AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದಿಂದ ವಂತಾರಗೆ ‘ಮಾಯಾ’ ಪಯಣ; ನಡೆಯಲು ಆಗದೆ, ನಿಲ್ಲಲೂ ಆಗದೆ ಒದ್ದಾಡುತ್ತಿರುವ ಮರಿಯಾನೆಯ ಮನಕಲುಕುವ ಕಥೆ

ಕೇರಳದಲ್ಲಿ ಹುಟ್ಟಿದ ತಕ್ಷಣವೇ ತನ್ನ ಹಿಂಡಿನಿಂದ ದೂರಾಗಿ ಅನಾಥವಾಗಿ, ಗಂಭೀರ ಮೂಳೆ ಕಾಯಿಲೆಯಿಂದ ಬಳಲುತ್ತಿರುವ 18 ತಿಂಗಳ 'ಮಾಯಾ' ಎಂಬ ಆನೆ ಮರಿಯ ಕಥೆ ಮನಕಲುಕುವಂತಿದೆ. ಈ ಆನೆಮರಿ ಮತ್ತಷ್ಟು ನೋವು ಅನುಭವಿಸದಿರಲೆಂದು ದಯಾಮರಣಕ್ಕೆ ವೈದ್ಯರು ಆಲೋಚಿಸುತ್ತಿದ್ದಾರೆ. ಅದಕ್ಕೂ ಮುನ್ನ ಕೊನೆಯ ಚಿಕಿತ್ಸಾ ಪ್ರಯತ್ನವಾಗಿ ಅನಂತ್ ಅಂಬಾನಿ ಅವರ ವಂತಾರಗೆ ಕರೆತರಲಾಗಿದೆ.

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 07, 2026 | 8:00 AM

Share

ಜಾಮ್​ನಗರ್, ನವೆಂಬರ್ 7: ಕೇರಳದಲ್ಲಿ 130 ಕಿಲೋ ತೂಕದ ಮರಿಯಾನೆಯೊಂದು ನಡೆಯಲೂ ಆಗದೆ, ಏಳಲೂ ಆಗದೇ ಮಲಗಿರುವ ದೃಶ್ಯ ಇಡೀ ದೇಶದ ಗಮನ ಸೆಳೆದಿದೆ. ಮೂಳೆ ಸಂಪೂರ್ಣ ದುರ್ಬಲಗೊಂಡ ಪರಿಣಾಮ ಈ ಪರಿಸ್ಥಿತಿ ಅನುಭವಿಸುತ್ತಿರುವ ಮಾಯಾ ಹೆಸರಿನ ಈ ಆನೆಮರಿಯನ್ನು ಕೇರಳದಿಂದ ಗುಜರಾತ್​ನ ವಂತಾರಗೆ ಸ್ಥಳಾಂತರ ಮಾಡಲಾಗಿದೆ. ಜಾಮ್​ನಗರ್​ನಲ್ಲಿರುವ ವಂತಾರ ವನ್ಯಜೀವಿಧಾಮವು ಕಾಡುಪ್ರಾಣಿಗಳ ರಕ್ಷಣೆ ಮತ್ತು ಚಿಕಿತ್ಸೆಗೆ ಹೆಸರುವಾಸಿಯಾಗಿದೆ. ಇಲ್ಲಿ ಮಾಯಾಳಿಗೆ ಚಿಕಿತ್ಸೆ ನೀಡಿದ ಬಳಿಕ ವಾಪಸ್ ಕೇರಳಕ್ಕೆ ಕಳುಹಿಸಲಾಗುತ್ತದೆ.

ಆನೆಹಿಂಡಿನಿಂದ ಬೇರ್ಪಟ್ಟು ಅನಾಥಳಾಗಿದ್ದಳು ಮಾಯಾ

2025ರ ಏಪ್ರಿಲ್ 19 ರಂದು ಕೇರಳದ ಮಲೆಯತ್ತೂರು ವಿಭಾಗದ ಕಪ್ರಿಕ್ಕಾಡ್ ಬಳಿ ಆನೆಯ ಹಿಂಡೊಂದು ನದಿ ದಾಟುವಾಗ ನವಜಾತ ಆನೆ ಮರಿಯೊಂದನ್ನು ಬಿಟ್ಟು ಹೋಯಿತು. ಅರಣ್ಯ ಸಿಬ್ಬಂದಿ ಬಹಳ ಹೊತ್ತು ಕಾದರೂ ಯಾವುದೇ ಆನೆ ಆ ಮರಿಯತ್ತ ಬರಲಿಲ್ಲ. ತಾಯಿಯಾನೆಯೂ ಬರಲಿಲ್ಲ. ಅತ್ಯಂತ ನಿರ್ಜಲೀಕರಣಗೊಂಡಿದ್ದ ಆ ಮರಿಯನ್ನು ರಕ್ಷಿಸಿ ‘ಅಭಯಾರಣ್ಯ’ಕ್ಕೆ ಕರೆತರಲಾಯಿತು.

