AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಇಬ್ಬರ ಊಟಕ್ಕೆ 4,800 ರೂ, ಬಿಲ್ ನೋಡಿ ಶಾಕ್ ಆದ ಯುವತಿ

ಸಾಮಾನ್ಯವಾಗಿ ಪ್ರಸಿದ್ಧ ರೆಸ್ಟೋರೆಂಟ್‌ಗಳಲ್ಲಿ ಊಟ ತಿಂಡಿ ಸವಿದಾಗ ಬಿಲ್ ಕೂಡ ಅಷ್ಟೇ ದೊಡ್ಡ ಮೊತ್ತದಾಗಿರುತ್ತದೆ. ಇದೀಗ ಯುವತಿಯೊಬ್ಬಳು ಹೋಟೆಲ್ ಹೋಗಿದ್ದು ಬಿಲ್ ನೋಡಿ ಶಾಕ್ ಆಗಿದೆ. ಒಂದೆರಡು ಸಾವಿರ ರೂಪಾಯಿಯಲ್ಲ. ಇಬ್ಬರ ಊಟಕ್ಕೆ 4800 ರೂಪಾಯಿ ಬಿಲ್ ಆಗಿದೆ. ಮುಂಬೈನ ಯುವತಿ ಪೋಸ್ಟ್ ಹಂಚಿಕೊಂಡು ಅಳಲು ತೋಡಿಕೊಂಡಿದ್ದಾಳೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಇಬ್ಬರ ಊಟಕ್ಕೆ 4,800 ರೂ, ಬಿಲ್ ನೋಡಿ ಶಾಕ್ ಆದ ಯುವತಿ
ಎಕ್ಸ್‌ ಪೋಸ್ಟ್‌Image Credit source: Twitter/ Pinterest
ಸಾಯಿನಂದಾ
|

Updated on: Nov 17, 2026 | 4:11 PM

Share

ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಿಗೆ (Restaurant) ಹೋಗುವ ಮುನ್ನ ಸಾವಿರ ಸಲ ಯೋಚನೆ ಮಾಡ್ತೇನೆ. ಮೊದಲು ನಮ್ಮ ಬಳಿ ಹಣ ಇದೆಯೇ ಎಂದು ನೋಡುತ್ತೇವೆ. ಇದೀಗ ಮುಂಬೈನ ಶಿವಾನಿ ಎಂಬ ಯುವತಿಯು ಊಟಕ್ಕೆ ತನ್ನ ಆಪ್ತರ ಜತೆಗೆ ಹೋಟೆಲ್ ಗೆ ಹೋಗಿದ್ದಾಳೆ. ಊಟ ಮುಗಿಸಿ ಹಣ ಪಾವತಿಸಬೇಕು ಎನ್ನುವಷ್ಟರಲ್ಲಿ ಯುವತಿಗೆ ಬಿಲ್ ನೋಡಿಯೇ ಶಾಕ್ ಆಗಿದೆ.  ಹೌದು, ಬಾಂದ್ರಾದಲ್ಲಿ ಮಧ್ಯಾಹ್ನದ ಇಬ್ಬರ ಊಟಕ್ಕೆ ಬರೋಬ್ಬರಿ 4,800 ರೂ ಬಿಲ್ ಪಾವತಿಸಿದ್ದಾಳೆ. ಈ ಬಗ್ಗೆ ಹಂಚಿಕೊಂಡ ಎಕ್ಸ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದಾರೆ.

