
China
ಚೀನಾ, ಅಧಿಕೃತವಾಗಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ, ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ, ಪ್ರದೇಶದ ಪ್ರಕಾರ ಮೂರನೇ ಅತಿದೊಡ್ಡ ದೇಶವಾಗಿದೆ. ಪೂರ್ವ ಏಷ್ಯಾದಲ್ಲಿ ನೆಲೆಗೊಂಡಿರುವ ಇದು ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿದ್ದು ಕಲೆ, ವಿಜ್ಞಾನ ಮತ್ತು ತತ್ತ್ವಶಾಸ್ತ್ರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಇದರ ರಾಜಧಾನಿ ಬೀಜಿಂಗ್.
ಚೀನಾ ಕ್ಷಿಪ್ರ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿ ಹೊಂದಿದ್ದು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು ಗ್ರೇಟ್ ವಾಲ್, ಯಾಂಗ್ಟ್ಜಿ ನದಿ ಮತ್ತು ಶಾಂಘೈನಂತಹ ಆಧುನಿಕ ಮಹಾನಗರಗಳು ಸೇರಿದಂತೆ ವೈವಿಧ್ಯಮಯ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಚೀನಾ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (CPC) ನೇತೃತ್ವದ ಸಮಾಜವಾದಿ ಏಕ-ಪಕ್ಷದ ವ್ಯವಸ್ಥೆಯನ್ನು ಹೊಂದಿದೆ.
ಚೀನಾದ ಜಾಗತಿಕ ಪ್ರಭಾವವು ವ್ಯಾಪಾರ, ತಂತ್ರಜ್ಞಾನ ಮತ್ತು ಭೌಗೋಳಿಕ ರಾಜಕೀಯದಲ್ಲಿ ವಿಸ್ತರಿಸಿದೆ. ಇದು ಪರಿಸರ ಸಮಸ್ಯೆಗಳು, ಮಾನವ ಹಕ್ಕುಗಳ ಕಾಳಜಿ ಮತ್ತು ಪ್ರಾದೇಶಿಕ ವಿವಾದಗಳಂತಹ ಸವಾಲುಗಳನ್ನು ಎದುರಿಸುತ್ತಿದೆ. ಜಾಗತಿಕ ವ್ಯವಹಾರಗಳನ್ನು ರೂಪಿಸುವಲ್ಲಿ ದೇಶವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
India vs China: ಚೀನಾ ಜಿಡಿಪಿ ಸಖತ್ತಾಗಿದ್ದರೂ ಷೇರು ಮಾರುಕಟ್ಟೆ ಲತ್ತೆ ಹೊಡೆಯುತ್ತಿರೋದ್ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಡಾಟಾ
China vs India Stock Market: ಭಾರತದ ಷೇರುಪೇಟೆ ಓವರ್ವ್ಯಾಲ್ಯೂಡ್ ಆಗಿದೆ, ಚೀನಾ ಬಜಾರು ಅಂಡರ್ವ್ಯಾಲ್ಯೂಡ್ ಆಗಿದೆ. ಚೀನೀ ಷೇರುಗಳು ಆಕರ್ಷಕ ಬೆಲೆ ಹೊಂದಿವೆ ಎಂದು ಹೇಳಲಾಗುತ್ತದೆ. ಆದರೆ, 2007ರಿಂದ 2024ರ ಅವಧಿಯಲ್ಲಿ ಚೀನಾದ ಜಿಡಿಪಿ ಎರಡು ಪಟ್ಟು ಹೆಚ್ಚಳವಾಗಿದೆ. ಆದರೆ, ಅದರ ಷೇರುಮಾರುಕಟ್ಟೆ ಕೊಟ್ಟ ರಿಟರ್ನ್ಸ್ ಶೂನ್ಯ. ಇದಕ್ಕೆ ಹೋಲಿಸಿದರೆ ಭಾರತದ ನಿಫ್ಟಿ50 ಕಳೆದ 18 ವರ್ಷದಲ್ಲಿ ಶೇ. 500ರಷ್ಟು ಬೆಳೆದಿದೆ.
