ಮೊದಲ ಪಂದ್ಯದಲ್ಲೇ ಅಭಿಷೇಕ್ ಶರ್ಮಾಗೆ ನಿರಾಸೆ; 9 ರನ್‌ಗೆ ಆಟ ಮುಕ್ತಾಯ
ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ನಲ್ಲಿ ಭಾರತ ಎ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 9 ರನ್ ಗಳಿಸಿ ಔಟಾದರು. ತಿಲಕ್ ವರ್ಮಾ ನಾಯಕತ್ವದಲ್ಲಿ ಭಾರತ ಎ ತಂಡದಲ್ಲಿ ಹಲವು ಸ್ಟಾರ್ ಆಟಗಾರರಿದ್ದಾರೆ. ನವೆಂಬರ್ 22ರಂದು ಪಾಕಿಸ್ತಾನ ಎ ವಿರುದ್ಧದ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ನಲ್ಲಿ ಭಾರತ ಎ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತ ತಿಲಕ್ ವರ್ಮಾ ನೇತೃತ್ವದ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಅದರಂತೆ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ತಂಡಕ್ಕೆ ಒಂದೊಳ್ಳೆ ಜೊತೆಯಾಟವನ್ನು ಒದಗಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ತಂಡದ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದು, ಕೇವಲ 9 ರನ್ ಗಳಿಸಿ ಔಟಾಗುವ ಮೂಲಕ ಪೆವಿಲಿಯನ್ ಸೇರಿಕೊಂಡರು. 13 ಎಸೆತಗಳನ್ನು ಎದುರಿಸಿದ ಅಭಿಷೇಕ್, ಒಂದು ಸಿಕ್ಸರ್ ಸಿಡಿಸಿ ಉತ್ತಮ ಆರಂಭ ಪಡೆಯುವ ಸೂಚನೆ ನೀಡಿದ್ದರು. ಆದರೆ ನಂದನ್ ಯಾದವ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.
ನಂದನ್ ಯಾದವ್ ಎಸೆದ ಫುಲ್ ಲೆಂಗ್ತ್ ಎಸೆತವನ್ನು ಲೆಗ್ ಸೈಡ್‌ನತ್ತ ಬಾರಿಸಲು ಅಭಿಷೇಕ್ ಪ್ರಯತ್ನಿಸಿದರು. ಆದರೆ ಬ್ಯಾಟ್‌ಗೆ ಸರಿಯಾಗಿ ಸಿಗದೆ ಚೆಂಡು ಬ್ಯಾಟ್‌ನ ಅಂಚಿಗೆ ತಾಗಿ ಗಾಳಿಯಲ್ಲಿ ಮೇಲಕ್ಕೆ ಚಿಮ್ಮಿತು. ಮಿಡ್‌ವಿಕೆಟ್‌ನಲ್ಲಿದ್ದ ಫೀಲ್ಡರ್ ಹಿಂದಕ್ಕೆ ಓಡಿ ಅದ್ಭುತವಾಗಿ ಕ್ಯಾಚ್ ಹಿಡಿಯುವ ಮೂಲಕ ಅಭಿಷೇಕ್ ಅವರ ಇನಿಂಗ್ಸ್‌ಗೆ ತೆರೆ ಎಳೆದರು.
🔴EVEN THE CAMERAMAN & COMMENTATOR COULDN’T BELIEVE IT 🤯
– During the Asia Cup Rising, Abhishek Sharma hit the ball so hard that everyone thought it was a six. – Even the cameraman started showing the boundary. – But in reality, the fielder had caught the ball, and Abhishek was OUT!
Looks like the cameraman was more excited than us! 😭
— Sam (@cricsam02) November 20, 2026
ಭಾರತ ಎ ತಂಡದಲ್ಲಿ ಸ್ಟಾರ್ ಆಟಗಾರರ ದಂಡು
ಈ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಮಾತ್ರವಲ್ಲದೆ ವೈಭವ್ ಸೂರ್ಯವಂಶಿ, ರಿಂಕು ಸಿಂಗ್ ಹಾಗೂ ಪ್ರಭ್‌ಸಿಮ್ರನ್ ಸಿಂಗ್ ಸೇರಿದಂತೆ ಹಲವು ಟಿ20 ಸ್ಪೆಷಲಿಸ್ಟ್ ಆಟಗಾರರು ಭಾರತ ಎ ತಂಡದಲ್ಲಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಭಾರತ 3-2 ಅಂತರದಲ್ಲಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಿಲಕ್ ವರ್ಮಾ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.
ಗ್ರೂಪ್ ಬಿ ನಲ್ಲಿ ಭಾರತ ಎ ತಂಡ
ಭಾರತ ಎ ತಂಡ ಗ್ರೂಪ್ ಬಿ ನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಯುಎಇ, ನೇಪಾಳ ಹಾಗೂ ಪಾಕಿಸ್ತಾನ ಎ ತಂಡಗಳಿವೆ. ಗ್ರೂಪ್ ಎ ನಲ್ಲಿ ಬಾಂಗ್ಲಾದೇಶ ಎ, ಶ್ರೀಲಂಕಾ ಎ, ಅಫ್ಘಾನಿಸ್ತಾನ ಎ ಹಾಗೂ ಹಾಂಕಾಂಗ್ ತಂಡಗಳು ಕಣಕ್ಕಿಳಿಯಲಿವೆ. ಎರಡೂ ಗುಂಪುಗಳ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ನವೆಂಬರ್ 26 ಮತ್ತು 27ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ನವೆಂಬರ್ 29ರಂದು ಫೈನಲ್ ಪಂದ್ಯ ಆಯೋಜಿಸಲಾಗಿದೆ.
‘ಪವರ್‌ಪ್ಲೇನಲ್ಲಿ ಬ್ಯಾಟಿಂಗ್ ಅಂದ್ರೆ ಹೀಗಿರಬೇಕು’; ಅಭಿಷೇಕ್-ವೈಭವ್ ಆಟಕ್ಕೆ ಸ್ಯಾಂಟ್ನರ್ ಫಿದಾ!
ನ. 22ರಂದು ಭಾರತ-ಪಾಕ್ ಕದನ
ಭಾರತ ಎ ತಂಡ ತನ್ನ ಮುಂದಿನ ಪಂದ್ಯದಲ್ಲಿ ನವೆಂಬರ್ 22ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ
Published On - 4:12 pm, Fri, 20 November 26




