2047ಕ್ಕೆ 26 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ: ಸಿಐಐನಿಂದ 15 ಪ್ರಮುಖ ಸುಧಾರಣೆಗಳಿಗೆ ಶಿಫಾರಸು
ಭಾರತದ ಹಣಕಾಸು ವ್ಯವಸ್ಥೆಯನ್ನು ಬಲಪಡಿಸಲು ಮತ್ತು 2047ರ ವೇಳೆಗೆ $26.5 ಟ್ರಿಲಿಯನ್ ಆರ್ಥಿಕತೆಯ ಗುರಿಯನ್ನು ಸಾಧಿಸಲು ಭಾರತೀಯ ಕೈಗಾರಿಕಾ ಒಕ್ಕೂಟ (CII) ಬ್ಯಾಂಕಿಂಗ್, ಎನ್‌ಬಿಎಫ್‌ಸಿ, ಬಂಡವಾಳ ಮಾರುಕಟ್ಟೆ, ವಿಮೆ ಮತ್ತು ಫಿನ್‌ಟೆಕ್ ವಲಯಗಳಲ್ಲಿ 15 ಆದ್ಯತೆಯ ಸುಧಾರಣೆಗಳನ್ನು ಪ್ರಸ್ತಾಪಿಸಿದೆ. ಆದ್ಯತಾ ವಲಯಗಳಲ್ಲಿ ಸಾಲ ಸೌಲಭ್ಯ ಹೆಚ್ಚಿಸಲು ವ್ಯವಸ್ಥೆ ಮಾಡುವುದು ಇತ್ಯಾದಿ ಶಿಫಾರಸುಗಳನ್ನು ಮಾಡಲಾಗಿದೆ.

ನವದೆಹಲಿ, ನವೆಂಬರ್ 22: 2047ರ ವೇಳೆಗೆ $26.5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ತಲುಪಲು ಸುಮಾರು $106 ಟ್ರಿಲಿಯನ್ ಹಣಕಾಸು ಸ್ವತ್ತುಗಳು ಬೇಕಾಗಬಹುದು ಎಂದು ಸಿಐಐ ಅಂದಾಜಿಸಿದೆ (ಪ್ರಸ್ತುತ ಇದು ಸುಮಾರು $7 ಟ್ರಿಲಿಯನ್ ಇದೆ). ಬ್ಯಾಂಕಿಂಗ್ ಸ್ವತ್ತುಗಳು ನಾಮಮಾತ್ರದ ಜಿಡಿಪಿಗಿಂತ (nominal GDP) 3–3.5 ಶೇಕಡಾಂಶ ಹೆಚ್ಚು ವೇಗವಾಗಿ ಬೆಳೆಯಬೇಕಿದ್ದು, ಜಿಡಿಪಿಗೆ ಬ್ಯಾಂಕ್ ಸ್ವತ್ತುಗಳ ಅನುಪಾತವು ಪ್ರಸ್ತುತ ಇರುವ ಸುಮಾರು 1 ರಿಂದ 1.5ಕ್ಕೆ ಏರಬೇಕೆಂದು ವರದಿ ತಿಳಿಸಿದೆ.
ಕಾರ್ಪೊರೇಟ್ ಬಾಂಡ್ ಮಾರುಕಟ್ಟೆಯು ಪ್ರಸ್ತುತ ಜಿಡಿಪಿಯ ಸುಮಾರು ಶೇ. 15ರಷ್ಟಿದ್ದು (ಚೀನಾದಲ್ಲಿ ಶೇ. 36 ಮತ್ತು ದಕ್ಷಿಣ ಕೊರಿಯಾದಲ್ಲಿ ಶೇ. 80ಕ್ಕಿಂತ ಹೆಚ್ಚು), ಇದನ್ನು ಇನ್ನಷ್ಟು ಆಳಗೊಳಿಸುವ ಅಗತ್ಯವಿದೆ ಎಂದು ಸಿಐಐ ಗಮನಸೆಳೆದಿದೆ. ಭಾರತದ ಹಣಕಾಸು ವ್ಯವಸ್ಥೆಯನ್ನು ಬಲಪಡಿಸಲು ಒಟ್ಟಾರೆ ಆರ್ಥಿಕ ವಲಯಗಳಲ್ಲಿ 15 ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದೆ.
ಇದನ್ನೂ ಓದಿ: ಸೇನಾ ಡ್ರೋನ್ ಟೆಂಡರ್‌ಗಳಲ್ಲಿ ಚೀನಾ ಮೂಲದ ಬಿಡಿಭಾಗಗಳ ಉಲ್ಲೇಖ: ಭದ್ರತಾ ಅಪಾಯದ ಕುರಿತು ದೇಶೀಯ ಉದ್ಯಮದ ಎಚ್ಚರಿಕೆ
ಸಿಐಐ ಶಿಫಾರಸು ಮಾಡಿರುವ 15 ಸುಧಾರಣಾ ಕ್ರಮಗಳಲ್ಲಿ ಕೆಲವು ಈ ಕೆಳಕಂಡಂತಿವೆ:
- ಎಂಎಸ್‌ಎಂಇ (MSME) ವಲಯದಲ್ಲಿ ರೂ. 25–30 ಲಕ್ಷ ಕೋಟಿ ಸಾಲದ ಕೊರತೆ ಇದೆ ಎಂದು ಅಂದಾಜಿಸಲಾಗಿದ್ದು, ಪ್ರತ್ಯೇಕ ರಫ್ತು ಸಾಲ ಉಪ-ಗುರಿ ಮತ್ತು ಬೆಂಕಿ, ಪ್ರವಾಹ ಹಾಗೂ ಯಂತ್ರೋಪಕರಣಗಳ ಹಾನಿಯ ವಿರುದ್ಧ ವಿಮಾ ರಕ್ಷಣೆಗೆ ಒತ್ತಾಯಿಸಲಾಗಿದೆ.