- Vijaya Sarathy SN
- Updated on: Apr 25, 2025
- 12:12 pm
ಅಮೆರಿಕದ ಬೋಯಿಂಗ್ ವಿಮಾನಕ್ಕೆ ಚೀನಾ ಕತ್ತರಿ ಹಾಕಿದ್ದು ಭಾರತಕ್ಕೆ ಅನುಕೂಲವಾಯ್ತಾ?
US China tariff war effect on India: ಅಮೆರಿಕ ಮತ್ತು ಚೀನಾ ನಡುವಿನ ಸುಂಕ ಯುದ್ಧ ವಿವಿಧ ಸ್ತರಗಳಲ್ಲಿ ಪರಿಣಾಮ ಬೀರತೊಡಗಿದೆ. ಅಮೆರಿಕದ ಬೋಯಿಂಗ್ ವಿಮಾನಗಳಿಗೆ ನೀಡಿದ್ದ ಆರ್ಡರ್ ಅನ್ನು ಚೀನೀ ಕಂಪನಿಗಳು ರದ್ದು ಮಾಡಿವೆ. ಇವೇ ವಿಮಾನಗಳಿಗೂ ಭಾರತೀಯ ಕಂಪನಿಗಳು ಆರ್ಡರ್ ನೀಡಿದ್ದು, ಅವುಗಳ ಡೆಲಿವರಿ ವಿಳಂಬವಾಗುವ ಸಾಧ್ಯತೆ ಇತ್ತು. ಈಗ ಚೀನಾ ಆರ್ಡರ್ ಕ್ಯಾನ್ಸಲ್ ಮಾಡಿರುವುದು ಭಾರತೀಯ ಕಂಪನಿಗಳಿಗೆ ಅನುಕೂಲವಾಗಬಹುದು.
- Vijaya Sarathy SN
- Updated on: Apr 16, 2025
- 3:14 pm
ಅಮೆರಿಕ ಜತೆ ಹದಗೆಟ್ಟ ಸಂಬಂಧ ಮತ್ತೆ ಭಾರತಕ್ಕೆ ಮಣೆ ಹಾಕಲು ಹೊರಟಿತೇ ಚೀನಾ?
ಚೀನಾವು ಕಳೆದ ನಾಲ್ಕು ತಿಂಗಳುಗಳಿಂದ 85 ಸಾವಿರ ಭಾರತೀಯರಿಗೆ ವೀಸಾಗಳನ್ನು ನೀಡಿದೆ. ಅಮೆರಿಕದ ಜತೆ ಈಗಾಗಲೇ ಚೀನಾ(China) ಸಂಬಂಧ ಹದಗೆಟ್ಟಿದೆ, ಮುಯ್ಯಿಗೆ ಮುಯ್ಯಿ ಎಂಬಂತೆ ಸುಂಕದ ವಿಚಾರದಲ್ಲಿ ಕಾದಾಡುತ್ತಿವೆ. ಇದೇ ಸಮಯದಲ್ಲಿ ಭಾರತದೊಂದಿಗೆ ಉತ್ತಮ ಸಂಬಂಧ ರೂಪಿಸಲು ಹೊರಟಂತಿದೆ. 4 ತಿಂಗಳುಗಳಲ್ಲಿ ಚೀನಾವು 85 ಸಾವಿರ ಭಾರತೀಯರಿಗೆ ವೀಸಾ ನೀಡಿದೆ.
