Viral: ಹೆಣ್ಣಿನ ಕಡೆಯವರೇ ಮದುವೆ ವೆಚ್ಚ ಭರಿಸುವುದು ಸರಿಯೇ; ನೆಟ್ಟಿಗರಲ್ಲಿ ಸಲಹೆ ಕೇಳಿದ ಯುವತಿ
ಹೆಣ್ಣು ಮಕ್ಕಳಿಗೆ ಮದ್ವೆ ಮಾಡುವುದೆಂದರೆ ಹೆತ್ತವರಿಗೆ ಹೊರೆ. ಹೌದು ಗಂಡಿನ ಕಡೆಯವರು ಹೆಣ್ಣು ಹೆತ್ತವರ ಮೇಲೆ ಸಂಪೂರ್ಣ ಖರ್ಚನ್ನು ಹಾಕುತ್ತಾರೆ. ಇದೀಗ ಯುವತಿಯೊಬ್ಬಳು ಎರಡು ಕುಟುಂಬಗಳು ಮದ್ವೆ ಖರ್ಚನ್ನು ಸಮಾನವಾಗಿ ಹಂಚಿಕೊಂಡರೆ ತಪ್ಪಾಗುತ್ತದೆಯೇ ಎನ್ನುವ ಗೊಂದಲದಲ್ಲಿದ್ದಾಳೆ. ಹೀಗಾಗಿ ಈ ಯುವತಿ ತನ್ನ ಮದುವೆಯ ಖರ್ಚಿನ ಬಗ್ಗೆ ನೆಟ್ಟಿಗರಲ್ಲಿ ಸಲಹೆ ಕೇಳಿದ್ದಾಳೆ. ಈ ರೆಡ್ಡಿಟ್ ಪೋಸ್ಟ್ ಸದ್ಯ ವೈರಲ್ ಆಗಿದೆ.

ಹೆಣ್ಣು ಹೆತ್ತವರು ಸಾಲ ಮಾಡಿ ಯಾವುದೇ ಕೊರತೆಯಾಗದಂತೆ ಮದುವೆ ಮಾಡಿಕೊಡುತ್ತಾರೆ. ಇದೀಗ ಯುವತಿಯೂ ಮದ್ವೆ (marriage) ಖರ್ಚಿನ ವಿಚಾರವಾಗಿ ಮಾತನಾಡಿದ್ದಾಳೆ. ಆಕೆಯೂ ಮದುವೆ ಸಂಭ್ರಮ ಎರಡು ಕಡೆಯವರಿಗೂ, ಆದರೆ ಈ ಖರ್ಚು ಮಾತ್ರ ಹುಡುಗಿ ಮನೆಯವರಿಗೆ ಯಾಕೆ ಎಂದು ಪ್ರಶ್ನೆ ಮಾಡಿದ್ದಾಳೆ. ನನ್ನ ಮದುವೆ ಖರ್ಚು ವೆಚ್ಚಗಳ ಸಮಾನವಾಗಿ ಹಂಚಿಕೊಳ್ಳುವ ಬಗ್ಗೆ ನನ್ನ ಭಾವಿ ಅತ್ತೆ ಮಾವನ ಬಳಿ ಮಾತನಾಡಿದರೆ ಸಮಸ್ಯೆಯಾದಿತೇ ಎಂದು ನೆಟ್ಟಿಗರಲ್ಲಿ ಸಲಹೆ ಕೇಳಿದ್ದಾಳೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.
ಮದ್ವೆ ಖರ್ಚಿನ ಬಗ್ಗೆ ನೆಟ್ಟಿಗರಲ್ಲಿ ಸಲಹೆ ಕೇಳಿದ ಯುವತಿ
ಆಸ್ಕ್ ಇಂಡಿಯಾ ಮೆನ್ (r/Askindianmen) ಹೆಸರಿನ ರೆಡ್ಡಿಟ್ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ಶೀರ್ಷಿಕೆಯಲ್ಲಿ ಮದುವೆಯ ವೆಚ್ಚಗಳನ್ನು ಹಂಚಿಕೊಳ್ಳುವುದು ಸರಿಯೇ? ಎಂದು ಬರೆಯಲಾಗಿದೆ. ನಾನು ಹಾಗೂ ನನ್ನ ಭಾವಿ ಪತಿ ‘ಡೆಸ್ಟಿನೇಶನ್ ವೆಡ್ಡಿಂಗ್’ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಇದಕ್ಕಾಗಿ ನಾವು ಒಂದು ರೆಸಾರ್ಟ್ ನ್ನು ಬುಕ್ ಮಾಡುತ್ತಿದ್ದೇವೆ. ಮದುವೆಯ ವೆಚ್ಚವನ್ನು ಯಾರು ಭರಿಸಬೇಕು? ಈ ವೆಚ್ಚವನ್ನು ನಾವು ಹೇಗೆ ಹಂಚಿಕೊಳ್ಳಬಹುದು? ಅಲ್ಲದೆ, ವೆಚ್ಚವನ್ನು ಇಬ್ಬರೂ ಸರಿಸಮಾನವಾಗಿ ಹಂಚಿಕೊಳ್ಳುವುದು ಸರಿಯೇ ಅಥವಾ ಇದು ನನ್ನ ಭಾವಿ ಅತ್ತೆ-ಮಾವಂದಿರಿಗೆ ಅವಮಾನಿಸಿದಂತಾಗುತ್ತದೆಯೇ? ಎಂದು ಕೇಳಿದ್ದಾರೆ.
