ಜಗತ್ತು ಮಂದಗೊಂಡರೂ ಭಾರತದ ಚುರುಕು ಬೆಳವಣಿಗೆ: ಡಾವೊಸ್ ಸಮಿಟ್ನಲ್ಲಿ ಪ್ರಹ್ಲಾದ ಜೋಷಿ
Pralhad Joshi says, Indian economy accelerated while world slowed down: ಜಗತ್ತಿನ ಆರ್ಥಿಕತೆ ಮಂದವಾಗಿ ಸಾಗಿದರೂ ಭಾರತದ ಬೆಳವಣಿಗೆ ಚುರುಕಾಗಿ ಸಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅಭಿಪ್ರಾಯಪಟ್ಟಿದ್ದಾರೆ. ಡಾವೊಸ್ ಸಮಿಟ್ನಲ್ಲಿ ಪಾಲ್ಗೊಂಡಿರುವ ಜೋಷಿ, ಭಾರತದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರುವ ಕೆಲ ಸಂಗತಿಗಳನ್ನು ವಿವರಿಸಿ ಟ್ವೀಟ್ ಮಾಡಿದ್ದಾರೆ.

ನವದೆಹಲಿ, ಜನವರಿ 20: ಜಗತ್ತಿನ ಆರ್ಥಿಕತೆ ಹಿನ್ನಡೆ ಅನುಭವಿಸುತ್ತಿರುವ ಹೊತ್ತಿನಲ್ಲೂ ಭಾರತವು ತನ್ನ ಬೆಳವಣಿಗೆಯ ವೇಗ ಹೆಚ್ಚಿಸಿದೆ ಎಂದು ಕೇಂದ್ರ ನವೀಕರಣ ಇಂಧನ ಸಚಿವ ಪ್ರಹ್ಲಾದ್ ಜೋಷಿ (Pralhad Joshi) ಹೇಳಿದ್ದಾರೆ. ಸ್ವಿಟ್ಜರ್ಲ್ಯಾಂಡ್ನ ಡಾವೋಸ್ನಲ್ಲಿ ನಿನ್ನೆಯಿಂದ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ಸಭೆಯಲ್ಲಿ (WEF Summit 2026, Davos) ಪ್ರಹ್ಲಾದ್ ಜೋಷಿ ಮಾತನಾಡುತ್ತಾ, ಭಾರತದ ಆರ್ಥಿಕ ವ್ಯವಸ್ಥೆ ಸುದೃಢವಾಗಿರುವುದನ್ನು ಎತ್ತಿತೋರಿಸಿದ್ದಾರೆ.
‘ಜಾಗತಿಕ ಸರಬರಾಜು ಸರಪಳಿಗಳಿಗೆ ಧಕ್ಕೆಯಾದಾಗ ಭಾರತವು ದೂರದೃಷ್ಟಿಯೊಂದಿಗೆ ತನ್ನ ಅಡಿಪಾಯಗಳನ್ನು ಭದ್ರಗೊಳಿಸುವ ಮೂಲಕ ಮತ್ತು ತನ್ನ ಸಾಮರ್ಥ್ಯಗಳನ್ನು ಹೆಚ್ಚಿಸುವ ಮೂಲಕ ಆರ್ಥಿಕ ಕ್ಷಮತೆಯನ್ನು ನಿರ್ಮಿಸಿದೆ’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವರೂ ಆದ ಜೋಷಿ ಟ್ವೀಟ್ ಮಾಡಿದ್ದಾರೆ.
ಪ್ರಹ್ಲಾದ ಜೋಷಿ ಅವರ ಎಕ್ಸ್ ಪೋಸ್ಟ್
When the world slowed down, India accelerated!
When global supply chains were disrupted, India built resilience strengthening its foundations and expanding its capabilities with a long-term vision.
Today, India stands out as a trusted and future-ready destination for global… pic.twitter.com/orcUwk7X1o
— Pralhad Joshi (@JoshiPralhad) January 20, 2026
‘ಸರ್ಕಾರದ ಸ್ಥಿರ ನೀತಿ, ಸುಧಾರಣೆಗಳು, ಉತ್ತಮ ಇಕೋಸಿಸ್ಟಂ ನಿರ್ಮಾಣಗೊಂಡಿರುವ ಫಲವಾಗಿ ಭಾರತವು ಜಾಗತಿಕ ಹೂಡಿಕೆಗೆ ವಿಶ್ವಾಸಾರ್ಹ ಸ್ಥಳವೆನಿಸಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದೆ. ಹೂಡಿಕೆದಾರರಿಗೆ ಸ್ಥಿರ ಲಾಭ ತರುತ್ತಿರುವುದು ಮಾತ್ರವಲ್ಲ, ದೂರಗಾಮಿ ಬೆಳವಣಿಗೆಗೆ ಸಹಕಾರಿಯಾಗುವ ನಾವೀನತ್ಯೆ, ವಿಸ್ತರಣೆ ಹಾಗೂ ಸುಸ್ಥಿರ ಮೌಲ್ಯ ಸೃಷ್ಟಿ ಮಾಡುತ್ತಿದೆ’ ಎಂದು ಪ್ರಲ್ಹಾದ್ ಜೋಷಿ ವಿವರಿಸಿದ್ದಾರೆ.
ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆ ಶೇ. 7.3; ಐಎಂಎಫ್ ಮತ್ತು ಮೂಡೀಸ್ ಏಜೆನ್ಸಿ ಅಂದಾಜು
ಜನಸಂಖ್ಯೆ ಶೇ. 17; ಮಾಲಿನ್ಯ ಹೊರಸೂಸುವಿಕೆ ಶೇ. 4 ಮಾತ್ರ
ಡಾವೋಸ್ ಸಮಿಟ್ನಲ್ಲಿ ಮಾತನಾಡುತ್ತಿದ್ದ ನವೀಕರಣ ಇಂಧನ ಸಚಿವ ಪ್ರಲ್ಹಾದ್ ಜೋಷಿ ಅವರು ಭಾರತ ಅಭಿವೃದ್ಧಿಶೀಲ ಆರ್ಥಿಕತೆಯಾದರೂ ಪರಿಸರ ಮಾಲಿನ್ಯಕ್ಕಾಗಿ ಪಡುತ್ತಿರುವ ಶ್ರಮ ಹಾಗೂ ಆ ನಿಟ್ಟಿನಲ್ಲಿ ಮಾಡಿದ ಸಾಧನೆಯನ್ನು ತಿಳಿಸಿದ್ದಾರೆ.
ವಿಶ್ವದ ಶೇ. 17ರಷ್ಟು ಜನಸಂಖ್ಯೆಯನ್ನು ಭಾರತ ಹೊಂದಿದೆ. ಆದರೆ, ಜಾಗತಿಕವಾಗಿ ಹೊರಸೂಸುವ ಮಾಲಿನ್ಯದಲ್ಲಿ ಭಾರತದ ಪಾಲು ಶೇ. 4 ಮಾತ್ರ ಎಂದು ಜೋಷಿ ಹೇಳಿದ್ದಾರೆ.
ಇದನ್ನೂ ಓದಿ: ಡಾವೊಸ್ ಶೃಂಗಸಭೆ 2026: ವರ್ಲ್ಡ್ ಎಕನಾಮಿಕ್ ಫೋರಂ ವಾರ್ಷಿಕ ಸಭೆಯಲ್ಲಿ ಭಾರತದ ಪ್ರಬಲ ಉಪಸ್ಥಿತಿ
ಭಾರತದಲ್ಲಿ ಸ್ವಚ್ಛ ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ಇರುವ ವಿಪುಲ ಅವಕಾಶಗಳ ಬಗ್ಗೆ ಸಮಿಟ್ನಲ್ಲಿ ಜೋಷಿ ಪ್ರಸ್ತಾಪ ಮಾಡಿದ್ದಾರೆ. ಸಚಿವರು ಈ ಸಂದರ್ಭದಲ್ಲಿ ಕೆನಡಾ ಮೂಲದ ಲಾ ಕೇಸ್ಸೆ (La Caisse) ಎನ್ನುವ ಕಂಪನಿಯ ಸಿಇಒ ಹಾಗೂ ಸಿಒಒ ಅವರುಗಳೊಂದಿಗೆ ಹೂಡಿಕೆ ವಿಚಾರವಾಗಿ ಚರ್ಚೆ ಕೂಡ ನಡೆಸಿದರು. 2030ರೊಳಗೆ ಹವಾಮಾನ ಬದಲಾವಣೆ ಎದುರಿಸಬಲ್ಲ ಕಾರ್ಯಕ್ರಮಗಳಲ್ಲಿ 400 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಈ ಕಂಪನಿ ಬದ್ಧವಾಗಿದೆ. ಈ ಕಾರ್ಯದಲ್ಲಿ ಭಾರತದೊಂದಿಗೆ ಜೊತೆಯಾಗಬೇಕೆಂದು ಜೋಷಿ ಈ ಸಂದರ್ಭದಲ್ಲಿ ಶಿಫಾರಸು ಮಾಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




