AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಇಂದು ವೈಕುಂಠ ಚತುರ್ದಶಿ; ಯಾವೆಲ್ಲಾ ರಾಶಿಗಳಿಗೆ ಶುಭ?

Horoscope Today: ಇಂದು ವೈಕುಂಠ ಚತುರ್ದಶಿ; ಯಾವೆಲ್ಲಾ ರಾಶಿಗಳಿಗೆ ಶುಭ?

ಭಾವನಾ ಹೆಗಡೆ
|

Updated on: Nov 23, 2026 | 6:31 AM

Share

ನವೆಂಬರ್ 23, ಸೋಮವಾರದ ದಿನ ಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಮತ್ತು ಇತರ ಪ್ರಮುಖ ಅಂಶಗಳ ಕುರಿತು ಜ್ಯೋತಿಷ್ಯ ಸಲಹೆಗಳನ್ನು ನೀಡಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳ ಕುರಿತು ಮಾಹಿತಿ ಲಭ್ಯವಿದೆ.

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ನವೆಂಬರ್ 23, ಸೋಮವಾರದ ದ್ವಾದಶ ರಾಶಿ ಫಲಾಫಲಗಳನ್ನು ತಿಳಿಸಿದ್ದಾರೆ.ಇದು ಪರಾಭವ ನಾಮ ಸಂವತ್ಸರ, ಕಾರ್ತಿಕ ಮಾಸದ ಶುಕ್ಲಪಕ್ಷ ಚತುರ್ದಶಿ ದಿನದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಇದು ವರಿಯಾನ್ ಯೋಗ ಮತ್ತು ಗರಜಕರಣವಿರುವ ದಿನವಾಗಿದ್ದು, ಭರಣಿ ನಕ್ಷತ್ರ ಇರುತ್ತದೆ. ರಾಹುಕಾಲವು ಬೆಳಗ್ಗೆ 7:46 ರಿಂದ 9:12 ರವರೆಗೆ ಇರುತ್ತದೆ, ಆದರೆ ಸಂಕಲ್ಪ ಕಾಲ, ಸರ್ವಸಿದ್ಧಿ ಕಾಲ, ಶುಭ ಕಾಲವು 9:13 ರಿಂದ 10:39 ರವರೆಗೆ ಇರುತ್ತದೆ.

ಇಂದು ಕಾರ್ತಿಕ ಸೋಮವಾರ ಮತ್ತು ವೈಕುಂಠ ಚತುರ್ದಶಿ ಆಗಿದ್ದು, ಶಿವನ ಆರಾಧನೆಗೆ ಅತ್ಯಂತ ಮಹತ್ವದ ದಿನವಾಗಿದೆ. “ಓಂ ನಮಃ ಶಿವಾಯ” ಮಂತ್ರ ಜಪಿಸುವುದು, ಬಿಲ್ವಪತ್ರೆ ಹಾಗೂ ತುಂಬೆ ಹೂಗಳನ್ನು ಅರ್ಪಿಸುವುದು, ವಿಭೂತಿ ಧಾರಣೆ ಮತ್ತು ದಾನ ಮಾಡುವುದು ಮಂಗಳಕರ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More