AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆಜಾನ್‌ನಲ್ಲಿ ದಿನಸಿ ಐಟಮ್ಸ್ ಆರ್ಡರ್ ಮಾಡಿದ್ದ ಗ್ರಾಹಕನ ಮೇಲೆ ಡೆಲಿವರಿ ಬಾಯ್ ಗರಂ, ಕಾರಣ ಇದೇ ನೋಡಿ

ಆನ್ಲೈನ್ ನಲ್ಲಿ ವಸ್ತುಗಳನ್ನು ಆರ್ಡರ್ ಮಾಡಿದಾಗ ಡೆಲಿವರಿ ಬಾಯ್ ಗಳು ಮನೆಬಾಗಿಲಿಗೆ ಆ ಐಟಮ್ಸ್‌ ತಲುಪಿಸುತ್ತಾರೆ. ಆದರೆ ಡೆಲಿವರಿ ಬಾಯ್ ಗ್ರಾಹಕನಿಗೆ ಬಾಯಿಗೆ ಬಂದಂತೆ ಬೈದಿದ್ದಾನೆ ಎನ್ನಲಾಗಿದೆ. ಇದಕ್ಕೆ ಕಾರಣ ಹೆಚ್ಚುವರಿ ವಸ್ತುಗಳನ್ನು ಆರ್ಡರ್ ಮಾಡಿದ್ದು ಎನ್ನಲಾಗಿದೆ. ಡೆಲಿವರಿ ಬಾಯ್ ವಸ್ತುಗಳನ್ನು ನೆಲಕ್ಕೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಅಮೆಜಾನ್‌ನಲ್ಲಿ ದಿನಸಿ ಐಟಮ್ಸ್ ಆರ್ಡರ್ ಮಾಡಿದ್ದ ಗ್ರಾಹಕನ ಮೇಲೆ ಡೆಲಿವರಿ ಬಾಯ್ ಗರಂ, ಕಾರಣ ಇದೇ ನೋಡಿ
ಸಾಂದರ್ಭಿಕ ಚಿತ್ರImage Credit source: Luis Alvarez/Moment Getty Images
ಸಾಯಿನಂದಾ
|

Updated on:Nov 18, 2026 | 4:15 PM

Share

ಬೆಂಗಳೂರು, ನವೆಂಬರ್ 18: ಇತ್ತೀಚೆಗಿನ ದಿನಗಳಲ್ಲಿ ಮನೆಗೆ ಬೇಕಾದ ಪ್ರತಿಯೊಂದು ವಸ್ತುಗಳನ್ನು ಆನ್ಲೈನ್ ನಲ್ಲೇ ಆರ್ಡರ್ ಮಾಡ್ತಾರೆ. ಆದರೆ ಇಲ್ಲೊಬ್ಬ ಗ್ರಾಹಕ ಅಮೆಜಾನ್ ನಲ್ಲಿ (Amazon) ಆರ್ಡರ್ ಮಾಡಿದ್ದೆ ತಪ್ಪಾಯ್ತು ಎನ್ನುವಂತಾಗಿದೆ. ಹೌದು, ಅಮೆಜಾನ್‌ನಲ್ಲಿ ಹೆಚ್ಚು ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದಕ್ಕೆ ಡೆಲಿವರಿ ಬಾಯ್ ಗ್ರಾಹಕನ ಮೇಲೆ ಕೂಗಾಡಿದ್ದಾನೆ. ಆರ್ಡರ್ ಮಾಡಿದ್ದ ವಸ್ತುಗಳನ್ನು ಗ್ರಾಹಕನಿಗೆ ನೀಡದೇನೆ ಹೋಗಿದ್ದಾನೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾಗಿದೆ. ಗ್ರಾಹಕ ರೆಡ್ಡಿಟ್ ನಲ್ಲಿ ಹಂಚಿಕೊಂಡ ಈ ಪೋಸ್ಟ್ ಚರ್ಚೆಗೆ ಕಾರಣವಾಗಿದೆ.

16 ದಿನಸಿ ಐಟಮ್ಸ್ ಆರ್ಡರ್ ಮಾಡಿದ್ದ ಗ್ರಾಹಕ

ಬೆಂಗಳೂರು ಸೋಶಿಯಲ್ (Bengaluru Social) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ವ್ಯಕ್ತಿಯೊಬ್ಬ ಪೋಸ್ಟ್ ನಲ್ಲಿ ತನ್ನ ಸಹೋದರನು ಮನೆಗೆ ಬೇಕಾದ ಹೆಚ್ಚು ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದಕ್ಕೆ ಡೆಲಿವರಿ ಬಾಯ್ ಕೂಗಾಡಿದ್ದಾನೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ರೆಡ್ಡಿಟ್‌ ಪೋಸ್ಟ್‌ ಇಲ್ಲಿದೆ

