AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವರದ್ದೇ ಯಲಹಂಕ ಗೆಸ್ಟ್​ ಹೌಸ್​​ಗೆ ಪ್ರವೇಶಿದಂತೆ ಶರ್ಮಿಳಾಗೆ ನಿರ್ಬಂಧಿಸಿದ್ಯಾಕೆ? ಇಲ್ಲಿದೆ ಪ್ರಕರಣದ ಡಿಟೇಲ್ಸ್

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಕೌಟುಂಬಿಕ ಕಲಹ ಇದೀಗ ಬೆಂಗಳೂರಿಗೂ ವಿಸ್ತರಿಸಿದೆ. ಬೆಂಗಳೂರಿನ ಯಲಹಂಕದ ವಿಶಾಲವಾದ ಫಾರ್ಮ್ ಹೌಸ್ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ರಾಜಶೇಖರ ರೆಡ್ಡಿ ಪುತ್ರ ಶರ್ಮಿಳಾ ತಮ್ಮ ಪುತ್ರಿ ಮದುವೆ ಮಾಡಲು ಈ ಫಾರ್ಮ್ ಹೌಸ್​​ನಲ್ಲಿ ಮಾಡಲು ಮುಂದಾಗಿದ್ದಾರೆ. ಆದ್ರೆ, ಕಂಪನಿನಿಯೊಂದು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂಬಂಧ ಕೋರ್ಟ್​ನಿಂದ ಮಧ್ಯಂತರ ನಿರ್ಬಂಧಕಾಜ್ಞೆ ತಂದಿದೆ. ಏನಿದು ಪ್ರಕರಣ? ವೈಎಸ್​ಆರ್ ಕುಟುಂಬದ ಆಸ್ತಿಯಲ್ಲಿ ಕಂಪನಿ ಪ್ರವೇಶ ಮಾಡಿದ್ಯಾಕೆ? ಡಿಟೇಲ್ಸ್ ಇಲ್ಲಿದೆ.

ಅವರದ್ದೇ ಯಲಹಂಕ ಗೆಸ್ಟ್​ ಹೌಸ್​​ಗೆ ಪ್ರವೇಶಿದಂತೆ ಶರ್ಮಿಳಾಗೆ ನಿರ್ಬಂಧಿಸಿದ್ಯಾಕೆ? ಇಲ್ಲಿದೆ ಪ್ರಕರಣದ ಡಿಟೇಲ್ಸ್
YSR yelahanka palace
ರಮೇಶ್​ ಎಮ್​.
| Edited By: |

Updated on:Nov 23, 2026 | 4:22 PM

Share

ಬೆಂಗಳೂರು, (ನವೆಂಬರ್ 23): ನಗರದ ಯಲಹಂಕ ಬಳಿ ಇರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಆಸ್ತಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಕೋರ್ಟ್ ಮೆಟ್ಟಿಲೇರಿದೆ. ಹೌದು…ದೇವನಹಳ್ಳಿಯ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು, ಗುತ್ತಿಗೆ ಒಪ್ಪಂದದ ಅಡಿಯಲ್ಲಿ ‘ಸಿಲಿಕಾನ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್’ ಹೊಂದಿರುವ ಈ ಆಸ್ತಿಯ ಸ್ವಾಧೀನದಲ್ಲಿ ಶರ್ಮಿಳಾ ಅಥವಾ ಅವರ ಪ್ರತಿನಿಧಿಗಳು ಹಸ್ತಕ್ಷೇಪ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರ ಬೆನ್ನಲ್ಲೇ, ನವೆಂಬರ್ 22 ರಂದು ಬೆಂಗಳೂರಿಗೆ ಬಂದಿಳಿದ ಶರ್ಮಿಳಾ ಮತ್ತು ಅವರ ತಾಯಿ ವಿಜಯಮ್ಮ ಅವರನ್ನು ಯಲಹಂಕ ನಿವಾಸಕ್ಕೆ ತೆರಳದಂತೆ ಬೆಂಗಳೂರು ಪೊಲೀಸರು ವಿಮಾನ ನಿಲ್ದಾಣದಲ್ಲೇ ತಡೆದ್ದಾರೆ.

