AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂಳೆ ಮುರಿತಕ್ಕೊಳಗಾದ 7 ವಾರದ ಆನೆ ಮರಿ ಅಸ್ಸಾಂನಿಂದ ವಂತಾರಾಗೆ ಏರ್‌ಲಿಫ್ಟ್; ವಿಶೇಷ ಚಿಕಿತ್ಸೆಗೆ ವ್ಯವಸ್ಥೆ

ಹುಟ್ಟಿದ 2 ತಿಂಗಳಲ್ಲೇ ಕಠಿಣ ಪರಿಸ್ಥಿತಿ ಎದುರಿಸುತ್ತಿರುವ ‘ರಾಜ’ ಎಂಬ 2 ತಿಂಗಳ ಆನೆ ಮರಿಗೆ ಗುಜರಾತ್‌ನ ಜಾಮ್‌ನಗರದಲ್ಲಿರುವ ವನ್ಯಜೀವಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರವಾದ ‘ವಂತಾರಾ’ದಲ್ಲಿ ವಿಶೇಷ ವೈದ್ಯಕೀಯ ಚಿಕಿತ್ಸೆ ನೀಡಲು ಸಿದ್ಧತೆ ನಡೆಸಲಾಗಿದೆ. ನವೆಂಬರ್ 20ರಂದು ವಿಶೇಷವಾಗಿ ವ್ಯವಸ್ಥೆ ಮಾಡಲಾದ ಚಾರ್ಟರ್ಡ್ ವಿಮಾನದ ಮೂಲಕ ಈ ಆನೆ ಮರಿಯನ್ನು ಅಸ್ಸಾಂನಿಂದ ಜಾಮ್‌ನಗರಕ್ಕೆ ಕರೆದೊಯ್ಯಲಾಗುತ್ತಿದೆ. ಆನೆ ಮರಿಯು ಚೇತರಿಸಿಕೊಳ್ಳಲು ಅಗತ್ಯವಿರುವ ವೈದ್ಯಕೀಯ ನೆರವು ಮತ್ತು ದಿನದ 24 ಗಂಟೆಗಳ ಆರೈಕೆಗಾಗಿ ವಂತಾರಾ ಸಂಸ್ಥಾಪಕ ಅನಂತ್ ಅಂಬಾನಿ ಈ ತುರ್ತು ಏರ್‌ಲಿಫ್ಟ್‌ಗೆ ವ್ಯವಸ್ಥೆ ಮಾಡಿದ್ದಾರೆ.

ಮೂಳೆ ಮುರಿತಕ್ಕೊಳಗಾದ 7 ವಾರದ ಆನೆ ಮರಿ ಅಸ್ಸಾಂನಿಂದ ವಂತಾರಾಗೆ ಏರ್‌ಲಿಫ್ಟ್; ವಿಶೇಷ ಚಿಕಿತ್ಸೆಗೆ ವ್ಯವಸ್ಥೆ
ಆನೆ ಮರಿ ರಾಜ
ಸುಷ್ಮಾ ಚಕ್ರೆ
|

Updated on: Nov 20, 2026 | 4:07 PM

Share

ಗುವಾಹಟಿ, ನವೆಂಬರ್ 20: ತಾಯಿಯ ಆರೈಕೆಯಿಂದ ವಂಚಿತವಾಗಿ, ತೊಡೆ ಮೂಳೆ ಮುರಿತದಿಂದ ಬಳಲುತ್ತಿರುವ 7 ವಾರಗಳ (2 ತಿಂಗಳ) ಪುಟ್ಟ ಆನೆ ಮರಿಯಾದ ರಾಜನನ್ನು ಹೆಚ್ಚಿನ ಹಾಗೂ ವಿಶೇಷ ವೈದ್ಯಕೀಯ ಚಿಕಿತ್ಸೆಗಾಗಿ ಅಸ್ಸಾಂನಿಂದ ಗುಜರಾತ್‌ನ ಜಾಮ್‌ನಗರದಲ್ಲಿರುವ ವನ್ಯಜೀವಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರವಾದ ‘ವಂತಾರಾ’ಗೆ ಏರ್‌ಲಿಫ್ಟ್ ಮಾಡಲಾಗುತ್ತಿದೆ. ವಂತಾರಾ ಸಂಸ್ಥಾಪಕ ಅನಂತ್ ಅಂಬಾನಿ ಅವರ ವಿಶೇಷ ಕಾಳಜಿ ಮತ್ತು ನೆರವಿನಿಂದ ಈ ತುರ್ತು ಏರ್‌ಲಿಫ್ಟ್‌ಗೆ ವ್ಯವಸ್ಥೆ ಮಾಡಲಾಗಿದ್ದು, ವಿಶೇಷ ಸೌಲಭ್ಯವುಳ್ಳ ಚಾರ್ಟರ್ಡ್ ವಿಮಾನದ ಮೂಲಕ ಆನೆ ಮರಿಯನ್ನು ಸ್ಥಳಾಂತರಿಸಲಾಗುತ್ತಿದೆ.