Posts from the bangaloresocial community on Reddit

ಹೆಚ್ಚುವರಿ ಐಟಮ್ಸ್ ಆರ್ಡರ್ ಮಾಡಿದ್ದಕ್ಕೆ ಡೆಲಿವರಿ ಬಾಯ್ ಗರಂ

ಈ ಪೋಸ್ಟ್ ನಲ್ಲಿ ಹೇಳಿರುವಂತೆ ಗ್ರಾಹಕನೊಬ್ಬ ತಮ್ಮ ಮನೆಗೆ ಬೇಕಾದ ತಿಂಗಳ ದಿನಸಿ ಸಾಮಾನುಗಳನ್ನು ಅಮೆಜಾನ್ ಮಿನಿಟ್ಸ್ ಖರೀದಿ ಮಾಡಿದ್ದಾನೆ. ಅಕ್ಕಿ, ಹಿಟ್ಟು, ಅಡುಗೆ ಎಣ್ಣೆ, ಪನೀರ್, ಕಾಫಿ, ಬೇಳೆ ಹಾಗೂ ಸೋಪ್ ಸೇರಿದಂತೆ 16 ವಸ್ತುಗಳನ್ನು ಈ ಆರ್ಡರ್ ನಲ್ಲಿದ್ದವು. ಆದರೆ ಆರ್ಡರ್ ತಲುಪಿಸಲು ಬಂದ ಡೆಲಿವರಿ ಬಾಯ್ ಗ್ರಾಹಕನ ಮೇಲೆ ಕೋಪ ಬಂದಿದೆ. ಇಷ್ಟೊಂದು ವಸ್ತುಗಳನ್ನು ಒಂದೇ ಬಾರಿ ಯಾಕೆ ಆರ್ಡರ್ ಮಾಡಿದ್ದೀರಾ. 250 ರೂ ರಿಯಾಯಿತಿ ಪಡೆಯುವುದಕ್ಕಾಗಿಯೇ ಇಷ್ಟೊಂದು ವಸ್ತುಗಳನ್ನು ಖರೀದಿಸಿದ್ದೀರಾ ಎಂದು ಕೇಳಿದ್ದಾನೆ.

ಸಿಟ್ಟಿನಲ್ಲಿ ಐಟಮ್ಸ್ ಗಳನ್ನು ನೆಲಕ್ಕೆಸದ ಡೆಲಿವರಿ ಬಾಯ್

ಆರ್ಡರ್ ಮಾಡಿದ ವಸ್ತುಗಳನ್ನು ಟು ವೀರಲ್ ನಲ್ಲಿ ತರುವುದು ಕಷ್ಟ. ಹೀಗಾಗಿ ಬೇರೆ ಬೇರೆ ಆರ್ಡರ್ ಮಾಡಲು ಆಗಿಲ್ಲವೇ ಎಂದು ಪ್ರಶ್ನಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಡೆಲಿವರಿ ಬಾಯ್ ಬ್ಯಾಗ್ ನಿಂದ ವಸ್ತುಗಳನ್ನು ಹೊರ ತೆಗೆಯುವಂತೆ ಹೇಳಿದ್ದಾನೆ. ಕೊನೆಗೆ ಆತನೇ ಬ್ಯಾಗ್‌ನಲ್ಲಿ ಒಂದೊಂದೇ ವಸ್ತುಗಳನ್ನು ಹೊರತೆಗೆದು ನೆಲಕ್ಕೆ ಎಸೆದು ತನ್ನ ಕೋಪ ತೀರಿಸಿಕೊಂಡಿದ್ದಾನೆ. ಈ ವರ್ತನೆಯಿಂದ ನೊಂದ ಗ್ರಾಹಕನಿಗೆ ಆರ್ಡರ್ ಪಟ್ಟಿ ಪರಿಶೀಲಿಸಿದಾಗ ಮತ್ತೊಂದು ಆಘಾತ ಕಾದಿದೆ. ಆರ್ಡರ್ ಮಾಡಿದ್ದ ಎಲ್ಲಾ ವಸ್ತುಗಳು ಡೆಲಿವರಿಯಾಗಿರಲಿಲ್ಲ. ಈ ಎಲ್ಲಾ ಕಾರಣದಿಂದ ಗ್ರಾಹಕ ಅಸಮಾಧಾನ ವ್ಯಕ್ತಪಡಿಸಿದ್ದಾನೆ.

ಇದನ್ನೂ ಓದಿ: ನನ್ನ ಸೌಂದರ್ಯ ಹೊಗಳಲು ಶುರುಮಾಡಿದ; ಮಹಿಳೆಯ ಜತೆಗೆ ಅನುಚಿತವಾಗಿ ವರ್ತಿಸಿದ ಡೆಲಿವರಿ ಬಾಯ್

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಡೆಲಿವರಿ ಬಾಯ್ ಕೊಟ್ಟಂತೆ ಮಾತಾಡ್ತಾನೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ತಮ್ಮ ಇಷ್ಟದ ವಸ್ತುಗಳನ್ನು ಆರ್ಡರ್ ಮಾಡುವ ಹಕ್ಕು ಎಲ್ಲರಿಗೂ ಇದೆ ಎಂದಿದ್ದಾರೆ. ಇನ್ನೊಬ್ಬರು, ಡೆಲಿವರಿ ಬಾಯ್ ವರ್ತನೆ ಅತೀರೇಕ ಆಗೋಯ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:14 pm, Wed, 18 November 26

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಸಕ್ಕರೆ ಕಾರ್ಖಾನೆಗಳ ಜಿದ್ದಾಜಿದ್ದಿಯಲ್ಲಿ ಕಬ್ಬು ಬೆಳೆಗಾರರಿಗೆ ಬಂಪರ್
ಸಕ್ಕರೆ ಕಾರ್ಖಾನೆಗಳ ಜಿದ್ದಾಜಿದ್ದಿಯಲ್ಲಿ ಕಬ್ಬು ಬೆಳೆಗಾರರಿಗೆ ಬಂಪರ್
ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ, ಭದ್ರತಾ ಪಡೆಗಳ ಶೌರ್ಯ ಕೊಂಡಾಡಿದ ಶಾ
ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ, ಭದ್ರತಾ ಪಡೆಗಳ ಶೌರ್ಯ ಕೊಂಡಾಡಿದ ಶಾ
"ಬಿಜೆಪಿ ಸರ್ಕಾರವಿದ್ದಾಗಲೇ ಪರಿಹಾರ ಕೊಡದವರು ಈಗ ಕೊಡ್ತಾರಾ?"
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