ಶರ್ಮಿಳಾ ಹಾಗೂ ಅವರ ಪ್ರತಿನಿಧಿಗಳಿಗೆ ನಿರ್ಬಂಧ

ವೈ.ಎಸ್.ಶರ್ಮಿಳಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸಿಲಿಕಾನ್ ಬಿಲ್ಡರ್ಸ್ ಪ್ರೈವೆಟ್ ಲಿಮಿಟೆಡ್, ಇ.ಸಿ.ಸುಗುಣಮ್ಮ (ರಾಜಶೇರ್ ರೆಡ್ಡಿ ಪತ್ನಿ ತಾಯಿ) 2007ರಿಂದ ಫೆಬ್ರವರಿ 2027ರವರೆಗೆ ತಮಗೆ ಜಾಗ ಲೀಸ್​ಗೆ ನೀಡಿದ್ದಾರೆ.ಲೀಸ್​ಗೆ ಪಡೆದ ಜಾಗದಲ್ಲಿ ಕೃಷಿ, ತೋಟ, ಗೆಸ್ಟ್​ಹೌಸ್ ನಿರ್ವಹಿಸುತ್ತಿದ್ದೇವೆ. ಜಾಗ ಅಭಿವೃದ್ಧಿಪಡಿಸಲು ಸಾಕಷ್ಟು ಹೂಡಿಕೆ ಮಾಡಿದ್ದೇವೆ. 2026ರ ಆ.27ರಂದು ಸುಗುಣಮ್ಮ ತಮ್ಮ ಮಗಳು, ಮೊಮ್ಮಗಳಿಗೆ ದಾನಪತ್ರ ನೀಡಿದ್ದಾರೆ. ಹೀಗಾಗಿ ಮೊದಲು ವೈ.ಎಸ್.ಶರ್ಮಿಳಾ ಗೆಸ್ಟ್​ಹೌಸ್​ನಲ್ಲಿರಲು ಅವಕಾಶ ನೀಡಿದ್ದೆವು. ಆದರೆ ಈಗ 3ನೇ ವ್ಯಕ್ತಿಗಳನ್ನೂ ಗೆಸ್ಟ್​ಹೌಸ್​ಗೆ ಕಳುಹಿಸುತ್ತಿದ್ದಾರೆ. ಅಲಂಕಾರ ಮಾಡಲೂ ಅಲ್ಲಿಗೆ ಜನ ಬರುತ್ತಿದ್ದಾರೆ ಎಂದು ಸಿಲಿಕಾನ್ ಬಿಲ್ಡರ್ಸ್, ಕೋರ್ಟ್​ಗೆ ಲೀಸ್ ಡೀಡ್ ಹಾಜರುಪಡಿಸಿದೆ. ಈ ವಾದ ಆಲಿಸಿದ ದೇವನಹಳ್ಳಿಯ ಸಿವಿಲ್ ಕೋರ್ಟ್​, ವೈ.ಎಸ್.ಶರ್ಮಿಳಾ ಹಾಗೂ ಅವರ ಪ್ರತಿನಿಧಿಗಳಿಗೆ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಅಲ್ಲದೇ ಸಿಲಿಕಾನ್ ಬಿಲ್ಡರ್ಸ್​ನ ಸ್ವಾಧೀನದಲ್ಲಿ ಹಸ್ತಕ್ಷೇಪ ಮಾಡದಂತೆ ಮಧ್ಯಂತರ ನಿರ್ಬಂಧಕಾಜ್ಞೆ ವಿಧಿಸಿದೆ.

ಇದನ್ನೂ ನೋಡಿ: ತಾರಕಕ್ಕೇರಿದ ಮಾಜಿ ಸಿಎಂ ಜಗನ್-ಸಹೋದರಿ ನಡುವಿನ ಬೆಂಗಳೂರು ಆಸ್ತಿ ವಿವಾದ

ಏನಿದು ಪ್ರಕರಣ? ಕೋರ್ಟ್​ ಮೆಟ್ಟಿಲೇರಿದ್ಯಾಕೆ?