- Nayana Rajeev
- Updated on: Apr 16, 2025
- 9:46 am
ಚೀನಾದಿಂದ ಐಫೋನ್ ಉತ್ಪಾದನೆ ಭಾರತಕ್ಕೆ ಈವರೆಗೆ ವರ್ಗವಾಗಿರುವುದು ಎಷ್ಟು? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
22 Billion USD worth of iPhones manufactured in India: ಭಾರತದಲ್ಲಿ ಆ್ಯಪಲ್ನ 22 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳು ಭಾರತದಲ್ಲಿ 2024-25ರಲ್ಲಿ ತಯಾರಾಗಿವೆ ಎನ್ನಲಾಗಿದೆ. ಐದಾರು ವರ್ಷದ ಹಿಂದಿನವರೆಗೂ ಬಹುತೇಕ ಎಲ್ಲಾ ಆ್ಯಪಲ್ ಉತ್ಪನ್ನಗಳು ಚೀನಾದಲ್ಲಿ ತಯಾರಾಗುತ್ತಿದ್ದುವು. ಕೋವಿಡ್ ಬಳಿಕ ಆ್ಯಪಲ್ ಸ್ಥಿರವಾಗಿ ತನ್ನ ಉತ್ಪಾದನೆಯನ್ನು ಭಾರತಕ್ಕೆ ಹಂತ ಹಂತವಾಗಿ ವರ್ಗಾಯಿಸುತ್ತಿದೆ.
- Vijaya Sarathy SN
- Updated on: Apr 13, 2025
- 4:46 pm
ಟ್ಯಾರಿಫ್ ಎಫೆಕ್ಟ್; ಭಾರತದಲ್ಲಿ ಮೊಬೈಲ್ ಬೆಲೆ ಮತ್ತಷ್ಟು ಕಡಿಮೆಗೊಳ್ಳುತ್ತಾ? ಇದು ಹೇಗೆ ಸಾಧ್ಯ?
US China tariff war may benefit India: ಭಾರತದಲ್ಲಿ ಮುಂದಿನ ದಿನಗಳಲ್ಲಿ ಮೊಬೈಲ್, ಟಿವಿ, ಲ್ಯಾಪ್ಟಾಪ್ ಇತ್ಯಾದಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆ ಇಳಿಕೆಯಾಗಬಹುದು. ಅಮೆರಿಕದ ಟ್ಯಾರಿಫ್ ಪರಿಣಾಮವಾಗಿ ಚೀನಾದ ಎಲೆಕ್ಟ್ರಾನಿಕ್ಸ್ ಕಾಂಪೊನೆಂಟ್ ತಯಾರಕರು ಕಂಗಾಲಾಗಿದ್ದು, ಹೆಚ್ಚಾಗಿರುವ ದಾಸ್ತಾನನ್ನು ಕರಗಿಸಲು ಡಿಸ್ಕೌಂಟ್ ಕೊಡುತ್ತಿದ್ದಾರೆ. ಇದರಿಂದಾಗಿ ಭಾರತದ ಎಲೆಕ್ಟ್ರಾನಿಕ್ಸ್ ಕಂಪನಿಗಳ ಉತ್ಪಾದನಾ ವೆಚ್ಚ ಕಡಿಮೆ ಆಗಬಹುದು ಎನ್ನಲಾಗಿದೆ.
- Vijaya Sarathy SN
- Updated on: Apr 10, 2025
- 12:32 pm
ಅಮೆರಿಕದ ಸರಕುಗಳಿಗೆ ಚೀನಾದಿಂದಲೂ ಶೇ. 34 ಪ್ರತಿಸುಂಕ ಹೇರಿಕೆ; ಎಲ್ಲಿಯವರೆಗೆ ಹೋಗುತ್ತೆ ಈ ಟ್ರೇಡ್ ವಾರ್?
