‘ಸ್ಟಾಂಡ್ಅಪ್’ ಕಾಮಿಡಿ; ಟ್ರಂಪ್ ಮುಂದೆ ಶಾಲಾ ಬಾಲಕನಾದ ಪಾಕಿಸ್ತಾನದ ಪ್ರಧಾನಿ
ಫೆಬ್ರವರಿ 19ರಂದು ವಾಷಿಂಗ್ಟನ್‌ನಲ್ಲಿ ನಡೆದ ತಮ್ಮ ಶಾಂತಿ ಮಂಡಳಿಯ ಮೊದಲ ಸಭೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಮುಖ ಜಾಗತಿಕ ಸಂಘರ್ಷಗಳ ಕುರಿತು ಅಂತರರಾಷ್ಟ್ರೀಯ ಸಹಕಾರವನ್ನು ಒತ್ತಿ ಹೇಳಿದರು. ಈ ವೇಳೆ ಪಾಕಿಸ್ತಾನ ಪ್ರಧಾನಿ ಷರೀಫ್ ಅವರನ್ನು ಎದ್ದು ನಿಲ್ಲಲು ಸೂಚಿಸಿದರು. ಟ್ರಂಪ್ ಹೇಳುತ್ತಿದ್ದಂತೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಶಾಲಾ ಬಾಲಕನಂತೆ ಎದ್ದು ನಿಲ್ಲುವ ಮಾಡುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹುಬ್ಬೇರಿಸುವ ಕ್ಷಣವನ್ನು ಸೃಷ್ಟಿಸಿದರು.
ವಾಷಿಂಗ್ಟನ್, ಫೆಬ್ರವರಿ 20: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಶಾಂತಿ ಮಂಡಳಿ ಸಭೆಯಲ್ಲಿ ಮಾತನಾಡುವಾಗ ಭಾರತ-ಪಾಕಿಸ್ತಾನದ ಸಮಘರ್ಷವನ್ನು ಕೂಡ ಪ್ರಸ್ತಾಪಿಸಿದ್ದಾರೆ. ಈ ವೇಳೆ ಆ ಸಭೆಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನ ಪ್ರಧಾನಿಗೆ ‘ಸ್ಟಾಂಡ್ಅಪ್’ ಎಂದು ಹೇಳಿದ್ದಾರೆ. ಟ್ರಂಪ್ ಮಾತಿನಂತೆ ಎದ್ದುನಿಂತ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ನಿಂತೇ ಇರಬೇಕೋ, ಕುಳಿತುಕೊಳ್ಳಬೇಕೋ ಎಂದು ಗೊತ್ತಾಗದೆ ಮುಜುಗರಕ್ಕೀಡಾಗಿದ್ದಾರೆ. ಈ ವೇಳೆ ಟ್ರಂಪ್ ಭಾರತದ ಪ್ರಧಾನಿ ಮೋದಿಯ ಹೆಸರನ್ನು ಪ್ರಸ್ತಾಪಿಸಿ ಮೋದಿ ಅದ್ಭುತ ವ್ಯಕ್ತಿ ಎಂದು ಹೊಗಳಿದ್ದಾರೆ. ಇದರಿಂದ ಶೆಹಬಾಜ್ ಷರೀಫ್ಗೆ ತೀವ್ರ ಮುಖಭಂಗವಾಗಿದೆ. ಟ್ರಂಪ್ ಹೇಳುತ್ತಿದ್ದಂತೆ ಕೀಲಿ ಕೊಟ್ಟ ಗೊಂಬೆಯಂತೆ ಎದ್ದುನಿಂತ ಪಾಕ್ ಪ್ರಧಾನಿಯ ಈ ‘ಸ್ಟಾಂಡ್ಅಪ್’ ಕಾಮಿಡಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