ಕೇರಳದ ಪಶುವೈದ್ಯ ಡಾ. ಬಿನೋಯ್ ಸಿ. ಬಾಬು ಮತ್ತು ಆರೈಕೆದಾರ ನಿಖಿಲ್ ಬಾಬು ಸೇರಿದಂತೆ ಅರಣ್ಯ ಸಿಬ್ಬಂದಿ ಕಳೆದ 18 ತಿಂಗಳಿಂದ ಹಗಲು-ರಾತ್ರಿ ಎನ್ನದೆ ಆ ಮರಿಯನ್ನು ತಮ್ಮ ಕೈಯಿಂದಲೇ ಹಾಲುಣಿಸಿ ಬೆಳೆಸಿದ್ದರು.

ಇದನ್ನೂ ಓದಿ: ಜೀವನ್ಮರಣ ಹೋರಾಟದಲ್ಲಿ ಕೇರಳದ ‘ಮಾಯಾ’; ವಿಶೇಷ ಚಿಕಿತ್ಸೆಗೆ ಗುಜರಾತ್​ನ ವಂತಾರಾಗೆ ಆನೆಮರಿ ಸ್ಥಳಾಂತರ

ಆಡುವಾಗ ಬಿದ್ದು ಪೆಟ್ಟು ಮಾಡಿಕೊಂಡ ಮಾಯಾ

2026ರ ಜುಲೈನಲ್ಲಿ ಆಟವಾಡುವಾಗ ಬಿದ್ದಿದ್ದರಿಂದ ಮಾಯಾಳ ಭುಜಕ್ಕೆ ಗಾಯವಾಗಿತ್ತು. ಇದು ಸಣ್ಣ ಗಾಯವೆಂದು ಮೇಲ್ನೋಟಕ್ಕೆ ಭಾಸವಾದರೂ ಕ್ರಮೇಣವಾಗಿ ಈ ಆನೆಮರಿಯ ಆರೋಗ್ಯದಲ್ಲಿ ಏರುಪೇರಾಗತೊಡಗಿತು. ಆಕೆಯ ಮೂಳೆಗಳು ಅತ್ಯಂತ ದುರ್ಬಲಗೊಂಡವು. ಅಕ್ಟೋಬರ್ ತಿಂಗಳಷ್ಟರಲ್ಲಿ ಆಕೆಯ ಕಾಲುಗಳಿಗೆ ಫ್ರಾಕ್ಚರ್ ಆಯಿತು. ಮರಿಗೆ ನಿಲ್ಲಲೂ ಸಾಧ್ಯವಾಗದ ಸ್ಥಿತಿ ಬಂತು. ಕೇವಲ ದ್ರವ ಆಹಾರದ ಮೇಲೆ ಬದುಕುವಂತಾಯಿತು.

ಮರಿಯ ಸ್ಥಿತಿ ಗಂಭೀರವಾಗಿದ್ದರಿಂದ ಮತ್ತು ಹೆಚ್ಚಿನ ಯಾತನೆ ತಪ್ಪಿಸಲು ಅಕ್ಟೋಬರ್ 29 ರಂದು ವೈದ್ಯಕೀಯ ಮಂಡಳಿಯು ದಯಾಮರಣವನ್ನು (Euthanasia) ಶಿಫಾರಸು ಮಾಡಿತ್ತು.

ವಂತಾರಾದಿಂದ ವಿಶೇಷ ಚಿಕಿತ್ಸೆಗೆ ಆಹ್ವಾನ

ದಯಾಮರಣದ ನಿರ್ಧಾರ ಕೈಗೊಳ್ಳುವ ಮುನ್ನ, ಕೇರಳದ ಮುಖ್ಯ ವನ್ಯಜೀವಿ ವಾರ್ಡನ್ ಡಾ. ಪಿ. ಪುಗಳೇಂದಿ ಅವರು ಮತ್ತೊಬ್ಬರ ತಜ್ಞರ ಸಲಹೆ ಕೋರಿದರು. ಅಸ್ಸಾಂನ ಖ್ಯಾತ ಆನೆ ತಜ್ಞ ಡಾ. ಕುಶಲ್ ಕೊನ್ವಾರ್ ಶರ್ಮಾ ಅವರು ಇದು ಪ್ಯಾರಾಥಾಯ್ಡ್‌ಗೆ ಸಂಬಂಧಿಸಿದ ಸಮಸ್ಯೆಯಾಗಿರಬಹುದು ಎಂದು ತಿಳಿಸಿ, ವಂತಾರಾದಲ್ಲಿ ಚಿಕಿತ್ಸೆ ಕೊಡಿಸಲು ಶಿಫಾರಸು ಮಾಡಿದರು.

