AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pakistan

Pakistan

ಪಾಕಿಸ್ತಾನ, ಅಧಿಕೃತವಾಗಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ ಶ್ರೀಮಂತ ಇತಿಹಾಸ, ವೈವಿಧ್ಯಮಯ ಸಂಸ್ಕೃತಿ ಹೊಂದಿದೆ. ಪಾಕಿಸ್ತಾನವು ಭಾರತ, ಅಫ್ಘಾನಿಸ್ತಾನ, ಇರಾನ್ ಮತ್ತು ಚೀನಾದೊಂದಿಗೆ ಗಡಿಗಳನ್ನು ಹಂಚಿಕೊಂಡಿದೆ. ಇಸ್ಲಾಮಾಬಾದ್ ರಾಜಧಾನಿ. ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದ್ ಪ್ರಮುಖ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಾಗಿವೆ. 1947 ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯವನ್ನು ಗಳಿಸಿದಾಗ ಭಾರತದಿಂದ ವಿಭಜನೆಗೊಂಡು ಪಾಕಿಸ್ತಾನ ದೇಶವಾಯಿತು. ರಾಜಕೀಯ ಅಸ್ಥಿರತೆ, ಸಾಮಾಜಿಕ-ಆರ್ಥಿಕ ಸಮಸ್ಯೆಗಳು ಮತ್ತು ಭಾರತದೊಂದಿಗಿನ ಸಂಘರ್ಷಗಳು ಸೇರಿದಂತೆ ದೇಶವು ಸವಾಲುಗಳನ್ನು ಎದುರಿಸಿದೆ. ಪಾಕಿಸ್ತಾನವು ಪರ್ವತಗಳು, ಮರುಭೂಮಿಗಳು ಮತ್ತು ಅರೇಬಿಯನ್ ಸಮುದ್ರದ ಉದ್ದಕ್ಕೂ ಕರಾವಳಿ ಸೇರಿದಂತೆ ವೈವಿಧ್ಯಮಯ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಕೈಗಾರಿಕೆಗಳು ಮತ್ತು ಸೇವೆಗಳ ಜೊತೆಗೆ ಆರ್ಥಿಕತೆಯಲ್ಲಿ ಕೃಷಿ ಕ್ಷೇತ್ರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸವಾಲುಗಳ ಹೊರತಾಗಿಯೂ, ಪಾಕಿಸ್ತಾನವು ಭದ್ರತೆ, ಆರ್ಥಿಕತೆ ಮತ್ತು ರಾಜತಾಂತ್ರಿಕತೆಯ ಜಾಗತಿಕ ಚರ್ಚೆಗಳಿಗೆ ಕೊಡುಗೆ ನೀಡುತ್ತದೆ. ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ವೈವಿಧ್ಯಮಯ ಸಂಪ್ರದಾಯಗಳು ವಿಶ್ವ ವೇದಿಕೆಯಲ್ಲಿ ಅದರ ವಿಶಿಷ್ಟ ಗುರುತಿಗೆ ಕಾರಣವಾಗಿದೆ.

ಇನ್ನೂ ಹೆಚ್ಚು ಓದಿ

ಅಮೆರಿಕದಿಂದ ಪಾಕಿಸ್ತಾನಕ್ಕೆ ಮಿಲಿಟರಿ ಪ್ಯಾಕೇಜ್; ಪಾಕ್ ಅಂದ್ರೆ ಅಮೆರಿಕ, ಚೀನಾಗೆ ಯಾಕೆ ಪ್ರೀತಿ?

Why USA and China support the alleged terror nation Pakistan: ಪಾಕಿಸ್ತಾನದ ಬಗ್ಗೆ ಅಮೆರಿಕ ಮತ್ತು ಚೀನಾ ದೇಶಗಳು ಮೃದು ಧೋರಣೆ ಹೊಂದಿವೆ. ಅಮೆರಿಕದ ನಿಲುವು ಅನೇಕರಿಗೆ ಅಚ್ಚರಿ ಎನಿಸಿದರೂ, ಅದಕ್ಕೆ ಹಲವು ಸಹಜ ಕಾರಣಗಳಿವೆ. ಅಮೆರಿಕ ಮತ್ತು ಚೀನಾ ದೇಶಗಳು ಪಾಕಿಸ್ತಾನವನ್ನು ಆಲಂಗಿಸಲು ಸದಾ ಮುಂದಾಗಲು ಪ್ರಮುಖ ಕಾರಣಗಳಿವೆ.

