Viral: ಮಗನ ಮದ್ವೆ ಬಗ್ಗೆ ಕೇಳಿದ ಸಂಬಂಧಿಗೆ ಖಡಕ್ ಉತ್ತರ ನೀಡಿ ಬಾಯಿ ಮುಚ್ಚಿಸಿದ ತಾಯಿ
ಮನೆಯ ಯಾವುದೇ ಫಂಕ್ಷನ್‌ಗೆ ಹೋದ್ರೆ ಯುವಕ ಯುವತಿಯರ ಬಳಿ ಮದ್ವೆ ಬಗ್ಗೆ ಒಬ್ಬರಾದ್ರೂ ಕೇಳಿಯೇ ಕೇಳ್ತಾರೆ. ಮಗನ ತಾಯಿ ಬಳಿ ನಿಮ್ಮ ಮಗನಿಗೆ ಯಾವಾಗ ಮದ್ವೆ ಎಂದು ಸಂಬಂಧಿಕರೊಬ್ಬರು ಕೇಳಿದ್ದಾರೆ. ಆದರೆ ಮಹಿಳೆ ತನ್ನ ಮಗನ ಮದ್ವೆ ಬಗ್ಗೆ ಬಹಳ ಜಾಣತನದಿಂದ ಉತ್ತರ ನೀಡಿದ್ದಾಳೆ. ಸದ್ಯ ಈ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

ಕೆಲವು ಸಂಬಂಧಿಕರಿಗೆ ಬೇರೆಯವರ ಜೀವನದ ಬಗ್ಗೆ ಹೆಚ್ಚು. ಹೀಗಾಗಿ ಯಾವುದಾದ್ರೂ ಕಾರ್ಯಕ್ರಮಕ್ಕೆ ಹೋದಾಗ ಮೊದ್ಲು ಕೇಳುವುದೇ ನಿಮ್ಮ ಮಗ ಅಥವಾ ಮಗಳಿಗೆ ಮದುವೆ ಯಾವಾಗ ಎಂದು. ಸಂಬಂಧಿಕರೊಬ್ಬರು ನಿಮ್ಮ ಮಗನ ಮದುವೆ (marriage) ಯಾವಾಗ ಎಂದು ಕೇಳಿದ್ದಾರೆ. ಇದಕ್ಕೆ ತಾಯಿ ಜಾಣತನದಿಂದ ಉತ್ತರ ನೀಡಿದ್ದಾಳೆ. ನಿಮ್ಮ ಮಗನ ಮದುವೆಯ ನಂತರ ನಮ್ಮ ಮಗನ ಮದುವೆ ಮಾಡಿಸುತ್ತೇವೆ ಎಂದು ಖಡಕ್ ಆಗಿ ಹೇಳಿದ್ದಾಳೆ. ಈ ರೆಡ್ಡಿಟ್ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ.
ಮದ್ವೆ ಬಗ್ಗೆ ಕೇಳಿದ ಖಡಕ್ ಉತ್ತರ ನೀಡಿದ ತಾಯಿ
ಪತ ಹೇ ಆಜ್ ಕ್ಯಾ ಹು (r/Pata Hai Aaj Kya Hua) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ನಲ್ಲಿ ಯುವಕನೊಬ್ಬ ನನ್ನ ಮದುವೆಯ ಬಗ್ಗೆ ಸಂಬಂಧಿಕರು ಕೇಳಿದ್ದಕ್ಕೆ ನನ್ನ ತಾಯಿಯ ಉತ್ತರ ಹೀಗಿತ್ತು ಎಂದು ಬರೆದುಕೊಂಡಿದ್ದಾನೆ. ಕುಟುಂಬದ ಕಾರ್ಯಕ್ರಮದ ನಿಮಿತ್ತ ಯುವಕನು ಊರಿಗೆ ತೆರಳಿದ್ದ. ಈ ವೇಳೆ ಸಂಬಂಧಿಯೊಬ್ಬರು ಈ ಯುವಕನ ಮನೆಗೆ ಬಂದಿದ್ದು ಮಾತಿನ ನಡುವೆ ಆತನ ತಾಯಿಯ ಬಳಿ ಮಗನ ಮದುವೆಯ ಬಗ್ಗೆ ಕೇಳಿದ್ದಾರೆ.
ರೆಡ್ಡಿಟ್ ಪೋಸ್ಟ್ ಇಲ್ಲಿದೆ
Aunty Asked About My Marriage, Mom’s Savage Reply Left Her Speechless! 😂💀 by u/Sea-Letterhead-9529 in PataHaiAajKyaHua
ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನನ್ನ ಹೆತ್ತವರು ಜಾಣರು
ಯುವಕನ ತಾಯಿ ಈ ವೇಳೆ ನಗುತ್ತಲೇ ಖಡಕ್ ಉತ್ತರ ನೀಡಿದ್ದು, ನಿಮ್ಮ ಮಗನ ಮದುವೆ ಬಳಿಕ ನಮ್ಮ ಮಗನ ಮದುವೆ ಮಾಡಿಸುತ್ತೇವೆ ಹೇಳಿದ್ದಾಳೆ. ಹೀಗೆನ್ನುತ್ತಿದ್ದಂತೆ ಮುಂದೆ ಎರಡು ಮಾತನಾಡದೇ ಅಲ್ಲಿಂದ ಹೊರಟು ಹೋಗಿದ್ದಾರಂತೆ. ನನ್ನ ತಂದೆ ತಾಯಿ ಇಬ್ಬರೂ ತುಂಬಾ ಶಾಂತಸ್ವಭಾವದವರು. ಇಂತಹ ಸಂಬಂಧಿಕರನ್ನು ಹೇಗೆ ನಿಭಾಯಿಸಬೇಕೆಂದು ಅವರಿಗೆ ಚೆನ್ನಾಗಿ ಗೊತ್ತು ಎಂದು ಬರೆದುಕೊಂಡಿದ್ದಾನೆ.
ಇದನ್ನೂ ಓದಿ: ಹೆಣ್ಣಿನ ಕಡೆಯವರೇ ಮದುವೆ ವೆಚ್ಚ ಭರಿಸುವುದು ಸರಿಯೇ; ನೆಟ್ಟಿಗರಲ್ಲಿ ಸಲಹೆ ಕೇಳಿದ ಯುವತಿ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನೀವು ದುಡ್ಡು ಕೊಟ್ಟರೆ ಸದ್ಯದಲ್ಲೇ ಮಗನ ಮಾಡುವೆವು ಎನ್ನಬೇಕಿತ್ತು ಎಂದು ಹೇಳಿದ್ದಾರೆ. ಇನ್ನೊಬ್ಬರು, ಒಬ್ಬರಾದರೂ ಇಂತಹ ಸಂಬಂಧಿಕರು ಬೇಕಲ್ಲವೇ ಎಂದಿದ್ದಾರೆ. ಮತ್ತೊಬ್ಬರು, ಇಂತಹ ಸನ್ನಿವೇಶಗಳನ್ನು ನೋಡುವುದೇ ಒಂಥರ ಮನೋರಂಜನೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:07 pm, Sat, 14 November 26




