Video: ರಸ್ತೆಬದಿಯಲ್ಲಿದ್ದ ನಾಯಿಮರಿಗಳಿಗೆ ಹಾಲುಣಿಸಿದ ಹಸು
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ದೃಶ್ಯಗಳನ್ನು ನಮ್ಮ ಕಣ್ಣಿಂದ ನಂಬಲಾಗುವುದಿಲ್ಲ. ಇದೀಗ ಅಂತಹದ್ದೇ ವಿಡಿಯೋ ವೈರಲ್ ಆಗಿದೆ. ಹಸಿದ ನಾಯಿಮರಿಗಳಿಗೆ ಹಸುವೊಂದು ಹಾಲುಣಿಸಿ ಮಾತೃ ಪ್ರೇಮವನ್ನು ಉಣಬಡಿಸಿದೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲದೆ

ಮಾತುಬಾರದ ಮೂಕ ಪ್ರಾಣಿಗಳು ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತವೆ. ಇದಕ್ಕೆ ಉದಾಹರಣೆಯಂತಿದೆ ಈ ವಿಡಿಯೋ. ಪ್ರಾಣಿಗಳ ನಡುವಿನ ಈ ಅಪರೂಪದ ಪ್ರೀತಿ ವಾತ್ಸಲ್ಯದ ದೃಶ್ಯ ಇದಾಗಿದೆ. ತನ್ನ ಕರುಗಳಲ್ಲದ ನಾಯಿಮರಿಗಳಿಗೆ (puppies) ಹಸುವೊಂದು ಹಾಲುಣಿಸಿದ ವಿಡಿಯೋ ವೈರಲ್ ಆಗಿದೆ. ಈ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕಣ್ಣು ಒದ್ದೆಯಾಗಿದೆ.
ನಾಯಿಮರಿಗಳಿಗೆ ತಾಯಿಯಾದ ಗೋವು
ಭವಿಷ್ ಗುಜರಾತಿ (Bhavesh Gujrati) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋಗೆ, ಭಾರತದಿಂದ ಹೃದಯಸ್ಪರ್ಶಿ ದೃಶ್ಯವೊಂದು ಇಲ್ಲಿದೆ. ಹಸುವೊಂದು ಬೀದಿ ನಾಯಿಮರಿಗಳಿಗೆ, ಅವು ತನ್ನವೇ ಮರಿಗಳೆಂಬಂತೆ ಶಾಂತವಾಗಿ ಹಾಲುಣಿಸುತ್ತಿದೆ. ಇಲ್ಲಿ ಪ್ರಭೇದಗಳ ಭೇದವಿಲ್ಲ, ಯಾವುದೇ ಷರತ್ತುಗಳಿಲ್ಲ; ಕೇವಲ ಕರುಣೆಯ ಕ್ಷಣವಿದು. ದಯೆಗೆ ಯಾವುದೇ ಗಡಿಗಳಿಲ್ಲ ಎಂಬುದನ್ನು ಪ್ರಾಣಿಗಳು ಕೆಲವೊಮ್ಮೆ ನಮಗೆ ನೆನಪಿಸುತ್ತವೆ. ಮಾತೃತ್ವಕ್ಕೆ ತನ್ನದೇ ಆದ ಭಾಷೆಯಿದೆ ಎಂದು ಶೀರ್ಷಿಕೆ ನೀಡಲಾಗಿದೆ.
ಎಕ್ಸ್ ವಿಡಿಯೋ ಇಲ್ಲಿದೆ
A heartwarming sight from India!
A cow calmly allowing stray puppies to feed, as if they were her own.
No shared species, no conditions, just an extraordinary moment of compassion.
Sometimes animals remind us that kindness knows no boundaries.
Motherhood has a language of its own.
— Bhavesh Gujrati (@Bhaveshlivelife) November 19, 2026
ನಾಯಿಮರಿಗಳಿಗೆ ಹಾಲುಣಿಸಿದ ಗೋಮಾತೆ
ಈ ಕ್ಲಿಪಿಂಗ್ ನಲ್ಲಿ ರಸ್ತೆ ಬದಿಯಲ್ಲಿ ಹಸಿವಿನಿಂದ ಕಂಗಾಲಾಗಿ ಏಳು ನಾಯಿ ಮರಿಗಳಿಗೆ ಹಸು ತನ್ನ ಕರುಗಳಂತೆ ಮಮತೆ ತೋರಿ ಹಾಲುಣಿಸುತ್ತಿದೆ. ಈ ನಾಯಿ ಮರಿಗಳು ತನ್ನ ಅಮ್ಮನೆಂದು ಭಾವಿಸಿದಂತಿದೆ ಈ ದೃಶ್ಯ. ಈ ನಾಯಿಮರಿಗಳು ಗೋವಿನ ಹಾಲು ಕುಡಿದು ಹಸಿವು ನೀಗಿಸಿಕೊಳ್ಳುತ್ತಿವೆ.
ಇದನ್ನೂ ಓದಿ: ಟಿಫನ್ ಬಾಕ್ಸ್‌ನಲ್ಲಿದ್ದ ಊಟ ಹಾಕಿ ನಾಯಿಮರಿಯ ಹಸಿವು ನೀಗಿಸಿದ ಹೃದಯವಂತ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತಾಯಿ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದಿದ್ದಾರೆ. ಇನ್ನೊಬ್ಬರು, ಎರಡು ಕಣ್ಣು ತುಂಬಿ ಬಂದಿತು ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದು ನಿಜವೇ ಎಂದು ಕೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