ಆಸ್ಟ್ರೇಲಿಯಾ ಬೀಚ್ ಶೂಟರ್​​​ಗೆ ಹೈದರಾಬಾದ್​ ನಂಟು; 6 ಬಾರಿ ಭಾರತಕ್ಕೆ ಬಂದಿದ್ದ ಆರೋಪಿ

ಆಸ್ಟ್ರೇಲಿಯಾದ ಬೋಂಡಿ ಬೀಚ್ ಗುಂಡಿನ ದಾಳಿ ಪ್ರಕರಣದ ಆರೋಪಿ ಸಾಜಿದ್ ಅಕ್ರಮ್ ಪಾಕಿಸ್ತಾನಿ ಪ್ರಜೆ ಎಂಬ ಸಂಗತಿ ಬಯಲಾಗಿದೆ. ಆದರೆ, ಅದಕ್ಕೂ ಮುಖ್ಯವಾಗಿ ಆತನಿಗೂ ಭಾರತಕ್ಕೂ ನಂಟಿತ್ತು ಎಂಬ ಅಚ್ಚರಿಯ ಸಂಗತಿಯನ್ನೂ ಪತ್ತೆಹಚ್ಚಲಾಗಿದೆ. ಆರೋಪಿ ಸಾಜಿದ್ ಅಕ್ರಮ್ ಭಾರತಕ್ಕೆ 6 ಬಾರಿ ಭೇಟಿ ನೀಡಿದ್ದ. ಆತನ ಕುಟುಂಬದವರು ಹಲವು ವರ್ಷಗಳ ಹಿಂದೆಯೇ ಆತನೊಂದಿಗೆ ಸಂಬಂಧ ಕಡಿತಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಧುರಂಧರ್: ಇವರೆಲ್ಲ ಪಾಕಿಸ್ತಾನಕ್ಕೆ ಸ್ಪೈ ಆಗಿ ಹೋದರೆ ಮಾಡುವ ಎಡವಟ್ಟು ಒಂದೆರಡಲ್ಲ

ಸಿನಿಮಾಗಳು ಸೂಪರ್ ಹಿಟ್ ಆದಾಗ ಅದಕ್ಕೆ ತಕ್ಕಂತೆ ಜನರು ರೀಲ್ಸ್ ಮಾಡುವುದು ಸಹಜ. ‘ಧುರಂಧರ್’ ವಿಚಾರದಲ್ಲೂ ಹಾಗೆಯೇ ಆಗುತ್ತಿದೆ. ಈ ಸಿನಿಮಾದ ಕಥೆಗೆ ಅನುಗುಣವಾಗಿ ಸೋಶಿಯಲ್ ಮೀಡಿಯಾದಲ್ಲಿ ನಾನಾ ಬಗೆಯ ರೀಲ್ಸ್ ಮಾಡಲಾಗುತ್ತಿದೆ. ‘First day as a spy in Pakistan’ ಎಂಬುದು ಇನ್​ಸ್ಟಾಗ್ರಾಮ್​ ತುಂಬೆಲ್ಲ ಹಾವಳಿ ಎಬ್ಬಿಸಿದೆ.

ಪಹಲ್ಗಾಮ್ ದಾಳಿಗೆ ಪಾಕ್ ಉಗ್ರನೇ ಮಾಸ್ಟರ್​​ಮೈಂಡ್; ಲಷ್ಕರ್ ಕಮಾಂಡರ್ ಸಂಚು ಬಯಲಿಗೆಳೆದ ಎನ್​ಐಎ

ಈ ವರ್ಷ ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿ ಭಾರತದ ಪಾಲಿಗೆ ಕರಾಳ ನೆನಪಾಗಿಯೇ ಉಳಿದಿದೆ. ಇಡೀ ಜಗತ್ತನ್ನು ಕಂಗೆಡಿಸಿದ್ದ ಈ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಭಾರತ ಸರ್ಕಾರ ನೇರ ಆರೋಪ ಮಾಡಿದ್ದರೂ ಪಾಕ್ ಅದನ್ನು ನಿರಾಕರಿಸಿತ್ತು. ಇದೀಗ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್​ಇಟಿ) ಶಾಖೆಯ ನೇತೃತ್ವ ವಹಿಸಿದ್ದ ಪಾಕಿಸ್ತಾನಿ ಭಯೋತ್ಪಾದಕನೇ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಎಂದು ಎನ್​ಐಎ ತನ್ನ ವರದಿಯಲ್ಲಿ ಘೋಷಿಸಿದೆ.

