AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಟಿಎ 6 ಕಮಾಲ್, ಒಂದೇ ದಿನಕ್ಕೆ ಹಾಲಿವುಡ್​​ನ ಎಲ್ಲ ದಾಖಲೆಗಳು ಉಡೀಸ್

Grand Theft Auto 6: ಮೊದಲ ಸ್ಥಾನದಲ್ಲಿ 27 ಸಾವಿರ ಕೋಟಿ ಗಳಿಸಿದ ‘ಅವೇಂಜರ್ಸ್: ಎಂಡ್​​ಗೇಮ್’, ಎರಡನೇ ಸ್ಥಾನದಲ್ಲಿ ‘ಅವತಾರ್’, ಮೂರನೇ ಸ್ಥಾನದಲ್ಲಿ 23 ಸಾವಿರ ಕೋಟಿ ಗಳಿಸಿದ ‘ಸ್ಪೈಡರ್​ಮ್ಯಾನ್’ ಇನ್ನೂ ಹಲವು ಸಿನಿಮಾಗಳಿವೆ. ಟಾಪ್ 10ನೇ ಸ್ಥಾನದಲ್ಲಿರುವ ಸಿನಿಮಾ 17 ಸಾವಿರ ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಆದರೆ ಈ ದಾಖಲೆಗಳನ್ನು ಕೇವಲ 24 ಗಂಟೆಯಲ್ಲಿ ಮುರಿದು ಬಿಸಾಡಿದೆ ‘ಜಿಟಿಎ 6’.

ಜಿಟಿಎ 6 ಕಮಾಲ್, ಒಂದೇ ದಿನಕ್ಕೆ ಹಾಲಿವುಡ್​​ನ ಎಲ್ಲ ದಾಖಲೆಗಳು ಉಡೀಸ್
Gta6
ಮಂಜುನಾಥ ಸಿ.
|

Updated on: Nov 22, 2026 | 4:35 PM

Share

ಮುಖ್ಯಾಂಶಗಳು

  • ಎಲ್ಲ ಬಾಕ್ಸ್ ಆಫೀಸ್​ ದಾಖಲೆ ಮುರಿದ ಜಿಟಿಎ6
  • ಜಿಟಿಎ 6 ಗೇಮಿಗೆ ಭಾರಿ ಬೇಡಿಕೆ
  • ಒಂದೇ ದಿನದಲ್ಲಿ 36 ಸಾವಿರ ಕೋಟಿ ಗಳಿಕೆ

ಬಾಕ್ಸ್ ಆಫೀಸ್​​ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಟಾಪ್ 10 ಪಟ್ಟಿಯಲ್ಲಿ ಇರುವ ಎಲ್ಲ ಸಿನಿಮಾಗಳು ಹಾಲಿವುಡ್​​ನ ಸಿನಿಮಾಗಳೆ. ಮೊದಲ ಸ್ಥಾನದಲ್ಲಿ 27 ಸಾವಿರ ಕೋಟಿ ಗಳಿಸಿದ ‘ಅವೇಂಜರ್ಸ್: ಎಂಡ್​​ಗೇಮ್’, ಎರಡನೇ ಸ್ಥಾನದಲ್ಲಿ ‘ಅವತಾರ್’, ಮೂರನೇ ಸ್ಥಾನದಲ್ಲಿ 23 ಸಾವಿರ ಕೋಟಿ ಗಳಿಸಿದ ‘ಸ್ಪೈಡರ್​ಮ್ಯಾನ್’ ಇನ್ನೂ ಹಲವು ಸಿನಿಮಾಗಳಿವೆ. ಟಾಪ್ 10ನೇ ಸ್ಥಾನದಲ್ಲಿರುವ ಸಿನಿಮಾ 17 ಸಾವಿರ ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಆದರೆ ಈ ದಾಖಲೆಗಳನ್ನು ಕೇವಲ 24 ಗಂಟೆಯಲ್ಲಿ ಮುರಿದು ಬಿಸಾಡಿದೆ ‘ಜಿಟಿಎ 6’.

