Video: 47 ವರ್ಷಗಳ ಬಳಿಕ ಹೆಣ್ಣು ಮಗುವಿನ ಆಗಮನ; ಪುಟ್ಟ ಲಕ್ಷ್ಮಿಯನ್ನು ಅದ್ದೂರಿಯಾಗಿ ಸ್ವಾಗತಿಸಿದ ಕುಟುಂಬ
ಮನೆಗೆ ಪುಟ್ಟ ಕಂದಮ್ಮ ಬರುತ್ತದೆ ಎಂದರೆ ಆ ಖುಷಿಯನ್ನು ವ್ಯಕ್ತಪಡಿಸಲು ಪದಗಳೇ ಸಾಲಲ್ಲ. ಇದೀಗ 47 ವರ್ಷಗಳ ಬಳಿಕ ಪುಣೆಯ ಕುಟುಂಬಕ್ಕೆ ಪುಟ್ಟ ಲಕ್ಷ್ಮಿಯ ಆಗಮನವಾಗಿದೆ. ಮನೆ ಮಂದಿ ಅದ್ದೂರಿಯಾಗಿ ಹೆಣ್ಣು ಮಗುವನ್ನು ವೆಲ್ಕಮ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಹೆಣ್ಣು ಮಗು (girl baby) ಲಕ್ಷ್ಮಿಯ ಸ್ವರೂಪ. ಕೆಲವರು ಹೆಣ್ಣು ಮಗು ಹುಟ್ಟಿತೆಂದರೆ ಕುಣಿದು ಕುಪ್ಪಳಿಸುತ್ತಾರೆ. ಇದೀಗ ಹೊಸ ಅತಿಥಿಯ ಆಗಮನವನ್ನು ಸಂಭ್ರಮಿಸಿದೆ. ಪುಣೆಯ ಕುಟುಂಬವೊಂದರಲ್ಲಿ 47 ವರ್ಷಗಳ ಬಳಿಕ ಮನೆಗೆ ಹೆಣ್ಣು ಮಗು ಹುಟ್ಟಿದೆ. ಈ ಕಂದಮ್ಮನನ್ನು ಅದ್ದೂರಿಯಾಗಿ ಮನೆಗೆ ಬರಮಾಡಿಕೊಂಡ ದೃಶ್ಯಗಳು ನೆಟ್ಟಿಗರ ಮನ ಗೆದ್ದಿದೆ.
ಹೆಣ್ಣು ಮಗುವನ್ನು ಬರ ಮಾಡಿಕೊಂಡ ಕುಟುಂಬ
ಕಲ್ಪೇಶ್ ಬಂಬೋಲಿ (Kalpesh Bamboli) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಕುಟುಂಬವೊಂದು ಹೆಣ್ಣು ಮಗುವಿನ ಆಗಮನವನ್ನು ಸಂಭ್ರಮಿಸಿದ ದೃಶ್ಯ ಇದಾಗಿದೆ. ಗುಲಾಬಿ ಮತ್ತು ಬಿಳಿ ಬಣ್ಣದ ಬಲೂನುಗಳಿಂದ ಅಲಂಕೃತಗೊಂಡ ಕಾರು, ವೆಲ್ಕಮ್ ಹೋಮ್ ಬೇಬಿ” ಬ್ಯಾನರ್ ಅನ್ನು ಕಾಣಬಹುದು. ಪುಟ್ಟ ಲಕ್ಷ್ಮಿ ಮನೆಗೆ ಬರುತ್ತಿದ್ದಂತೆ ಡ್ರಮ್ ಸದ್ದಿಗೆ ಮನೆ ಮಂದಿ ಕುಣಿದಾಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಮನೆಗೆ ಹೆಣ್ಣು ಮಗುವಿನ ಎಂಟ್ರಿ, ಕುಣಿದು ಕುಪ್ಪಳಿಸಿದ ಮನೆ ಮಂದಿ
ಮನೆಯ ಮುಂಭಾಗದಲ್ಲಿ ವೆಲ್ಕಮ್ ಹೋಮ್ ಬೇಬಿ ಎಂದು ಬರೆದಿರುವ ಬೃಹತ್ ಬ್ಯಾನರ್ ಅನಾವರಣಗೊಳಿಸಲಾಗಿದೆ. ಈ ಬ್ಯಾನರ್‌ನಲ್ಲಿ ಪೋಷಕರು ತಮ್ಮ ಹೆಣ್ಣು ಮಗುವಿನೊಂದಿಗೆ ಇರುವ ಮುದ್ದಾದ ಫೋಟೋಗಳಿರುವುದನ್ನು ಕಾಣಬಹುದು. ಮಾರಿಗೋಲ್ಡ್‌ಗಳು ಹಾಗೂ ಕೆಂಪು ಗುಲಾಬಿಗಳ ಸುಂದರವಾದ ರಂಗೋಲಿ ವಿನ್ಯಾಸಗಳು ಹಾಗೂ ವೆಲ್ಕಮ್ ಹೋಮ್ ಲಿಟಲ್ ಪ್ರಿನ್ಸೆಸ್ ಎಂದು ಬರೆದ ಕಾರ್ಪೆಟ್‌ಗಳಿವೆ. ಇಡೀ ಮನೆಯನ್ನು ಗುಲಾಬಿ ಮತ್ತು ಬಿಳಿ ಬಲೂನ್‌ಗಳು, ಚಿಟ್ಟೆಗಳು ಹಾಗೂ ದೊಡ್ಡ ಕಟೌಟ್‌ಗಳಿಂದ ಅಲಂಕರಿಸಲಾಗಿದೆ. ಈ ವಿಶೇಷ ಸಂದರ್ಭಕ್ಕಾಗಿ ಸ್ಪೆಷಲ್ ಕೇಕ್ ಅನ್ನು ಆರ್ಡರ್ ಮಾಡಲಾಗಿದೆ. ದೃಷ್ಟಿ ತೆಗೆದು ಪುಟ್ಟ ಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳಲಾಗಿದೆ. ಮುದ್ದು ಕಂದಮ್ಮನಿಗೆ ಸಾಂಪ್ರದಾಯಿಕ ಹಳದಿ ಉಡುಪನ್ನು ಧರಿಸಿ, ನವಿಲು ಗರಿಯಿಂದ ಅಲಂಕರಿಸಲ್ಪಟ್ಟ ಕಿರೀಟವನ್ನು ತೊಡಿಸಲಾಗಿರುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ: ತಾಯಿ ಮಗಳ ಪುನರ್ಮಿಲನ; ಒಂದು ವರ್ಷದ ಬಳಿಕ ಮಗಳನ್ನು ಕಂಡು ಕಣ್ಣೀರು ಹಾಕಿದ ಹೆತ್ತಮ್ಮ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಒಳ್ಳೆಯ ಮನೆಯನ್ನೇ ಸೇರಿದ್ದೀಯಾ ಪುಟಾಣಿ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಕುಟುಂಬದಲ್ಲಿ ಹೀಗೆ ಸದಾ ಖುಷಿಯೇ ನೆಲೆಸಲಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಲಕ್ಷ್ಮಿ ಬಂದ್ಲು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