40 ನಿಮಿಷ ಕಾದರೂ ಬಾರದ ಪುಟಿನ್; ತಾಳ್ಮೆಗೆಟ್ಟು ರಷ್ಯಾ ಅಧ್ಯಕ್ಷರ ರೂಂಗೇ ನುಗ್ಗಿದ ಪಾಕ್ ಪ್ರಧಾನಿ

ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಲು 40 ನಿಮಿಷ ಕಾದರೂ ಪುಟಿನ್ ಬರಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ಅವರು ಆಹ್ವಾನ ಇಲ್ಲದಿದ್ದರೂ ಪುಟಿನ್ ಅವರ ಮೀಟಿಂಗ್ ನಡೆಯುತ್ತಿದ್ದ ಕೊಠಡಿಯೊಳಗೆ ನುಗ್ಗಿದ್ದಾರೆ. ಬಳಿಕ 10 ನಿಮಿಷ ಪುಟಿನ್ ಜೊತೆ ಮಾತುಕತೆ ನಡೆಸಿ ಅಲ್ಲಿಂದ ವಾಪಾಸ್ ಬಂದಿದ್ದಾರೆ. ಹಾಗಂತ, ಪುಟಿನ್ ಪಾಕ್ ಪ್ರಧಾನಿಯನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಇದೇ ಮೊದಲೇನಲ್ಲ.

ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನದ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್​!

ಪಾಕಿಸ್ತಾನ ಭಾರತದಿಂದ ವಿಭಜನೆಯಾದ ಬಳಿಕ ಮೊತ್ತ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಮಹಾಭಾರತದ ಭಾಗವನ್ನು ಒಳಗೊಂಡ ಸಂಸ್ಕೃತ ಶ್ಲೋಕಗಳನ್ನು ಪಠ್ಯದಲ್ಲಿ ಪರಿಚಯಿಸಲಾಗಿದೆ. ಮಹಾಭಾರತ ಮತ್ತು ಭಗವದ್ಗೀತೆಯ ಭಾಗಗಳನ್ನು ಒಳಗೊಂಡಂತೆ ಸಂಸ್ಕೃತ ಪದ್ಯಗಳನ್ನು ಲಾಹೋರ್ ಮ್ಯಾನೇಜ್‌ಮೆಂಟ್ ಸೈನ್ಸಸ್ ವಿಶ್ವವಿದ್ಯಾಲಯದ (LUMS) ತರಗತಿಯೊಳಗೆ ಕಲಿಸಲಾಗುತ್ತಿದೆ. ಏಕೆಂದರೆ ಈ ಸಂಸ್ಥೆಯು ಐತಿಹಾಸಿಕ ಭಾಷೆಯನ್ನು ಔಪಚಾರಿಕವಾಗಿ ಕಲಿಸಲು ಪ್ರಾರಂಭಿಸಿದೆ.

ಪಾಕಿಸ್ತಾನದಲ್ಲಿ ನ್ಯಾಯಾಧೀಶರ ರೂಂನಿಂದ ಸೇಬು ಹಣ್ಣು, ಹ್ಯಾಂಡ್​​ವಾಶ್ ಕಳ್ಳತನ; ಕೇಸ್ ದಾಖಲು

ಪಾಕಿಸ್ತಾನದ ಲಾಹೋರ್‌ನಲ್ಲಿ ಸೆಷನ್ಸ್ ನ್ಯಾಯಾಧೀಶರ ಕೊಠಡಿಯಿಂದ ಎರಡು ಸೇಬು ಮತ್ತು ಹ್ಯಾಂಡ್ ವಾಶ್ ಕಳ್ಳತನ ಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಡಿಸೆಂಬರ್ 5ರಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ನೂರ್ ಮುಹಮ್ಮದ್ ಬಸ್ಮಲ್ ಅವರ ಕೊಠಡಿಯಲ್ಲಿ ಈ ಘಟನೆ ಸಂಭವಿಸಿದೆ. ಈ ಘಟನೆ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಪಾಕಿಸ್ತಾನದಲ್ಲಿ ‘ಮಹಾವತಾರ ನರಸಿಂಹ’ ಸಿನಿಮಾ ಪ್ರದರ್ಶನ: ವಿಡಿಯೋ ವೈರಲ್

ಪಾಕಿಸ್ತಾನದ ಕರಾಚಿಯ ದೇವಸ್ಥಾನದಲ್ಲಿ ‘ಮಹಾವತಾರ ನರಸಿಂಹ’ ಸಿನಿಮಾವನ್ನು ಪ್ರದರ್ಶನ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಭಕ್ತರು ಕಮೆಂಟ್ ಮಾಡುತ್ತಿದ್ದಾರೆ. ಸಾವಿರಾರು ಭಕ್ತರು ದೇವಸ್ಥಾನದ ಆವರಣದಲ್ಲಿ ಕುಳಿತು ಈ ಸಿನಿಮಾ ನೋಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಇಮ್ರಾನ್ ಖಾನ್ ಜೀವಂತವಾಗಿದ್ದಾರೆ; ಪಾಕ್ ಜೈಲಿನಲ್ಲಿ ಮಾಜಿ ಪ್ರಧಾನಿಯನ್ನು ಭೇಟಿಯಾದ ತಂಗಿ

