- TV9 Kannada Kannada News Photos Cricket Photos IPL 2027 Retention: Probable Release List of All 10 Teams
IPL 2027: 10 ತಂಡಗಳಿಂದ ಹೊರಬೀಳಲಿರುವ ಆಟಗಾರರ ಸಂಭಾವ್ಯ ಪಟ್ಟಿ ಇಲ್ಲಿದೆ
ಐಪಿಎಲ್ 2027ರ 'ರೀಟೆನ್ಷನ್ ಡೇ' ಕಾವು ತಾರಕಕ್ಕೇರಿದ್ದು, ಎಲ್ಲಾ 10 ತಂಡಗಳ ಲೆಕ್ಕಾಚಾರಗಳು ತಲೆಕೆಳಗಾಗುವ ಸೂಚನೆ ಸಿಕ್ಕಿದೆ. ಈಗಾಗಲೇ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಹಾಗೂ ಅರ್ಷದೀಪ್ ಸಿಂಗ್ ಅವರಂತಹ ದಿಗ್ಗಜರ ಟ್ರೇಡ್ (ವಿನಿಮಯ) ಅಭಿಮಾನಿಗಳಿಗೆ ಶಾಕ್ ನೀಡಿದೆ. ಇದರ ಬೆನ್ನಲ್ಲೇ, ಇಂದು ಸಂಜೆ ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಮತ್ತು ಕೈಬಿಟ್ಟಿರುವ ಆಟಗಾರರ ಅಧಿಕೃತ ಪಟ್ಟಿಯನ್ನು ಪ್ರಕಟಿಸಲಿವೆ.
Updated on: Nov 17, 2026 | 10:16 AM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20ರ ಸಿದ್ಧತೆಗಳು ಶುರುವಾಗಿವೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಎಲ್ಲಾ ತಂಡಗಳು ರೀಟೆನ್ಷನ್ ಪಟ್ಟಿಯನ್ನು ಸಲ್ಲಿಸಲು ಮುಂದಾಗಿವೆ. ನವೆಂಬರ್ 17 ರೀಟೆನ್ಷನ್ ಪಟ್ಟಿ ಸಲ್ಲಿಸಲು ಅಂತಿಮ ದಿನವಾಗಿದ್ದು, ಅದರಂತೆ ಇಂದು ಎಲ್ಲಾ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿರುವ ಆಟಗಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಿವೆ. ಹಾಗಾದರೆ ಈ ಬಾರಿ ಯಾವೆಲ್ಲಾ ಪ್ರಮುಖ ಆಟಗಾರರು ತಂಡದಿಂದ ಹೊರಬೀಳಲಿದ್ದಾರೆ ಎಂಬ ಸಂಭಾವ್ಯ ಪಟ್ಟಿಯನ್ನು ನೋಡುವುದಾದರೆ... (PC: IPL)

ಚೆನ್ನೈ ಸೂಪರ್ ಕಿಂಗ್ಸ್ (CSK): ಪ್ರಶಾಂತ್ ವೀರ್ (₹14.20 ಕೋಟಿ), ರಾಹುಲ್ ಚಹಾರ್ (₹5.20 ಕೋಟಿ), ಮ್ಯಾಟ್ ಹೆನ್ರಿ (₹2 ಕೋಟಿ), ಸ್ಪೆನ್ಸರ್ ಜಾನ್ಸನ್ (₹1.50 ಕೋಟಿ), ಜಾಕ್ ಫೌಲ್ಕ್ಸ್ (₹75 ಲಕ್ಷ), ಆಕಾಶ್ ಮಧ್ವಾಲ್ (₹30 ಲಕ್ಷ). (PC: IPL)

ಡೆಲ್ಲಿ ಕ್ಯಾಪಿಟಲ್ಸ್ (DC): ಮಿಚೆಲ್ ಸ್ಟಾರ್ಕ್ (₹11.75 ಕೋಟಿ), ಆಖಿಬ್ ನಬಿ (₹8.40 ಕೋಟಿ), ಅಭಿಷೇಕ್ ಪೊರೆಲ್ (₹4 ಕೋಟಿ), ಬೆನ್ ಡಕೆಟ್ (₹2 ಕೋಟಿ), ರೆಹಾನ್ ಅಹ್ಮದ್ (₹75 ಲಕ್ಷ). (PC: IPL)

ಗುಜರಾತ್ ಟೈಟನ್ಸ್ (GT): ಶಾರುಖ್ ಖಾನ್ (₹4 ಕೋಟಿ), ಟಾಮ್ ಬ್ಯಾಂಟನ್ (₹3 ಕೋಟಿ), ಗ್ಲೆನ್ ಫಿಲಿಪ್ಸ್ (₹2 ಕೋಟಿ), ಇಶಾಂತ್ ಶರ್ಮಾ (₹75 ಲಕ್ಷ), ಲ್ಯೂಕ್ ವುಡ್ (₹75 ಲಕ್ಷ), ರಾಹುಲ್ ತೆವಾಟಿಯಾ (₹4 ಕೋಟಿ), ಜಯಂತ್ ಯಾದವ್ (₹75 ಲಕ್ಷ). (PC: IPL)