ಅವರ ಕುಟುಂಬಕ್ಕೆ ಸೇರಿದ ಫಾರ್ಮ್ ಹೌಸ್​​ಗೆ ಶರ್ಮಿಳಾ ಅವರನ್ನೇ ಏಕೆ ಪ್ರವೇಶಿಸಲು ನಿರ್ಬಂಧ ತರಲಾಗಿದೆ ಎನ್ನುವುದು ಪ್ರಶ್ನೆ ಉದ್ಭವಿಸುವುದು ಸಹಜ. ಹೌದು…ವೈಸ್​ಆರ್ ರಾಜಶೇಖರ್ ರೆಡ್ಡಿ ಪತ್ನಿ ಭಾರತಿ ಅವರ ತಾಯಿ ಇ.ಸಿ.ಸುಗುಣಮ್ಮ ಅವರೇ ಈ ಯಲಹಂಕದ ಫಾರ್ಮ್​​ ಹೌಸ್​ ನ ಮೂಲ ಮಾಲೀಕರಾಗಿದ್ದು, ಇದೇ 2026ರ ಆ.27ರಂದು ಸುಗುಣಮ್ಮ ತಮ್ಮ ಮಗಳು (ಭಾರತಿ) ಹಾಗೂ ಮೊಮ್ಮಗಳಿಗೆ (ಶರ್ಮಿಳಾ) ಈ ಫಾರ್ಮ್​ ಹೌಸ್ ಅನ್ನು ದಾನವಾಗಿ ಪತ್ರದ ಮೂಲಕ ನೀಡಿದ್ದಾರೆ. ಆದ್ರೆ, ಇದಕ್ಕೂ ಮೊದಲು ಸುಗುಣಮ್ಮ ಅವರು ಈ ಫಾರ್ಮ್ ಹೌಸ್​ ಅನ್ನು ಸಿಲಿಕಾನ್ ಬಿಲ್ಡರ್ಸ್ ಕಂಪನಿಗೆ 2007 ರಿಂದ ಫೆ. 2027ರವರೆಗೆ ಲೀಸ್ ನೀಡಿದ್ದಾರೆ. ಹೀಗಾಗಿ ಸಿಲಿಕಾನ್ ಬಿಲ್ಡರ್ಸ್, 2007ರಿಂದ ಗೆಸ್ಟ್ ಹೌಸ್ ನೋಡಿಕೊಳ್ಳುತ್ತಿದೆ.

ಇದರ ಮಧ್ಯೆ ಶರ್ಮಿಳಾ ಅವರು ಈ ಗೆಸ್ಟ್ ಹೌಸ್​ನಲ್ಲಿ ತಮ್ಮ ಪುತ್ರಿ ಮದುವೆ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಇದಕ್ಕೆ ಸಿಲಿಕಾನ್ ಬಿಲ್ಡರ್ಸ್ ವಿರೋಧ ವ್ಯಕ್ತಪಡಿಸಿದೆ. ಇನ್ನೊಂದು ವರ್ಷ ಈ ಸ್ವತ್ತು ನಮ್ಮ ಸ್ವಾಧೀನದಲ್ಲಿದ್ದು, ಯಾವುದೇ ಕಾರ್ಯಕ್ರಮ ಮಾಡಲು ಬಿಡಲ್ಲ ಎಂದಿದೆ. ಆದರೂ ಸಹ ಶರ್ಮಿಳಾ,  ಹಠಕ್ಕೆ ಬಿದ್ದು ಗೆಸ್ಟ್ ಹೌಸ್​​ನಲ್ಲಿ ಮಗಳ ಮದ್ವೆ  ಮಾಡಲು ನಿರ್ಧರಿಸಿ ,  ಬೇಕಾದ ತಯಾರಿಗಳನ್ನು ಸಹ ಮಾಡಿಸಲು ಮುಂದಾಗಿದ್ದಾರೆ. ಹೀಗಾಗಿ ಅಂತಿಮವಾಗಿ ಸಿಲಿಕಾನ್ ಬಿಲ್ಡರ್ಸ್, ಶರ್ಮಿಳಾ ನಡೆಯನ್ನು ಪ್ರಶ್ನಿಸಿ ಕೋರ್ಟ್​ ಮೆಟ್ಟಿಲೇರಿದ್ದು, 2007 ರಿಂದ ಫೆ. 2027ರವರೆಗೆ ತಮಗೆ ಜಾಗ ಲೀಸ್ ಗೆ ನೀಡಿ ಎಂದು ಲೀಸ್ ದಾಖಲಾತಿಗಳನ್ನು ಕೋರ್ಟ್​​ಗೆ ಸಲ್ಲಿಸಿದ್ದು, ಇದರ ಬೆನ್ನಲ್ಲೇ ಕೋರ್ಟ್ ಸಹ ಶರ್ಮಿಳಾ ಹಾಗೂ ಅವರ ಪ್ರತಿನಿಧಿಗಳಿಗೆ ಈ ಗೆಸ್ಟ್​ ಹೌಸ್​ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.

