Video: ಈ ಆರ್ಥಿಕ ಸಲಹೆ ಅನುಸರಿಸಿದ್ರೆ ಖರ್ಚುಗಳನ್ನು ನಿಯಂತ್ರಿಸಬಹುದು ಎಂದ ದಂಪತಿ
ಈಗಿನ ಕಾಲದಲ್ಲಿ ಲೆಕ್ಕ ಹಾಕಿ ದುಡ್ಡು ಖರ್ಚು ಮಾಡಿದ್ರು ಸಾಲಲ್ಲ. ಈ ದಂಪತಿ ನೀಡಿದ ಆರ್ಥಿಕ ಸಲಹೆಗಳು ನೆಟ್ಟಿಗರ ಗಮನ ಸೆಳೆದಿದೆ. ಈ ಟಿಪ್ಸ್ ನಿಮ್ಮ ಖರ್ಚು ವೆಚ್ಚಗಳನ್ನು ನಿಯಂತ್ರಿಸಬಹುದು ಎಂದಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಆರ್ಥಿಕ ಸ್ಥಿತಿ (financial condition) ಚೆನ್ನಾಗಿದ್ರೆ ಮಾತ್ರ ಆರಾಮಾಗಿ ಜೀವನ ನಡೆಸ್ಬಹುದು. ಇಲ್ಲದಿದ್ರೆ ದುಡಿದ ದುಡ್ಡೆಲ್ಲಾ ಉಳಿತಾಯಕ್ಕಿಂತ ಬೇರೆಯದ್ದಕ್ಕೆ ಖರ್ಚಾಗಿಯೇ ಹೋಗುತ್ತದೆ. ಹೀಗಾಗಿ ಇತಿಮಿತಿಯೊಳಗೆ ಬದುಕುವುದನ್ನು ತಿಳಿದಿರಬೇಕು. ಇದೀಗ ದಂಪತಿಗಳಿಬ್ಬರು ಈ ಆರ್ಥಿಕ ಸಲಹೆಗಳನ್ನು ಅನುಸರಿಸಿದ್ರೆ ಖರ್ಚುಗಳನ್ನು ನಿಯಂತ್ರಿಸಬಹುದು ಎಂದಿದ್ದಾರೆ. ಈ ದಂಪತಿ ಆದಾಯವನ್ನು ಹೆಚ್ಚಿಸಿ ಹಾಗೂ ಹಣ ವ್ಯಯಿಸುವಾಗ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅನಗತ್ಯ ಖರ್ಚುಗಳನ್ನು ಮಾಡುವುದಿಲ್ಲ. ತಾವೇಗೆ ಖರ್ಚುಗಳನ್ನು ನಿಯಂತ್ರಿಸುತ್ತೇವೆ ಎಂಬುದನ್ನು ತಿಳಿಸಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಖರ್ಚು ನಿಯಂತ್ರಿಸಲು ಸಲಹೆ ನೀಡಿದ ದಂಪತಿ
ಮುಸ್ಕಾನ್ ಹಾಗೂ ಆಶಿಶ್ (@muskaan_aashish) ಎಂಬ ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಆಶಿಶ್ ಆರ್ಥಿಕತೆಯಲ್ಲಿ ಬಲಿಷ್ಠವಾಗಿ ಇರಲು ನಾನು ಹಾಗೂ ನನ್ನ ಹೆಂಡತಿ ಮಾಡುತ್ತಿರುವ ಆರು ವಿಷಯಗಳು ಇಲ್ಲಿವೆ ವಿವರವಾಗಿ ತಿಳಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ದುಬಾರಿ ಬೆಲೆಯ ವಾಹನಗಳನ್ನು ಖರೀದಿಸಬೇಡಿ
ಮೊದಲನೇಯದು ಅಭ್ಯಾಸ ಕಾರು ಖರೀದಿಸದಿರುವುದು. ಹೀಗಾಗಿ ಯಾವುದೇ ಪ್ರಮುಖ ಸಾಲಗಳು ಅಥವಾ ಆರ್ಥಿಕ ಜವಾಬ್ದಾರಿಗಳಿಲ್ಲ. ಉತ್ತಮ ಆರ್ಥಿಕ ಆರಂಭವನ್ನು ನೀಡಲು ನನ್ನ ಹೆತ್ತವರ ತ್ಯಾಗಗಳು ಇವೆ. ಕಾರಿನ ವೆಚ್ಚಗಳು, ಇಎಂಐಗಳು, ಅದರ ನಿರ್ವಹಣೆ ಹಾಗೂ ಇಂಧನವನ್ನು ತಪ್ಪಿಸುವ ಮೂಲಕ ಗಮನಾರ್ಹವಾಗಿ ಉಳಿಸಲು ಸಾಧ್ಯವಾಗಿದೆ. ಎರಡನೇಯದಾಗಿ ಪೋಷಕರೊಂದಿಗೆ ವಾಸಿಸುವುದು. ಕೆಲವು ಜನರು ಇದನ್ನು ಒಪ್ಪುವುದಿಲ್ಲ. ಹೆತ್ತವರ ಜತೆಗೆ ಇರುವುದರಿಂದ ಅವರಿಂದ ಬೆಂಬಲ ಸಿಗುತ್ತದೆ. ತಂದೆ ತಾಯಿ ಜತೆಗೆ ಇದ್ದರೆ ಬಾಡಿಗೆ ಪಾವತಿಸುವ ಚಿಂತೆಯಿಲ್ಲ, ಹಣ ಉಳಿತಾಯವಾಗುತ್ತದೆ ಎಂದಿದ್ದಾರೆ.