ಕೋಲ್ಕತ್ತಾ ನೈಟ್ ರೈಡರ್ಸ್ (KKR): ಕ್ಯಾಮರೋನ್ ಗ್ರೀನ್ (₹25.20 ಕೋಟಿ), ಮಥೀಶ ಪತಿರಾಣ (₹18 ಕೋಟಿ), ರಚಿನ್ ರವೀಂದ್ರ (₹2 ಕೋಟಿ), ಬ್ಲೆಸಿಂಗ್ ಮುಝರಬಾನಿ (₹75 ಲಕ್ಷ). (PC: IPL)

ಲಕ್ನೋ ಸೂಪರ್ ಜೈಂಟ್ಸ್ (LSG): ಅವೇಶ್ ಖಾನ್ (₹9.75 ಕೋಟಿ), ಅಕ್ಷತ್ ರಘುವಂಶಿ (₹2.20 ಕೋಟಿ), ವನಿಂದು ಹಸರಂಗ (₹2 ಕೋಟಿ), ನಮನ್ ತಿವಾರಿ (₹1 ಕೋಟಿ), ಅಬ್ದುಲ್ ಸಮದ್ (₹4.20 ಕೋಟಿ), ಅನ್ರಿಕ್ ನೋಕಿಯ (₹2 ಕೋಟಿ). (PC: IPL)

ಮುಂಬೈ ಇಂಡಿಯನ್ಸ್ (MI): ದೀಪಕ್ ಚಹರ್ (₹9.25 ಕೋಟಿ), ಶಾರ್ದೂಲ್ ಠಾಕೂರ್ (₹2 ಕೋಟಿ), ಕೇಶವ್ ಮಹಾರಾಜ್ (₹75 ಲಕ್ಷ), ಮಹಿಪಾಲ್ ಲೊಮ್ರೋರ್ (₹50 ಲಕ್ಷ), ಮಯಾಂಕ್ ಮಾರ್ಕಂಡೆ (₹30 ಲಕ್ಷ). (PC: IPL)

ಪಂಜಾಬ್ ಕಿಂಗ್ಸ್ (PBKS): ಮಾರ್ಕಸ್ ಸ್ಟೊಯಿನಿಸ್ (₹11 ಕೋಟಿ), ಬೆನ್ ದ್ವಾರ್ಶುಯಿಸ್ (₹4.40 ಕೋಟಿ), ಮಿಚ್ ಓವನ್ (₹3 ಕೋಟಿ), ವಿಷ್ಣು ವಿನೋದ್ (₹95 ಲಕ್ಷ). (PC: IPL)

ರಾಜಸ್ಥಾನ ರಾಯಲ್ಸ್ (RR): ರವಿ ಬಿಷ್ಣೋಯ್ (₹7.20 ಕೋಟಿ), ತುಷಾರ್ ದೇಶಪಾಂಡೆ (₹6.50 ಕೋಟಿ), ನಾಂಡ್ರೆ ಬರ್ಗರ್ (₹3.50 ಕೋಟಿ), ಆ್ಯಡಮ್ ಮಿಲ್ನೆ (₹2.40 ಕೋಟಿ), ಕ್ವೇನಾ ಮಫಕಾ (₹1.50 ಕೋಟಿ). (PC: IPL)

ಸನ್ರೈಸರ್ಸ್ ಹೈದರಾಬಾದ್ (SRH): ಜೆರಾಲ್ಡ್ ಕೊಯೆಟ್ಜಿ (₹2 ಕೋಟಿ), ಜಯದೇವ್ ಉನಾದ್ಕಟ್ (₹1 ಕೋಟಿ), ಕಮಿಂದು ಮೆಂಡಿಸ್ (₹75 ಲಕ್ಷ), ಶಿವಂ ಮಾವಿ (₹75 ಲಕ್ಷ), ದಿಲ್ಶನ್ ಮಧುಶಂಕ (₹75 ಲಕ್ಷ). (PC: IPL)

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಮಂಗೇಶ್ ಯಾದವ್ (₹5.20 ಕೋಟಿ), ಯಶ್ ದಯಾಳ್ (₹5 ಕೋಟಿ), ರಿಚರ್ಡ್ ಗ್ಲೀಸನ್ (₹1.60 ಕೋಟಿ), ಅಭಿನಂದನ್ ಸಿಂಗ್ (₹30 ಲಕ್ಷ). (PC: IPL)

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More