ಹೋಟೆಲ್ ಬಿಲ್ ನೋಡಿ ಶಾಕ್ ಆದ ಯುವತಿ

ಶಿವಾನಿ (Shivani) ಎಂಬ ಯುವತಿ ಎಕ್ಸ್ ಖಾತೆಯಲ್ಲಿ ರೆಸ್ಟೋರೆಂಟ್ ಗೆ ಹೋದಾಗ ತನಗಾದ ಕಹಿ ಅನುಭವ ಹಂಚಿಕೊಂಡಿದ್ದಾಳೆ. ಈ ಪೋಸ್ಟ್‌ನಲ್ಲಿ ಬಾಂದ್ರಾದಲ್ಲಿ ಲಂಚ್‌ಗೆ ಹೋಗಿದ್ದೆ. ಇಬ್ಬರಿಗೆ 4,800 ರೂ ಬಿಲ್ ಆಯ್ತು. ಮನೆಗೆ ಬಂದು ಲೆಕ್ಕ ಹಾಕಿದಾಗ ಕೇವಲ 1 ಗಂಟೆಯಲ್ಲಿ ನನ್ನ 7 ದಿನದ ಸಂಬಳ ಖಾಲಿಯಾಗಿದೆ ಎಂದು ತಿಳಿಯಿತು. ಮುಂಬೈನಲ್ಲಿ ಹೊರಗೆ ಊಟ ಮಾಡುವುದು ಈಗ ಐಷಾರಾಮಿಯಾಗಿದೆಯೇ ಅಥವಾ ನಾನೇ ಬಡವಳಾಗಿದ್ದೇನೆಯೇ? ಎಂದು ನೆಟ್ಟಿಗರಲ್ಲಿ ಕೇಳಿದ್ದಾಳೆ.

ಎಕ್ಸ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ: ರೈಲಿನ 3ಎಸಿ ಕೋಚ್‌ನಲ್ಲಿ ಸ್ಯಾಂಡ್‌ವಿಚ್‌ ತಯಾರಿಸಿದ ಗುಜರಾತ್‌ನ ಕುಟುಂಬ

ಈ ಪೋಸ್ಟ್ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಐಷಾರಾಮಿ ಹೋಟೆಲ್ ಗೆ ಹೋಗುವ ಮುನ್ನ ಯೋಚಿಸಬೇಕು ಎನ್ನುವುದು ಇದೇ ಕಾರಣಕ್ಕೆ ಎಂದಿದ್ದಾರೆ. ಇನ್ನೊಬ್ಬರು, ನೀವು ಹೇಳುವುದೇ ನಿಜವೇ, ಇದು ನಿಜಕ್ಕೂ ದುಬಾರಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್
ಮೀನು ರಪ್ತು ವಾಹನದಲ್ಲಿ ಸಾಗಿಸುತ್ತಿದ್ದ 35 ಲಕ್ಷ ಮೌಲ್ಯದ ಲಿಕ್ಕರ್​ ಜಪ್ತಿ
ಮೀನು ರಪ್ತು ವಾಹನದಲ್ಲಿ ಸಾಗಿಸುತ್ತಿದ್ದ 35 ಲಕ್ಷ ಮೌಲ್ಯದ ಲಿಕ್ಕರ್​ ಜಪ್ತಿ
ಕಾಂಗ್ರೆಸ್ ನಾಯಕರ ವೈಯಕ್ತಿಕ ಟೀಕೆಗೆ ಯದುವೀರ್ ಒಡೆಯರ್ ಖಡಕ್ ತಿರುಗೇಟು
ಕಾಂಗ್ರೆಸ್ ನಾಯಕರ ವೈಯಕ್ತಿಕ ಟೀಕೆಗೆ ಯದುವೀರ್ ಒಡೆಯರ್ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?
ಬೇಲೂರಿನ ಕೋಗಿಲಮನೆ ಬಳಿ 30ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷ
ಬೇಲೂರಿನ ಕೋಗಿಲಮನೆ ಬಳಿ 30ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷ
19 ವರ್ಷದ ಇಬ್ಬರು ವಿದ್ಯಾರ್ಥಿನಿಯರು ರಸ್ತೆ ಅಪಘಾತದಲ್ಲಿ ಬಲಿ
19 ವರ್ಷದ ಇಬ್ಬರು ವಿದ್ಯಾರ್ಥಿನಿಯರು ರಸ್ತೆ ಅಪಘಾತದಲ್ಲಿ ಬಲಿ