ದುರಾಭ್ಯಾಸವು ಉಳಿತಾಯಕ್ಕೆ ಪೆಟ್ಟು
ಮೂರನೇಯದಾಗಿ ಕಂಟೆಂಟ್ ಕ್ರಿಯೇಟರ್ ಆಗಿ ಹಣ ಗಳಿಸುವುದು ಸೇರಿದೆ. ಇದು ನಮಗಿಬ್ಬರಿಗೂ ಆದಾಯದ ಗಮನಾರ್ಹ ಮೂಲವಾಗಿದೆ. ಆದಾಯ ಹೆಚ್ಚಿಸಲು ಸಹಾಯ ಮಾಡಿದೆ ಎಂದು ಮುಸ್ಕಾನ್ ಹೇಳಿದ್ದಾರೆ. ನಾಲ್ಕನೆಯದು, ಮದ್ಯಪಾನದಂತಹ ಅಭ್ಯಾಸವು ಇಲ್ಲ. ಕೆಲವರು ಅಪರೂಪಕ್ಕೊಮ್ಮೆ ಕುಡಿಯುತ್ತಾರೆ. ಆದರೆ ಈ ವೆಚ್ಚಗಳು ತ್ವರಿತವಾಗಿ ಹೆಚ್ಚಾಗುತ್ತದೆ. ಇದು ಉಳಿತಾಯದ ಮೇಲೆ ಪರಿಣಾಮ ಬೀರುತ್ತವೆ ಎಂದು ವಿವರಿಸಿದ್ದಾರೆ.
ದುಬಾರಿ ಉತ್ಪನ್ನಗಳನ್ನು ಖರೀದಿಸಬೇಡಿ
ಐದನೇಯ ಅಭ್ಯಾಸವೆಂದರೆ ದುಬಾರಿ ವಸ್ತುಗಳಿಗಿಂತ ಅನುಭವಗಳಿಗೆ ಆದ್ಯತೆ ನೀಡುತ್ತೇವೆ. ಶ್ರೀಮಂತರಾಗಿ ಕಾಣುವುದಕ್ಕಿಂತ ಅಥವಾ ದುಬಾರಿ ಉತ್ಪನ್ನಗಳನ್ನು ಖರೀದಿಸುವುದರಲ್ಲಿ ಯಾವುದೇ ಆಸಕ್ತಿ ಹೊಂದಿಲ್ಲ. ಬೇಕಾಬಿಟ್ಟಿ ದುಡ್ಡು ಖರ್ಚು ಮಾಡಲ್ಲ. ಅನುಭವಗಳಿಗೆ, ಹೊಸ ವಿಷಯಗಳನ್ನು ಕಲಿಯಲು ಮತ್ತು ಒಟ್ಟಿಗೆ ಬೆಳೆಯಲು ಖರ್ಚು ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.
ಆದಾಯ ಹೆಚ್ಚಿಸಲು ರಿಸ್ಕ್ ತೆಗೆದುಕೊಳ್ಳಿ
ಕೊನೆಯದಾಗಿ ಆದಾಯ ಹೆಚ್ಚಿಸಲು ರಿಸ್ಕ್ ತೆಗೆದುಕೊಳ್ಳುವುದು. ಹೌದು, ಸೋಶಿಯಲ್ ಮೀಡಿಯಾ ಪೇಜ್ ಪ್ರಾರಂಭಿಸುವುದು ಸ್ವತಃ ನಾನೇ ತೆಗೆದುಕೊಂಡ ದೊಡ್ಡ ರಿಸ್ಕ್. ಆದರೆ ಈ ಹೆಜ್ಜೆ ಇಡಲು ಮಡದಿ ನೀಡಿದ ಅವರ ಬೆಂಬಲ ಬಹಳ. ವೃತ್ತಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಬೆಂಬಲ ನೀಡುವ ಸಂಗಾತಿ ಇರುವುದು ಮುಖ್ಯ ಎಂದು ಹೇಳಿರುವುದನ್ನು ಕಾಣಬಹುದು.
ಇದನ್ನೂ ಓದಿ: ಇಬ್ಬರ ಊಟಕ್ಕೆ 4,800 ರೂ, ಬಿಲ್ ನೋಡಿ ಶಾಕ್ ಆದ ಯುವತಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದು ಕೊಂಡಿವೆ. ಒಬ್ಬ ಬಳಕೆದಾರ, ನೀವು ಹೇಳುವುದು ಸರಿ ಇದೆ ಎಂದಿದ್ದಾರೆ. ಇನ್ನೊಬ್ಬರು, ಈ ಆರ್ಥಿಕ ಸಲಹೆಗಳು ಉಪಯೋಗಕ್ಕೆ ಬರಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು, ಅನಗತ್ಯ ಖರ್ಚುಗಳನ್ನು ತಪ್ಪಿಸುವುದು, ಕುಟುಂಬದ ಮೇಲೆ ಅವಲಂಬಿತವಾಗುವುದು, ಹೆಚ್ಚುವರಿ ಆದಾಯದ ಮೂಲಗಳನ್ನು ಸೃಷ್ಟಿಸುವುದು ಇದು ಉಳಿತಾಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




