AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಸ್ತ್ರೀಯರು ಶಾಸ್ತ್ರಾನುಸಾರ ಸನ್ಯಾಸಿನಿ ಆಗಬಹುದಾ?

Daily Devotional: ಸ್ತ್ರೀಯರು ಶಾಸ್ತ್ರಾನುಸಾರ ಸನ್ಯಾಸಿನಿ ಆಗಬಹುದಾ?

ಭಾವನಾ ಹೆಗಡೆ
|

Updated on: Mar 04, 2026 | 7:27 AM

Share

ಹಿಂದೂ ಧರ್ಮದಲ್ಲಿ ಸ್ತ್ರೀಯರಿಗೆ ಅಪಾರ ಗೌರವವಿದೆ; "ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ". ಮಹಿಳೆಯರನ್ನು ಮನೆಯ ಮಹಾಲಕ್ಷ್ಮಿ, ಜಗತ್ತಿನ ಶಿಕ್ಷಕಿ ಎಂದೂ ಬಣ್ಣಿಸಲಾಗಿದೆ. ಈ ಕಾಲಮಾನಕ್ಕೆ ತಕ್ಕಂತೆ, ಮಹಿಳೆಯರು ಸನ್ಯಾಸಿನಿಯರಾಗುವುದು ಸಮಂಜಸ. ಆತ್ಮರಕ್ಷಣೆ, ತಾಳ್ಮೆ, ಸಹನೆ ಮತ್ತು ನಿಷ್ಠೆಯಂತಹ ಗುಣಗಳು ಮಹಿಳೆಯರಲ್ಲಿ ಅಂತರ್ಗತವಾಗಿವೆ. ರಾಮಕೃಷ್ಣ ಮಠದಂತಹ ಸಂಸ್ಥೆಗಳಲ್ಲಿ ಅನೇಕ ಮಹಿಳೆಯರು ಧರ್ಮಜಾಗೃತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದ್ದರಿಂದ, ಮಹಿಳೆಯರು ಸನ್ಯಾಸಿನಿಯರಾಗುವುದು ಸಮಕಾಲೀನ ಸನ್ನಿವೇಶದಲ್ಲಿ ತಪ್ಪಲ್ಲ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

ಬೆಂಗಳೂರು, ಮಾರ್ಚ್​​ 04: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಸ್ತ್ರೀಯರು ಶಾಸ್ತ್ರಾನುಸಾರ ಸನ್ಯಾಸಿನಿ ಆಗಬಹುದಾ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಸನ್ಯಾಸಿಗಳು ಮತ್ತು ಸನ್ಯಾಸಿನಿಯರನ್ನು ಗೌರವಯುತವಾಗಿ ದೇವತಾ ಸ್ವರೂಪಿಗಳೆಂದು ಕಾಣಲಾಗುತ್ತದೆ. ಸನ್ಯಾಸ ಎಂದರೆ ತಲೆ ಬೋಳಿಸಿಕೊಂಡು, ಕಾಷಾಯ ವಸ್ತ್ರ ಧರಿಸಿ, ರುದ್ರಾಕ್ಷಿ ಮಾಲೆಗಳನ್ನು ಧರಿಸಿ, ಬ್ರಾಹ್ಮೀ ಮುಹೂರ್ತದಲ್ಲಿ ಜಪತಪಗಳನ್ನು ಮಾಡಿ, ಹೋಮಹವನಗಳನ್ನು ನಿರ್ವಹಿಸಿ, ಭಿಕ್ಷೆಯಿಂದ ಪಡೆದ ಆಹಾರವನ್ನು ಸ್ವೀಕರಿಸುವುದು. ಸನ್ಯಾಸಿನಿಯರ ಪ್ರಥಮ ಕರ್ತವ್ಯ ಧರ್ಮಜಾಗೃತಿ, ಸಂಸ್ಕೃತಿಯ ಉದ್ಧಾರ ಮತ್ತು ಲೋಕಕ್ಷೇಮವನ್ನು ಬಯಸುವುದು.

ಹಿಂದೂ ಧರ್ಮದಲ್ಲಿ ಸ್ತ್ರೀಯರಿಗೆ ಅಪಾರ ಗೌರವವಿದೆ; “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ”. ಮಹಿಳೆಯರನ್ನು ಮನೆಯ ಮಹಾಲಕ್ಷ್ಮಿ, ಜಗತ್ತಿನ ಶಿಕ್ಷಕಿ ಎಂದೂ ಬಣ್ಣಿಸಲಾಗಿದೆ. ಈ ಕಾಲಮಾನಕ್ಕೆ ತಕ್ಕಂತೆ, ಮಹಿಳೆಯರು ಸನ್ಯಾಸಿನಿಯರಾಗುವುದು ಸಮಂಜಸ. ಆತ್ಮರಕ್ಷಣೆ, ತಾಳ್ಮೆ, ಸಹನೆ ಮತ್ತು ನಿಷ್ಠೆಯಂತಹ ಗುಣಗಳು ಮಹಿಳೆಯರಲ್ಲಿ ಅಂತರ್ಗತವಾಗಿವೆ. ರಾಮಕೃಷ್ಣ ಮಠದಂತಹ ಸಂಸ್ಥೆಗಳಲ್ಲಿ ಅನೇಕ ಮಹಿಳೆಯರು ಧರ್ಮಜಾಗೃತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದ್ದರಿಂದ, ಮಹಿಳೆಯರು ಸನ್ಯಾಸಿನಿಯರಾಗುವುದು ಸಮಕಾಲೀನ ಸನ್ನಿವೇಶದಲ್ಲಿ ತಪ್ಪಲ್ಲ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

Follow Us