Video: ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಹೆದರಿಸಲು ಪ್ರಯತ್ನಿಸಿದ ಮರಿಯಾನೆ, ವೈರಲ್ ಆಯ್ತು ಕ್ಯೂಟ್ ದೃಶ್ಯ
ಮರಿಯಾನೆಗಳ ಆಟ ತುಂಟಾಟಗಳನ್ನು ನೋಡುವುದೇ ಖುಷಿ. ಪುಟಾಣಿ ಮರಿಯಾನೆಗಳ ಮುದ್ದು ಮುದ್ದಾದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಸಫಾರಿಗೆ ಬಂದವರನ್ನು ಮರಿಯಾನೆ ಹೆದರಿಸಲು ಮುಂದಾಗಿದೆ. ಈ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಸಫಾರಿಗೆ ತೆರಳುವ ಪ್ರವಾಸಿಗರ ವಾಹನವನ್ನು ಕಾಡಾನೆಗಳು ಬೆನ್ನಟ್ಟುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ ಇಲ್ಲೊಂದು ಮರಿಯಾನೆ (baby elephants) ಸಫಾರಿಗೆ ಬಂದ ಪ್ರವಾಸಿಗರನ್ನು ಹೆದರಿಸಲು ಪ್ರಯತ್ನಿಸಿದೆ. ಈ ಮರಿಯಾನೆ ಕ್ಯೂಟ್ ವರ್ತನೆಗೆ ಪ್ರವಾಸಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಫಾರಿ ವಾಹನ ಅಡ್ಡಗಟ್ಟಿ ನಿಲ್ಲಿಸಿದ ಮರಿಯಾನೆ
ಕಂಫರ್ಟ್ ಟೂರ್ (Comfort tour) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಸಫಾರಿಗೆ ಬಂದ ಪ್ರವಾಸಿಗರನ್ನು ಹೆದರಿಸಲು ಪ್ರಯತ್ನಿಸುತ್ತಿರುವ ಕ್ಯೂಟ್ ದೃಶ್ಯ ನೀವು ನೋಡಬಹುದು. ಹಿಂಬದಿ ತಾಯಾನೆ ಇರುವ ಧೈರ್ಯದಲ್ಲಿ ಮುಂದಕ್ಕೆ ಓಡೋಡಿ ಬಂದು ತಲೆ ಅಲ್ಲಾಡಿಸುತ್ತ ಪ್ರವಾಸಿಗರನ್ನು ಮುದ್ದಾಗಿಯೇ ಹೆದರಿಸಿದೆ. ಈ ಮರಿಯಾನೆ ಕ್ಯೂಟ್ ನೆಸ್ ಗೆ ಪ್ರವಾಸಿಗರು ಜೋರಾಗಿ ನಗುತ್ತಿರುವುದನ್ನು ಕಾಣಬಹುದು. ಅಲ್ಲೇ ಇದ್ದವರು ಮರಿಯಾನೆ ತುಂಟಾಟವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ಕೆಸರು ನೀರಿನಲ್ಲಿ ಮಿಂದೆದ್ದ ಮರಿಯಾನೆ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತುಂಬಾ ಮುದ್ದಾಗಿದೆ, ಬುದ್ಧಿವಂತರಂತೆ ವರ್ತಿಸುತ್ತಿದೆ ಎಂದಿದ್ದಾರೆ. ಇನ್ನೊಬ್ಬರು ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮರಿಯಾನೆ ಗಳು ಏನು ಮಾಡಿದ್ರು ಕ್ಯೂಟ್ ಆಗಿ ಕಾಣುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




