GDP
ಜಿಡಿಪಿ ಎಂದರೆ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್. ಅಂದರೆ ಒಂದು ಪ್ರದೇಶದ ಸಮಗ್ರ ಉತ್ಪನ್ನ. ನಿರ್ದಿಷ್ಟ ದೇಶ ಅಥವಾ ಪ್ರದೇಶದಲ್ಲಿ ನಿರ್ದಿಷ್ಟ ಅವಧಿಯಲ್ಲಿ ತಯಾರಾಗುವ ಎಲ್ಲಾ ಸರಕು ಮತ್ತು ಸೇವೆಗಳ ಮಾರುಕಟ್ಟೆ ಮೌಲ್ಯದ ಗಣನೆಯೇ ಜಿಡಿಪಿ ಆಗಿರುತ್ತದೆ. ಇಲ್ಲಿ ಮಾರುಕಟ್ಟೆ ಮೌಲ್ಯ ಎಂದರೆ ಸರಕು ಅಥವಾ ಸೇವೆ ಯಾವ ಬೆಲೆಗೆ ಅಂತಿಮ ಗ್ರಾಹಕನನ್ನು ಮುಟ್ಟುತ್ತದೆ ಎಂಬುದು. ಒಂದು ದೇಶದ ಆರ್ಥಿಕ ಪರಿಸ್ಥಿತಿಗೆ ಜಿಡಿಪಿ ಕೈಗನ್ನಡಿಯಂತೆ ಇರುತ್ತದೆ. ಇನ್ನು, ನಿರ್ದಿಷ್ಟ ಕಾಲಮಾನದಲ್ಲಿ ಜಿಡಿಪಿ ವ್ಯತ್ಯಯವಾಗುವುದಕ್ಕೆ ಜಿಡಿಪಿ ದರ ಎನ್ನುತ್ತಾರೆ. ಆರ್ಥಿಕ ಬೆಳವಣಿಗೆಯ ದರವೂ ಹೌದು. ಅತಿಹೆಚ್ಚು ಜಿಡಿಪಿ ಹೊಂದಿದ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ಇದೆ. ಭಾರತದ ಜಿಡಿಪಿ 2023ರಲ್ಲಿ 3 ಟ್ರಿಲಿಯನ್ ಡಾಲರ್ ಮುಟ್ಟಿತು. ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಅಮೆರಿಕದ ಜಿಡಿಪಿ 25 ಟ್ರಿಲಿಯನ್ ಡಾಲರ್ನಷ್ಟಿದೆ. ಚೀನಾ ಜಿಡಿಪಿ 18 ಟ್ರಿಲಿಯನ್ ಡಾಲರ್ ಗಡಿ ದಾಟಿದೆ. ಇವೆರಡು ದೇಶಗಳ ಜಿಡಿಪಿ ಇತರರಿಗಿಂತ ಬಹಳ ಮುಂದಿದೆ.