Viral: 25 ಲಕ್ಷ ರೂ ಸಂಬಳ ಪಡೆಯುವ ಹುಡ್ಗನನ್ನು ರಿಜೆಕ್ಟ್ ಮಾಡಿದ ಯುವತಿ, ಕಾರಣ ಇದೇ ನೋಡಿ
ಮದ್ವೆ ಪ್ರಪೋಸಲ್ ನೋಡುವಾಗ ಹುಡ್ಗ ಅಥವಾ ಹುಡ್ಗಿ ತಮಗೆ ಸೂಕ್ತ ಅನಿಸಿಲ್ಲ ಅಂದ್ರೆ ರಿಜೆಕ್ಟ್ ಮಾಡೋದು ಸಹಜ. ಆದರೆ ಇಲ್ಲೊಬ್ಬ ಯುವತಿ ಯುವಕನನ್ನು ರಿಜೆಕ್ಟ್ ಮಾಡಿದ್ದಾಳೆ. ಮದ್ವೆಯಾದ ಬಳಿಕ ಎರಡು ಹೊತ್ತು ಅಡುಗೆ ಮಾಡ್ಬೇಕು ಹಾಗೂ ತನ್ನ ಹೆತ್ತವರ ಜತೆಗೆ ಇರಬೇಕು ಎನ್ನುವುದೇ ಆಕೆ ಮದ್ವೆ ಪ್ರಪೋಸಲ್ ರಿಜೆಕ್ಟ್ ಮಾಡಲು ಮೂಲ ಕಾರಣವಾಗಿದೆ. ಈ ಯುವತಿ ನೀಡಿದ ಕಾರಣ ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗಿದೆ.

ಪ್ರತಿಯೊಬ್ಬ ವ್ಯಕ್ತಿ ಕೂಡ ತಮ್ಮ ಜೀವನ ಸಂಗಾತಿಯಾಗುವವರ (life partner) ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹಜ. ಇದೇ ಕಾರಣಕ್ಕೆ ಯುವಕ ಯುವತಿಯರು ಬಂದ ಪ್ರಪೋಸಲ್ ಗಳನ್ನು ರಿಜೆಕ್ಟ್ ಮಾಡುವುದನ್ನು ನೀವು ನೋಡಿರುತ್ತೀರಿ. 25 ಲಕ್ಷ ಸಂಬಳ ಇದ್ದ ಹುಡುಗನನ್ನು ರಿಜೆಕ್ಟ್ ಮಾಡಲು ಕಾರಣವಾಗಿದ್ದು ಯುವಕ ಹಾಕಿದ್ದ ಷರತ್ತು. ಹೌದು, ಯುವಕನು ಹೊಂದಿದ್ದ ನಿರೀಕ್ಷೆಗಳಿಗೆ ಬದ್ಧವಾಗಿ ಬದುಕಲು ಯುವತಿ ರೆಡಿ ಇರಲಿಲ್ಲ. ಆಕೆ ಹಂಚಿಕೊಂಡ ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹುಡುಗನನ್ನು ರಿಜೆಕ್ಟ್ ಮಾಡಲು ಕಾರಣ ತಿಳಿಸಿದ ಯುವತಿ
ಕ್ರಿಟಿಕಲ್ (Kritical) ಹೆಸರಿನ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಯುವತಿಯು ತಾನು ಹುಡುಗನನ್ನು ರಿಜೆಕ್ಟ್ ಮಾಡಲು ಹಿಂದಿನ ಕಾರಣ ಬಹಿರಂಗ ಪಡಿಸಿದ್ದಾಳೆ. ಈ ಪೋಸ್ಟ್ ನ ಶೀರ್ಷಿಕೆಯಲ್ಲಿ ಇಂದು ಮದುವೆಯ ಪ್ರಸ್ತಾಪವೊಂದನ್ನು ತಿರಸ್ಕರಿಸಿದೆ ಎಂದು ಬರೆಯಲಾಗಿದೆ.
ಎಕ್ಸ್ ಪೋಸ್ಟ್ ಇಲ್ಲಿದೆ
Rejected a marriage proposal today.
The guy was earning around ₹25 LPA, and I could manage the package. But the problem was that he expected me to cook twice a day and live with his parents. He was 5’8”, I noticed he might start balding in the next couple of years, and he openly admitted that he was a mumma’s boy.
— Kruts (@Kritical_62) November 19, 2026
ತಾಯಿಯ ಮುದ್ದಿನ ಮಗ ಈತ ಎಂದ ಯುವತಿ
ಈ ಪೋಸ್ಟ್ ನಲ್ಲಿ ಆ ವ್ಯಕ್ತಿ ವಾರ್ಷಿಕ ಸುಮಾರು 25 ಲಕ್ಷ ರೂ ಗಳಿಸುತ್ತಿದ್ದನು, ಆ ಆದಾಯದ ಮಟ್ಟ ನನಗೆ ಸರಿಹೋಗುವಂತಿತ್ತು. ಆದರೆ ಸಮಸ್ಯೆಯೇನೆಂದರೆ, ನಾನು ದಿನಕ್ಕೆ ಎರಡು ಹೊತ್ತು ಅಡುಗೆ ಮಾಡಬೇಕೆಂದು ಹಾಗೂ ಆತನ ಪೋಷಕರೊಂದಿಗೆ ವಾಸಿಸಬೇಕೆಂದು ಹುಡುಗ ನಿರೀಕ್ಷಿಸಿದ್ದನು. ಇನ್ನು ಆತನ ಎತ್ತರ 5 ಅಡಿ 8 ಇಂಚು ಇತ್ತು. ಅದಲ್ಲದೇ ಮುಂದಿನ ಒಂದೆರಡು ವರ್ಷಗಳಲ್ಲಿ ಅವನಿಗೆ ಬೋಳು ತಲೆ ಬರುವ ಸಾಧ್ಯತೆಯಿರುವುದನ್ನು ನಾನು ಗಮನಿಸಿದೆ. ಅಷ್ಟೇ ಅಲ್ಲದೆ, ತಾನು ತಾಯಿಯ ಮಾತನ್ನೇ ಕೇಳುವ ಮಗ ಎಂದು ಆತ ಮುಕ್ತವಾಗಿಯೇ ಒಪ್ಪಿಕೊಂಡನು ಎಂದು ಹೇಳಿದ್ದಾಳೆ.
ಇದನ್ನೂ ಓದಿ: ನಾನು ಮನೆ ನೋಡಿಕೊಳ್ಳಲು ರೆಡಿ; ಹೌಸ್ ಹಸ್ಬೆಂಡ್ ಆಗಲು ವಿಚಿತ್ರ ಬೇಡಿಕೆ ಇಟ್ಟ ಯುವಕ
ಈ ಪೋಸ್ಟ್ ಎಂಟು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಹುಡುಗ ತನ್ನ ನಿರೀಕ್ಷೆಗಳನ್ನು ಸ್ಪಷ್ಟವಾಗಿ ಹೇಳಿದ್ದಾನೆ. ಆತನನ್ನು ಕಳೆದುಕೊಳ್ಳಬಾರದಿತ್ತು ಎಂದಿದ್ದಾರೆ. ಇನ್ನೊಬ್ಬರು, ಈ ಜನರೇಷನ್ ನಲ್ಲಿ ಅಂತಹ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ವ್ಯರ್ಥ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅತ್ತೆ ಮಾವಂದಿರನ್ನು ನೋಡಿಕೊಳ್ಳುವುದು ಅಗತ್ಯ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