ಅಕ್ಟೋಬರ್ 2ರಂದು ಅಸ್ಸಾಂನ ಲಖಿಂಪುರ ಜಿಲ್ಲೆಯ ಗೋಗಾಮುಖ್‌ನ ರೂಪಾಹಿ ಅರಣ್ಯ ವಲಯದಲ್ಲಿ ಜನಿಸಿದ ‘ರಾಜ’, ಭುವನ್ ಪೆಗು ಅವರಿಗೆ ಸೇರಿದ ‘ಮಖೋನಿ’ ಎಂಬ ಸಾಕಾನೆಯ ಮರಿಯಾಗಿದೆ. ಜನಿಸಿದ ಕೆಲವೇ ದಿನಗಳಲ್ಲಿ ತಾಯಿ ಆನೆಯು ಆ ಮರಿಗೆ ಒದ್ದ ಪರಿಣಾಮ ಅದರ ತೊಡೆಯ ಮೂಳೆ ಮುರಿತಕ್ಕೊಳಗಾಗಿತ್ತು. ಅಲ್ಲದೆ, ತಾಯಿಯ ಹಾಲು ಮತ್ತು ಆರೈಕೆಯಿಂದಲೂ ಈ ಪುಟ್ಟ ಮರಿ ವಂಚಿತವಾಗಿತ್ತು.

ಇದನ್ನೂ ಓದಿ: ಕೇರಳದಿಂದ ವಂತಾರಗೆ ‘ಮಾಯಾ’ ಪಯಣ; ನಡೆಯಲು ಆಗದೆ, ನಿಲ್ಲಲೂ ಆಗದೆ ಒದ್ದಾಡುತ್ತಿರುವ ಮರಿಯಾನೆಯ ಮನಕಲುಕುವ ಕಥೆ

ಪಶುವೈದ್ಯರ ನಿಗಾದಲ್ಲಿ ಪ್ರಾಥಮಿಕ ಆರೈಕೆ:

ಈ ಘಟನೆಯ ಬಳಿಕ ವಂತಾರಾದ ಅನುಭವಿ ಪಶುವೈದ್ಯರ ತಂಡವು ಮರಿ ಆನೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ವೈದ್ಯರ ನಿವಾಸದಲ್ಲೇ ವಿಶೇಷ ಕಾಳಜಿಯೊಂದಿಗೆ ಆರೈಕೆ ಮಾಡುತ್ತಿತ್ತು. ಆದರೆ, ಕಾಲಿನ ಮೂಳೆ ಮುರಿತಕ್ಕೆ ಉನ್ನತ ಮಟ್ಟದ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಜಾಮ್‌ನಗರಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಯಿತು.

ಅಸ್ಸಾಂನಿಂದ ಗುಜರಾತ್‌ನ ಜಾಮ್‌ನಗರಕ್ಕೆ ಸುಮಾರು 2,500 ಕಿಲೋಮೀಟರ್‌ಗಳಿಗೂ ಹೆಚ್ಚು ದೂರವಿದ್ದು, ರಸ್ತೆಯ ಮಾರ್ಗವಾಗಿ ಕರೆದೊಯ್ದರೆ ಹಲವು ದಿನಗಳೇ ಬೇಕಾಗುತ್ತಿತ್ತು ಮತ್ತು ಗಾಯಗೊಂಡ ಮರಿಗೆ ತೀವ್ರ ತೊಂದರೆಯಾಗುತ್ತಿತ್ತು. ಹೀಗಾಗಿ, ಗುವಾಹಟಿ ವಿಮಾನ ನಿಲ್ದಾಣದಿಂದ ವಿಶೇಷ ಚಾರ್ಟರ್ಡ್ ವಿಮಾನದ ಮೂಲಕ ಕೇವಲ 5 ಗಂಟೆಗಳಲ್ಲಿ ರಾಜನನ್ನು ಜಾಮ್‌ನಗರಕ್ಕೆ ತಲುಪಿಸಲಾಗುತ್ತಿದೆ. ಪ್ರಯಾಣದ ಉದ್ದಕ್ಕೂ ಪಶುವೈದ್ಯರ ವಿಶೇಷ ತಂಡವು ಮರಿಯ ಆರೋಗ್ಯದ ಮೇಲೆ ನಿಗಾ ಇರಿಸಲಿದೆ.

