ತಾರಕಕ್ಕೇರಿದ ಮಾಜಿ ಸಿಎಂ ಜಗನ್-ಸಹೋದರಿ ನಡುವಿನ ಬೆಂಗಳೂರು ಆಸ್ತಿ ವಿವಾದ
ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಾಗೂ ಸಹೋದರಿ ಶರ್ಮಿಳಾ ರೆಡ್ಡಿ ನಡುವೆ ಆಸ್ತಿ ವಿವಾದ ತಾರಕಕ್ಕೇರಿದ್ದು, ಬಾಗಲೂರು ಮುಖ್ಯರಸ್ತೆಯ ಕಟ್ಟಿಗೆನಹಳ್ಳಿ ಬಳಿಯ ಜಗನ್ ಪ್ಯಾಲೇಸ್ನಲ್ಲಿ ಶರ್ಮಿಳ ಮಗಳ ಮದುವೆ ಮಾಡಲು ಜಗನ್ ಮೋಹನ್ ರೆಡ್ಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನ್ಯಾಯಾಲಯದಿಂದ ಶರ್ಮಿಳಾ ವಿರುದ್ದ ನಿರ್ಬಂಧಕಾಜ್ಞೆ ತಂದಿದ್ದಾರೆ
ಬೆಂಗಳೂರು, ನವೆಂಬರ್ 22: ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಾಗೂ ಸಹೋದರಿ, ಆಂಧ್ರ ಕಾಂಗ್ರೆಸ್ ಅಧ್ಯಕ್ಷ ಶರ್ಮಿಳಾ ರೆಡ್ಡಿ ನಡುವೆ ಆಸ್ತಿ ವಿವಾದ ತಾರಕಕ್ಕೇರಿದೆ. ಹೀಗಾಗಿ ಬಾಗಲೂರು ಮುಖ್ಯರಸ್ತೆಯ ಕಟ್ಟಿಗೆನಹಳ್ಳಿ ಬಳಿಯ ಜಗನ್ ಪ್ಯಾಲೇಸ್ನಲ್ಲಿ ಶರ್ಮಿಳ ಮಗಳ ಮದುವೆ ಮಾಡಲು ಜಗನ್ ಮೋಹನ್ ರೆಡ್ಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನ್ಯಾಯಾಲಯದಿಂದ ಶರ್ಮಿಳಾ ವಿರುದ್ದ ನಿರ್ಬಂಧಕಾಜ್ಞೆ ತಂದಿದ್ದಾರೆ. ಇನ್ನು ವಿವಾದಿತ ಫಾರ್ಮ್ ಹೌಸ್ ಪ್ರಕರಣ ಸಂಬಂಧ ಕೋರ್ಟ್ ನಾಳೆ (ನವೆಂಬರ್ 23) ತೀರ್ಪು ನೀಡಲಿದೆ. ಹೀಗಾಗಿ ಶರ್ಮಿಳಾ, ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಬಳಿಕ ವಿವಾದಿತ ಜಗನ್ ಪ್ಯಾಲೇಸ್ ಗೆ ತೆರಳಲು ಮುಂದಾಗಿದ್ದಾರೆ. ಆದ್ರೆ, ಪೊಲೀಸರು ತಡೆದಿದ್ದಾರೆ. ಜಗನ್ ಪ್ಯಾಲೇಸ್ ವಿವಾದ ಕೋರ್ಟಿನಲ್ಲಿರುವುದರಿಂದ ಅಲಿಗೆ ಹೋಗುವಂತಿಲ್ಲ ಎಂದು ಶರ್ಮಿಳಾರನ್ನು ಮಾರ್ಗಮಧ್ಯೆ ಯಲಹಂಕ ಪೊಲೀಸರು ತಡೆದಿದ್ದಾರೆ. ಹೀಗಾಗಿ ಶರ್ಮಿಳಾ ,ಲಿಲಾ ಪ್ಯಾಲೆಸ್ ಹೋಟೆಲ್ ಗೆ ತೆರಳಿದ್ದು, ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.