- ಹವಾಮಾನ ಮತ್ತು ವಿಪತ್ತು ಅಪಾಯಗಳ ವಿರುದ್ಧ ಆರ್ಥಿಕ ರಕ್ಷಣೆ ಬಲಪಡಿಸಲು ರಾಷ್ಟ್ರೀಯ ವಿಪತ್ತು ಮತ್ತು ಹವಾಮಾನ ಅಪಾಯ ನಿಧಿ (national catastrophe and climate risk pool) ರಚಿಸುವ ಸಲಹೆಯನ್ನೂ ನೀಡಲಾಗಿದೆ.
- ಉತ್ತಮ ಆಡಳಿತವಿರುವ ಎನ್ಬಿಎಫ್ಸಿಗಳಿಗೆ ಖಾಯಂ ಆದ ಮತ್ತು ನಿಯಮ ಆಧಾರಿತವಾದ ಲಿಕ್ವಿಟಿ ಮತ್ತು ರೀಫೈನಾನ್ಸಿಂಗ್ ಸೌಲಭ್ಯ ನೀಡಬೇಕು.
- ಬ್ಯಾಂಕುಗಳಲ್ಲಿ ಸಮಾನವಾದ ಸಾಲ ವಸೂಲಾತಿ ವ್ಯವಸ್ಥೆಗಳನ್ನು ನಿರ್ಮಿಸಬೇಕು.
- ಆದ್ಯತೆಯ ಸೆಕ್ಟರ್ನಲ್ಲಿ ಪ್ರತೀ ಖರೀದಿದಾರರಿಗೆ ನೀಡಬಹುದಾದ ಸಾಲದ ಮಿತಿಯನ್ನು 35 ಕೋಟಿ ರೂನಿಂದ 80-100 ಕೋಟಿ ರೂಗೆ ಏರಿಸಬೇಕು.
- ಆದ್ಯತಾ ವಲಯದ ಸಾಲ ನೀಡುವಿಕೆ ನಿಯಮಗಳ ಚೌಕಟ್ಟಿನ ಅಡಿಯಲ್ಲಿ ಬ್ಯಾಟರಿ ಮರುಬಳಕೆ, ರೀಸೈಕ್ಲಿಂಗ್ ಇತ್ಯಾದಿ ಚಟುವಕೆಗಳನ್ನು ತರಬೇಕು.
- ಎಂಎಸ್‌ಎಂಇ ಸೆಕ್ಟರ್ನಲ್ಲಿ ಅಗ್ನಿ ಅವಘಡ, ಪ್ರವಾಹ, ಯಂತ್ರೋಪಕರಣ ಹಾನಿ ಮೊದಲಾದ ಅಪಾಯಗಳಿಗೆ ಇನ್ಷೂರೆನ್ಸ್ ರಕ್ಷಣೆ ನೀಡಬೇಕು. ಸಾಲ ಮೀಸಲು ಇಡಬೇಕು.
- ಎಎಗಿಂತ ಕಡಿಮೆ ರೇಟಿಂಗ್ ಇರುವ ಕಾರ್ಪೊರೇಟ್ ಬಾಂಡ್ಗಳಲ್ಲಿ ಹೂಡಿಕೆ ಮಾಡಲು ಪೆನ್ಷನ್ ಫಂಡ್, ಇನ್ಷೂರೆನ್ಸ್ ಕಂಪನಿ ಮತ್ತು ಪ್ರಾವಿಡೆಂಟ್ ಫಂಡ್ಗಳಿಗೆ ಅನುಮತಿಸಬೇಕು.
- ಹವಾಮಾನ ಸಂಬಂಧಿತ ಅಪಾಯಗಳು ಮತ್ತು ವಿಪತ್ತುಗಳ ವಿರುದ್ಧ ಹಣಕಾಸು ರಕ್ಷಣೆ ಬಲಪಡಿಸಲು ಒಂದು ರಾಷ್ಟ್ರೀಯ ನಿಧಿ ರಚಿಸಬೇಕು.
ಇದನ್ನೂ ಓದಿ: ಅಮೆರಿಕದ ನಾಸ್ಡಾಕ್ ಅನ್ನು ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಲಿಸ್ಟೆಡ್ ಎಕ್ಸ್ಚೇಂಜ್ ಆಪರೇಟರ್ ಆದ ಎನ್ಎಸ್ಇ
2026-27ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ‘ವಿಕಸಿತ ಭಾರತಕ್ಕಾಗಿ ಬ್ಯಾಂಕಿಂಗ್ ಕುರಿತ ಉನ್ನತ ಮಟ್ಟದ ಸಮಿತಿ’ (ಆರು ತಿಂಗಳ ಅವಧಿಯ ಕಾರ್ಯಯೋಜನೆ) ರಚನೆಯ ಹಿನ್ನೆಲೆಯಲ್ಲಿ ಈ ಶಿಫಾರಸುಗಳು ಬಂದಿವೆ. ದೀರ್ಘಕಾಲೀನ ಬಂಡವಾಳ, ವ್ಯಾಪಕ ಸಾಲ ಲಭ್ಯತೆ ಮತ್ತು ಹಣಕಾಸು ನಾವೀನ್ಯತೆಗೆ ತಕ್ಕ ನಿಯಮಗಳು ಅತ್ಯಗತ್ಯ ಎಂದು ಸಿಐಐ ಮಹಾನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