ಈ ಗೆಸ್ಟ್​ ಹೌಸ್​​ನಲ್ಲಿ ಮಗಳ ಮದ್ವೆಗೆ ಮಾಡಲು ತೀರ್ಮಾನಿಸಿದ ಶರ್ಮಿಳಾ

ಶರ್ಮಿಳಾ ಅವರು ತಮ್ಮ ಪುತ್ರಿ ಅಂಜಲಿಯ ವಿವಾಹವನ್ನು ಅಮೆರಿಕದಲ್ಲಿ ನೆಲೆಸಿರುವ ವೈದ್ಯ ಡಾ. ಸೋಮಲಾ ರಘುರಾಮ್ ರೆಡ್ಡಿ ಅವರೊಂದಿಗೆ ನವೆಂಬರ್ 25, 2026 ರಂದು ನಿಗದಿಪಡಿಸಿದ್ದರು. ವಿಶೇಷವೆಂದರೆ, ಈ ವಿವಾಹದ ಆಮಂತ್ರಣ ಪತ್ರಿಕೆಗಳಲ್ಲಿ ಮದುವೆ ಸ್ಥಳವಾಗಿ ಬೆಂಗಳೂರಿನ ‘ಯಲಹಂಕ ಅರಮನೆ’ಯ ವಿಳಾಸವನ್ನು ಮುದ್ರಿಸಲಾಗಿತ್ತು. ತಾವು ಮತ್ತು ತಮ್ಮ ಮಗಳು ಅಂಜಲಿ ಬೆಳೆದ ಮನೆ ಇದಾಗಿದ್ದು, ತಮಗೂ ಇಲ್ಲಿ ಹಕ್ಕಿದೆ ಎಂಬುದು ಶರ್ಮಿಳಾ ಅವರ ವಾದವಾಗಿತ್ತು. ಆದ್ರೆ, ಇದೀಗ ಕೋರ್ಟ್​ ಶರ್ಮಿಳಾಗೆ ಶಾಕ್ ಕೊಟ್ಟಿದೆ.

ಆದರೂ ನವೆಂಬರ್ 22 ರಂದು ಬೆಂಗಳೂರಿಗೆ ಬಂದಿಳಿದ ಶರ್ಮಿಳಾ ಮತ್ತು ಅವರ ತಾಯಿ ವಿಜಯಮ್ಮ ಅವರು ಗೆಸ್ಟ್​ ಹೌಸ್​​​ ಹೋಗಲು ಮುಂದಾಗಿದ್ದಾರೆ. ಆದ್ರೆ, ಪೊಲೀಸರು ತಡೆದು, ಕೋರ್ಟ್ ತಮಗೆ ಮಧ್ಯಂತರ ನಿರ್ಬಂಧಿಸಿದೆ. ಹೀಗಾಗಿ ಈ ಗೆಸ್ಟ್ ಹೌಸ್​ಗೆ ಪ್ರವೇಶಿಸುವಂತಿಲ್ಲ ಎಂದು ತಿಳಿ ಹೇಳಿದ್ದಾರೆ. ಹೀಗಾಗಿ ಶರ್ಮಿಳಾ ಲೀಲಾ ಪ್ಯಾಲೆಸ್​​ ಹೋಟೆಲ್​​ಗೆ ತೆರಳಿ ವಾಸ್ತವ್ಯ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಅತ್ಯಾಧುನಿಕ ವಿಶಾಲದ ಗೆಸ್ಟ್ ಹೌಸ್

ಸುಮಾರು 23 ಎಕರೆ ವಿಸ್ತೀರ್ಣದಲ್ಲಿ 10 ಎಕರೆಗೂ ಹೆಚ್ಚು ವಿಸ್ತೀರ್ಣದ ಎರಡು ಪ್ರಮುಖ ಬಂಗಲೆಗಳಿವೆ. ಸುಮಾರು 40ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿರುವ ಈ ಅರಮನೆಯಲ್ಲಿ ಖಾಸಗಿ ಹೆಲಿಪ್ಯಾಡ್, ವಿಶಾಲವಾದ ಉದ್ಯಾನವನ, ಸುಂದರ ಕಾರಂಜಿಗಳು, ಕಾರ್ಪೊರೇಟ್ ಕಚೇರಿ, ಸಿಬ್ಬಂದಿ ವಸತಿಗೃಹಗಳು ಮತ್ತು ಅತ್ಯಾಧುನಿಕ ವ್ಯವಸ್ಥೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:10 pm, Mon, 23 November 26

Follow Us
ರಮೇಶ್​ ಎಮ್​.
ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More