ಗುಂಜಾ ನರಸಿಂಹಸ್ವಾಮಿ ದೇಗುಲದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ
ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿರುವ ಗುಂಜಾ ನರಸಿಂಹಸ್ವಾಮಿ ದೇವಾಲಯದಲ್ಲಿ 15ನೇ ವರ್ಷದ ಕಾರ್ತಿಕ ಲಕ್ಷ ದೀಪೋತ್ಸವ ಮತ್ತು ತೆಪ್ಪೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಪಿಲಾ ನದಿ ತೀರದಲ್ಲಿ ನಡೆದ ಈ ಭಕ್ತಿಪೂರ್ವಕ ಕಾರ್ಯಕ್ರಮದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ಹಾಗೂ ತೆಪ್ಪೋತ್ಸವವು ಸಾವಿರಾರು ಭಕ್ತರ ಗಮನ ಸೆಳೆಯಿತು. ಕಾರ್ತಿಕ ಮಾಸದ ಈ ಶುಭ ಸಂದರ್ಭವು ಭಕ್ತಿಯ ದೀಪಗಳಿಂದ ಪ್ರಜ್ವಲಿಸಿತು.
ಮೈಸೂರು, ನವೆಂಬರ್ 23: ಜಿಲ್ಲೆಯ ಟಿ. ನರಸೀಪುರದಲ್ಲಿರುವ ಐತಿಹಾಸಿಕ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದಲ್ಲಿ 15ನೇ ವರ್ಷದ ಕಾರ್ತಿಕ ಲಕ್ಷ ದೀಪೋತ್ಸವ ಮತ್ತು ತೆಪ್ಪೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ತಿಕ ಮಾಸದ ಶುಭ ಸಂದರ್ಭದ ಪ್ರಯುಕ್ತ ನಡೆದ ಈ ಭಕ್ತಿಪೂರ್ವಕ ಕಾರ್ಯಕ್ರಮವು ಸಾವಿರಾರು ಭಕ್ತರನ್ನು ಆಕರ್ಷಿಸಿತು.
ಶ್ರೀ ಗುಂಜಾ ನರಸಿಂಹಸ್ವಾಮಿ ಸೇವಾ ಸಮಿತಿ, ಟಿ. ನರಸೀಪುರ ಇವರುಗಳು ಈ ಮಹೋತ್ಸವವನ್ನು ಅತಿ ವಿಜೃಂಭಣೆಯಿಂದ ಆಯೋಜಿಸಿದ್ದರು. ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಪುಳಾರಿಗೌಡರು, ಗೌರವ ಅಧ್ಯಕ್ಷರಾದ ಶ್ರೀ ರಾಜಣ್ಣ, ಹಾಗೂ ಸರ್ವ ಗೌರವಾನ್ವಿತ ಸದಸ್ಯರುಗಳು ಈ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಟಿ. ನರಸೀಪುರದ ಸಮಸ್ತ ಭಕ್ತಾದಿಗಳು, ಶ್ರೀರಾಮ ಸ್ನೇಹ ಬಳಗ, ವಿಶ್ವಕರ್ಮ ಬೀದಿ ಮತ್ತು ಶಿವಶಾಮಯ್ಯನ ಚಿಕ್ಕ ಅಂಗಡಿ ಬೀದಿಯ ಸದಸ್ಯರು, ವೀರಶೈವ ಸಮಾಜದ ಅಧ್ಯಕ್ಷರಾದ ಶ್ರೀ ಶಾಂತರಾಜು ಚಿಕ್ಕಣ್ಣ, ಮಾಜಿ ಪುರಸಭಾ ಸದಸ್ಯರಾದ ಶ್ರೀ ಮಹದೇವಸ್ವಾಮಿ, ಗಾಣಿಗರ ಸಂಘದ ತಾಲೂಕು ಅಧ್ಯಕ್ಷರಾದ ಶ್ರೀ ರಾಮಚಂದ್ರ, ಮತ್ತು ಇತರೆ ಗಣ್ಯರು ಹಾಗೂ ಸಂಘಟನೆಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