ನಿರ್ಬಂಧಗಳ ಹೊರತಾಗಿಯೂ ಇಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಹೋದರಿ ಉಜ್ಮಾ ಖಾನ್ ಅವರಿಗೆ ಇಂದು ಸಂಜೆ ಅಡಿಯಾಲ ಜೈಲಿನಲ್ಲಿ ಮಾಜಿ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು. ಏಕೆಂದರೆ ಅವರ ಪಕ್ಷದ ಸದಸ್ಯರು ರಾವಲ್ಪಿಂಡಿಯಾದ್ಯಂತ ಸಾಮೂಹಿಕ ಪ್ರತಿಭಟನೆಗಳನ್ನು ಆಯೋಜಿಸುವುದಾಗಿ ಬೆದರಿಕೆ ಹಾಕಿದ್ದರು. ಕೊನೆಗೂ ಉಜ್ಮಾ ಖಾನ್ ಅವರನ್ನು ತನ್ನ ಸಹೋದರನನ್ನು ಭೇಟಿಯಾಗಲು ಜೈಲಿನೊಳಗೆ ಕರೆದೊಯ್ಯಲಾಯಿತು. ಈ ಭೇಟಿಯ ಬಳಿಕ ಅವರು ಮಾತನಾಡಿದ್ದು, ಇಮ್ರಾನ್ ಖಾನ್ ತೀವ್ರ ಕೋಪಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಉಗಾಂಡ ದಾಖಲೆ ಸೇಫ್… ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಪಾಕಿಸ್ತಾನ್

Pakistan Records: ಶ್ರೀಲಂಕಾ ಹಾಗೂ ಝಿಂಬಾಬ್ವೆ ವಿರುದ್ಧ ತ್ರಿಕೋನ ಸರಣಿಯ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಜಯಗಳಿಸಿದೆ. ರಾವಲ್ಪಿಂಡಿಯಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ಪಾಕಿಸ್ತಾನ್ ತಂಡ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಗೆಲುವಿನೊಂದಿಗೆ ಪಾಕಿಸ್ತಾನ್ ತಂಡ ಟಿ20 ಕ್ರಿಕೆಟ್​​ನಲ್ಲಿ ಹೊಸ ಮೈಲುಗಲ್ಲನ್ನು ಮುಟ್ಟಿದೆ.

ಇಮ್ರಾನ್ ಖಾನ್ ಎಲ್ಲಿದ್ದಾರೆ? ಮಾಜಿ ಪ್ರಧಾನಿ ಸಾವಿನ ಬಗ್ಗೆ ಕೊನೆಗೂ ಮೌನ ಮುರಿದ ಪಾಕಿಸ್ತಾನ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿನಲ್ಲೇ ಹತ್ಯೆ ಮಾಡಲಾಗಿದೆ ಎಂದು ಎರಡು ದಿನಗಳಿಂದ ಸುದ್ದಿಗಳು ಹರಿದಾಡುತ್ತಿತ್ತು. ಬಲೂಚಿಸ್ತಾನ್ ಈ ಬಗ್ಗೆ ವರದಿಯನ್ನು ಬಿಡುಗಡೆ ಮಾಡಿತ್ತು. ಇಮ್ರಾನ್ ಖಾನ್ ಅವರದ್ದು ಎನ್ನಲಾದ ಮೃತದೇಹದ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ, ಇದೀಗ ಇಮ್ರಾನ್ ಖಾನ್ ಸಾವಿನ ವದಂತಿಗಳ ಬಗ್ಗೆ ಪಾಕಿಸ್ತಾನದ ಅಡಿಯಾಲ ಜೈಲು ಮೌನ ಮುರಿದಿದೆ.

ನಿಮಗೆ ನೈತಿಕತೆಯೇ ಇಲ್ಲ; ರಾಮಮಂದಿರ ಧ್ವಜಾರೋಹಣದ ಕುರಿತ ಪಾಕಿಸ್ತಾನದ ಟೀಕೆಗೆ ಭಾರತ ತಿರುಗೇಟು

ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ಧರ್ಮ ಧ್ವಜಾರೋಹಣದ ಕುರಿತಾದ ಪಾಕಿಸ್ತಾನದ ಹೇಳಿಕೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರಾಮ ಮಂದಿರದಲ್ಲಿ ನಡೆದ ಸಮಾರಂಭದ ನಂತರ ಭಾರತದಲ್ಲಿ ಹೆಚ್ಚುತ್ತಿರುವ ಇಸ್ಲಾಮೋಫೋಬಿಯಾ, ದ್ವೇಷ ಭಾಷಣ ಮತ್ತು ದ್ವೇಷ ಪ್ರೇರಿತ ದಾಳಿಗಳ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯವು ಗಮನಹರಿಸಬೇಕೆಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಕರೆ ನೀಡಿತ್ತು.