ಜಿಟಿಎ 6 (ಗ್ರ್ಯಾಂಡ್ ಥೆಫ್ಟ್ ಆಟೊ-ವರ್ಷನ್ 6) ವಿಶ್ವಪ್ರಸಿದ್ಧ ಗೇಮ್ ಆಗಿದ್ದು, ನವೆಂಬರ್ 19ಕ್ಕೆ ಎಕ್ಸ್​​ಬಾಕ್ಸ್ ಮತ್ತು ಪ್ಲೇ ಸ್ಟೇಷನ್​​ 5ಗೆ ಬಿಡುಗಡೆ ಆಗಿದೆ. ಬಿಡುಗಡೆ ಆದ 24 ಗಂಟೆಗಳಲ್ಲಿ ಈ ಗೇಮ್ ಮಾಡಿರುವ ಕಲೆಕ್ಷನ್ ಬರೋಬ್ಬರಿ 36 ಸಾವಿರ ಕೋಟಿ ರೂಪಾಯಿಗೂ ಹೆಚ್ಚು. ಯಾವುದೇ ಹಾಲಿವುಡ್ ಸೂಪರ್ ಸ್ಟಾರ್ ನಟ-ನಟಿಯರ ಸಿನಿಮಾಗಳು ಸಹ ಇತಿಹಾಸದಲ್ಲೇ ಇಷ್ಟು ದೊಡ್ಡ ಮೊತ್ತವನ್ನು ಗಳಿಕೆ ಮಾಡಿಲ್ಲ. ಜನ ಮುಗಿಬಿದ್ದು ‘ಜಿಟಿಎ 6’ ಗೇಮನ್ನು ಖರೀದಿ ಮಾಡಿ ಆಡುತ್ತಿದ್ದಾರೆ.

ಇದನ್ನೂ ಓದಿ:ನಿಮ್ಮಲ್ಲಿ ಕತೆ ಇದೆಯೇ? ಪ್ರಸಾರ ಭಾರತಿ ಕೊಡಲಿದೆ ಸಿನಿಮಾ ಮಾಡುವ ಅವಕಾಶ

ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಜಿಟಿಎ 6 ಎರಡು ಎಡಿಷನ್​​ಗಳಲ್ಲಿ ಲಭ್ಯವಿದೆ. ಸ್ಟ್ರಾಂಡರ್ಡ್ ಎಡಿಷನ್ ಮತ್ತು ಅಲ್ಟಿಮೇಟ್ ಎಡಿಷನ್. ಸ್ಟ್ರಾಂಡರ್ಡ್ ಎಡಿಷನ್​​ಗೆ 6000 ರೂಪಾಯಿ ಬೆಲೆ ಇದ್ದರೆ, ಅಲ್ಟಿಮೇಟ್ ಎಡಿಷನ್​​ಗೆ 7500 ರೂಪಾಯಿ ಬೆಲೆ ಇದೆ. ಬಹುತೇಕ ಜನ 7500 ರೂಪಾಯಿ ನೀಡಿ ಅಲ್ಟಿಮೇಟ್ ಎಡಿಷನ್​​ ಅನ್ನೇ ಖರೀದಿ ಮಾಡಿದ್ದಾರೆ. ಬೆಲೆ ಬೇರೆ ಬೇರೆ ದೇಶಗಳಲ್ಲಿ ಬೆಲೆ ಭಿನ್ನವಾಗಿದೆ. ಕೆಲವು ದೇಶಗಳಲ್ಲಿ 100 ಡಾಲರ್​​​ಗೂ ಹೆಚ್ಚು ಬೆಲೆ ಇದೆ.

ಗೇಮ್ ಬಿಡುಗಡೆ ಆಗುತ್ತಿದ್ದಂತೆ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳು ಖರೀದಿ ಮಾಡಿ ಡೌನ್​​​ಲೋಡ್ ಮಾಡಿ ಗೇಮ್ ಆಡಿದ್ದಾರೆ. ಈ ಹಿಂದಿನ ‘ಜಿಟಿಎ’ ಗೇಮುಗಳಿಗಿಂತಲೂ ಬಹಳ ಅಪ್​​ಡೇಟೆಡ್ ಆಗಿದೆಯಂತೆ ಜಿಟಿಎ 6 ಆಟ. ಹೊಸ ತಂತ್ರಜ್ಞಾನ, ಹೊಸ ರೀತಿಯ ಕತೆ ಗೇಮಿನಲ್ಲಿದೆ. ಗೇಮರುಗಳು ರಾತ್ರಿ ಎಲ್ಲ ನಿದ್ದೆಬಿಟ್ಟು ಗಂಟೆಗಟ್ಟಲೆ ಈ ಗೇಮನ್ನು ಆಡುತ್ತಿದ್ದಾರೆ. ಗೇಮಿನಲ್ಲಿರುವ ಹಲವು ಹಿಡನ್ ವಿಷಯಗಳನ್ನು ಕಂಡು ಹಿಡಿದು ಹಂಚಿಕೊಳ್ಳುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More