AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ತಾಯಿ ಮಗಳ ಪುನರ್ಮಿಲನ; ಒಂದು ವರ್ಷದ ಬಳಿಕ ಮಗಳನ್ನು ಕಂಡು ಕಣ್ಣೀರು ಹಾಕಿದ ಹೆತ್ತಮ್ಮ

ಓದು, ಉದ್ಯೋಗಕ್ಕಾಗಿ ದೂರದ ಊರಿಗೆ ತೆರಳುವುದು ಸಹಜ. ಆದರೆ ವರ್ಷಗಳ ಬಳಿಕ ತಮ್ಮ ಮಕ್ಕಳು ಮನೆಗೆ ಬರುತ್ತಾರೆ ಎಂದರೆ ಆಗುವ ಖುಷಿ ಅಷ್ಟಿಷ್ಟಲ್ಲ. ಇದೀಗ ತಾಯಿ ಮಗಳ ಪುನರ್ಮಿಲನದ ವಿಡಿಯೋ ವೈರಲ್ ಆಗಿದೆ. ಒಂದು ವರ್ಷಗಳ ಬಳಿಕ ತಾಯಿ ಮಗಳು ಭೇಟಿಯಾಗಿದ್ದು, ಮಗಳನ್ನು ಕಂಡೊಡನೆ ಹೆತ್ತಮ್ಮ ಕಣ್ಣೀರು ಹಾಕಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ.

Video: ತಾಯಿ ಮಗಳ ಪುನರ್ಮಿಲನ; ಒಂದು ವರ್ಷದ ಬಳಿಕ ಮಗಳನ್ನು ಕಂಡು ಕಣ್ಣೀರು ಹಾಕಿದ ಹೆತ್ತಮ್ಮ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Nov 20, 2026 | 3:23 PM

Share

ತಂದೆ ತಾಯಿ ಪ್ರೀತಿಗೆ ಬೆಲೆ ಕಟ್ಟಲು ಆಗಲ್ಲ. ತಮ್ಮ ಮಕ್ಕಳು ಇದ್ದರೂ ಇಲ್ಲದಿದ್ದರೂ ಅಷ್ಟೇ ಪ್ರೀತಿ ತೋರುತ್ತಾರೆ. ಇದೀಗ ಮಗಳನ್ನು ಕಂಡೊಡನೆ ತಾಯಿ (mother) ಕಣ್ಣು ಒದ್ದೆಯಾಗಿದೆ. ಒಂದು ವರ್ಷಗಳ ಬಳಿಕ ತಾಯಿ ಮಗಳು ಪರಸ್ಪರ ಭೇಟಿಯಾಗಿದ್ದಾರೆ. ಜರ್ಮನಿಯಿಂದ ಭಾರತಕ್ಕೆ ಬಂದ ಯುವತಿ ತಾಯಿಯನ್ನು ನೋಡಿದ ತಕ್ಷಣ ಖುಷಿಯಿಂದ ತಬ್ಬಿಕೊಂಡಿದ್ದಾಳೆ. ಈ ದೃಶ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಾಯಿಯನ್ನು ಭೇಟಿಯಾಗುವ ಖುಷಿಯೇ ಬೇರೆ

ಸಿಮ್ರಾನ್ (@simrankoul14) ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ಗೆ ಒಂದು ವರ್ಷದ ನಂತರ ನಿಮ್ಮ ತಾಯಿಯನ್ನು ಮತ್ತೆ ಭೇಟಿಯಾಗುವುದಕ್ಕಿಂತ ಉತ್ತಮವಾದ ಭಾವನೆ ಬೇರೇನೂ ಇಲ್ಲ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ತಾನು ಜರ್ಮನಿಯಿಂದ ಭಾರತಕ್ಕೆ ಬಂದಿದ್ದೇನೆ. ನನ್ನ ಅಮ್ಮ ಈಗ ಜಮ್ಮುವಿನಿಂದ ದೆಹಲಿಗೆ ನನ್ನ ಜತೆ ಸಮಯ ಕಳೆಯಲು ಬರುತ್ತಿದ್ದಾಳೆ. ಒಬ್ಬ ವ್ಯಕ್ತಿ ಎಷ್ಟೇ ವಯಸ್ಸಾಗಿದ್ದರೂ ಅಥವಾ ಎಷ್ಟೇ ದೂರದಲ್ಲಿದ್ದರೂ, ತನ್ನ ತಾಯಿಯೊಂದಿಗೆ ಸಮಯ ಕಳೆಯುವ ಸಂತೋಷಕ್ಕೆ ಯಾವುದೂ ಸರಿಸಾಟಿಯಾಗುವುದಿಲ್ಲ ಎಂದು ಹೇಳಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ತಾಯಿಯನ್ನು ಕಂಡೊಡನೆ ಓಡಿ ಹೋಗಿ ಅಪ್ಪಿಕೊಂಡ ಯುವತಿ

ಈ ವಿಡಿಯೋದಲ್ಲಿ ರೈಲಿನಿಂದ ಇಳಿಯಲು ಮುಂದಾದ ತಾಯಿಯನ್ನು ಕಂಡೊಡನೆ ಯುವತಿ ಓಡೋಡಿ ಹೋಗಿದ್ದಾಳೆ. ಆ ಬಳಿಕ ಪರಸ್ಪರ ಒಬ್ಬರೊಬ್ಬರನ್ನು ಅಪ್ಪಿಕೊಂಡಿದ್ದಾರೆ. ಮಗಳನ್ನು ಕಂಡೊಡನೆ ತಾಯಿಯ ಕಣ್ಣಲ್ಲಿ ನೀರು ತುಂಬಿರುವುದನ್ನು ಕಾಣಬಹುದು. ತಾಯಿ ಮಗಳ ಭೇಟಿಯ ಖುಷಿಯು ಅವರಿಬ್ಬರ ಮೊಗದಲ್ಲಿ ಎದ್ದು ಕಾಣುತ್ತಿದೆ.

