‘ಬಸವ ಮಂಟಪ’ ಪುಸ್ತಕ ವಿವಾದ: ಲೇಖಕ ರವಿ ಹಂಜ್ಗೆ ಶಾಕ್ ಕೊಟ್ಟ ಬೆಳಗಾವಿ ಪೊಲೀಸ್ರು
ವಿವಾದಿತ ‘ಬಸವ ಮಂಟಪ’ ಪುಸ್ತಕ ಲೇಖಕ ರವಿ ಹಂಜ್ ವಿರುದ್ಧದ ರಾಜ್ಯಾದ್ಯಂತ ಆಕ್ರೋಶ ಮುಂದುವರೆದಿದ್ದು, ಬಸವಣ್ಣನವರನ್ನು ಅವಹೇಳನ ಮಾಡಿದ ರವಿ ಹಂಜ್ ವಿರುದ್ಧ ಕಠಿಣ ಕ್ರವಾಗಬೇಕೆಂಬ ಆಗ್ರಹಗಳು ವ್ಯಕ್ತವಾಗುತ್ತಿವೆ. ಇನ್ನು ಬೆಳಗಾವಿ ಮಾರ್ಕೆಟ್ ಠಾಣೆಯಲ್ಲೂ ಸಹ ರವಿ ಹಂಜ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈ ಸಂಬಂಧ ನವೆಂಬರ್ 26ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ರವಿ ಹಂಜ್ಗೆ ಇ-ಮೇಲ್ ಮೂಲಕ ನೋಟಿಸ್ ಕಳುಹಿಸಿದ್ದಾರೆ.
ಬೆಳಗಾವಿ, ನವೆಂಬರ್ 22: ವಿವಾದಿತ ‘ಬಸವ ಮಂಟಪ’ ಪುಸ್ತಕ ಲೇಖಕ ರವಿ ಹಂಜ್ ವಿರುದ್ಧದ ರಾಜ್ಯಾದ್ಯಂತ ಆಕ್ರೋಶ ಮುಂದುವರೆದಿದ್ದು, ಬಸವಣ್ಣನವರನ್ನು ಅವಹೇಳನ ಮಾಡಿದ ರವಿ ಹಂಜ್ ವಿರುದ್ಧ ಕಠಿಣ ಕ್ರವಾಗಬೇಕೆಂಬ ಆಗ್ರಹಗಳು ವ್ಯಕ್ತವಾಗುತ್ತಿವೆ. ಇನ್ನು ಬೆಳಗಾವಿ ಮಾರ್ಕೆಟ್ ಠಾಣೆಯಲ್ಲೂ ಸಹ ರವಿ ಹಂಜ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈ ಸಂಬಂಧ ನವೆಂಬರ್ 26ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ರವಿ ಹಂಜ್ಗೆ ಇ-ಮೇಲ್ ಮೂಲಕ ನೋಟಿಸ್ ಕಳುಹಿಸಿದ್ದಾರೆ.
ಬೆಳಗಾವಿ ಪೊಲೀಸರ ಲುಕ್ಔಟ್ ನೋಟಿಸ್ ಹಿನ್ನೆಲೆ ಕೇರಳದ ಕೊಚ್ಚಿ ಏರ್ಪೋರ್ಟ್ ಭದ್ರತಾ ಸಿಬ್ಬಂದಿ ರವಿ ಹಂಜ್ರನ್ನು ವಶಕ್ಕೆ ಪಡೆದಿದ್ದರು. ಹೀಗಾಗಿ ಇದೀಗ ಬೆಳಗಾವಿ ಪೊಲೀಸರು, ಏರ್ಪೋರ್ಟ್ ಭದ್ರತಾ ವಿಭಾಗದ ಮೂಲಕ ರವಿ ಹಂಜ್ಗೆ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾದಾಗ ರವಿ ಹಂಜ್ರನ್ನು ಪೊಲೀಸರು ಬಂಧಿಸುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

