AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೆಟಾಲ್ ಸೋಪಿನೊಳಗೆ ಬ್ಲೇಡ್; ಸ್ನಾನ ಮಾಡುವಾಗ ಮಗುವಿಗೆ ಗಾಯ; ರೆಕಿಟ್ ಇಂಡಿಯಾ ಕಂಪನಿಗೆ ದಂಡ ವಿಧಿಸಿದ ಕೋರ್ಟ್

ಡೆಟಾಲ್ ಸೋಪಿನೊಳಗೆ ಸೇರಿದ್ದ ಕಬ್ಬಿಣದ ಬ್ಲೇಡ್​ನಿಂದ ಮಗುವೊಂದರ ಕೆನ್ನೆಗೆ ಗಾಯವಾಗಿದೆ. ಅ ಸೋಪು ವಾಪಸ್ ಮಾಡಿ ಅಂಗಡಿಯಿಂದ ತಂದ ಇನ್ನೊಂದು ಸೋಪಿನಲ್ಲೂ ಬ್ಲೇಡ್ ಕಂಡು ಬಂದಿದೆ. ಪೋಷಕರು ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಡೆಟಾಲ್ ಸೋಪನ್ನು ತಯಾರಿಸುವ ರೆಕಿಟ್ ಇಂಡಿಯಾ ಲಿ ಕಂಪನಿ, ವಿತರಕ ಮತ್ತು ಅಂಗಡಿಯವ ಈ ಮೂವರಿಗೂ ಕೋರ್ಟ್ ದಂಡ ಹಾಕಿದೆ.

ಡೆಟಾಲ್ ಸೋಪಿನೊಳಗೆ ಬ್ಲೇಡ್; ಸ್ನಾನ ಮಾಡುವಾಗ ಮಗುವಿಗೆ ಗಾಯ; ರೆಕಿಟ್ ಇಂಡಿಯಾ ಕಂಪನಿಗೆ ದಂಡ ವಿಧಿಸಿದ ಕೋರ್ಟ್
ನ್ಯಾಯಾಲಯ ತೀರ್ಪಿನ ಸಾಂದರ್ಭಿಕ ಚಿತ್ರImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 22, 2026 | 4:01 PM

Share

ಭೋಪಾಲ್, ನವೆಂಬರ್ 22: ಡೆಟಾಲ್ ಸೋಪಿನೊಳಗೆ ಹುದುಗಿದ್ದ ಕಬ್ಬಿಣದ ಬ್ಲೇಡ್​ನಿಂದ ಮಗುವೊಂದಕ್ಕೆ ಗಾಯಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯವೊಂದು ಪರಿಹಾರಕ್ಕೆ ಆದೇಶಿಸಿದೆ. ಮಗುವಿನ ಪೋಷಕರಿಗೆ 50,000 ರೂ ಪರಿಹಾರವನ್ನು ನೀಡುವಂತೆ ಡೆಟಾಲ್ ಸೋಪ್ ತಯಾರಕ ರೆಕಿಟ್ ಇಂಡಿಯಾ ಲಿಮಿಟೆಡ್ ಕಂಪನಿಗೆ ಜಿಲ್ಲಾ ಗ್ರಾಹಕ ಆಯೋಗವು ನಿರ್ದೇಶನ ನೀಡಿದೆ.

ಮಗು ಸ್ನಾನ ಮಾಡುವಾಗ ಅದರ ಕೆನ್ನೆಗೆ ಗೀರಾಗಿತ್ತು. ಕೆನ್ನೆಯಿಂದ ರಕ್ತ ಬರುವುದನ್ನು ಕಂಡ ಪೋಷಕರು ಕಾರಣ ಏನಿರಬಹುದು ಎಂದು ಶೋಧಿಸಿದ್ದಾರೆ. ಆ ಸೋಪಿನಲ್ಲಿ ಹುದುಗಿದ್ದ ಬ್ಲೇಡ್​ವೊಂದರಿಂದ ಈ ಗಾಯವಾಗಿರುವುದು ಅವರ ಗಮನಕ್ಕೆ ಬರುತ್ತದೆ.

ಇದನ್ನೂ ಓದಿ: 2047ಕ್ಕೆ 26 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ: ಸಿಐಐನಿಂದ 15 ಪ್ರಮುಖ ಸುಧಾರಣೆಗಳಿಗೆ ಶಿಫಾರಸು

ಆ ಸೋಪನ್ನು ತಂದ ಅಂಗಡಿಗೆ ಹೋಗಿ ಮತ್ತೊಂದು ಸೋಪು ತಂದಿದ್ದಾರೆ. ವಿಚಿತ್ರವೆಂದರೆ, ಹೊಸ ಸೋಪಿನಲ್ಲೂ ಬ್ಲೇಡ್ ಕಂಡು ಬಂದಿದೆ. ಆಗ ಮಗುವಿನ ಕುಟುಂಬವು ಗ್ರಾಹಕ ಆಯೋಗಕ್ಕೆ ದೂರು ನೀಡಿದೆ.

ದೂರು ಪರಿಶೀಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಅವರು ಪರಿಹಾರವಾಗಿ 50,000 ರೂ ಪಾವತಿಸುವಂತೆ ರೆಕಿಟ್ ಇಂಡಿಯಾ ಲಿಮಿಟೆಡ್ ಕಂಪನಿಗೆ ನಿರ್ದೇಶನ ನೀಡಿದ್ದಾರೆ. ಅಷ್ಟೇ ಅಲ್ಲ, ಅಂಗಡಿಯವ ಮತ್ತು ವಿತರಕರು ತಲಾ 2,000 ರೂ ಪಾವತಿಸುವಂತೆಯೂ ಆಯೋಗವು ಆದೇಶ ಹೊರಡಿಸಿದೆ.

ಇದನ್ನೂ ಓದಿ: ಸೇನಾ ಡ್ರೋನ್ ಟೆಂಡರ್‌ಗಳಲ್ಲಿ ಚೀನಾ ಮೂಲದ ಬಿಡಿಭಾಗಗಳ ಉಲ್ಲೇಖ: ಭದ್ರತಾ ಅಪಾಯದ ಕುರಿತು ದೇಶೀಯ ಉದ್ಯಮದ ಎಚ್ಚರಿಕೆ

ರೆಕಿಟ್ ಇಂಡಿಯಾ ಕಂಪನಿ 50,000 ರೂ, ಅಂಗಡಿಯವ 2,000 ರೂ ಮತ್ತು ಡಿಸ್ಟ್ರಿಬ್ಯೂಟರ್ 2,000 ರೂ ಹಣವನ್ನು 45 ದಿನದೊಳಗೆ ಪಾವತಿಸಬೇಕು. ಇಲ್ಲದಿದ್ದರೆ ವರ್ಷಕ್ಕೆ ಶೇ. 6ರಂತೆ ಬಡ್ಡಿ ಸೇರಿಸಿ ಕೊಡಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More