ಇದನ್ನೂ ಓದಿ: ಅಪ್ಪ ಅಮ್ಮನ ಕನಸು ಈಡೇರಿತು; ಮೊದಲ ಬಾರಿಗೆ ತಂದೆ ತಾಯಿಯನ್ನು ವಿಮಾನದಲ್ಲಿ ಕರೆದೊಯ್ದ ಮಗ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮುದ್ದಾದ ವಿಡಿಯೋ ಎಂದರೆ, ಮತ್ತೊಬ್ಬರು, ಈ ದಿನ ನಾನು ಕಂಡ ಬೆಸ್ಟ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ತಾಯಿ ಒಬ್ಬಳು ಕಣ್ಣ ಮುಂದೆ ಇದ್ದರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ಹಿರಿಯೂರು ಟಿಕೆಟ್ ಫೈಟ್: ಅಮಿತ್ ಶಾ ಭೇಟಿ ಬೆನ್ನಲ್ಲೇ ಕುಮಾರಸ್ವಾಮಿ ಹೇಳಿಕೆ
ಹಿರಿಯೂರು ಟಿಕೆಟ್ ಫೈಟ್: ಅಮಿತ್ ಶಾ ಭೇಟಿ ಬೆನ್ನಲ್ಲೇ ಕುಮಾರಸ್ವಾಮಿ ಹೇಳಿಕೆ
ಬಡವರಿಗೆ ವಿತರಿಸಬೇಕಿದ್ದ ಸರ್ಕಾರಿ ಆಸ್ಪತ್ರೆ ಔಷಧಿಗಳು ನದಿಯಲ್ಲಿ ಪತ್ತೆ!
ಬಡವರಿಗೆ ವಿತರಿಸಬೇಕಿದ್ದ ಸರ್ಕಾರಿ ಆಸ್ಪತ್ರೆ ಔಷಧಿಗಳು ನದಿಯಲ್ಲಿ ಪತ್ತೆ!
ಗೋಣಿಚೀಲ ಹೊದ್ದು ತಹಶೀಲ್ದಾರ್ ಕಚೇರಿ ಗೇಟ್ ಬಳಿಯೇ ಮಲಗಿದ ರೈತ!
ಗೋಣಿಚೀಲ ಹೊದ್ದು ತಹಶೀಲ್ದಾರ್ ಕಚೇರಿ ಗೇಟ್ ಬಳಿಯೇ ಮಲಗಿದ ರೈತ!
ರಂಭಾಪುರಿ ಪೀಠದ  ಬಗ್ಗೆಯೂ ‘ಬಸವ ಮಂಟಪ’ ಪುಸ್ತಕದಲ್ಲಿ ವಿವಾದಾತ್ಮಕ ಉಲ್ಲೇಖ!
ರಂಭಾಪುರಿ ಪೀಠದ  ಬಗ್ಗೆಯೂ ‘ಬಸವ ಮಂಟಪ’ ಪುಸ್ತಕದಲ್ಲಿ ವಿವಾದಾತ್ಮಕ ಉಲ್ಲೇಖ!
ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಅದ್ದೂರಿ ಚಾಲನೆ
ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಅದ್ದೂರಿ ಚಾಲನೆ
ಕ್ಯಾಪ್ಟನ್ ಆದ ಮೊದಲ ಹೆಜ್ಜೆಯಲ್ಲೇ ಎಡವಿದ ಗಾನವಿ: ವಿಡಿಯೋ
ಕ್ಯಾಪ್ಟನ್ ಆದ ಮೊದಲ ಹೆಜ್ಜೆಯಲ್ಲೇ ಎಡವಿದ ಗಾನವಿ: ವಿಡಿಯೋ
‘ಬಸವ ಮಂಟಪ’ ಕೃತಿ ವಿವಾದ: ಲೇಖಕ ರವಿ ಹಂಜ್ ಕ್ಷಮೆಯಾಚನೆ
‘ಬಸವ ಮಂಟಪ’ ಕೃತಿ ವಿವಾದ: ಲೇಖಕ ರವಿ ಹಂಜ್ ಕ್ಷಮೆಯಾಚನೆ
ಸಿಎಂ ಸಂಧಾನದ ನಂತರವೂ 4ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಧರಣಿ!
ಸಿಎಂ ಸಂಧಾನದ ನಂತರವೂ 4ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಧರಣಿ!
ಹಿರಿಯೂರು ಉಪಚುನಾವಣೆ: ಕುಮಾರಸ್ವಾಮಿ ಬಳಿ ಅಮಿತ್​ ಶಾ ಚರ್ಚೆ
ಹಿರಿಯೂರು ಉಪಚುನಾವಣೆ: ಕುಮಾರಸ್ವಾಮಿ ಬಳಿ ಅಮಿತ್​ ಶಾ ಚರ್ಚೆ