ಇದನ್ನೂ ಓದಿ: ವಂತಾರದಿಂದ ಕೊಲ್ಹಾಪುರಿಗೆ ಮಾಧುರಿ ರಿಟರ್ನ್ಸ್; ಕೊಲ್ಹಾಪುರದ ಜನರಿಗಿರುವ ಭಾವನೆಗೆ ಬೆಲೆಕೊಟ್ಟು ಆನೆಯನ್ನು ಮರಳಿಸುತ್ತಿರುವ ವಂತಾರ

ವಂತಾರಾದಲ್ಲಿ ಮುಂದಿನ ಚಿಕಿತ್ಸೆ ಮತ್ತು ಪುನರ್ವಸತಿ:

ಜಾಮ್‌ನಗರದ ವಂತಾರಾ ಕೇಂದ್ರ ತಲುಪಿದ ನಂತರ, ರಾಜನ ಮುರಿತಕ್ಕೊಳಗಾದ ತೊಡೆ ಮೂಳೆಗೆ ವಿಶೇಷ ಮೂಳೆಚಿಕಿತ್ಸೆ, ಫಿಸಿಯೋಥೆರಪಿ, ಪೌಷ್ಟಿಕ ಆಹಾರ ಮತ್ತು ದಿನದ 24 ಗಂಟೆಗಳ ವೈದ್ಯಕೀಯ ಮೇಲ್ವಿಚಾರಣೆಯನ್ನು ಒದಗಿಸಲಾಗುವುದು. ಅನಂತ್ ಅಂಬಾನಿ ಭಾರತದಲ್ಲಿ ಕೈಗೊಂಡಿರುವ ಇಂತಹ ಮೂರನೇ ತುರ್ತು ವನ್ಯಜೀವಿ ಏರ್‌ಲಿಫ್ಟ್ ಕಾರ್ಯಾಚರಣೆ ಇದಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ಹಿರಿಯೂರು ಟಿಕೆಟ್ ಫೈಟ್: ಅಮಿತ್ ಶಾ ಭೇಟಿ ಬೆನ್ನಲ್ಲೇ ಕುಮಾರಸ್ವಾಮಿ ಹೇಳಿಕೆ
ಹಿರಿಯೂರು ಟಿಕೆಟ್ ಫೈಟ್: ಅಮಿತ್ ಶಾ ಭೇಟಿ ಬೆನ್ನಲ್ಲೇ ಕುಮಾರಸ್ವಾಮಿ ಹೇಳಿಕೆ
ಬಡವರಿಗೆ ವಿತರಿಸಬೇಕಿದ್ದ ಸರ್ಕಾರಿ ಆಸ್ಪತ್ರೆ ಔಷಧಿಗಳು ನದಿಯಲ್ಲಿ ಪತ್ತೆ!
ಬಡವರಿಗೆ ವಿತರಿಸಬೇಕಿದ್ದ ಸರ್ಕಾರಿ ಆಸ್ಪತ್ರೆ ಔಷಧಿಗಳು ನದಿಯಲ್ಲಿ ಪತ್ತೆ!
ಗೋಣಿಚೀಲ ಹೊದ್ದು ತಹಶೀಲ್ದಾರ್ ಕಚೇರಿ ಗೇಟ್ ಬಳಿಯೇ ಮಲಗಿದ ರೈತ!
ಗೋಣಿಚೀಲ ಹೊದ್ದು ತಹಶೀಲ್ದಾರ್ ಕಚೇರಿ ಗೇಟ್ ಬಳಿಯೇ ಮಲಗಿದ ರೈತ!
ರಂಭಾಪುರಿ ಪೀಠದ  ಬಗ್ಗೆಯೂ ‘ಬಸವ ಮಂಟಪ’ ಪುಸ್ತಕದಲ್ಲಿ ವಿವಾದಾತ್ಮಕ ಉಲ್ಲೇಖ!
ರಂಭಾಪುರಿ ಪೀಠದ  ಬಗ್ಗೆಯೂ ‘ಬಸವ ಮಂಟಪ’ ಪುಸ್ತಕದಲ್ಲಿ ವಿವಾದಾತ್ಮಕ ಉಲ್ಲೇಖ!
ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಅದ್ದೂರಿ ಚಾಲನೆ
ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಅದ್ದೂರಿ ಚಾಲನೆ
ಕ್ಯಾಪ್ಟನ್ ಆದ ಮೊದಲ ಹೆಜ್ಜೆಯಲ್ಲೇ ಎಡವಿದ ಗಾನವಿ: ವಿಡಿಯೋ
ಕ್ಯಾಪ್ಟನ್ ಆದ ಮೊದಲ ಹೆಜ್ಜೆಯಲ್ಲೇ ಎಡವಿದ ಗಾನವಿ: ವಿಡಿಯೋ
‘ಬಸವ ಮಂಟಪ’ ಕೃತಿ ವಿವಾದ: ಲೇಖಕ ರವಿ ಹಂಜ್ ಕ್ಷಮೆಯಾಚನೆ
‘ಬಸವ ಮಂಟಪ’ ಕೃತಿ ವಿವಾದ: ಲೇಖಕ ರವಿ ಹಂಜ್ ಕ್ಷಮೆಯಾಚನೆ