ರೆಡ್ಡಿಟ್ ಪೋಸ್ಟ್ ಇಲ್ಲಿದೆ
Should wedding expenses be split ? by u/Fabulous_Appeal_2344 in AskIndianMen
ವಧುವಿನ ಕಡೆಯವರೇ ಏಕೆ ಸಂಪೂರ್ಣ ಮದ್ವೆ ವೆಚ್ಚವನ್ನು ಭರಿಸಬೇಕು?
ನನ್ನ ಭಾವಿ ಅತ್ತೆ-ಮಾವಂದಿರ ಅಭಿಪ್ರಾಯದ ಪ್ರಕಾರ, ಮದುವೆಯ ವೆಚ್ಚವನ್ನು ವಧುವಿನ ಕಡೆಯವರೇ ಭರಿಸಬೇಕು; ಸಾಂಪ್ರದಾಯಿಕವಾಗಿ ಇದು ನಿಜವೂ ಹೌದು. ಆದರೆ, ನಮ್ಮ ಮದುವೆಯಲ್ಲಿ ತಿಲಕ ಸಮಾರಂಭ, ಮೆಹಂದಿ ಪಾರ್ಟಿ, ಸಂಗೀತ ಕಾರ್ಯಕ್ರಮ ಮತ್ತು ಕಾಕ್‌ಟೈಲ್ ನೈಟ್ ಮುಂತಾದ ಕಾರ್ಯಕ್ರಮಗಳಿವೆ. ಇವುಗಳಲ್ಲಿ ವಧು ಮತ್ತು ವರ ಇಬ್ಬರ ಕಡೆಯ ಅತಿಥಿಗಳೂ ಭಾಗವಹಿಸುತ್ತಿರುತ್ತಾರೆ. ಹೀಗಿರುವಾಗ, ಕೇವಲ ವಧುವಿನ ಕಡೆಯವರೇ ಏಕೆ ಸಂಪೂರ್ಣ ವೆಚ್ಚವನ್ನು ಭರಿಸಬೇಕು? ಈ ಬಗ್ಗೆ ನನಗೊಂದು ಸಲಹೆ ಬೇಕಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬಿಹಾರದ ಹುಡುಗನ ಜತೆಗೆ ಚಿಗುರಿದ ಪ್ರೀತಿ; ಪ್ರೇಮಿಯನ್ನು ವರಿಸಲು ಭಾರತಕ್ಕೆ ಬಂದ ರಷ್ಯನ್ ಯುವತಿ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ಕೇಳುವುದರಲ್ಲಿ ಅರ್ಥವಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದು ಪ್ರೇಮ ವಿವಾಹವೇ ಅಥವಾ ಅರೇಂಜ್ಡ್ ಮ್ಯಾರೇಜ್? ಪ್ರೇಮ ವಿವಾಹವಾಗಿದ್ದರೆ ನಿಮ್ಮ ಭಾವಿ ಸಂಗಾತಿಯೊಂದಿಗೆ ಚರ್ಚಿಸಿ; ಒಂದು ವೇಳೆ ಮನೆಯವರೇ ನಿಶ್ಚಯಿಸಿದ ಮಾಡುವ ವಿವಾಹವಾಗಿದ್ದರೆ, ನಿಮ್ಮ ಹೆತ್ತವರು ಹಾಗೂ ಭಾವಿ ಸಂಗಾತಿ ಇಬ್ಬರೊಂದಿಗೂ ಚರ್ಚಿಸಿ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು, ಹೆಣ್ಣಿನ ಕುಟುಂಬವು ಮದುವೆ ಖರ್ಚು ವೆಚ್ಚ ನೋಡಿಕೊಳ್ಳುವುದು ವರದಕ್ಷಿಣೆ ಅಲ್ಲದೇ ಮತ್ತೇನು ಎಂದು ಕೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




