AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜವಾಬ್ದಾರಿಯುತ ದೇಶಗಳ ಸೂಚ್ಯಂಕ; ಅಮೆರಿಕ, ಚೀನಾಗಿಂತ ಭಾರತ ಮೇಲೆ; ಪಾಕಿಸ್ತಾನ ಮತ್ತಿತರ ದೇಶಗಳು ಹೇಗೆ?

RNI, Responsible Nations Index, Singapore tops the list: ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳು, ವಿಶ್ವದ ಶಕ್ತಿಶಾಲಿ ದೇಶಗಳು, ಬಲಿಷ್ಠ ಮಿಲಿಟರಿ ದೇಶಗಳು ಇತ್ಯಾದಿ ಪಟ್ಟಿಗಳನ್ನು ನೋಡಿದ್ದೇವೆ. ಇದೀಗ ಭಾರತವೇ ವಿನೂತನ ದೃಷ್ಟಿಕೋನದಲ್ಲಿ ಅಂತಾರಾಷ್ಟ್ರೀಯ ಸೂಚ್ಯಂಕವೊಂದನ್ನು ರೂಪಿಸಿದೆ. ಜವಾಬ್ದಾರಿಯುತ ದೇಶಗಳ ಸೂಚ್ಯಂಕ ಬಿಡುಗಡೆ ಮಾಡಿದ್ದು ಇದರಲ್ಲಿ 154 ದೇಶಗಳ ಪಟ್ಟಿ ಮಾಡಲಾಗಿದೆ.

ಜವಾಬ್ದಾರಿಯುತ ದೇಶಗಳ ಸೂಚ್ಯಂಕ; ಅಮೆರಿಕ, ಚೀನಾಗಿಂತ ಭಾರತ ಮೇಲೆ; ಪಾಕಿಸ್ತಾನ ಮತ್ತಿತರ ದೇಶಗಳು ಹೇಗೆ?
ವಿಶ್ವ ಭೂಪಟ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 21, 2026 | 3:45 PM

Share

ನವದೆಹಲಿ, ಜನವರಿ 21: ವಿಶ್ವ ಬಲಶಾಲಿ ದೇಶಗಳ ಪಟ್ಟಿಗಳನ್ನು ಮಾಡಿದರೆ ಅದರಲ್ಲಿ ಅಮೆರಿಕ, ಚೀನಾ ಮೊದಲಾದ ದೇಶಗಳು ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ, ಜವಾಬ್ದಾರಿಯುತ ರಾಷ್ಟ್ರಗಳ ಪಟ್ಟಿಯಲ್ಲಿ (RNI- Responsible Nations Index) ಈ ಎರಡು ದೇಶಗಳು ಬಹಳ ಕೆಳಗಿನ ಕ್ರಮಾಂಕದಲ್ಲಿವೆ. ವರ್ಲ್ಡ್ ಇಂಟೆಲೆಕ್ಚುಲ್ ಫೌಂಡೇಶನ್ ವತಿಯಿಂದ ರೂಪಿಸಲಾಗಿರುವ ಆರ್​ಎನ್​ಐ ಇಂಡೆಕ್ಸ್ ಅನ್ನು ಮೊನ್ನೆ ಲೋಕಾರ್ಪಣೆಗೊಳಿಸಲಾಯಿತು. ಮೂರು ವರ್ಷಗಳ ಸಂಶೋಧನೆ ಮತ್ತು ಅಧ್ಯಯನದ ಬಳಿಕ ರೆಸ್ಪಾನ್ಸಿಬಲ್ ನೇಶನ್ಸ್ ಇಂಡೆಕ್ಸ್ ಅನ್ನು ರೂಪಿಸಲಾಗಿದೆ.

ಜವಾಬ್ದಾರಿಯುತ ರಾಷ್ಟ್ರಗಳ ಸೂಚಿಯ ಮೊದಲ ಆವೃತ್ತಿಯಲ್ಲಿ ಸಿಂಗಾಪುರ ಅಗ್ರಸ್ಥಾನ ಪಡೆದಿದೆ. ಟಾಪ್-20ಯಲ್ಲಿ ಹೆಚ್ಚಿನವು ಐರೋಪ್ಯ ರಾಷ್ಟ್ರಗಳೇ ಇವೆ. ಭಾರತ 16ನೇ ಸ್ಥಾನ ಪಡೆದಿದೆ. ಅಮೆರಿಕ, ಚೀನಾ ದೇಶಗಳು ಬಹಳ ಕೆಳಗೆ 66 ಮತ್ತು 68ನೇ ಸ್ಥಾನ ಪಡೆದಿವೆ. ಬಾಂಗ್ಲಾದೇಶದಂತಹ ರಾಷ್ಟ್ರಗಳು ಅಮೆರಿಕಕ್ಕಿಂತ ಮೇಲಿರುವುದು ಗಮನಾರ್ಹ. ಪಾಕಿಸ್ತಾನ 90ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಜಗತ್ತು ಮಂದಗೊಂಡರೂ ಭಾರತದ ಚುರುಕು ಬೆಳವಣಿಗೆ: ಡಾವೊಸ್ ಸಮಿಟ್​ನಲ್ಲಿ ಪ್ರಹ್ಲಾದ ಜೋಷಿ

ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ 2026 – ಟಾಪ್20

  1. ಸಿಂಗಾಪುರ್
  2. ಸ್ವಿಟ್ಜರ್​ಲ್ಯಾಂಡ್
  3. ಡೆನ್ಮಾರ್ಕ್
  4. ಸೈಪ್ರಸ್
  5. ಸ್ವೀಡನ್
  6. ಜೆಕಿಯಾ
  7. ಬೆಲ್ಜಿಯಂ
  8. ಆಸ್ಟ್ರಿಯಾ
  9. ಐರ್ಲ್ಯಾಂಡ್
  10. ಜಾರ್ಜಿಯಾ
  11. ಕ್ರೊವೇಶಿಯಾ
  12. ಜರ್ಮನಿ
  13. ಪೋರ್ಚುಗಲ್
  14. ಬಲ್ಗೇರಿಯಾ
  15. ನಾರ್ವೇ
  16. ಭಾರತ
  17. ಫ್ರಾನ್ಸ್
  18. ಆಲ್ಬೇನಿಯಾ
  19. ಪೋಲ್ಯಾಂಡ್
  20. ನೆದರ್​ಲ್ಯಾಂಡ್ಸ್

ಒಟ್ಟು 154 ದೇಶಗಳನ್ನು ಈ ಸೂಚ್ಯಂಕದಲ್ಲಿ ಒಳಗೊಳ್ಳಲಾಗಿದೆ. ಅನೇಕ ಆಫ್ರಿಕನ್ ಹಾಗೂ ಪಶ್ಚಿಮ ಏಷ್ಯನ್ ದೇಶಗಳು ಕೆಳಗಿನ ಕ್ರಮಾಂಕದಲ್ಲಿವೆ. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಸಿರಿಯಾ ಮತ್ತು ಸೌತ್ ಸುಡಾನ್ ದೇಶಗಳು ಕೊನೆಯಿಂದ ಮೂರು ಸ್ಥಾನಗಳನ್ನು ಪಡೆದಿವೆ.

ಆರ್​ಎನ್​ಐ ಪಟ್ಟಿಯಲ್ಲಿ ತಳಮಟ್ಟದಲ್ಲಿರುವ 10 ದೇಶಗಳು

  1. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್
  2. ಸಿರಿಯಾ
  3. ಸೌತ್ ಸುಡಾನ್
  4. ಯೆಮೆನ್
  5. ಸೊಮಾಲಿಯಾ
  6. ಸುಡಾನ್
  7. ಚಾಡ್
  8. ಪಪುವಾ ನ್ಯೂ ಗಿನಿಯಾ
  9. ನಾರ್ತ್ ಕೊರಿಯಾ
  10. ಅಫ್ಘಾನಿಸ್ತಾನ

ಆರ್​ಎನ್​ಐ: ಇತರ ಪ್ರಮುಖ ದೇಶಗಳ ರ್ಯಾಂಕಿಂಗ್

  • ಯುಕೆ: 25
  • ಇಟಲಿ: 34
  • ಜಪಾನ್: 38
  • ಬಾಂಗ್ಲಾದೇಶ: 42
  • ಕೆನಡಾ: 45
  • ನ್ಯೂಜಿಲ್ಯಾಂಡ್: 48
  • ಲೆಬನಾನ್: 49
  • ಆಸ್ಟ್ರೇಲಿಯಾ: 62
  • ಅಮೆರಿಕ: 66
  • ಚೀನಾ: 68
  • ಯುಎಇ: 75
  • ಶ್ರೀಲಂಕಾ: 77
  • ಮಾಲ್ಡೀವ್ಸ್: 79
  • ಬ್ರೆಜಿಲ್: 81
  • ಸೌತ್ ಆಫ್ರಿಕಾ: 88
  • ಪಾಕಿಸ್ತಾನ್: 90
  • ಟರ್ಕಿ: 94
  • ರಷ್ಯಾ: 96
  • ಭೂತಾನ್: 98
  • ಇರಾನ್: 123
  • ಸೌದಿ ಅರೇಬಿಯಾ: 128
  • ಉಕ್ರೇನ್: 131

ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆ ಶೇ. 7.3; ಐಎಂಎಫ್ ಮತ್ತು ಮೂಡೀಸ್ ಏಜೆನ್ಸಿ ಅಂದಾಜು

ಜವಾಬ್ದಾರಿಯುತ ದೇಶಗಳ ಸೂಚ್ಯಂಕಕ್ಕೆ ಏನು ಮಾನದಂಡಗಳು?

ಆರ್​ಎನ್​ಐ ಅನ್ನು ಮೂರು ಪ್ರಮುಖ ತಳಹದಿಯಲ್ಲಿ ರೂಪಿಸಲಾಗಿದೆ. ಆಂತರಿಕ ಜವಾಬ್ದಾರಿ (Internal Responsibility), ಪರಿಸರ ಜವಾಬ್ದಾರಿ (Environmental Responsibility) ಮತ್ತು ಬಾಹ್ಯ ಜವಾಬ್ದಾರಿ (External Responsibility) ಇವು ಈ ಇಂಡೆಕ್ಸ್​ನ ಮೂರು ಮಾನದಂಡಗಳಾಗಿವೆ. ದೇಶವಾಸಿಗಳ ಕಲ್ಯಾಣ, ಪರಿಸರ ರಕ್ಷಣೆಯೊಂದಿಗೆ ಸುಸ್ಥಿರ ಅಭಿವೃದ್ಧಿ, ಅಂತಾರಾಷ್ಟ್ರೀಯವಾಗಿ ದೇಶದ ವರ್ತನೆ ಇತ್ಯಾದಿ ಅಂಶಗಳನ್ನು ಪರಿಗಣಿಸಿ ರ್ಯಾಂಕಿಂಗ್ ಕೊಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