ಇದನ್ನೂ ಓದಿ: ಮೋದಿ ಅವರ ಈ ಬಾರಿಯ ದೀಪಾವಳಿಗೆ ಮತ್ತಷ್ಟು ಮೆರುಗು ತಂದವರು ಯಾರು ಗೊತ್ತೇ? ಇಲ್ಲಿದೆ ನೋಡಿ ವಿಡಿಯೋ

ಇದರಂತೆ, ಅನಂತ್ ಅಂಬಾನಿ ಅವರ ‘ವಂತಾರಾ’ (Vantara) ಸಂಸ್ಥೆಯು ಮರಿಯನ್ನು ಜಾಮ್‌ಗರಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಿತು.

ವಾಯುಮಾರ್ಗದ ಮೂಲಕ ಜಾಮ್‌ನಗರಕ್ಕೆ ಸ್ಥಳಾಂತರ

ನವೆಂಬರ್ 6 ರಂದು ಜೀವ ರಕ್ಷಕ ಉಪಕರಣಗಳು ಮತ್ತು ಪಶುವೈದ್ಯರ ವಿಶೇಷ ತಂಡದೊಂದಿಗೆ ಮಾಯಾಳನ್ನು ವಿಶೇಷ ವಿಮಾನದಲ್ಲಿ (Airlift) ಗುಜರಾತ್‌ನ ಜಾಮ್‌ನಗರದಲ್ಲಿರುವ ವಂತಾರಾ ಆಸ್ಪತ್ರೆಗೆ ಸುರಕ್ಷಿತವಾಗಿ ಕರೆತರಲಾಯಿತು. ಮರಿಗೆ ಚಿಕಿತ್ಸೆ ಮುಗಿದ ಬಳಿಕ ಆಕೆಯನ್ನು ಮರಳಿ ಕೇರಳದ ಅಭಯಾರಣ್ಯಕ್ಕೆ ಕಳುಹಿಸಿಕೊಡಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಣ: ಚಿಕ್ಕಮಗಳೂರಲ್ಲಿ ಬಸ್ ಸೀಜ್​​
ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಣ: ಚಿಕ್ಕಮಗಳೂರಲ್ಲಿ ಬಸ್ ಸೀಜ್​​
ಕೆಟ್ಟದಾಗಿ ಬೈದ ಜಗ್ಗಮಮ್ಮಿಗೆ ಝಾಡಿಸಿದ ಸೌಂದರ್ಯಾ: ವಿಡಿಯೋ ನೋಡಿ
ಕೆಟ್ಟದಾಗಿ ಬೈದ ಜಗ್ಗಮಮ್ಮಿಗೆ ಝಾಡಿಸಿದ ಸೌಂದರ್ಯಾ: ವಿಡಿಯೋ ನೋಡಿ
7 ಜನರ ಕೊಲೆ: ಆರೊಪಿಯ ಮನಸ್ಥಿತಿ ಬಗ್ಗೆ ಮನೋವೈದ್ಯರ ಶಾಕಿಂಗ್ ಮಾತು
7 ಜನರ ಕೊಲೆ: ಆರೊಪಿಯ ಮನಸ್ಥಿತಿ ಬಗ್ಗೆ ಮನೋವೈದ್ಯರ ಶಾಕಿಂಗ್ ಮಾತು
ಒಂದೇ ಕುಟುಂಬ 7 ಜನರ ಹತ್ಯೆ: ಶವಗಳನ್ನ ಸಾಗಿದ ಸಿಸಿಟಿವಿ ದೃಶ್ಯ ಇಲ್ಲಿದೆ
ಒಂದೇ ಕುಟುಂಬ 7 ಜನರ ಹತ್ಯೆ: ಶವಗಳನ್ನ ಸಾಗಿದ ಸಿಸಿಟಿವಿ ದೃಶ್ಯ ಇಲ್ಲಿದೆ
70 ಕೋಟಿ ರೂ. ವೆಚ್ಚದ ಸೋಲಾರ್ ಪ್ಲಾಂಟ್‌ಗೆ ಭಾರಿ ಯಶಸ್ಸು
70 ಕೋಟಿ ರೂ. ವೆಚ್ಚದ ಸೋಲಾರ್ ಪ್ಲಾಂಟ್‌ಗೆ ಭಾರಿ ಯಶಸ್ಸು