ತಲೆಗೆ ಬಡಿದ ವಿಪ್ರಜ್ ನಿಗಮ್ ಕಾಲು: ನೋವಿನಿಂದ ಮೈದಾನದಲ್ಲೇ ಕುಳಿತ ವೈಭವ್
ದೋಹಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026ರಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಎ ಪಂದ್ಯದಲ್ಲಿ ಅನಿರೀಕ್ಷಿತ ಘಟನೆ ನಡೆದಿದೆ. ಬೌಂಡರಿ ತಡೆಯುವ ಪ್ರಯತ್ನದಲ್ಲಿ ಭಾರತದ ಯುವ ಆಟಗಾರರಾದ ವೈಭವ್ ಸೂರ್ಯವಂಶಿ ಮತ್ತು ವಿಪ್ರಜ್ ನಿಗಮ್ ಪರಸ್ಪರ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ವೈಭವ್ ಸೂರ್ಯವಂಶಿ ತಲೆಗೆ ಗಾಯವಾಗುವ ಭೀತಿ ಎದುರಾಗಿದ್ದು, ಕೆಲಕಾಲ ಮೈದಾನದಲ್ಲಿ ಆತಂಕ ಮನೆ ಮಾಡಿತ್ತು. ಆದರೆ, ವೈಭವ್ ಶೀಘ್ರ ಚೇತರಿಸಿಕೊಂಡು ಆಟ ಮುಂದುವರಿಸಿದರು.

ದೋಹಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದ ಆರಂಭಿಕ ಓವರ್‌ಗಳಲ್ಲೇ ಮೈದಾನದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಬೌಂಡರಿ ತಡೆಯುವ ಪ್ರಯತ್ನದಲ್ಲಿ ಭಾರತದ ಇಬ್ಬರು ಯುವ ಆಟಗಾರರಾದ ವೈಭವ್ ಸೂರ್ಯವಂಶಿ ಹಾಗೂ ವಿಪ್ರಜ್ ನಿಗಮ್ ಪರಸ್ಪರ ಡಿಕ್ಕಿ ಹೊಡೆದ್ದಾರೆ. ಈ ವೇಳೆ 15 ವರ್ಷದ ವೈಭವ್ ಸೂರ್ಯವಂಶಿ ಗಂಭೀರ ಗಾಯಗೊಳ್ಳುವುದರಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಬೌಂಡರಿ ಲೈನ್ ಬಳಿ ಭೀಕರ ಡಿಕ್ಕಿ
ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಎ ತಂಡದ ನಾಯಕ ಅಬ್ದುಲ್ ಸಮದ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆರಂಭಿಕ ಆಟಗಾರ ಶಮೀಲ್ ಹುಸೇನ್ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಮತ್ತೊಂದು ತುದಿಯಲ್ಲಿ ಮಾಜ್ ಸದಾಕತ್ ಬ್ಯಾಟಿಂಗ್ ಮಾಡುತ್ತಿದ್ದರು. ಪಾಕಿಸ್ತಾನದ ಇನ್ನಿಂಗ್ಸ್‌ನ ಮೂರನೇ ಓವರ್‌ನ ಐದನೇ ಎಸೆತದಲ್ಲಿ ಈ ಘಟನೆ ನಡೆದಿದೆ. ಭಾರತದ ವೇಗದ ಬೌಲರ್ ಹರ್ಷಿತ್ ರಾಣಾ ಎಸೆದ ಚೆಂಡನ್ನು ಮಾಜ್ ಸದಾಕತ್ ಆನ್‌ಸೈಡ್‌ನತ್ತ ಬಲವಾಗಿ ಹೊಡೆದರು. ಸ್ಕ್ವೇರ್ ಲೆಗ್ ಮೇಲಿನಿಂದ ವೇಗವಾಗಿ ಸಾಗಿದ ಚೆಂಡು ಬೌಂಡರಿ ಗೆರೆ ದಾಟುವ ಹಂತದಲ್ಲಿತ್ತು.
ಈ ವೇಳೆ ಚೆಂಡನ್ನು ತಡೆಯಲು ಸ್ಕ್ವೇರ್ ಲೆಗ್ ಮತ್ತು ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೈಭವ್ ಸೂರ್ಯವಂಶಿ ಹಾಗೂ ವಿಪ್ರಜ್ ನಿಗಮ್ ವೇಗವಾಗಿ ಓಡಿದರು. ಬೌಂಡರಿ ಬಳಿ ಚೆಂಡನ್ನು ತಡೆಯಲು ವಿಪ್ರಜ್ ನಿಗಮ್ ಡೈವ್ ಹೊಡೆದಿದ್ದಾರೆ. ಆದರೆ ಈ ವೇಳೆ ಅವರ ಕಾಲು ನೇರವಾಗಿ ಓಡಿ ಬರುತ್ತಿದ್ದ ವೈಭವ್ ಸೂರ್ಯವಂಶಿ ಅವರ ತಲೆಗೆ ಬಡಿದಿದೆ. ಪರಿಣಾಮ ಇಬ್ಬರೂ ಜೋರಾಗಿ ಡಿಕ್ಕಿಯಾಗಿದ್ದಾರೆ. ಇಬ್ಬರು ಆಟಗಾರರು ಡಿಕ್ಕಿಯಾದ ರೀತಿ ಕಂಡು ಮೈದಾನದಲ್ಲಿದ್ದ ಆಟಗಾರರು ಹಾಗೂ ಅಭಿಮಾನಿಗಳು ಕೆಲಕಾಲ ಆತಂಕಕ್ಕೊಳಗಾದರು.
🚨 SCARY COLLISION INVOLVING VAIBHAV SURYAVANSHI! 😳💔
* Vaibhav rushed towards the boundary to save the ball.
* Vipraj Nigam also dived to stop it, but his leg accidentally hit Vaibhav’s head.
HOPEFULLY, VAIBHAV IS FINE AND HASN’T SUFFERED ANY INJURY. 🙏❤️ https://t.co/ydPgk1IGtL
— Lakshay Sharma (@CricWithLaksh) November 22, 2026
ನೋವಿನಿಂದ ಕುಸಿದ ವೈಭವ್
ಈ ಡಿಕ್ಕಿ ಎಷ್ಟು ಜೋರಾಗಿತ್ತೆಂದರೆ 15 ವರ್ಷದ ವೈಭವ್ ಸೂರ್ಯವಂಶಿ ತಕ್ಷಣವೇ ನೋವಿನಿಂದ ತಮ್ಮ ಭುಜವನ್ನು ಹಿಡಿದುಕೊಂಡು ಮೈದಾನದಲ್ಲೇ ಕುಳಿತುಬಿಟ್ಟರು. ಆರಂಭದಲ್ಲಿ ಅವರ ಗಾಯ ಗಂಭೀರವಾಗಿರಬಹುದು ಎಂಬ ಆತಂಕ ಮೂಡಿತ್ತು. ಇದರಿಂದ ಭಾರತೀಯ ತಂಡದ ಆಟಗಾರರು ಹಾಗೂ ಅಭಿಮಾನಿಗಳಲ್ಲಿ ಕೆಲಕಾಲ ಆತಂಕ ಮನೆಮಾಡಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ವೈಭವ್ ಚೇತರಿಸಿಕೊಂಡಿದ್ದು ಸಮಾಧಾನ ತಂದಿತು. ಬಳಿಕ ಮತ್ತೆ ಫೀಲ್ಡಿಂಗ್ ಮುಂದುವರಿಸಿದ ಅವರು ಆರೋಗ್ಯವಾಗಿಯೇ ಕಾಣಿಸಿಕೊಂಡರು.