China Imposes 34% Tariff on US Goods: ಚೀನಾ ಸರಕುಗಳಿಗೆ ಅಮೆರಿಕ ಹೆಚ್ಚುವರಿ ಶೇ. 34 ಟ್ಯಾರಿಫ್ ಹೇರಿಕೆ ಮಾಡಿತ್ತು. ಈಗ ಚೀನಾ ಪ್ರತಿಕ್ರಮ ಕೈಗೊಂಡಿದ್ದು ಶೇ. 34ರಷ್ಟು ಹೆಚ್ಚುವರಿ ಸುಂಕ ಹಾಕಿದೆ. ಇದರೊಂದಿಗೆ ಅಮೆರಿಕದ ಸರಕುಗಳಿಗೆ ಚೀನಾ ವಿಧಿಸುತ್ತಿರುವ ಒಟ್ಟು ಟ್ಯಾರಿಫ್ ಅಮೆರಿಕದ್ದನ್ನೂ ಮೀರಿಸಲಿದೆ. ಸುಂಕ ಮಾತ್ರವಲ್ಲ, ಅಪರೂಪದ ಲೋಹಗಳ ರಫ್ತಿಗೂ ಚೀನಾ ನಿರ್ಬಂಧಗಳನ್ನು ಹಾಕುತ್ತಿದ್ದು, ಇದು ಅಮೆರಿಕಕ್ಕೆ ಹಿನ್ನಡೆ ತರುವ ಸಾಧ್ಯತೆ ಇದೆ.
- Vijaya Sarathy SN
- Updated on: Apr 4, 2025
- 5:50 pm
India-China-US: ಎರಡು ಶತ್ರು ದೇಶಗಳನ್ನು ಒಂದು ಮಾಡುತ್ತಾ ಟ್ರಂಪ್ ಟ್ಯಾರಿಫ್?
India China relationship: ಡೊನಾಲ್ಡ್ ಟ್ರಂಪ್ ಅವರು ವಿಧಿಸಿರುವ ಪ್ರತಿಸುಂಕ ಕ್ರಮ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಅತಿಹೆಚ್ಚು ಸುಂಕ ವಿಧಿಸಲಾಗಿರುವ ದೇಶಗಳ ಸಾಲಿನಲ್ಲಿ ಚೀನಾ ಇದೆ. ಟ್ರಂಪ್ ಅಧಿಕಾರಕ್ಕೆ ಬಂದಾಗಿನಿಂದ ಚೀನಾ ದೇಶ ಪರ್ಯಾಯ ಮಾರುಕಟ್ಟೆಗಳನ್ನು ಅವಲೋಕಿಸುತ್ತಿದೆ. ಅದಕ್ಕೆ ಭಾರತ ಸೂಕ್ತ ಪರ್ಯಾಯ ಮಾರುಕಟ್ಟೆ ಎನಿಸಿದೆ.
- Vijaya Sarathy SN
- Updated on: Apr 3, 2025
- 5:22 pm
ಚೀನಾದಲ್ಲಿ ಒಂದಿಡೀ ನಗರದಷ್ಟು ಬೃಹತ್ ಮೆಗಾಫ್ಯಾಕ್ಟರಿ; ಘೋಸ್ಟ್ ಸಿಟಿಯಾಗುತ್ತಾ ಈ ಕಾರ್ಖಾನೆ?
BYD megafactory in China's Zheng Zhou: ಚೀನಾದ ಹಾಗೂ ವಿಶ್ವದ ನಂಬರ್ ಒನ್ ಕಾರ್ ಕಂಪನಿಯಾದ ಬಿವೈಡಿ ಝೆಂಗ್ಝೌ ನಗರದಲ್ಲಿ ಒಂದು ದೊಡ್ಡ ಮೆಗಾ ಫ್ಯಾಕ್ಟರಿ ನಿರ್ಮಿಸುತ್ತಿದೆ. ಇದು ಸುಮಾರು 80 ಚದರ ಕಿಮೀಯಷ್ಟು ವಿಶಾಲವಾಗಿದೆ. ಭಾರತದ ನೋಯ್ಡಾ ನಗರದಷ್ಟು ದೊಡ್ಡದು ಈ ಫ್ಯಾಕ್ಟರಿ. ಇಲ್ಲಿ ಕೆಲಸ ಮಾಡುವ ನೌಕರರಿಗೆ ವಸತಿ ಸಮುಚ್ಚಯಗಳು, ಮನರಂಜನೆ ಅಡ್ಡೆ, ಶಾಪಿಂಗ್ ಸ್ಥಳಗಳು, ಕ್ರೀಡಾಂಗಣಗಳು ಇತ್ಯಾದಿ ಸೌಲಭ್ಯಗಳಿವೆ.
