Viral: ನಾನು ಮನೆ ನೋಡಿಕೊಳ್ಳಲು ರೆಡಿ; ಹೌಸ್ ಹಸ್ಬೆಂಡ್ ಆಗಲು ವಿಚಿತ್ರ ಬೇಡಿಕೆ ಇಟ್ಟ ಯುವಕ
ಈಗಿನ ಕಾಲದಲ್ಲಿ ಗಂಡ ಹೆಂಡಿರು ಇಬ್ಬರೂ ದುಡಿದ್ರೂ ಸಂಸಾರ ತೂಗಿಸಿಕೊಂಡು ಹೋಗೋದು ಕಷ್ಟ. ಹೀಗಿರುವಾಗ ಇಲ್ಲೊಬ್ಬ ಯುವಕನು ತನ್ನ ಮದುವೆಯಾಗಬೇಕೆಂದರೆ ಈ ಷರತ್ತುಗಳಿಗೆ ಸಿದ್ಧವಿರಬೇಕು ಎಂದಿದ್ದಾನೆ. ತಾನು ಹೌಸ್ ಹಸ್ಬೆಂಡ್ ಆಗಿ ಇರಲು ಸಿದ್ಧ, ಮದುವೆಯಾಗುವ ಹುಡುಗಿಗೆ 12 ಲಕ್ಷ ರೂ ಸಂಬಳ ಇರುವುದು ಕಡ್ಡಾಯ. ಈ ಯುವಕನ ವಿಚಿತ್ರ ಬೇಡಿಕೆಯುಳ್ಳ ಪೋಸ್ಟ್ ಸದ್ಯ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

ಮದುವೆಯಾಗುವ (marriage) ಪ್ರತಿಯೊಬ್ಬ ಹೆಣ್ಣು ಗಂಡಿಗೂ ಒಂದಷ್ಟು ಆಸೆ ಆಕಾಂಕ್ಷೆಯಿರುವುದು ಸಹಜ. ಹೀಗಾಗಿ ಹುಡುಗ ಅಥವಾ ಹುಡ್ಗಿಯ ಮುಂದೆ ಒಂದಷ್ಟು ಬೇಡಿಕೆಯಿಡುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಬ್ಬ ಯುವಕನ ಬೇಡಿಕೆ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ಯುವಕನೊಬ್ಬ ಬೇಡಿಕೆಯ ಲಿಸ್ಟ್ ವೈರಲ್ ಆಗಿದೆ. ಇದರಲ್ಲಿ ತಾನು ಗೃಹಸ್ಥನಾಗಿ ಮನೆಯ ಜವಾಬ್ದಾರಿ ವಹಿಸಿಕೊಳ್ಳುವೆ, ಆದರೆ ತನ್ನ ಪತ್ನಿಯಾಗುವವಳು ವಾರ್ಷಿಕ 12 ಲಕ್ಷ ರೂ ಸಂಬಳ ಬರುವ ಉದ್ಯೋಗದಲ್ಲಿರಬೇಕು. ನನಗೆ ಮದುವೆಯ ಬಳಿಕ ಮಕ್ಕಳನ್ನು ಹೊಂದುವ ಯಾವುದೇ ನಿರೀಕ್ಷೆಯಿಲ್ಲ ಎಂದು ಉಲ್ಲೇಖಿಸಿದ್ದಾನೆ. ಯುವಕನ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ಗೃಹಸ್ಥನಾಗಿ ಇರಲು ಸಿದ್ಧ, ಹುಡ್ಗಿಗೆ 12 ಲಕ್ಷ ರೂ ಸಂಬಳ ಇರಲೇಬೇಕು
ಆರ್ ಆಸ್ಕ್ ಇಂಡಿಯನ್ ವುಮೆನ್ (r/AskIndianWoman) ಹೆಸರಿನ ರೆಡ್ಡಿಟ್ ಪೋಸ್ಟ್ ನಲ್ಲಿ ಯುವಕನು ತನ್ನ ಬಾಳ ಸಂಗಾತಿಯಾಗುವವಳ ಬಗ್ಗೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾನೆ. ಯುವಕನು ಪೋಸ್ಟ್‌ನಲ್ಲಿ, ನಾನು ಗೃಹಸ್ಥನಾಗಿ ಇರಲು ಸಿದ್ಧ. ಅಡುಗೆ, ಮನೆ ಸ್ವಚ್ಛತೆ ಹೀಗೆ ಮನೆಯ ಎಲ್ಲಾ ಕೆಲಸವನ್ನು ಮಾಡುವೆನು. ಮನೆಯ ಜವಾಬ್ದಾರಿ ವಹಿಸಿಕೊಳ್ಳುವೆನು. ಆದರೆ ತನ್ನ ಕೈ ಹಿಡಿಯುವ ಸಂಗಾತಿ ಉದ್ಯೋಗದಲ್ಲಿರಬೇಕು. ವರ್ಷಕ್ಕೆ ಕನಿಷ್ಠ 12 ಲಕ್ಷ ರೂಪಾಯಿ ಸಂಬಳ ಹೊಂದಿರಬೇಕು. ಇನ್ನು ಮದುವೆಯಾದ ಬಳಿಕ ಮಕ್ಕಳನ್ನು ಹೊಂದುವ ಆಸೆ ನನಗಿಲ್ಲ. ಪತ್ನಿಗೂ ಈ ಬಗ್ಗೆ ಒಪ್ಪಿಗೆ ಇರುವುದು ಮುಖ್ಯ ಎಂದಿದ್ದಾನೆ.
ರೆಡ್ಡಿಟ್ ಪೋಸ್ಟ್ ಇಲ್ಲಿದೆ
Looking for a Wife Who Wants to Be the Breadwinner by u/captainfantastikk in AskIndianWoman
ಇದನ್ನೂ ಓದಿ: ಮಗನ ಮದ್ವೆ ಬಗ್ಗೆ ಕೇಳಿದ ಸಂಬಂಧಿಗೆ ಖಡಕ್ ಉತ್ತರ ನೀಡಿ ಬಾಯಿ ಮುಚ್ಚಿಸಿದ ತಾಯಿ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಈಗಿನ ಕಾಲದಲ್ಲಿ ನೀರಿಕ್ಷೆಗಳು ಹೆಚ್ಚಾಗಿಯೇ ಡಿವೋರ್ಸ್ ಹಂತಕ್ಕೆ ತಲುಪುವುದು ಎಂದಿದ್ದಾರೆ. ಇನ್ನೊಬ್ಬರು, ಹೆಣ್ಣು ಮಕ್ಕಳು ಲೈಫ್ ಸೆಟ್ಲ್ ಆಗಬೇಕು ಬಯಸುವುದರ ನಡುವೆ ಈ ಯುವಕ ಈ ರೀತಿ ನಿರೀಕ್ಷೆ ಹೊಂದಿರುವುದು ತಪ್ಪೇನಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




