ್ಲ. ಕಳೆದ ವರ್ಷ ಜಿಎಸ್​ಟಿ 2.0 ದಿಂದ ಜನರ ಅನುಭೋಗ ಗಣನೀಯವಾಗಿ ಏರಿತ್ತು. 2025ರಲ್ಲಿ ಜಿಎಸ್​ಟಿ ದರ ಪರಿಷ್ಕರಣೆ (GST 2.0) ಆಗಬಹುದು ಎನ್ನುವ ನಿರೀಕ್ಷೆ ಮೊದಲೇ ಇತ್ತು. ವಾಹನ ಖರೀದಿ ಕಡಿಮೆಗೊಂಡಿತ್ತು. ಸರಿಯಾಗಿ ಹಬ್ಬದ ಋತುವಿನ ಸಮಯಕ್ಕೆ ಜಿಎಸ್ಟಿ ಹೊಸ ದರ ಪ್ರಕಟವಾಯಿತು. ಆ ವರ್ಷ ವಾಹನಗಳ ರೀಟೇಲ್ ಮಾರಾಟ ಶೇ. 21ರಷ್ಟು ಏರಿ, ದಾಖಲೆಯ 52.38 ಯುನಿಟ್ ಮುಟ್ಟಿತು. ಈ ವರ್ಷ ಜಿಎಸ್​ಟಿ ಪುಷ್ಟಿ ಇಲ್ಲದೆಯೇ ಶೇ. 2.21ರಷ್ಟು ಮಾರಾಟ ಏರಿಕೆ ಆಗಿದೆ ಎನ್ನುವುದು ಗಮನಾರ್ಹ.

ಇದನ್ನೂ ಓದಿ: ಏಷ್ಯಾ ಪವರ್ ಇಂಡೆಕ್ಸ್​ನಲ್ಲಿ ಭಾರತದ ಶಕ್ತಿ ಹೆಚ್ಚಳ; ಹೂಡಿಕೆಯಲ್ಲಿ ಚೀನಾ ಮೀರಿಸಿದ ಭಾರತ; ನಾಯಕತ್ವದಲ್ಲಿ ಮೋದಿ ನಂ. 2

2026ರ ಹಬ್ಬದ ಸೀಸನ್​ನಲ್ಲಿ ವಾಹನಗಳ ಮಾರಾಟ ದತ್ತಾಂಶ

ಒಟ್ಟು ರೀಟೇಲ್ ಮಾರಾಟ: 55,25,490 ಯುನಿಟ್ (ಶೇ. 2.21 ಏರಿಕೆ)

  • ದ್ವಿಚಕ್ರ ವಾಹನಗಳು: 43,13,276 ಯುನಿಟ್ (ಶೇ. 3.67 ಏರಿಕೆ)
  • ಪ್ಯಾಸೆಂಜರ್ ವಾಹನಗಳು: 7,48,616 ಯುನಿಟ್ (ಶೇ. 7.16 ಇಳಿಕೆ)
  • ತ್ರಿಚಕ್ರ ವಾಹನಗಳು: 1,93,576 ಯುನಿಟ್ (ಶೇ 5.32 ಏರಿಕೆ)
  • ಕಮರ್ಷಿಯಲ್ ವಾಹನಗಳು: 1,55,761 ಯುನಿಟ್ (ಶೇ. 7.13 ಏರಿಕೆ)
  • ಟ್ರಾಕ್ಟರ್​ಗಳು: 1,03,809 ಯುನಿಟ್ (ಶೇ. 2.24 ಏರಿಕೆ)
  • ಕಟ್ಟಡ ನಿರ್ಮಾಣ ಉಪಕರಣಗಳು: 10,452 ಯುನಿಟ್ (ಶೇ. 26.06 ಏರಿಕೆ)

ಇಲ್ಲಿ ಪ್ಯಾಸೆಂಜರ್ ವಾಹನ ಹೊರತುಪಡಿಸಿದರೆ ಉಳಿದ ಎಲ್ಲಾ ಮಾದರಿಯ ವಾಹನಗಳ ಮಾರಾಟದಲ್ಲಿ ಹೆಚ್ಚಳವಾಗಿದೆ.

ಇವಿ ವಾಹನಗಳ ಮಾರಾಟ ಹೆಚ್ಚಳ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಆಕರ್ಷಣೆ ದಿನೇ ದಿನೇ ಹೆಚ್ಚುತ್ತಿದೆ. ಈ ಹಬ್ಬದ ಸೀಸನ್​ನಲ್ಲಿ ಮಾರಾಟವಾದ ಪ್ರತೀ 10 ವಾಹನಗಳಲ್ಲಿ ಒಂದು ವಾಹನವು ಇವಿ ಆಗಿದೆ. ಅಂದರೆ, ಶೇ. 10ರಷ್ಟು ಎಲೆಕ್ಟ್ರಿಕ್ ವಾಹನಗಳ ಮಾರಾಟವಾಗಿದೆ.

ಈ 42 ದಿನದಲ್ಲಿ 5 ಲಕ್ಷ ಯುನಿಟ್​ಗಳಷ್ಟು ಇವಿಗಳು ಸೇಲ್ ಆಗಿವೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಮಾರಾಟದಲ್ಲಿ ಶೇ. 52.62ರಷ್ಟು ಏರಿದೆ.

ಇದನ್ನೂ ಓದಿ: ಭಾರತ-ಯೂರೋಪಿಯನ್ ಒಕ್ಕೂಟ ವ್ಯಾಪಾರ ಒಪ್ಪಂದ ಡಿಸೆಂಬರ್ 16ಕ್ಕೆ ಸಹಿ ಸಾಧ್ಯತೆ: ವರದಿ

2026ರಲ್ಲಿ ದಾಖಲೆಯ 3 ಕೋಟಿ ವಾಹನಗಳ ಮಾರಾಟ ನಿರೀಕ್ಷೆ

ಹಬ್ಬದ ಸೀಸನ್​ನಲ್ಲಿ ದಾಖಲೆ ಸಂಖ್ಯೆಯಲ್ಲಿ ವಾಹನಗಳ ಮಾರಾಟವಾದ ಬೆನ್ನಲ್ಲೇ ಈ ಕ್ಯಾಲೆಂಡರ್ ವರ್ಷದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗುವ ನಿರೀಕ್ಷೆ ಗರಿಗೆದರಿದೆ. 2026ರ ವರ್ಷದಲ್ಲಿ ಒಟ್ಟು ವಾಹನಗಳ ಮಾರಾಟ 3 ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿದೆ. ಯಾವುದೇ ಕ್ಯಾಲೆಂಡರ್ ವರ್ಷದಲ್ಲಿ (ಜನವರಿಯಿಂದ ಡಿಸೆಂಬರ್) 3 ಕೋಟಿ ವಾಹನಗಳ ರೀಟೇಲ್ ಮಾರಾಟವಾದ ನಿದರ್ಶನ ಇಲ್ಲ. ಹೀಗಾಗಿ, ಹೊಸ ಮೈಲಿಗಲ್ಲು ಸ್ಥಾಪನೆಯಾದರೂ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More