ಜಾಗತಿಕ ಜಿಡಿಪಿ ಹೆಚ್ಚಳಕ್ಕೆ ವಿವಿಧ ದೇಶಗಳ ಕೊಡುಗೆ; ಭಾರತ ಶೇ. 17, ಅಮೆರಿಕ ಶೇ. 9.9
India's contribution to world's GDP growth: 2026ರ ಕ್ಯಾಲಂಡರ್ ವರ್ಷದಲ್ಲಿ ಐಎಂಎಫ್ ಮಾಡಿರುವ ಅಂದಾಜು ಪ್ರಕಾರ ಆಗಬಹುದಾದ ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಚೀನಾದ ಕೊಡುಗೆ ಅತ್ಯಧಿಕ ಇರುತ್ತದೆ. ಜಿಡಿಪಿ ಹೆಚ್ಚಳದಲ್ಲಿ ಚೀನಾದ ಪಾಲು ಶೇ. 26.6 ಇರಲಿದೆ. ಭಾರತದ ಪಾಲು ಶೇ. 17 ಇರಲಿದೆ ಎಂಬುದು ಐಎಂಎಫ್ನ ವರ್ಲ್ಡ್ ಎಕನಾಮಿಕ್ ಔಟ್ಲುಕ್ ವರದಿಯಿಂದ ಗೊತ್ತಾಗುತ್ತದೆ.

ನವದೆಹಲಿ, ಜನವರಿ 31: ಈ ಕ್ಯಾಲಂಡರ್ ವರ್ಷದಲ್ಲಿ ಜಾಗತಿಕವಾಗಿ ಆಗುವ ಜಿಡಿಪಿ ಹೆಚ್ಚಳದಲ್ಲಿ (GDP increase) ಚೀನಾದ ಕೊಡುಗೆ ಶೇ. 26.6ರಷ್ಟಾಗಬಹುದು ಎಂದು ಐಎಂಎಫ್ ಅಂದಾಜು ಮಾಡಿದೆ. ಈ ಕೊಡುಗೆಯಲ್ಲಿ ಭಾರತವು ಅಮೆರಿಕವನ್ನೂ ಮೀರಿಸಲಿದೆ. ವಿಶ್ವದ ಐದನೆ ಅತಿದೊಡ್ಡ ಆರ್ಥಿಕತೆಯಾದರೂ 2026ರಲ್ಲಿ ಜಿಡಿಪಿ ಹೆಚ್ಚಳಕ್ಕೆ ನೀಡುವ ಕೊಡುಗೆಯಲ್ಲಿ ಭಾರತ 2ನೇ ಸ್ಥಾನ ಪಡೆಯಲಿದೆ ಎನ್ನುವುದು ಗಮನಾರ್ಹ.
ಜಾಗತಿಕ ಜಿಡಿಪಿ ಹೆಚ್ಚಳಕ್ಕೆ ಭಾರತದ ಕೊಡುಗೆ ಶೇ. 17 ಇರುತ್ತದೆ. ಅಮೆರಿಕವು ವಿಶ್ವದಲ್ಲೇ ಅತಿದೊಡ್ಡ ಆರ್ಥಿಕತೆಯ ದೇಶವಾದರೂ ಅದರ ಜಿಡಿಪಿ ಹೆಚ್ಚಳದ ಕೊಡುಗೆ ಶೇ. 9.9 ಮಾತ್ರ. ಇದಕ್ಕೆ ಕಾರಣ ಜಿಡಿಪಿ ಬೆಳವಣಿಗೆಯಲ್ಲಿನ ವ್ಯತ್ಯಾಸ.
ಇದನ್ನೂ ಓದಿ: ಬಲಿಷ್ಠ ಭಾರತಕ್ಕೆ ಬೇಕು ತಂತ್ರಜ್ಞಾನ ಪ್ರಾವೀಣ್ಯತೆ; ಬಜೆಟ್ನಲ್ಲಿ ಟೆಕ್ ಸೆಕ್ಟರ್ಗೆ ಏನು ಸಿಗುತ್ತೆ?
ಐಎಂಎಫ್ ಅಂದಾಜು ಪ್ರಕಾರ 2026ರಲ್ಲಿ ಚೀನಾದ ಆರ್ಥಿಕತೆ ಶೇ. 4.5ರಷ್ಟು ಹೆಚ್ಚಬಹುದು. ಅಮೆರಿಕದ ಜಿಡಿಪಿ ಶೇ. 2.4ರಷ್ಟು ಮಾತ್ರ ಹೆಚ್ಚಬಹುದು. ಭಾರತದ ಆರ್ಥಿಕತೆ ಶೇ. 6.4ರಷ್ಟು ಬೆಳೆಯಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಭಿಪ್ರಾಯಪಟ್ಟಿದೆ.
2026ರ ಜಿಡಿಪಿ ಹೆಚ್ಚಳದಲ್ಲಿ ವಿವಿಧ ದೇಶಗಳ ಕೊಡುಗೆ
- ಚೀನಾ: ಶೇ. 26.6
- ಭಾರತ: ಶೇ. 17
- ಅಮೆರಿಕ: ಶೇ. 9.9
- ಇಂಡೋನೇಷ್ಯಾ: ಶೇ. 3.8
- ಟರ್ಕಿ: ಶೇ. 2.2
- ನೈಜೀರಿಯಾ: ಶೇ. 1.5
- ಬ್ರೆಜಿಲ್: ಶೇ. 1.5
- ವಿಯೆಟ್ನಾಂ: ಶೇ. 1.6
- ಸೌದಿ ಅರೇಬಿಯಾ: ಶೇ. 1.7
- ಜರ್ಮನಿ: ಶೇ. 0.9
🌍 Top 10 contributors to global real GDP growth (2026)
1.🇨🇳 China — 26.6% 2.🇮🇳 India — 17.0% 3.🇺🇸 United States — 9.9% 4.🇮🇩 Indonesia — 3.8% 5.🇹🇷 Türkiye — 2.2% 6.🇳🇬 Nigeria — 1.5% 7.🇧🇷 Brazil — 1.5% 8.🇻🇳 Vietnam — 1.6% 9.🇸🇦 Saudi Arabia — 1.7% 10.🇩🇪 Germany — 0.9%…
— World of Statistics (@stats_feed) January 31, 2026
ಇದನ್ನೂ ಓದಿ: ಟ್ಯಾಕ್ಸ್ ಡಿಡಕ್ಷನ್, ಡೆವಲಪರ್ಸ್ಗೆ ಕಡಿಮೆ ದರದಲ್ಲಿ ಭೂಮಿ ಇತ್ಯಾದಿ ಕ್ರಮಗಳ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ
ವಿಶ್ವದ ಜಿಡಿಪಿ ಹೆಚ್ಚಳದಲ್ಲಿ ಏಷ್ಯಾ ಪೆಸಿಫಿಕ್ ಪ್ರದೇಶದ ಕೊಡುಗೆಯೇ ಶೇ. 50ಕ್ಕಿಂತ ಹೆಚ್ಚಿದೆ. ಚೀನಾ ಮತ್ತು ಭಾರತ, ಈ ಎರಡು ದೇಶಗಳ ಕೊಡುಗೆ ಶೇ. 43.6ರಷ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