- Vijaya Sarathy SN
- Updated on: Mar 23, 2025
- 5:47 pm
ಭಾರತದ ಬೆಳವಣಿಗೆಯ ದಾರಿಗೆ ಚೀನಾ ಕಲ್ಲು, ಮುಳ್ಳು ತುಂಬುತ್ತಿದೆಯಾ? ನೆರೆ ದೇಶದ ತಂತ್ರಗಳು ಹೇಗಿವೆ ಗೊತ್ತಾ?
China and India growth story: ಜಾಗತಿಕ ಸರಬರಾಜು ಸರಪಳಿಯ ಪ್ರಮುಖ ಭಾಗಗಳಾಗಿರುವ ಚೀನಾ ಕಂಪನಿಗಳು ಯಾವ ದೇಶಗಳಲ್ಲಿ ಹೂಡಿಕೆ ಮಾಡಬೇಕು ಎನ್ನುವುದನ್ನು ಅಲ್ಲಿನ ಸರ್ಕಾರವೇ ನಿರ್ಧರಿಸುತ್ತಿದೆ. ಭಾರತಕ್ಕೆ ಕೆಲ ಆಯ್ದ ಬಿಡಿಭಾಗಗಳ ಸರಬರಾಜು ಆಗದಂತೆ ನಿಯಂತ್ರಿಸುವುದು, ಚೀನೀ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡದಂತೆ ನಿರ್ಬಂಧಿಸುವುದು ಇವೇ ಮುಂತಾದ ಕ್ರಮಗಳನ್ನು ಚೀನಾ ತೆಗೆದುಕೊಳ್ಳುತ್ತಿದೆ.
- Vijaya Sarathy SN
- Updated on: Mar 23, 2025
- 4:41 pm
ಅಸ್ತಿತ್ವದಲ್ಲೇ ಇಲ್ಲದ 22 ನೌಕರರ ಸೃಷ್ಟಿ; 8 ವರ್ಷ 22 ಮಂದಿಯ ಸಂಬಳ ಗುಡ್ಡೆಹಾಕಿದ ಚೀನೀ ವ್ಯಕ್ತಿ
Chinese payroll scam: ನಕಲಿ ವ್ಯಕ್ತಿಗಳನ್ನು ಪೇರೋಲ್ಗೆ ಸೇರಿಸಿ ತನ್ನ ಬ್ಯಾಂಕ್ ಖಾತೆಗಳನ್ನು ಆ ನಕಲಿ ವ್ಯಕ್ತಿಗಳಿಗೆ ಲಗತ್ತಿಸಿ 8 ವರ್ಷ ಬಿಟ್ಟಿ ಸಂಬಳ ಪಡೆದಿದ್ದಾನೆ. ಇದು ಚೀನಾದ ಶಾಂಘೈನಲ್ಲಿ ಬೆಳಕಿಗೆ ಬಂದ ಘಟನೆ. ಪೊಲೀಸರು ಯಾಂಗ್ ಎನ್ನುವ ಎಚ್ ಆರ್ ಮ್ಯಾನೇಜರ್ ಅನ್ನು ಬಂಧಿಸಿದ್ದಾರೆ. ಕೋರ್ಟ್ ಈತನಿಗೆ 10 ವರ್ಷ ಜೈಲು ಶಿಕ್ಷೆ ನೀಡಿದೆ. ಈತ ಈ ಕರ್ಮಕಾಂಡ ಹೇಗೆ ಮಾಡಿದ ಎನ್ನುವ ವಿವರ ಇಲ್ಲಿದೆ...
- Vijaya Sarathy SN
- Updated on: Mar 12, 2025
- 5:07 pm